• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೋದಿ 2.0 ಸಂಪುಟದ ಟಾಪ್ -3 ಶ್ರೀಮಂತ ಮಂತ್ರಿ ಯಾರು?

|

ನವದೆಹಲಿ, ಮೇ 02: ಲೋಕಸಭೆ ಚುನಾವಣೆ 2019ರಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವಾಗ ಚುನಾವಣಾ ಆಯೋಗಕ್ಕೆ ನೀಡಿರುವ ಅಫಿಡವಿಟ್ ನಲ್ಲಿರುವ ಅಂಕಿ ಅಂಶಗಳನ್ನು ಕಲೆ ಹಾಕಿ ಆಸ್ತಿ ವಿವರಗಳ ಲೆಕ್ಕವನ್ನು ಅಸೋಸಿಯೇಷನ್ ಫಾರ್ ಡೆಮೊಕ್ರಾಟಿಕ್ ರಿಫಾರ್ಮ್ಸ್(ಎಡಿಆರ್) ವರದಿ ಮಾಡಿತ್ತು. ನಂತರ ಗೆದ್ದ ಸಂಸದರ ಲೆಕ್ಕಾಚಾರ ನೀಡಿತ್ತು, ಈಗ ಮೋದಿ 2.0 ಸಚಿವ ಸಂಪುಟ ಸೇರಿದ ಬಳಿಕ ಅತಿ ಶ್ರೀಮಂತ ಸಚಿವರ ಪಟ್ಟಿಯನ್ನು ಪ್ರಕಟಿಸಿದೆ.

ಅಸೋಸಿಯೇಶನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್(ADR) ಬಿಡುಗಡೆ ಮಾಡಿದ ವರದಿಯ ಪ್ರಕಾರ ಕೇಂದ್ರ ಸಚಿವ ಸಂಪುಟದ 58(ಪ್ರಧಾನಿಯನ್ನೂ ಸೇರಿ) ಮಂತ್ರಿಗಳಲ್ಲಿ 51 ಮಂತ್ರಿಗಳು ಕೋಟ್ಯಧಿಪತಿಗಳಿದ್ದು, ಆಹಾರ ಸಂಸ್ಕರಣ ಖಾತೆ ಸಚಿವೆ ಹರ್ಸಿಮ್ರತ್ ಕೌರ್ ಬಾದಲ್ ಅತ್ಯಂತ ಶ್ರೀಮಂತ ಸಚಿವೆಯಾಗಿದ್ದಾರೆ. ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದವರಲ್ಲಿ ಹರ್ಸಿಮ್ರತ್ ಕೌರ್ ಬಾದಲ್, ಪಿಯೂಶ್ ಗೋಯಲ್, ರಾವ್ ಇಂದ್ರಜಿತ್ ಸಿಂಗ್, ಅಮಿತ್ ಶಾ ಇದ್ದಾರೆ.

2019ರ ಲೋಕಸಮರ ಅತ್ಯಂತ ಶ್ರೀಮಂತ ಮಹಿಳಾ ಅಭ್ಯರ್ಥಿ ಯಾರು?

ಒಟ್ಟಾರೆ, 539 ಗೆದ್ದವರ ಲೆಕ್ಕದಲ್ಲಿ 475(88%) ಮಂದಿ ಕೋಟ್ಯಧಿಪತಿಗಳಿದ್ದಾರೆ. 2014ರಲ್ಲಿ 443(82%) ಹಾಗೂ 2009ರಲ್ಲಿ 315(58%) ಮಂದಿ ಕೋಟ್ಯಧಿಪತಿಗಳಿದ್ದರು. ಬಿಜೆಪಿಯ 301 ಮಂದಿ, ಕಾಂಗ್ರೆಸ್ಸಿನ 51ರಲ್ಲಿ 43(84%) ಮಂದಿ, ಡಿಎಂಕೆಯ 23ರಲ್ಲಿ 22(96%), ಎಐಟಿಸಿ 22 ಗೆದ್ದವರ ಪೈಕಿ 20(91%), ವೈಎಸ್ಸಾರ್ ಸಿಪಿಯ22 ಮಂದಿ ಪೈಕಿ 19(86%) ಮಂದಿ, ಎಸ್ಎಚ್ಎಸ್ ನ 18 ಮಂದಿ ಕೋಟ್ಯಧಿಪತಿಗಳಾಗಿದ್ದಾರೆ.

