7 ಲಕ್ಷ ಬಜೆಟ್‌ನಲ್ಲಿ ಕಾರ್ ನೋಡ್ತಾ ಇದ್ದರೆ ಇಲ್ಲಿದೆ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರ್‌ಗಳ ಲೀಸ್ಟ್
ಭಾರತದಲ್ಲಿ ಕಾರ್‌ಗಳ ಮಾರುಕಟ್ಟೆ ಸಹ ದೊಡ್ಡದಾಗಿದೆ. ಈ ಮಾರುಕಟ್ಟೆಯಲ್ಲಿ ಹಲವು ಕಂಪನಿಯ ಕಾರ್‌ಗಳು ಇದ್ದು, ಗ್ರಾಹಕರನ್ನು ಕೈ ಬೀಸಿ ಕರೆಯುತ್ತಿವೆ. ಈಗಾಗಲೇ ಹಲವು ಕಂಪನಿಯ ಕಾರುಗಳು ಹ್ಯಾಚ್‌ಬ್ಯಾಕ್ ಸೆಗ್ಮೆಂಟ್‌ನಲ್ಲಿ ತಮ್ಮ ಛಾಪು ಮೂಡಿಸಿವೆ. ಈಗ ಎಲ್ಲರೂ ಈ ಹ್ಯಾಚ್‌ಬ್ಯಾಕ್ ಸೆಗ್ಮೆಂಟ್ ಓಲ್ಡ್ ಫ್ಯಾಶನ್ ಅನ್ನುವವರು ಇದ್ದಾರೆ. ಆದರೆ, ಈಗಲೂ ಇಂತಹ ಕಾರ್‌ಗಳನ್ನು ಇಷ್ಟ ಪಡುವವರ ಸಂಖ್ಯೆ ಏನು ಕಮ್ಮಿ ಇಲ್ಲ.
ಹ್ಯಾಚ್‌ಬ್ಯಾಕ್ ಕಾರ್‌ಗಳು ಫ್ಯಾಮಿಲಿ ಸೆಗ್ಮೆಂಟ್‌ಗೆ ಹೇಳಿ ಮಾಡಿಸಿದ ಕಾರು. ಈ ಕಾರ್‌ಗಳಲ್ಲೂ ಉತ್ತಮ ಸ್ಥಳಾವಕಾಶ ಇರುತ್ತದೆ. ಇನ್ನು ಈ ಕಾರ್‌ಗಳ ಮೇಲೆ ಜನರ ಪ್ರೀತಿ ಕಡಿಮೆ ಆಗದಿರಲು ಕಾರಣ, ಇದರ ಮೈಲೇಜ್. ಇಂದಿನ ವರದಿಯಲ್ಲಿ ಭಾರತದ ಮಾರುಕಟ್ಟೆಯಲ್ಲಿ ಲಭ್ಯವಿರುವ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರ್‌ಗಳನ್ನು ನೋಡೋಣ..

ಹುಂಡೈ ಗ್ರಾಂಡ್ ಐ10 ನಿಯೋಸ್
ಭಾರತದಲ್ಲಿ ಎರಡನೇ ಅತಿ ಹೆಚ್ಚು ಮಾರಾಟವಾಗುವ ಪ್ರಯಾಣಿಕರ ಕಾರ್ ಎಂಬ ಹೆಗ್ಗಳಿಕೆಯನ್ನು ಹುಂಡೈ ಹೊಂದಿದೆ. ಈ ಕಂಪನಿಯ ಕಾರ್‌ಗಳು ವರ್ಷದಿಂದ ವರ್ಷಕ್ಕೆ ಹೆಚ್ಚು ಸೇಲ್ ಆಗುತ್ತಿರುವುದೇ ಇದಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಈ ಕಂಪನಿ ಸಹ ಹಲವು ಸೆಗ್ಮೆಂಟ್‌ಗಳಲ್ಲಿ ಕಾರ್‌ಗಳನ್ನು ಲಾಂಚ್ ಮಾಡಿದೆ. ಹ್ಯಾಚ್ ಬ್ಯಾಕ್ ಸೆಗ್ಮೆಂಟ್‌ನಲ್ಲಿ ಗ್ರಾಹಕರನ್ನು ಸೆಳೆಯುತ್ತಿರುವ ಕಾರ್ ಎಂದರೆ ಹ್ಯುಂಡೈನ ಗ್ರಾಂಡ್ ಐ10 ನಿಯೋಸ್.
ಮಾರುಕಟ್ಟೆಯಲ್ಲಿ ಲಭ್ಯ ಇರುವ ಕಾರ್‌ಗಳಲ್ಲೇ ಉತ್ತಮವಾದ ಕಾರ್. ಇದರಲ್ಲಿ ಉತ್ತಮ ಸ್ಥಳಾವಕಾಶ ವ್ಯವಸ್ಥೆ ಇದೆ. ಈ ಕಾರ್ ಶಕ್ತಿಯುತ ಎಂಜಿನ್ ಅನ್ನು ಸಹ ಹೊಂದಿದೆ. ಕಾರಿನ ಎಕ್ಸ್ ಶೋ ರೂಂ ಬೆಲೆ ರೂ 5.92 ಲಕ್ಷದಿಂದ ಪ್ರಾರಂಭವಾಗುತ್ತದೆ.
ಈ ಕಾರು 1.2L ಕಪ್ಪಾ ಪೆಟ್ರೋಲ್ ಎಂಜಿನ್ ಹೊಂದಿದ್ದು 82 PS ಪವರ್ ಮತ್ತು 113.8Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ 5 ಸ್ಪೀಡ್ ಮ್ಯಾನುವಲ್ ಮತ್ತು AMT ಗೇರ್ ಬಾಕ್ಸ್ ಅನ್ನು ಹೊಂದಿದೆ. ಈ ಕಾರು ಒಂದು ಲೀಟರ್‌ನಲ್ಲಿ 20.7 ಕಿಲೋ ಮೀಟರ್ ಮೈಲೇಜ್ ನೀಡುತ್ತದೆ. ಸುರಕ್ಷತೆಗಾಗಿ, ಸುರಕ್ಷತೆಗಾಗಿ ಏರ್ ಬ್ಯಾಗ್‌ಗಳು ಸಹ ಲಭ್ಯ.

