ಟ್ವಿಟ್ಟರ್ 2021: ಹೆಚ್ಚು ಲೈಕ್, ರೀಟ್ವಿಟ್: ಇಲ್ಲಿದೆ ಈ ವರ್ಷದ ಟಾಪ್ ಟ್ವೀಟ್‌ಗಳ ಮಾಹಿತಿ
ಭಾರತದಲ್ಲಿ 2021 ರಲ್ಲಿ ಮಾಡಲಾದ ಟಾಪ್ ಟ್ವೀಟ್‌ಗಳು ಯಾವುದು ಎಂಬ ಮಾಹಿತಿಯನ್ನು ಟ್ವಿಟ್ಟರ್ ನೀಡಿದೆ. ಯಾವ ಟ್ವೀಟ್‌ಗೆ ಅಧಿಕ ಲೈಕ್ ಬಂದಿದೆ, ಯಾವ ಟ್ವೀಟ್ ಅನ್ನು ಅಧಿಕವಾಗಿ ಶೇರ್ ಮಾಡಲಾಗಿದೆ. ಬೇರೆ ಬೇರೆ ವಿಭಾಗದಲ್ಲಿ ಯಾವ ಟ್ವೀಟ್ ಟಾಪ್‌ನಲ್ಲಿದೆ ಎಂಬ ಮಾಹಿತಿಯನ್ನು ಟ್ವಿಟ್ಟರ್ ನೀಡಿದೆ.
ಟ್ವಿಟ್ಟರ್ ಪ್ರತಿ ವರ್ಷ ಅಂತ್ಯದಲ್ಲಿ ಆ ವಾರ್ಷಿಕ ಅವಧಿಯಲ್ಲಿ ಯಾವ ಟ್ವೀಟ್ ಅನ್ನು ಅಧಿಕ ಲೈಕ್ ಮಾಡಲಾಗಿದೆ, ಜನರು ಟ್ವಿಟ್ಟರ್‌ನಲ್ಲಿ ಯಾವ ವಿಚಾರದ ಬಗ್ಗೆ ಅಧಿಕ ಹುಡುಕಿದ್ದಾರೆ, ಯಾವ ಸೆಲೆಬ್ರೆಟಿಗಳು ಟಾಪ್‌ನಲ್ಲಿ ಇದ್ದಾರೆ ಎಂಬ ಬಗ್ಗೆ ವಿವರವಾದ ಮಾಹಿತಿಯನ್ನು ಬಿಡುಗಡೆ ಮಾಡುತ್ತದೆ. ಅದರಂತೆ ಈ ವರ್ಷವೂ ಕೂಡಾ ವಿವರವಾದ ಮಾಹಿತಿಯನ್ನು ಟ್ವಿಟ್ಟರ್ ಬಿಡುಗಡೆ ಮಾಡಿದೆ.
ನಾವು ಇಲ್ಲಿ ಜನವರಿ 1, 2021 ರಿಂದ ನವೆಂಬರ್ 15, 2021 ರವರಗೆ ಅಂದರೆ ಈ ವರ್ಷ ಯಾವ ಟ್ವೀಟ್ ಹೆಚ್ಚು ರೀಟ್ವಿಟ್ ಮಾಡಲಾಗಿದೆ, ಯಾವ ಟ್ವೀಟ್ ಅಧಿಕ ಲೈಕ್ ಮಾಡಲಾಗಿದೆ ಹಾಗೂ ಕ್ರೀಡೆ, ಆಡಳಿತ, ವ್ಯವಹಾರ, ಮನರಂಜನೆ ವಿಭಾಗದಲ್ಲಿ ಯಾವ ಟ್ವೀಟ್ ಟಾಪ್‌ನಲ್ಲಿದೆ ಎಂಬ ಬಗ್ಗೆ ಮಾಹಿತಿ ನೀಡಿದ್ದೇವೆ. ಹಾಗೆಯೇ ಯಾವ ಇಮೋಜಿಯನ್ನು ಹೆಚ್ಚು ಟ್ವೀಟ್ ಮಾಡಲಾಗಿದೆ, ಯಾವ ಹ್ಯಾಷ್‌ಟ್ಯಾಗ್ ಅನ್ನು ಅಧಿಕ ಬಳಸಲಾಗಿದೆ ಎಂಬ ವಿವರಣೆ ನೀಡಿದ್ದೇವೆ. ಇಲ್ಲಿದೆ ಸಂಪೂರ್ಣ ಮಾಹಿತಿ ಮುಂದೆ ಓದಿ..
