ಹಂತಹಂತವಾಗಿ ಮಸ್ಕ್ ವಶಕ್ಕೆ ಟ್ವಿಟ್ಟರ್, ಇದು ಸೋಷಿಯಲ್ ವಾರ್

ಬೆಂಗಳೂರು, ಏ. 26: ವಿಶ್ವದ ಅತಿದೊಡ್ಡ ಶ್ರೀಮಂತ ಹಾಗು ಯಶಸ್ವಿ ಉದ್ಯಮಿ ಎಲಾನ್ ಮಸ್ಕ್ 3.36 ಲಕ್ಷಕೋಟಿ ಹಣದಿಂದ ಟ್ವಿಟ್ಟರ್ ಅನ್ನು ಖರೀದಿಸಿರುವ ಸುದ್ದಿ ಟ್ರೆಂಡಿಂಗ್‌ನಲ್ಲಿದೆ. ವಿಶ್ವದ ನಂಬರ್ ಒನ್ ಮೈಕ್ರೋ ಬ್ಲಾಗಿಂಗ್ ಸೈಟ್ ಆಗಿರುವ ಟ್ವಿಟ್ಟರ್ ಅನ್ನು ಎಲಾನ್ ಮಸ್ಕ್ ಕೊಳ್ಳಲು ಸಾಧ್ಯವಾಗಿದ್ದು ಸುಮ್ಮನೆ ಅಲ್ಲ.

ಟ್ವಿಟ್ಟರ್‌ನ ಜನಪ್ರಿಯ ಮತ್ತು ರೆಗ್ಯುಲರ್ ಯೂಸರ್, ಕ್ರಿಟಿಕ್ ಆಗಿದ್ದ ಎಲಾನ್ ಮಸ್ಕ್ ನೋಡನೋಡುತ್ತಿದ್ದಂತೆಯೇ ಕ್ಯಾಪ್ಟನ್ ಆಗಿಬಿಟ್ಟಿದ್ದಾರೆ. ಬಹಳ ಕ್ಷಿಪ್ರಗತಿಯಲ್ಲಿ ಟ್ವಿಟ್ಟರ್ ಅನ್ನು ಮಸ್ಕ್ ಆವಾಹಿಸಿಕೊಂಡಿದ್ದಾರೆ. ಟ್ವಿಟ್ಟರ್ ಖರೀದಿಸಲು ಅವರ ಉದ್ದೇಶ ಏನೇ ಇರಲಿ, ಆದರೆ, ಹಂತ ಹಂತವಾಗಿ ಅವರು ಅದನ್ನ ಸೆಳೆದುಕೊಳ್ಳುತ್ತಾ ಹೋಗಿದ್ದು ಮಾತ್ರ ಸೋಜಿಗ. ಕೇವಲ ಮೂರು ತಿಂಗಳಲ್ಲಿ ತಾವಂದುಕೊಂಡಿದ್ದನ್ನು ಅವರು ಸಾಧಿಸಿದ್ದಾರೆ. ಅವರ ಈ ವ್ಯವಹಾರದ ಒಂದು ಟೈಮ್ ಲೈನ್ ಇಲ್ಲಿದೆ:

1) 2022, ಜನವರಿ 31: ಷೇರು ಖರೀದಿ ಆರಂಭಿಸಿದ್ದು:

1) 2022, ಜನವರಿ 31: ಷೇರು ಖರೀದಿ ಆರಂಭಿಸಿದ್ದು:

ಎಲಾನ್ ಮಸ್ಕ್ ಜನವರಿ 31ರಂದು ಟ್ವಿಟ್ಟರ್‌ನ ಷೇರುಗಳನ್ನ ಖರೀದಿಸಲು ಆರಂಭಿಸಿದರು. ಮಾರ್ಚ್ 14ರಷ್ಟರಲ್ಲಿ ಅವರು ಶೇ. 5ರಷ್ಟು ಷೇರುಗಳನ್ನ ಖರೀದಿಸಿಬಿಟ್ಟಿದ್ದರು. ಅಚ್ಚರಿ ಎಂದರೆ ಅವರು ಈ ವಿಚಾರವನ್ನು ಅಲ್ಲಿಯವರೆಗೂ ರಹಸ್ಯವಾಗಿಯೇ ಇಟ್ಟಿದ್ದು.