ಆದರೆ, ಅತ್ಯಂತ ಶ್ರೀಮಂತ ಅಭ್ಯರ್ಥಿಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದ ಮಧ್ಯಪ್ರದೇಶದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆದ್ದ ನಕುಲ್ ನಾಥ್ ಅವರು ಈ ಬಾರಿಯ ಅತ್ಯಂತ ಶ್ರೀಮಂತ ಸಂಸದರೆನಿಸಿದ್ದಾರೆ. ಮುಖ್ಯಮಂತ್ರಿ ಕಮಲ್ ನಾಥ್ ಅವರ ಪುತ್ರ ನಕುಲ್ ನಾಥ್ ಅವರು ಛಿಂದ್ವಾರ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದಾರೆ. ಇವರ ಆಸ್ತಿ ಮೌಲ್ಯ 6,60,19,46,757 ರು ( 660 ಕೋಟಿ ರು). ಚರಾಸ್ತಿ : 6,18,41,72,757 ರು ಹಾಗೂ ಸ್ಥಿರಾಸ್ತಿ : 41,77,74,000ರು. ಮಿಕ್ಕಂತೆ ಮೋದಿ ಸಂಪುಟದ ಶ್ರೀಮಂತ ಸಚಿವರ ವಿವರ ಮುಂದಿದೆ.

1. ಹರ್ ಸಿಮ್ರತ್ ಕೌರ್

1. ಹರ್ ಸಿಮ್ರತ್ ಕೌರ್

ಭಟಿಂಡಾದಿಂದ ಸ್ಪರ್ಧಿಸಿ ಗೆದ್ದಿರುವ ಶಿರೋಮಣಿ ಅಕಾಲಿದಳದ ಹರ್ ಸಿಮ್ರತ್ ಕೌರ್ ಅವರು ಈ ಬಾರಿಯ ಅತ್ಯಂತ ಶ್ರೀಮಂತ ಸಚಿವೆ ಎನಿಸಿದ್ದಾರೆ. ಇವರ ಆಸ್ತಿ ಮೌಲ್ಯ 217 ಕೋಟಿ ರು. ಚರಾಸ್ತಿ ಮೌಲ್ಯ : 1,00,30,02,445 ರು ಹಾಗೂ ಸ್ಥಿರಾಸ್ತಿ ಮೌಲ್ಯ 1,17,69,17,425 ರು.

2. ಪಿಯೂಷ್ ಗೋಯೆಲ್

2. ಪಿಯೂಷ್ ಗೋಯೆಲ್

ರೈಲ್ವೆ, ವಾಣಿಜ್ಯ ಕೈಗಾರಿಕೆ ಸಚಿವ ಪಿಯೂಷ್ ಗೋಯೆಲ್ ಅವರ ಆಸ್ತಿ ಮೌಲ್ಯ 95,37,86,434 ರು. ಚರಾಸ್ತಿ 78,71,42,134 ರು, ಸ್ಥಿರಾಸ್ತಿ ಮೌಲ್ಯ 16,66,44,300ರು,