ಟಾಟಾ ಆಲ್ಟ್ರೋಜ್
ಹ್ಯಾಚ್‌ಬ್ಯಾಕ್ ಸೆಗ್ಮೆಂಟ್‌ನಲ್ಲಿ ಗ್ರಾಕರನ್ನು ಕೈ ಬೀಸಿ ಕರೆಯುತ್ತಿರುವ ಕಾರ್‌ಗಳ ಪಟ್ಟಿಯಲ್ಲಿ ಟಾಟಾ ಕಂಪನಿಯ ಕಾರ್ ಸಹ ಇದೆ. Tata Altroz ತನ್ನ ಆಕರ್ಷಕ ವಿನ್ಯಾಸದಿಂದಲೇ ಸುದ್ದಿಯಲ್ಲಿದೆ. ಈ ಕಾರಿನಲ್ಲಿ ಐದು ಜನ ಆರಮಾಗಿ ಪ್ರಯಾಣ ಮಾಡಬಹುದು. ಅಲ್ಲದೆ ಕಾರಿನಲ್ಲಿ ವಸ್ತುಗಳನ್ನು ಇಡಲು ಉತ್ತಮ ಸ್ಥಳಾವಕಾಶ ನೀಡಲಾಗಿದೆ. ಈ ಕಾರು ಪ್ರತಿ ಲೀಟರ್‌ಗೆ 19-20 ಕಿ.ಮೀ ಮೈಲೇಜ್ ನೀಡುತ್ತದೆ.
ಆಲ್ಟ್ರೊಜ್ 1.2 ಲೀ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ, ಇದು 3 ಸಿಲಿಂಡರ್‌ಗಳನ್ನು ಹೊಂದಿದೆ ಮತ್ತು 88 ಪಿಎಸ್ ಶಕ್ತಿಯನ್ನು ಹೊಂದಿದೆ. ಈ ಎಂಜಿನ್ 5 ಸ್ಪೀಡ್ ಗೇರ್ ಬಾಕ್ಸ್ ಹೊಂದಿದೆ. ಈ ಕಾರು EBD ಜೊತೆಗೆ ಏರ್‌ಬ್ಯಾಗ್‌ಗಳು, ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್ ನಂತಹ ವಿಶೇಷ ವ್ಯವಸ್ಥೆಗಳನ್ನು ನೀಡಲಾಗಿದೆ. ಈ ಕಾರಿನ ಎಕ್ಸ್ ಶೋ ರೂಂ ಬೆಲೆ ರೂ.6.64 ಲಕ್ಷ ರೂ.ದಿಂದ ಆರಂಭ.

ಮಾರುತಿ ಸುಜುಕಿ ಹೊಸ ಸ್ವಿಫ್ಟ್
ಅತ್ಯಾಧುನಿಕ ತಂತ್ರಜ್ಞನಾದಿಂದ ಇತ್ತೀಚಿಗೆ ಮಾರುಕಟ್ಟೆಗೆ ಬಿಡುಗಡೆಯಾದ ಮಾರುತಿ ಸುಜುಕಿ ಕಂಪನಿಯ ಕಾರ್ ಸಹ ಈ ಪಟ್ಟಿಯಲ್ಲಿದೆ. ಹೊಸ ಸ್ವಿಫ್ಟ್ ತನ್ನ ಸ್ಟೈಲಿಶ್ ಲುಕ್‌ನಿಂದಲೇ ಗ್ರಾಹಕರನ್ನು ಸೆಳೆಯುತ್ತಿದೆ. ಈ ಕಾರಿನ ಎಕ್ಸ್ ರೂಮ್ ಪ್ರೈಸ್ 6.49 ಲಕ್ಷದಿಂದ ರೂ.9.64 ಲಕ್ಷ ರೂ. ಆಗಿದೆ. ಈ ಎಂಜಿನ್ 5 ಸ್ಪೀಡ್ ಮ್ಯಾನುವಲ್ ಮತ್ತು 5 ಸ್ಪೀಡ್ ಎಎಮ್‌ಟಿ ಗೇರ್‌ಬಾಕ್ಸ್ ಅನ್ನು ಹೊಂದಿದೆ. ಈ ಕಾರ್ ಪ್ರತಿ ಲೀಟರ್‌ಗೆ 24.8 ಕಿಮೀ ಮೈಲೇಜ್ ನೀಡುತ್ತದೆ ಎಂದು ಕಂಪನಿ ಹೇಳಿದೆ.
ಹೊಸ ಸ್ವಿಫ್ಟ್ ಹೊಸ Z ಸರಣಿಯ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದ್ದು ಅದು 82 hp ಮತ್ತು 112 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಸುರಕ್ಷತೆಗಾಗಿ, ಹೊಸ ಸ್ವಿಫ್ಟ್‌ನ ಎಲ್ಲಾ ರೂಪಾಂತರಗಳಲ್ಲಿ 6 ಏರ್‌ಬ್ಯಾಗ್‌ಗಳು, ಇಬಿಡಿಯೊಂದಿಗೆ ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್‌ನಂತಹ ನೀಡಲಾಗಿದೆ.












Click it and Unblock the Notifications