2) ಮಾರ್ಚ್ 24: ಟ್ವಿಟ್ಟರ್ ಮೇಲೆ ಮಸ್ಕ್ ಟೀಕೆಗಳ ದಾಳಿ:

2) ಮಾರ್ಚ್ 24: ಟ್ವಿಟ್ಟರ್ ಮೇಲೆ ಮಸ್ಕ್ ಟೀಕೆಗಳ ದಾಳಿ:

ಎಲಾನ್ ಮಸ್ಕ್ ಅವರು ಟ್ವಿಟ್ಟರ್ ಕಾರ್ಯನಿರ್ವಹಣೆ ಬಗ್ಗೆ ಸರಣಿಯಾಗಿ ಟ್ವೀಟ್‌ಗಳನ್ನ ಮಾಡತೊಡಗಿದರು. ಟ್ವಿಟ್ಟರ್‌ನ ಅಲ್ಗಾರಿದಮ್ ಸರಿಯಾಗಿಲ್ಲ. ಅಲ್ಲಿ ಫ್ರೀ ಸ್ಪೀಚ್‌ಗೆ ಅವಕಾಶ ಇಲ್ಲ ಎಂದು ಹೇಳಲು ಆರಂಭಿಸಿದ ಎಲಾನ್ ಮಸ್ಕ್ ಅವರು ಇತರ ಟ್ವಿಟ್ಟರ ಬಳಕೆದಾರರ ಅಭಿಪ್ರಾಯಗಳನ್ನ ಕೆದಕತೊಡಗಿದರು.

3) ಏಪ್ರಿಲ್ 4: ಎಲಾನ್ ಮಸ್ಕ್ ಷೇರು ಬಹಿರಂಗ ಮತ್ತು ಆಫ್ಟರ್ ಎಫೆಕ್ಟ್:

3) ಏಪ್ರಿಲ್ 4: ಎಲಾನ್ ಮಸ್ಕ್ ಷೇರು ಬಹಿರಂಗ ಮತ್ತು ಆಫ್ಟರ್ ಎಫೆಕ್ಟ್:

ಎಲಾನ್ ಮಸ್ಕ್ ಅವರು ತಾನು ಟ್ವಿಟ್ಟರ್‌ನ ಪಾಸಿವ್ ಇನ್‌ವೆಸ್ಟರ್ ಎಂದು ಫೈಲ್ ಮಾಡಿದ್ದರು. ಈ ಮೂಲಕ ಟ್ವಿಟ್ಟರ್ ಷೇರುಗಳನ್ನ ಮಸ್ಕ್ ಖರೀದಿಸಿದ ಸಂಗತಿ ಕೊನೆಗೂ ಬಹಿರಂಗವಾಗಿತ್ತು. ಅದಾದ ಬಳಿಕ ಎಲಾನ್ ಮಸ್ಕ್ ಅವರು ಟ್ವಿಟ್ಟರ್ ವ್ಯವಹಾರಗಳ ಬಗ್ಗೆ ಟ್ವೀಟ್ ಮಾಡತೊಡಗಿದರು. ಟ್ವಿಟ್ಟರ್‌ನಲ್ಲಿ ಏನೇನು ಬದಲಾವಣೆಗಳಾಗಬೇಕೆಂದು ಇತರ ಬಳಕೆದಾರರನ್ನು ಕೇಳತೊಡಗಿದರು. ಏಪ್ರಿಲ್ 4ರಂದು ಟ್ವಿಟ್ಟರ್ ಆಡಳಿತ ಮಂಡಳಿಗೆ ಸೇರಬೇಕೆಂದು ಎಲಾನ್ ಮಸ್ಕ್ ಅವರನ್ನ ಆಹ್ವಾನಿಸಲಾಯಿತು. ಅದಾದ ಬಳಿಕ ಎಲಾನ್ ಮಸ್ಕ್ ತಾನು ಟ್ವಿಟ್ಟರ್‌ನ ಶೇ. 14.9ಕ್ಕಿಂತ ಹೆಚ್ಚು ಖರೀದಿಸುವುದಿಲ್ಲ ಎಂದು ಒಪ್ಪಂಕ್ಕೆ ಸಹಿಹಾಕುವ ಮುನ್ಸೂಚೆ ನೀಡಿದರು. ಏಪ್ರಿಲ್ 5ರಂದು ಅವರು ತನ್ನನ್ನು ಆ್ಯಕ್ಟಿವ್ ಇನ್‌ವೆಸ್ಟರ್ ಎಂದು ಮತ್ತೆ ಫೈಲ್ ಮಾಡಿದ್ದು ಕುತೂಹಲ ಮೂಡಿಸಿತು. ಪಾಸಿವ್ ಇನ್‌ವೆಸ್ಟರ್ ಎಂದರೆ ಒಂದು ಕಂಪನಿಯಲ್ಲಿ ಪಾಲುದಾರಿಕೆ ಇದ್ದರೂ ಅ ಕಂಪನಿಯ ಆಗುಹೋಗನ್ನು ನಿಯಂತ್ರಿಸಲು ಅಧಿಕಾರ ಇರುವುದಿಲ್ಲ. ಆಕ್ಟಿವ್ ಇನ್‌ವೆಸ್ಟರ್ ಎಂದರೆ ಕಂಪನಿಯಲ್ಲಿ ಅಧಿಕಾರ ಇರುತ್ತದೆ.

