ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟೈಮ್ಸ್ ನೌ ಸಮೀಕ್ಷೆ: ಪಶ್ಚಿಮ ಬಂಗಾಳದಲ್ಲಿ ಟಿಎಂಸಿಗೆ 160 ಸ್ಥಾನ: ಬಿಜೆಪಿ ಕಥೆಯೇನು?

|
Google Oneindia Kannada News

ಕೋಲ್ಕತಾ, ಮಾರ್ಚ್ 24: ಪಶ್ಚಿಮ ಬಂಗಾಳದ 2021ರ ವಿಧಾನಸಭಾ ಚುನಾವಣೆಯಲ್ಲಿ ಅಖಿಲ ಭಾರತ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಭಾರತೀಯ ಜನತಾ ಪಕ್ಷ (ಬಿಜೆಪಿ) ನಡುವೆ ಪ್ರಬಲ ಸ್ಪರ್ಧೆ ಏರ್ಪಟ್ಟಿದೆ.

2021ರ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಹಾಗೂ ಬಿಜೆಪಿ ನಡುವಿನ ಕಾಳಗಕ್ಕೆ ಸಾಕ್ಷಿಯಾಗಲು ಪಶ್ಚಿಮ ಬಂಗಾಳ ಜನರು ಸಜ್ಜಾಗಿದ್ದಾರೆ ಎಂದು ಟೈಮ್ಸ್ ನೌ ಸಿ-ವೋಟರ್ ಅಭಿಪ್ರಾಯ ಸಂಗ್ರಹದಲ್ಲಿ ಗೊತ್ತಾಗಿದೆ.

ಟೈಮ್ಸ್ ನೌ ಸಮೀಕ್ಷೆ: ಪುದುಚೇರಿಯಲ್ಲಿ ಎನ್‌ಡಿಎ ಮೈತ್ರಿಕೂಟ ಅಧಿಕಾರಕ್ಕೆಟೈಮ್ಸ್ ನೌ ಸಮೀಕ್ಷೆ: ಪುದುಚೇರಿಯಲ್ಲಿ ಎನ್‌ಡಿಎ ಮೈತ್ರಿಕೂಟ ಅಧಿಕಾರಕ್ಕೆ

ಟೈಮ್ಸ್ ನೌ ಸಿ-ವೋಟರ್ ಅಭಿಪ್ರಾಯ ಸಂಗ್ರಹದ ಪ್ರಕಾರ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಪಕ್ಷವು ಸ್ಪಷ್ಟ ಗೆಲುವಿನ ಅಂಚನ್ನು ಹೊಂದಿದೆ. ಆದರೆ, ಬಿಜೆಪಿ ಪಶ್ಚಿಮ ಬಂಗಾಳದ ರಾಜಕೀಯ ಸಮೀಕರಣದಲ್ಲಿ ಭಾರಿ ಬದಲಾವಣೆ ಮಾಡುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

Times Now Survey: 160 Seats For TMC In West Bengal Election

ಟೈಮ್ಸ್ ನೌ ಸಮೀಕ್ಷೆಯ ಪ್ರಕಾರ, ಟಿಎಂಸಿ 160 ಸ್ಥಾನಗಳನ್ನು ಗೆಲ್ಲಬಹುದು, ಇದು 2016ರ ಸ್ಥಾನಕ್ಕಿಂತ 51 ಸ್ಥಾನಗಳು ಕಡಿಮೆ. ಬಿಜೆಪಿ 2016ರ ಚುನಾವಣೆಯಲ್ಲಿ ಕೇವಲ ಮೂರು ಸ್ಥಾನಗಳಿಂದ 2021ರ ಚುನಾವಣೆಯಲ್ಲಿ 112 ತಲುಪಲಿದೆ ಎಂದು ಸಮೀಕ್ಷೆ ಅಂದಾಜಿಸಿದೆ. ಲೆಫ್ಟ್ ಫ್ರಂಟ್-ಕಾಂಗ್ರೆಸ್-ಇಂಡಿಯನ್ ಸೆಕ್ಯುಲರ್ ಫ್ರಂಟ್ (ಐಎಸ್ಎಫ್) ಮೈತ್ರಿಕೂಟ 22 ಸ್ಥಾನಗಳೊಂದಿಗೆ ಮೂರನೇ ಸ್ಥಾನದಲ್ಲಿರಲಿದೆ.

ಸ್ಥಾನಗಳ ಲೆಕ್ಕಾಚಾರ

ಟಿಎಂಸಿ 2016ರಲ್ಲಿ 211 ಸ್ಥಾನಗಳನ್ನು ಪಡೆದಿದ್ದರೆ, 2021ರ ಚುನಾವಣೆಯಲ್ಲಿ 160 ಸ್ಥಾನಗಳನ್ನು ಪಡೆಯಲಿದೆ ಎಂದು ಸಮೀಕ್ಷೆಯಲ್ಲಿ ಅಂದಾಜಿಸಲಾಗಿದೆ.