— Virat Kohli (@imVkohli) January 11, 2021 |
ಹೆಚ್ಚು ಲೈಕ್ ಮಾಡಲಾದ ಟ್ವೀಟ್
ಈ ವರ್ಷದ ಕ್ರಿಕೆಟಿಗ ವಿರಾಟ್ ಕೊಹ್ಲಿ ಹಾಗೂ ಅವರ ಪತ್ನಿ ಅನುಷ್ಕಾ ಶರ್ಮಾ ಅವರು ತಮ್ಮ ಮೊದಲ ಮಗು ಜನನದ ಸಿಹಿ ಸುದ್ದಿಯನ್ನು ತಮ್ಮ ಅಭಿಮಾನಿಗಳಿಗೆ ನೀಡಿದ್ದಾರೆ. ಈ ಟ್ವೀಟ್ ಭಾರತದಲ್ಲಿ 2021 ರಲ್ಲಿ ಅಧಿಕ ಲೈಕ್ ಪಡೆದ ಟ್ವೀಟ್ ಆಗಿದೆ. ಕ್ರಿಕೆಟಿಗ ವಿರಾಟ್ ಕೊಹ್ಲಿ ಮಾಡಿದ ಈ ಟ್ವೀಟ್‌ನಲ್ಲಿ ತಮಗೆ ಹೆಣ್ಣು ಮಗು ಜನಿಸಿರುವ ಸುದ್ದಿಯನ್ನು ನೀಡಿದ್ದಾರೆ. ಈ ಟ್ವೀಟ್ ಈವರೆಗೆ ಸುಮಾರು 539.1K ಲೈಕ್ಸ್ ಪಡೆದಿದ್ದು, ನೆಟ್ಟಿಗರು ಈ ಟ್ವೀಟ್ ಅನ್ನು 50.4K ಬಾರಿ ರೀಟ್ವೀಟ್ ಮಾಡಿದ್ದಾರೆ.
— Pat Cummins (@patcummins30) April 26, 2021 |
ಅಧಿಕ ರೀಟ್ವಿಟ್ ಮಾಡಲಾದ ಟ್ವೀಟ್ ಯಾವುದು ನೋಡಿ?
ಭಾರತದಲ್ಲಿ ಅಧಿಕ ರೀಟ್ವೀಟ್ ಮಾಡಲಾದ ಟ್ವೀಟ್ ಭಾರತಕ್ಕೆ ಸಂಬಂಧಿಸ ವಿಚಾರದ್ದು ಆದರೂ ಕೂಡಾ ಈ ಟ್ವೀಟ್ ಅನ್ನು ಮಾಡಿದವರು ಆಸ್ಟ್ರೇಲಿಯಾದ ಕ್ರಿಕೆಟಿಗ ಪ್ಯಾಟ್ ಕಮ್ಮಿನ್ಸ್. ಕೊರೊನಾ ವೈರಸ್ ಸೋಂಕಿನ ಎರಡನೇ ಅಲೆಯ ಸಂದರ್ಭದಲ್ಲಿ ವಿಶ್ವವೇ ಭಾರತದ ಜೊತೆ ನಿಂತಿತ್ತು. ಈ ವೇಳೆ ಭಾರತದ ಪರವಾಗಿ ಆಸ್ಟ್ರೇಲಿಯಾದ ಕ್ರಿಕೆಟಿಗ ಪ್ಯಾಟ್ ಕಮ್ಮಿನ್ಸ್ ಟ್ವೀಟ್ ಮಾಡಿದ್ದರು. ಈ ಟ್ವೀಟ್ ಈ ವರ್ಷ ಹೆಚ್ಚು ರೀಟ್ವೀಟ್ ಮಾಡಲಾಗಿ ಟ್ವೀಟ್ ಎಂಬ ಹೆಗ್ಗಳಿಕೆಯನ್ನು ಪಡೆದಿದೆ. ಈ ಟ್ವೀಟ್ ಅನ್ನು ಸುಮಾರು 488.1K ಜನರು ಲೈಕ್ ಮಾಡಿದ್ದರೆ, ಸುಮಾರು 114.1K ಜನರು ರೀಟ್ವಿಟ್ ಮಾಡಿದ್ದಾರೆ. ಇನ್ನು ಇದೇ ಟ್ವೀಟ್ ಅತೀ ಹೆಚ್ಚು Quote Tweets ಮಾಡಲಾದ ಟ್ವೀಟ್ ಎಂಬ ಖ್ಯಾತಿಯನ್ನು ಕೂಡಾ ಪಡೆದಿದೆ.