4) ಏಪ್ರಿಲ್ 9: ಟ್ವಿಟ್ಟರ್ ಮಂಡಳಿ ಆಫರ್ ತಿರಸ್ಕರಿಸಿದ ಮಸ್ಕ್:

4) ಏಪ್ರಿಲ್ 9: ಟ್ವಿಟ್ಟರ್ ಮಂಡಳಿ ಆಫರ್ ತಿರಸ್ಕರಿಸಿದ ಮಸ್ಕ್:

ಟ್ವಿಟ್ಟರ್‌ನ ಷೇರುಗಳನ್ನು ಎಲಾನ್ ಮಸ್ಕ್ ಖರೀದಿಸಿದ್ದು ಬಹಿರಂಗಗೊಂಡ ಬಳಿಕ ಅವರಿಗೆ ಕಂಪನಿಯ ಬೋರ್ಡ್ ಸದಸ್ಯತ್ವದ ಆಫರ್ ಕೊಡಲಾಗಿತ್ತು. ಏಪ್ರಿಲ್ ೯ರಂದು ಅವರು ಈ ಆಫರ್ ಅನ್ನು ತಿರಸ್ಕರಿಸಲು ನಿರ್ಧರಿಸಿದರು. ಕಂಪನಿಗೆ ಇದು ಅನಿರೀಕ್ಷಿತವಾಗಿತ್ತು. ಮಸ್ಕ್ ನಿರ್ಧಾರ ಬದಲಿಸಬಹುದು ಎಂದು ಕೆಲ ದಿನ ಕಾದಿದ್ದೂ ಆಯಿತು. ಅದೇ ವೇಳೆ, ಎಲಾನ್ ಮಸ್ಕ್ ಅವರು ಟ್ವಿಟ್ಟರ್ ಬಗ್ಗೆ ಟೀಕೆಗಳನ್ನ ಮುಂದವರಿಸಿದರು. ಅದರಲ್ಲಿ ಬದಲಾವಣೆ ತರುವ ಬಗ್ಗೆ ಅಭಿಪ್ರಾಯ ಕೆದಕುವ ಕೆಲಸವನ್ನೂ ಮುಂದುವರಿಸಿದರು.

5) ಏಪ್ರಿಲ್ 11, 14, 15: ಇಲಾನ್ ಮಸ್ಕ್ ದೂರದೃಷ್ಟಿ:

5) ಏಪ್ರಿಲ್ 11, 14, 15: ಇಲಾನ್ ಮಸ್ಕ್ ದೂರದೃಷ್ಟಿ:

