ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಕ್ಕಳಲ್ಲಿ ಹೆಚ್ಚಾಗುತ್ತಿದೆ ಮಧುಮೇಹ : ಐಸಿಎಂಆರ್ ವರದಿ

|
Google Oneindia Kannada News

ಕೊರೊನಾ ಸಾಂಕ್ರಾಮಿಕ ರೋಗವು ಮಧುಮೇಹ ಹೊಂದಿರುವ ಜನರನ್ನು ತೀವ್ರವಾಗಿ ಕಾಡಿತ್ತು, ಈಗ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್) ಟೈಪ್ 1 ಮಧುಮೇಹ (ಡಯಾಬಿಟಿಸ್) ಕುರಿತಾದ ಅಧ್ಯಯನದ ವರದಿಯೊಂದನ್ನು ಬಿಡುಗಡೆ ಮಾಡಿದೆ.

ರಾಷ್ಟ್ರವ್ಯಾಪಿ ಮಧುಮೇಹ ಹರಡುವಿಕೆಯ ಅಧ್ಯಯನವವನ್ನು ಮೊದಲ ಬಾರಿ ನಡೆಸಲಾಗಿದೆ. ಮಧುಮೇಹದ ರೋಗಿಗಳ ಪ್ರಮಾಣದಲ್ಲಿ ನಗರ, ಗ್ರಾಮೀಣ ಪ್ರದೇಶಗಳ ನಡುವಿನ ವ್ಯತ್ಯಾಸ ಕಡಿಮೆಯಾಗುತ್ತಿರುವುದಾಗಿ ವರದಿ ಹೇಳಿದೆ. ಮಕ್ಕಳಲ್ಲಿ ಟೈಪ್‌ 1 ಮಧುಮೇಹ ಹೆಚ್ಚಾಗುತ್ತಿರುವ ಬಗ್ಗೆ ಆತಂಕಕಾರಿ ಅಂಕಿ-ಅಂಶಗಳು ವರದಿಯಲ್ಲಿವೆ.

ದೊಡ್ಡವರಿಗೆ ಕೊರೊನಾವೈರಸ್, ಮಕ್ಕಳಿಗೆ ನೊರೊವೈರಸ್: ಏನಿದು ಕೇರಳ ಕಥೆ! ದೊಡ್ಡವರಿಗೆ ಕೊರೊನಾವೈರಸ್, ಮಕ್ಕಳಿಗೆ ನೊರೊವೈರಸ್: ಏನಿದು ಕೇರಳ ಕಥೆ!

ಐಸಿಎಂಆರ್ ಅಧ್ಯಯನದ ಪ್ರಕಾರ, ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 25-34 ವರ್ಷ ವಯಸ್ಸಿನವರಲ್ಲಿ ಈ ರೋಗವು ಸ್ಪಷ್ಟವಾಗಿ ಕಂಡುಬರುತ್ತದೆ. ಟೈಪ್ 2 ಮಧುಮೇಹ ವಯಸ್ಕರಲ್ಲಿ ಹೆಚ್ಚು ಸಾಮಾನ್ಯವಾಗಿದೆ, ಆದರೆ ಭಾರತದಲ್ಲಿ ಟೈಪ್ 1 ಮಧುಮೇಹಕ್ಕೆ ತುತ್ತಾಗುವ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಅಧ್ಯಯನದ ವರದಿ ಹೇಳಿದೆ.

ಕರ್ನಾಟಕದಲ್ಲಿ ಮಂಕಿಪಾಕ್ಸ್ ರೋಗ ನಿಯಂತ್ರಣಕ್ಕೆ ಏನೆಲ್ಲಾ ಕ್ರಮ ಜಾರಿ? ಕರ್ನಾಟಕದಲ್ಲಿ ಮಂಕಿಪಾಕ್ಸ್ ರೋಗ ನಿಯಂತ್ರಣಕ್ಕೆ ಏನೆಲ್ಲಾ ಕ್ರಮ ಜಾರಿ?

14 ವರ್ಷಗೊಳಗಿನ ಮಕ್ಕಳನ್ನು ಕಾಡುತ್ತಿದೆ ಮಧುಮೇಹ

14 ವರ್ಷಗೊಳಗಿನ ಮಕ್ಕಳನ್ನು ಕಾಡುತ್ತಿದೆ ಮಧುಮೇಹ

ಭಾರತದಲ್ಲಿ14 ವರ್ಷಕ್ಕಿಂತ ಕಡಿಮೆ ವಯಸ್ಸಿನ 95,600 ಮಕ್ಕಳಲ್ಲಿ ಟೈಪ್ 1 ಮಧುಮೇಹ ಕಂಡುಬಂದಿದೆ. ಪ್ರತಿ ವರ್ಷ ಸುಮಾರು 15,900 ಹೊಸ ಪ್ರಕರಣಗಳು ಈ ವಯೋಮಾನದವರಲ್ಲಿ ವರದಿಯಾಗುತ್ತಿವೆ. ಭಾರತದಲ್ಲಿ ಅಂದಾಜು 2.5 ಲಕ್ಷ ಜನರು ಟೈಪ್ 1 ಮಧುಮೇಹದಿಂದ ಬಳಲುತ್ತಿದ್ದಾರೆ ಎಂದು ಅಧ್ಯಯನದಿಂದ ತಿಳಿದುಬಂದಿದೆ.