|
ಸರ್ಕಾರ ವಿಭಾಗದಲ್ಲಿ ನರೇಂದ್ರ ಮೋದಿ ಟಾಪ್
ಭಾರತ ಕ್ರಿಕೆಟ್ ತಂಡವು ಗಬ್ಬಾದಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡಿ ಗೆಲುವು ಸಾಧಿಸಿತ್ತು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಈ ಹಿನ್ನೆಲೆಯಲ್ಲಿ ಭಾರತ ತಂಡಕ್ಕೆ ಅಭಿನಂದನೆ ಹೇಳಿ ಟ್ವೀಟ್ ಮಾಡಿದ್ದಾರೆ. ಸರ್ಕಾರದ ವಿಭಾಗದಲ್ಲಿ ಈ ಟ್ವೀಟ್ ಅತೀ ಹೆಚ್ಚು ಲೈಕ್ ಪಡೆದ ಟ್ವೀಟ್ ಆಗಿದೆ. ಇನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ತಾನು ಕೋವಿಡ್ ಲಸಿಕೆಯನ್ನು ಪಡೆದ ಬಗ್ಗೆ ಮಾಡಿದ ಫೋಟೊ ಸಹಿತ ಮಾಡಿದ ಟ್ವೀಟ್ ಅಧಿಕ ರೀಟ್ವಿಟ್ ಮಾಡಲಾದ ಟ್ವೀಟ್ ಆಗಿದೆ.
|
ವ್ಯಾಪಾರ ವಿಭಾಗದಲ್ಲಿ ಈ ಟ್ವೀಟ್ ಟಾಪ್
ಅಕ್ಟೋಬರ್‌ನಲ್ಲಿ ಏರ್‌ಇಂಡಿಯಾದ ಬಿಡ್ ಅನ್ನು ಟಾಟಾ ಸಂಸ್ಥೆಯು ಗೆಲುವು ಸಾಧಿಸಿದೆ. ಸುಮಾರು ಎಪ್ಪತ್ತು ವರ್ಷಗಳಿಂದ ಸರ್ಕಾರಿ ಸ್ವಾಮ್ಯದಲ್ಲಿದ್ದ ವಿಮಾನ ಸಂಸ್ಥೆಯಾದ ಏರ್ ಇಂಡಿಯಾ ಮತ್ತೆ ತಮ್ಮ ತೆಕ್ಕೆಗೆ ಸೇರಿದ ಬಗ್ಗೆ ಸಂತಸ ವ್ಯಕ್ತಪಡಿಸಿ ರತನ್ ಟಾಟಾ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಅತೀ ಹೆಚ್ಚು ಇಷ್ಟಪಟ್ಟ ಹಾಗೂ ಅತೀ ಹೆಚ್ಚು ರೀಟ್ವೀಟ್ ಮಾಡಿದ ಟ್ವೀಟ್ ಆಗಿದೆ. ಈ ಟ್ವೀಟ್‌ನಲ್ಲಿ ಏರ್‌ಇಂಡಿಯಾದ ಹಳೆಯ ಚಿತ್ರವನ್ನು ಹಾಕಿದ್ದಾರೆ. ಈ ಟ್ವೀಟ್ ಅನ್ನು ಸುಮಾರು 404K ಜನರು ಲೈಕ್ ಮಾಡಿದ್ದು, 82.9K ಜನರು ರೀಟ್ವೀಟ್ ಮಾಡಿದ್ದಾರೆ. ಭಾರತದಲ್ಲಿ ವ್ಯಾಪಾರ ವಿಭಾಗದಲ್ಲಿ ಅತೀ ಹೆಚ್ಚು ಲೈಕ್ ಹಾಗೂ ರೀಟ್ವಿಟ್ ಮಾಡಿದ ಟ್ವೀಟ್ ಇದಾಗಿದೆ.