ಮಸ್ಕ್ ಯಾಕೆ ಟ್ವಿಟ್ಟರ್ ಬೋರ್ಡ್ ಸ್ಥಾನದ ಆಫರ್ ತಿರಸ್ಕರಿದರು ಎಂಬುದಕ್ಕೆ ಕಾರಣವಿದೆ. ಅವರು ಬೋರ್ಡ್ ಮೆಂಬರ್ ಆದರೆ ಟ್ವಿಟ್ಟರ್ ಷೇರುದಾರರ ಹಿತಾಸಕ್ತಿ ದೃಷ್ಟಿಯಿಂದ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತಿತ್ತು. ಹಾಗೆಯೇ ಮಸ್ಕ್ ಅವರು ಅಮೆರಿಕದ ಎಸ್ಇಸಿ ಪ್ರಾಧಿಕಾರಕ್ಕೆ ಸಲ್ಲಿಸಿದ ತಿದ್ದುಪಡಿ ಫೈಲಿಂಗ್‌ನಿಂದಾಗಿ ಅವರು ಎಷ್ಟು ಬೇಕಾದರೂ ಷೇರುಗಳನ್ನ ಖರೀದಿಸಲು ಸಾಧ್ಯವಾಗಿಸಿತ್ತು. ಏಪ್ರಿಲ್ 14ರಂದು ಅವರು 43 ಬಿಲಿಯನ್ ಡಾಲರ್ (3.3 ಲಕ್ಷಕೋಟಿ ರೂ) ಹಣಕ್ಕೆ ಎಲ್ಲಾ ಷೇರುಗಳನ್ನ ಖರೀದಿಸಿ ಟ್ವಿಟ್ಟರ್ ಮಾಲಿಕತ್ವ ಪಡೆಯುವುದಾಗಿ ಹೇಳಿ ಟ್ವೀಟ್ ಮಾಡುತ್ತಾರೆ.

6) ಏಪ್ರಿಲ್ 15: ಪಾಯ್ಸನ್ ಪಿಲ್ ಅಸ್ತ್ರ:

6) ಏಪ್ರಿಲ್ 15: ಪಾಯ್ಸನ್ ಪಿಲ್ ಅಸ್ತ್ರ:

ಟ್ವಿಟ್ಟರ್ ಅನ್ನು ಖರೀದಿಸುವ ಮಸ್ಕ್ ಪ್ರಯತ್ನವನ್ನು ವಿಫಲಗೊಳಿಸಲು ಕಂಪನಿ ಬೇರೊಂದು ಪ್ಲಾನ್ ಮಾಡಿ 'poison pill' ಅಸ್ತ್ರ ಬಿಟ್ಟಿತು. ಪಾಯ್ಸನ್ ಪಿಲ್ ಎಂಬುದು ಷೇರುದಾರರ ಒಂದು ಬಗೆಯ ಹಕ್ಕಾಗಿದೆ. ಯಾವುದೇ ಷೇರುದಾರನ ಪಾಲು ಶೇ. 15 ಮೀರಿದರೆ ಬೇರೆ ಷೇರುದಾರರು ಕಡಿಮೆ ಬೆಲೆಯಲ್ಲಿ ಷೇರುಗಳನ್ನ ಖರೀದಿಸಬಹುದಾದ ಕಾನೂನು ಅದು.

7) ಏಪ್ರಿಲ್ 16: ಟ್ವಿಟ್ಟರ್ ಮಂಡಳಿಯ ಲೋಪ ತೋರಿಸಿದ ಮಸ್ಕ್:

7) ಏಪ್ರಿಲ್ 16: ಟ್ವಿಟ್ಟರ್ ಮಂಡಳಿಯ ಲೋಪ ತೋರಿಸಿದ ಮಸ್ಕ್:

ಟ್ವಿಟ್ಟರ್‌ನ ಸಂಸ್ಥಾಪಕ ಜ್ಯಾಕ್ ಡೋರ್ಸೆ ಅವರನ್ನ ಬಿಟ್ಟರೆ ಟ್ವಿಟ್ಟರ್ ಆಡಳಿತ ಮಂಡಳಿಯ ಬೇರಾವುದೇ ಸದಸ್ಯರಿಗೂ ಯಾವುದೇ ಪಾಲು ಇರಲಿಲ್ಲ. ಜ್ಯಾಕ್ ಡೋರ್ಸೆ ಅವರ ಅವಧಿ ಮೇ 25ಕ್ಕೆ ಮುಗಿಯುತ್ತದೆ. ಈ ವಿಚಾರ ಇಟ್ಟುಕೊಂಡು ಮಸ್ಕ್ ಕುಟುಕುತ್ತಾರೆ. ಜ್ಯಾಕ್ ಹೊರಹೋಗುತ್ತಿದ್ದಾರೆ. ಈಗ ಟ್ವಿಟ್ಟರ್ ಬೋರ್ಡ್‌ನಲ್ಲಿರುವವರಿಗೆ ಯಾವುದೇ ಷೇರುಗಳಿಲ್ಲ. ಪಾಲುದಾರಿಕೆ ಇಲ್ಲದೇ ಇರುವ ವ್ಯಕ್ತಿಗಳು ಷೇರುದಾರರ ಹಿತಾಸಕ್ತಿಯನ್ನು ಪರಿಗಣಿಸುವುದಿಲ್ಲ.