ಟೈಪ್ 1 ಡಯಾಬಿಟಿಸ್ ಹೊಂದಿರುವ ವ್ಯಕ್ತಿಗಳು, ಅನಾರೋಗ್ಯದ ಕಾರಣದಿಂದಾಗಿ ಉಂಟಾಗುವ ಸಮಸ್ಯೆಗಳನ್ನು ತಡೆಗಟ್ಟಲು, ರೋಗ ಉಲ್ಬಣವಾಗುವುದನ್ನು ತಪ್ಪಿಸಲು, ಉತ್ತಮ ಜೀವನ ನಡೆಸಲು ಇನ್ಸುಲಿನ್ ಮತ್ತು ಇತರ ಚಿಕಿತ್ಸೆಗಳನ್ನು ಬಳಸುತ್ತಾರೆ. ವಿಶೇಷವಾಗಿ ಗ್ಲೈಸೆಮಿಕ್ (ರಕ್ತದ ಗ್ಲೂಕೋಸ್) ನಿಯಂತ್ರಣವು ಈಗ ಟೈಪ್ 1 ಮಧುಮೇಹ ನಿರ್ವಹಣೆಯಲ್ಲಿ ಅತ್ಯತ್ತಮ ವಿಧಾನವಾಗಿದೆ ಎಂದು ಐಸಿಎಂಆರ್ ಮಾರ್ಗಸೂಚಿ ಹೇಳಿದೆ.

ಮಧುಮೇಯ ನಿಯಂತ್ರಿಸಲು ಮಾರ್ಗಸೂಚಿ ಅಗತ್ಯ

ಮಧುಮೇಯ ನಿಯಂತ್ರಿಸಲು ಮಾರ್ಗಸೂಚಿ ಅಗತ್ಯ

ಭಾರತದಲ್ಲಿ ಮಧುಮೇಹದ ಚಿಕಿತ್ಸೆಯ ಮತ್ತು ಆರೈಕೆಯ ಗುಣಮಟ್ಟದಲ್ಲಿ ಗಣನೀಯ ವ್ಯತ್ಯಾಸವಿದೆ. ಸೇವೆಗಳ ಲಭ್ಯತೆ, ಔಷಧಿಗಳ ಲಭ್ಯತೆ, ಕಾಳಜಿ, ಆರೈಕೆದಾರರ ವರ್ತನೆ ಮತ್ತು ಗ್ರಹಿಕೆಗಳು, ತಜ್ಞರು ಮತ್ತು ಮಧುಮೇಹ ಶಿಕ್ಷಕರ ಕೊರತೆ, ಉತ್ತಮ ಪ್ರಯೋಗಾಲಯಗಳು ಮತ್ತು ಚಿಕಿತ್ಸಾ ವಿಧಾನಗಳಂತಹ ವಿವಿಧ ಅಂಶಗಳ ಮೇಲೆ ಇದು ಅವಲಂಬಿತವಾಗಿದೆ.

ಟೈಪ್ 1 ಡಯಾಬಿಟಿಸ್ ನಿರ್ವಹಣೆಗೆ ಹಲವಾರು ಅಂತರರಾಷ್ಟ್ರೀಯ ಮಾರ್ಗಸೂಚಿಗಳು ಲಭ್ಯವಿದ್ದರೂ, ಕಡಿಮೆ ವೆಚ್ಚದಲ್ಲಿ ಮಧುಮೇಹ ಆರೈಕೆಯನ್ನು ಖಾತ್ರಿಪಡಿಸುವ, ಮತ್ತು ಇಲ್ಲಿನ ಸಂಸ್ಕೃತಿ, ಆಹಾರ ಕ್ರಮಕ್ಕೆ ಹೊಂದಿಕೊಳ್ಳುವ ಮಾರ್ಗಸೂಚಿಯನ್ನು ನೀಡುವುದು ಭಾರತದಂತಹ ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಿಗೆ ಅಗತ್ಯ ಎಂದು ವೈದ್ಯಕೀಯ ಸಂಶೋಧನಾ ಸಂಸ್ಥೆ ತಿಳಿಸಿದೆ.