|
ಮನರಂಜನೆ ವಿಭಾಗದಲ್ಲಿ ಥಳಪತಿ ವಿಜಯ್ ಟಾಪ್
ಭಾರತೀಯ ಸಿನಿಮಾ ನಟ ಥಳಪತಿ ವಿಜಯ್ ಮನರಂಜನೆ ವಿಭಾಗದ ಟ್ವೀಟ್‌ನಲ್ಲಿ ಟಾಪ್ ಸ್ಥಾನದಲ್ಲಿ ಇದ್ದಾರೆ. ತನ್ನ ಬಹುನಿರೀಕ್ಷಿತ ಬೀಸ್ಟ್ ಸಿನಿಮಾದ ಬಗ್ಗೆ ವಿಜಯ್ ಮಾಡಿದ ಟ್ವೀಟ್ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. ಬೀಸ್ಟ್ ಸಿನಿಮಾದ ಪೋಸ್ಟರ್ ಅನ್ನು ವಿಜಯ್ ಟ್ವೀಟ್ ಮಾಡಿದ್ದಾರೆ. ವಿಜಯ್ ಮಾಡಿದ ಈ ಟ್ವೀಟ್ ಅನ್ನು ಸುಮಾರು 140.3K ಜನರು ಟ್ವೀಟ್ ಮಾಡಿದ್ದು, 341.8K ಜನರು ಲೈಕ್ ಮಾಡಿದ್ದಾರೆ. ಈ ಮೂಲಕ ಮನರಂಜನೆ ವಿಭಾಗದಲ್ಲಿ ಅತೀ ಹೆಚ್ಚು ಲೈಕ್ ಪಡೆದ ಹಾಗೂ ಅತೀ ಹೆಚ್ಚು ಬಾರಿ ರೀಟ್ವಿಟ್ ಮಾಡಲಾದ ಟ್ವೀಟ್ ಎಂಬ ಹೆಗ್ಗಳಿಕೆಯನ್ನು ವಿಜಯ್ ಟ್ವೀಟ್ ಪಡೆದಿದೆ.
|
ಕ್ರೀಡಾ ವಿಭಾಗದಲ್ಲಿಯೂ ಮತ್ತೆ ಕೊಹ್ಲಿ ಟಾಪ್
ಚೆನ್ನೈ ಸೂಪರ್ ಕಿಂಗ್ ವರ್ಸಸ್ ಡೆಲ್ಲಿ ಕ್ಯಾಪಿಟಲ್ಸ್ ಐಪಿಎಲ್ ಪಂದ್ಯದಲ್ಲಿ ಅಂತಿಮ ಓವರ್‌ನಲ್ಲಿ ಎಂಎಸ್ ಧೋನಿಯ ಆಟದ ಬಗ್ಗೆ ವಿರಾಟ್ ಕೊಹ್ಲಿ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಕ್ರೀಡಾ ವಿಭಾಗದಲ್ಲಿ ಅತೀ ಹೆಚ್ಚು ಜನರು ರೀಟ್ವೀಟ್ ಮಾಡಿದ ಹಾಗೂ ಅತೀ ಹೆಚ್ಚು ಜನರು ನೆಚ್ಚಿದ ಟ್ವೀಟ್ ಆಗಿದೆ. 91.7K ಟ್ವಿಟ್ಟಿಗರು ಈ ಟ್ವೀಟ್ ಅನ್ನು ರೀಟ್ವೀಟ್ ಮಾಡಿದ್ದು, 529.7K ಜನರು ಲೈಕ್ ಮಾಡಿದ್ದಾರೆ.

ಅತೀ ಹೆಚ್ಚು ಟ್ವೀಟ್ ಮಾಡಿದ ಇಮೋಜಿಗಳು
ಸಾಮಾಜಿಕ ಜಾಲತಾಣದಲ್ಲಿ ಇಮೋಜಿಗಳ ಬಳಕೆ ಅಧಿಕವಾದ ಬಳಿಕ ವಿಶ್ವದಾದ್ಯಂತ ಅತೀ ಹೆಚ್ಚು ಜನರು ಇಮೋಜಿಗಳನ್ನು ಬಳಕೆ ಮಾಡುತ್ತಾರೆ. ಭಾರತದಲ್ಲಿ ಹೆಚ್ಚು ಜನರು ತಮ್ಮ ಎಲ್ಲಾ ಸಂದೇಶದಲ್ಲಿ ಇಮೋಜಿಯನ್ನು ಬಳಸುತ್ತಾರೆ. ಜನರು ಈ ಇಮೋಜಿ ಬಳಸುವುದಕ್ಕೆ ಇಷ್ಟಪಟ್ಟರೂ ಕೂಡಾ, ಹಲವಾರು ಮಂದಿ ಇದನ್ನು ಗೇಲಿ ಮಾಡುವುದೂ ಇದೆ. ಜನರು ತಮ್ಮ ಭಾವನೆಯನ್ನು ಬರೀ ಇಮೋಜಿಗೆ ಸೀಮಿತ ಮಾಡಿದ್ದಾರೆ ಎಂದು ಹೇಳುವ ಕೆಲವರು ಇದ್ದಾರೆ. ಭಾರತದಲ್ಲಿ ಅಧಿಕವಾಗಿ ನಮಸ್ಕಾರ, ಥಮ್ಸ್‌ಅಪ್ ಇಮೋಜಿಯನ್ನು ಬಳಸಲಾಗಿದೆ. ಟಾಪ್ ಟೆನ್ ಇಮೋಜಿಗಳು ಯಾವುದು ಎಂಬ ಪಟ್ಟಿ ಈ ಮೇಲಿನ ಚಿತ್ರದಲ್ಲಿ ಇದೆ ನೋಡಿ.