ಇನ್ನು, ಬಿಜೆಪಿ ಪಕ್ಷವು 2016ರಲ್ಲಿ ಕೇವಲ 3 ಸ್ಥಾನ ಗಳಿಸಿದ್ದರೆ, 2021ರ ಚುನಾವಣೆಯಲ್ಲಿ 112 ಸ್ಥಾನಗಳನ್ನು ಪಡೆಯಲಿದೆ. ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟವು 2016ರಲ್ಲಿ 76 ಸ್ಥಾನ ಪಡೆದುಕೊಂಡಿದ್ದರೆ, 2021ರ ಚುನಾವಣೆಯಲ್ಲಿ 22 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಲಿದೆ.

ವಿಶೇಷವೆಂದರೆ, ಟಿಎಂಸಿ ಮತ್ತು ಬಿಜೆಪಿಯ ಮತ ಗಳಿಕೆ ಶೇಕಡಾವಾರು ನಡುವಿನ ವ್ಯತ್ಯಾಸವು ದೊಡ್ಡದೆನಿಲ್ಲ. 2021ರ ಚುನಾವಣೆಯಲ್ಲಿ ಟಿಎಂಸಿಗೆ ಶೇ.42.1 ರಷ್ಟು ಮತಗಳು ದೊರೆಯುವ ಸಾಧ್ಯತೆ ಇದೆ ಎಂದು ಸಮೀಕ್ಷೆಯು ಸೂಚಿಸಿದ್ದು, ಇದು 2016 ರ ಫಲಿತಾಂಶಕ್ಕಿಂತ ಶೇಕಡಾ 2.8 ರಷ್ಟು ಕಡಿಮೆಯಾಗಿದೆ. ಬಿಜೆಪಿ ಶೇ.37.4 ರಷ್ಟು ಮತ ಗಳಿಕೆ ಪಡೆದು ಟಿಎಂಸಿ ಹಿಂದೆನೇ ಇರಲಿದೆ. ಇದು 2016 ರಲ್ಲಿ ಶೇ.10.2 ರಿಂದ ಶೇ.27.2 ರಷ್ಟು ಹೆಚ್ಚಾಗಿದೆ.

ಪಶ್ಚಿಮ ಬಂಗಾದ ಒಟ್ಟು 294 ಸ್ಥಾನಗಳಲ್ಲಿ ಟಿಎಂಸಿ 152-168 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸುವ ಸಾಧ್ಯತೆಯಿದ್ದರೆ, ಬಿಜೆಪಿ 104-120 ಸ್ಥಾನಗಳನ್ನು ಗೆಲ್ಲಬಹುದು. ಲೆಫ್ಟ್ ಫ್ರಂಟ್-ಕಾಂಗ್ರೆಸ್ ಮೈತ್ರಿಕೂಟವು 18-26 ಸ್ಥಾನಗಳನ್ನು ಗಳಿಸುವ ನಿರೀಕ್ಷೆಯಿದೆ, ಆದರೆ ಸ್ವತಂತ್ರರು 0-2 ಸ್ಥಾನಗಳನ್ನು ಗೆಲ್ಲಬಹುದು ಅಷ್ಟೆ ಎಂದು ಸಮೀಕ್ಷೆ ತಿಳಿಸಿದೆ.

ಮಾರ್ಚ್ ತಿಂಗಳಿನಲ್ಲಿ ಸಮೀಕ್ಷೆ ನಡೆಸಿದ 17,890 ಜನರಲ್ಲಿ, ಶೇ.55 ರಷ್ಟು ಜನರು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳದ ಸಿಎಂ ಹುದ್ದೆಗೆ ಹೆಚ್ಚು ಸೂಕ್ತ ಅಭ್ಯರ್ಥಿ ಎಂದು ಹೇಳಿದ್ದಾರೆ. ಬಿಜೆಪಿ ಪಶ್ಚಿಮ ಬಂಗಾಳ ರಾಜ್ಯ ಘಟಕದ ಮುಖ್ಯಸ್ಥ ದಿಲೀಪ್ ಘೋಷ್ ಅವರು ಸಿಎಂ ಆಗಲು ಶೇ.32.3 ರಷ್ಟು ಮತದಾರರು ಒಲುವು ತೋರಿಸಿದ್ದಾರೆ.

English summary
According to the Times Now C-Voter poll, the TMC party led by Mamata Banerjee has a clear winning margin in West Bengal Assembly Election 2021.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X