ನಕುಲ್ ನಾಥ್ 17ನೇ ಲೋಕಸಭೆಯ ಅತ್ಯಂತ ಶ್ರೀಮಂತ ಸಂಸದ

3. ರಾವ್ ಇಂದ್ರಜಿತ್ ಸಿಂಗ್

3. ರಾವ್ ಇಂದ್ರಜಿತ್ ಸಿಂಗ್

ಸಾಂಖ್ಯಿಕ, ಯೋಜನಾ ಅನುಷ್ಠಾನ ಖಾತೆ ರಾಜ್ಯ ಸಚಿವ ರಾವ್ ಇಂದ್ರಜಿತ್ ಸಿಂಗ್ ಅವರ ಚರಾಸ್ತಿ ಆಸ್ತಿ ಮೌಲ್ಯ 20,56,64,804 ರು ಹಾಗೂ ಸ್ಥಿರಾಸ್ತಿ ಮೌಲ್ಯ 21,53,05,950ರು. ಒಟ್ಟಾರೆ, ಆಸ್ತಿ ಮೌಲ್ಯ 42,09,70,754ರು.

17ನೇ ಲೋಕಸಭೆಯ ಅತ್ಯಂತ ಶ್ರೀಮಂತ ಸಂಸದೆ

17ನೇ ಲೋಕಸಭೆಯ ಅತ್ಯಂತ ಶ್ರೀಮಂತ ಸಂಸದೆ

ಮಹಿಳಾ ಸಂಸದೆಯರ ಪೈಕಿ ಮಥುರಾ ಸಂಸದೆ ಹೇಮಮಾಲಿನಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ನಟಿ, ಸಂಸದೆ ಹೇಮಮಾಲಿನಿ ಅವರ ಆಸ್ತಿ ಮೌಲ್ಯ 2,50,82,70,292 ರು (250 ಕೋಟಿ ರು) ಎಂದು ಎಡಿಆರ್ ತಿಳಿಸಿದೆ. ಚರಾಸ್ತಿ ಮೌಲ್ಯ 25,85,62,856 ರು ಹಾಗೂ ಸ್ಥಿರಾಸ್ತಿ ಮೌಲ್ಯ 2,24,97,07,436 ರು

ಈತ 2019ರ ಲೋಕಸಭೆ ಚುನಾವಣೆಯ ಅತಿ ಶ್ರೀಮಂತ ಅಭ್ಯರ್ಥಿ

ಅತ್ಯಂತ ಶ್ರೀಮಂತದ ಸಂಸದ

ಅತ್ಯಂತ ಶ್ರೀಮಂತದ ಸಂಸದ

ಆದರೆ, ಅತ್ಯಂತ ಶ್ರೀಮಂತ ಅಭ್ಯರ್ಥಿಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದ ಮಧ್ಯಪ್ರದೇಶದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆದ್ದ ನಕುಲ್ ನಾಥ್ ಅವರು ಈ ಬಾರಿಯ ಅತ್ಯಂತ ಶ್ರೀಮಂತ ಸಂಸದರೆನಿಸಿದ್ದಾರೆ. ಮುಖ್ಯಮಂತ್ರಿ ಕಮಲ್ ನಾಥ್ ಅವರ ಪುತ್ರ ನಕುಲ್ ನಾಥ್ ಅವರು ಛಿಂದ್ವಾರ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದಾರೆ. ಇವರ ಆಸ್ತಿ ಮೌಲ್ಯ 6,60,19,46,757 ರು ( 660 ಕೋಟಿ ರು). ಚರಾಸ್ತಿ : 6,18,41,72,757 ರು ಹಾಗೂ ಸ್ಥಿರಾಸ್ತಿ : 41,77,74,000ರು. ಮಿಕ್ಕಂತೆ ಮೋದಿ ಸಂಪುಟದ ಶ್ರೀಮಂತ ಸಚಿವರ ವಿವರ ಮುಂದಿದೆ.

ಮೋದಿ ಸುನಾಮಿ ಮುಂದೆ ಮಕಾಡೆ ಮಲಗಿದ ಕುಟುಂಬ ರಾಜಕಾರಣಿಗಳು

English summary
Valued at Rs 217 crore, Harsimrat Kaur Badal is the richest minister in the Narendra Modi government. Her moveable and immovable assets are valued at Rs 2,17,99,19,870 says a report by the Association for Democratic Reforms.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X