ಅತೀ ಹೆಚ್ಚು ಬಳಸಿದ ಹ್ಯಾಷ್‌ಟ್ಯಾಗ್
ಈಗ ಇಮೋಜಿಗಳ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಹ್ಯಾಷ್‌ಟ್ಯಾಗ್ ಬಳಕೆಯು ಕೂಡಾ ಪ್ರಚಲಿತವಾಗಿದೆ. ಭಾರತದಲ್ಲಿ ಮಾತ್ರವಲ್ಲದೇ ವಿಶ್ವದಾದ್ಯಂತ ಟ್ವಿಟ್ಟರ್ ಮೂಲಕವೇ ಅಭಿಯಾನವನ್ನು ಮಾಡಲಾಗುತ್ತದೆ. ಇದಕ್ಕಾಗಿ ಹ್ಯಾಷ್‌ಟ್ಯಾಗ್ ಬಳಸಲಾಗುತ್ತದೆ. ಯಾವ ಹ್ಯಾಷ್‌ಟ್ಯಾಗ್ ಈ ದಿನ ಟ್ರೆಂಡಿಗ್‌ನಲ್ಲಿ ಇದೆ ಎಂಬ ಬಗ್ಗೆ ನಾವು ದಿನನಿತ್ಯ ನಮ್ಮ ಟ್ವಿಟ್ಟರ್ ಖಾತೆಯ ಮೂಲಕ ನೋಡಬಹುದು. ಯಾವುದೇ ಒಂದು ವಿಚಾರದ ಬಗ್ಗೆ ಟ್ವೀಟ್ ಮಾಡುವ ಅಧಿಕ ಜನರು ಆ ವಿಚಾರಕ್ಕೆ ಸಂಬಂಧಿಸಿದ ಹ್ಯಾಷ್‌ಟ್ಯಾಗ್ ಅನ್ನು ಬಳಸುವುದು ಈಗ ಟ್ರೆಂಡ್ ಆಗಿದೆ. ಈ ವರ್ಷ ಯಾವೆಲ್ಲಾ ಟ್ಯಾಗ್‌ಗಳನ್ನು ಅಧಿಕವಾಗಿ ಬಳಸಲಾಗಿದೆ ಎಂಬ ಬಗ್ಗೆ ಈ ಮೇಲಿನ ಚಿತ್ರದಲ್ಲಿ ಉಲ್ಲೇಖ ಮಾಡಲಾಗಿದೆ. ಈ ವರ್ಷದಲ್ಲಿ ಟಾಪ್ ಒಂದರ ಟ್ಯಾಷ್‌ಟ್ಯಾಗ್ #Covid19 ಆಗಿದೆ, ಹಾಗೆಯೇ #FarmersProtest ಎರಡನೇ ಸ್ಥಾನದಲ್ಲಿದೆ. ಈ ಟಾಪ್ ಹತ್ತು ಪಟ್ಟಿಯಲ್ಲಿರುವ ಹ್ಯಾಷ್‌ಟ್ಯಾಗ್ ಅನ್ನು ಹೊರತುಪಡಿಸಿ, #Afghanistan, #CGL19marks, #IndianArmy, #Uttarakhand ಕೂಡಾ ಅತೀ ಹೆಚ್ಚಾಗಿ ಬಳಸಲಾಗಿರುವ ಹ್ಯಾಷ್‌ಟ್ಯಾಗ್ ಆಗಿದೆ. ಇನ್ನುಳಿದಂತೆ #Diwali, #EidMubarak, #RepublicDay, #IndependenceDay, #InternationalWomensDay, #Bitcoin, #BSC, #Crypto, #NFT, #DeFi ಟ್ಯಾಗ್‌ಗಳನ್ನು ಬಳಸಲಾಗಿದೆ.












Click it and Unblock the Notifications