ಮಕ್ಕಳಲ್ಲಿ ಮಧುಮೇಹಕ್ಕೆ ಕಾರಣ

ಮಕ್ಕಳಲ್ಲಿ ಮಧುಮೇಹಕ್ಕೆ ಕಾರಣ

ಟೈಪ್ 1 ಮಧುಮೇಹ ಏಕೆ ಬರುವುದು ಎನ್ನುವುದಕ್ಕೆ ಸ್ಪಷ್ಟ ಕಾರಣ ತಿಳಿದಿಲ್ಲ. ಆದರೆ ಟೈಪ್ 1 ಡಯಾಬಿಟಿಸ್ ಇರುವಂತಹ ಹೆಚ್ಚಿನ ಜನರಲ್ಲಿ, ಹಾನಿಕಾರಕ ಬ್ಯಾಕ್ಟೀರಿಯಾ ಮತ್ತು ವೈರಸ್ ವಿರುದ್ಧ ಹೋರಾಡುವ ದೇಹದ ಪ್ರತಿರೋಧಕ ವ್ಯವಸ್ಥೆಯು ಮೇಧೋಜೀರಕ ಗ್ರಂಥಿಗಳಲ್ಲಿ ಇನ್ಸುಲಿನ್ ಉತ್ಪತ್ತಿ ಮಾಡುವ ಕೋಶಗಳನ್ನು ನಾಶ ಮಾಡುತ್ತದೆ.

ಅನುವಂಶೀಯ ಮತ್ತು ಭೌಗೋಳಿಕ ಅಂಶಗಳು ಈ ವಿಚಾರದಲ್ಲಿ ತುಂಬಾ ಪ್ರಮುಖ ಪಾತ್ರ ವಹಿಸುವುದು. ರಕ್ತನಾಳಗಳಲ್ಲಿ ಇರುವಂತಹ ಸಕ್ಕರೆ ಅಂಶವನ್ನು ದೇಹದ ಅಂಗಾಂಶಗಳಿಗೆ ಸಾಗಿಸುವಲ್ಲಿ ಇನ್ಸುಲಿನ್ ಪ್ರಮುಖ ಪಾತ್ರ ವಹಿಸುವುದು. ದೇಹದಲ್ಲಿ ಆಹಾರವು ಜೀರ್ಣಗೊಂಡ ವೇಳೆ ಸಕ್ಕರೆಯು ರಕ್ತನಾಳಗಳಿಗೆ ಪ್ರವೇಶಿಸುವುದು. ಮೇದೋಜೀರಕ ಗ್ರಂಥಿಯಲ್ಲಿ ಇರುವಂತಹ ಐಲೆಟ್ ಕೋಶವು ಒಂದು ಸಲ ಧ್ವಂಸಗೊಂಡ ಬಳಿಕ ಮಗುವಿನ ಮೇಲೆ ಇನ್ಸುಲಿನ್ ತುಂಬಾ ಕಡಿಮೆ ಕೆಲಸ ಮಾಡಬಹುದು. ಇದರ ಪರಿಣಾಮವಾಗಿ ಮಗುವಿನ ರಕ್ತನಾಳದಲ್ಲಿ ಗ್ಲುಕೋಸ್ ಜಮೆ ಆಗುವುದು. ಇದರಿಂದಾಗಿ ಮಾರಣಾಂತಿಕ ಸಮಸ್ಯೆಯು ಕಾಣಿಸಿಕೊಳ್ಳಬಹುದು.

ಮಕ್ಕಳ ಬಗ್ಗೆ ಕಾಳಜಿ ಮಾಡಿ

ಮಕ್ಕಳ ಬಗ್ಗೆ ಕಾಳಜಿ ಮಾಡಿ

ಮಕ್ಕಳಲ್ಲಿ ಕಾಣಿಸುವ ಟೈಪ್ 1 ಡಯಾಬಿಟಿಸ್ ಆರಂಭದಲ್ಲಿ ತುಂಬಾ ಸಮಸ್ಯೆಗಳನ್ನು ಉಂಟು ಮಾಡುವುದು. ಮಗುವಿಗೆ ಹೇಗೆ ಇಂಜೆಕ್ಷನ್ ನೀಡಬೇಕು, ಕಾರ್ಬೋಹೈಡ್ರೇಟ್ಸ್ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೇಗೆ ಲೆಕ್ಕ ಹಾಕಬೇಕು ಪೋಷಕರು ತಿಳಿದುಕೊಳ್ಳಬೇಕು. ಇದಕ್ಕೆ ನಿರಂತರ ಕಾಳಜಿ ಬೇಕಾಗುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟ ಮತ್ತು ಇನ್ಸುಲಿನ್ ನೀಡುವಿಕೆ ವಿಚಾರದಲ್ಲಿ ಕೆಲವೊಂದು ಮುಂದುವರಿದಿರುವ ವಿಧಾನಗಳು ಬಂದಿರುವ ಹಿನ್ನೆಲೆಯಲ್ಲಿ ಇದನ್ನು ದಿನನಿತ್ಯವು ನಿರ್ವಹಿಸುವುದು ಕಷ್ಟವೇನಲ್ಲ.

Recommended Video

Yediyurappa: ಪರಿಷತ್ ಚುನಾವಣೆ: ಲೀಡ್ ಕಡಿಮೆ ಆದ್ರು ಗೆಲ್ಲೊದು ಬಿಜೆಪಿನೆ | *politics | OneIndia Kannada

English summary
India has nearly 95,600 cases of Type 1 diabetes among children below 14 years of age, and every year, around 15,900 fresh cases are being reported in this age group.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X