8) ಏಪ್ರಿಲ್ 21: ಹಣದ ವ್ಯವಸ್ಥೆ ಮಾಡಿದ ಮಸ್ಕ್:

8) ಏಪ್ರಿಲ್ 21: ಹಣದ ವ್ಯವಸ್ಥೆ ಮಾಡಿದ ಮಸ್ಕ್:

ಎಸ್‌ಇಸಿಗೆ ಮಾಡಿದ ಫೈಲಿಂಗ್‌ನಲ್ಲಿ ಎಲಾನ್ ಮಸ್ಕ್ ಅವರು ಟ್ವಿಟ್ಟರ್ ಖರೀದಿಗೆ 46.5 ಬಿಲಿಯನ್ ಡಾಲರ್ (ಸುಮಾರು 3.56 ಲಕ್ಷಕೋಟಿ ರೂ) ಹಣದ ವ್ಯವಸ್ಥೆ ಮಾಡಿರುವುದಾಗಿ ತಿಳಿಸಿದರು. ಇದರ ಅರ್ಧಕ್ಕಿಂತ ಹೆಚ್ಚು ಪಾಲಿನ ಹಣವನ್ನು ಮಾರ್ಗನ್ ಸ್ಟಾನ್ಲೀ ಎಂಬ ಹಣಕಾಸು ಸಂಸ್ಥೆಯಿಂದ ಸಿಗುತ್ತಿದೆ. ಟೆಸ್ಲಾ ಕಂಪನಿಯಲ್ಲಿರುವ ತನ್ನ ಷೇರುಗಳನ್ನ ಮಾರಿ ಒಂದಷ್ಟು ಹಣದ ವ್ಯವಸ್ಥೆ ಮಾಡುವುದಾಗಿ ಮಸ್ಕ್ ವಿವರ ನೀಡಿದರು.

9) ಏಪ್ರಿಲ್ 24: ಮಾತುಕತೆಗೆ ಬಂದ ಟ್ವಿಟ್ಟರ್:

9) ಏಪ್ರಿಲ್ 24: ಮಾತುಕತೆಗೆ ಬಂದ ಟ್ವಿಟ್ಟರ್:

ಎಸ್‌ಇಸಿಗೆ ಎಲಾನ್ ಮಸ್ಕ್ ಫೈಲಿಂಗ್ ಮಾಡಿದ ಬಳಿಕ ಟ್ವಿಟ್ಟರ್ ಆಡಳಿತ ಮಂಡಳಿ ಅನಿವಾರ್ಯವಾಗಿ ಮಾತುಕತೆಗೆ ಕೂರಬೇಕಾಯಿತು. ಟ್ವಿಟ್ಟರ್ ಬೋರ್ಡ್ ಮತ್ತು ಎಲಾನ್ ಮಸ್ಕ್ ಮಧ್ಯೆ ಮೊನ್ನೆ ಭಾನುವಾರ ಮತ್ತು ನಿನ್ನೆ ಸೋಮವಾರ ಮಾತುಕತೆಗಳು ನಡೆದವು.

10) ಏಪ್ರಿಲ್ 25: ಮಾರಾಟಕ್ಕೆ ಒಪ್ಪಿಗೆ:

10) ಏಪ್ರಿಲ್ 25: ಮಾರಾಟಕ್ಕೆ ಒಪ್ಪಿಗೆ:

ಪ್ರತೀ ಷೇರಿಗೆ 54.20 ಡಾಲರ್ (ಸುಮಾರು 4116 ರೂ) ಹಣದಂತೆ ಕಂಪನಿಯನ್ನ ಎಲಾನ್ ಮಸ್ಕ್ ಖರೀದಿ ಮಾಡಲು ಟ್ವಿಟ್ಟರ್ ಪ್ಪಿಕೊಂಡಿತು. ಶೀಘ್ರದಲ್ಲೇ ಈ ಖರೀದಿ ಅಧಿಕೃತವಾಗಿ ಮುಗಿಯುವ ನಿರೀಕ್ಷೆ ಇದೆ.

(ಒನ್ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+