Motorola: 20 ರಿಂದ 30 ಸಾವಿರದ ಒಳಗೆ ಮೊಟೊರಾಲಾದ ಈ ಫೋನ್‌ಗಳು ಬೆಸ್ಟ್
ಭಾರತದಲ್ಲಿ ಅಷ್ಟೇಅಲ್ಲ ವಿಶ್ವದಲ್ಲೇ ಮೊಟೊರಾಲಾ ತನ್ನ ವಿಶಿಷ್ಠ ತಂತ್ರಜ್ಞಾನದಿಂದ ಹೆಸರು ವಾಸಿ. ಈ ಕಂಪನಿಯ ಫೋನ್‌ಗಳ ಮೇಲೆ ಗ್ರಾಹಕರಿಗೆ ನಂಬಿಕೆ ಹೆಚ್ಚು. ಮೊಟೊರಾಲಾ ಕಂಪನಿ ಸಹ ಮಿಡ್ ರೇಂಜ್ ಗ್ರಾಹಕರನ್ನೇ ಟಾರ್ಗೆಟ್ ಮಾಡಿ ಫೋನ್ ಲಾಂಚ್ ಮಾಡುತ್ತವೆ. ಹಾಗಿದ್ದರೆ ಸದ್ಯ ಮಾರುಕಟ್ಟೆಯಲ್ಲಿ ಲಭ್ಯ ಇರುವ ಮೊಟೊರಾಲಾ ಫೋನ್‌ಗಳಲ್ಲಿ ಬೆಸ್ಟ್ ಯಾವವು ಇಲ್ಲಿದೆ ಮಾಹಿತಿ.
ಗ್ರಾಹಕ ಫೋನ್‌ಗಳನ್ನು ತನ್ನ ಯೂಸೇಜ್‌ಗೆ ಅನುಗುಣವಾಗಿ ಪಡೆದುಕೊಳ್ಳುತ್ತಾನೆ. ಒಬ್ಬರಿಗೆ ಕ್ಯಾಮೆರಾ ಚೆನ್ನಾಗಿರ ಬೇಕು, ಇನ್ನು ಕೆಲವರಿಗೆ ಬ್ಯಾಟರಿ ಬ್ಯಾಕ್‌ಅಪ್ ಚೆನ್ನಾಗಿರಬೇಕು. ಇನ್ನು ಹಲವರಿಗೆ ವೆಲ್ ಲುಕ್ಕಿಂಗ್ ಇರಬೇಕು. ಇನ್ನು ಹಲವರಿಗೆ ಗೇಮಿಂಗ್ ಆಕ್ಷನ್‌ಗಳ ಬಗ್ಗೆಯೂ ಗಮನ ಹರಿಸುತ್ತಾರೆ. ಈ ಎಲ್ಲ ಲಕ್ಷಣಗಳನ್ನು ನೋಡಿಕೊಂಡು ಕಂಪನಿಗಳು ಹಲವು ರೇಂಜ್‌ಗಳಲ್ಲಿ ಫೋನ್‌ಗಳನ್ನು ಲಾಂಚ್ ಮಾಡುತ್ತವೆ. ಅದರಲ್ಲಿ ಮೊಟೊರಾಲಾ ಕಂಪನಿಯ ಫೋನ್‌ಗಳ ಬಗ್ಗೆ ಮಾಹಿತಿ ಇಲ್ಲಿದೆ.

ಮೊಟೊರಾಲಾ ಎಡ್ಜ್ 40 ನಿಯೋ ಫೋನ್ ಸದ್ಯ ಮಾರುಕಟ್ಟೆಯಲ್ಲಿ ಸಖತ್ ಸದ್ದು ಮಾಡುತ್ತಿದೆ. ಇದರಲ್ಲಿ ಮಿಡಿಯಾಟೆಕ್ ಡಿಮೆನ್ಸಿಟಿ 7030 ಪ್ರೊಸೆಸರ್ ನೀಡಲಾಗಿದೆ. ಹಿಂಭಾಗದಲ್ಲಿ ಎರಡು ಕ್ಯಾಮೆರಾ ಸೆಟಪ್ ನೀಡಲಾಗಿದ್ದು, 50 ಮೆಗಾ ಪಿಕ್ಸಲ್ ಹಾಗೂ 13 ಮೆಗಾ ಪಿಕ್ಸಲ್ ರೆರ್ ಕ್ಯಾಮೆರಾ ಹೊಂದಿವೆ. ಫ್ರಂಟ್‌ನಲ್ಲಿ ಸೆಲ್ಫಿ ಹಾಗೂ ಕಾಲ್ ರೆಕಾರ್ಡಿಂಗೆ 32 ಕ್ಯಾಮೆರಾ ನೀಡಲಾಗಿದೆ. 8 ಜಿಬಿ ರ್ಯಾಮ್ ಹಾಗೂ 128 ಜಿಬಿ ಇಂಟರ್ನಲ್ ಸ್ಟೋರೆಜ್ ಹೊಂದಿದೆ. ಬ್ಯಾಟರಿ 4400 ಎಂಎಎಚ್ ಇದ್ದು, 68 ವ್ಯಾಟ್ ಫಾಸ್ಟ್ ಚಾರ್ಜಿಂಗ್ ನೀಡಲಾಗುತ್ತದೆ.
ಬೆಲೆ 26,975 ರೂ.
ಮೊಟೊರಾಲಾ ಎಡ್ಜ್ 30 ಪ್ರೋ
ಈ ಸ್ಮಾರ್ಟ್‌ಫೋನ್‌ನ ಸ್ನ್ಯಾಪ್‌ಡ್ರ್ಯಾಗನ್ 8 ಜನರೇಷನ್ 1 ಪ್ರೊಸೆಸರ್ ಹೊಂದಿದ್ದು, ಹಿಂಭಾಗದಲ್ಲಿ ಮೂರು ಕ್ಯಾಮೆರಾ ಸೆಟಪ್ ನೀಡಲಾಗಿದೆ. 50 ಮೆಗಾ ಪಿಕ್ಸಲ್+ 50 ಎಂಪಿ+ 2 ಎಂಪಿ ಕ್ಯಾಮೆರಾಗಳಿವೆ. ಮುಂಭಾಗದಲ್ಲಿ 60 ಮೆಗಾ ಪಿಕ್ಸಲ್ ಕ್ಯಾಮೆರಾ ನೀಡಲಾಗುತ್ತದೆ. ಇದರಲ್ಲಿ 8 ಜಿಬಿ ರ್ಯಾಮ್, 128 ಜಿಬಿ ಸ್ಟೋರೇಜ್ ಹೊಂದಿದೆ. ಇದರಲ್ಲಿ 4800 ಎಂಎಎಚ್ ಬ್ಯಾಟರಿ ಲಭ್ಯ ವಿದ್ದು, 68 ವ್ಯಾಟ್ ಫಾಸ್ಟ್ ಚಾರ್ಜಿಂಗ್ ನೀಡಲಾಗುತ್ತದೆ.
ಬೆಲೆ 26,599 ರೂ.

ಮೊಟೊರಾಲಾ ಎಡ್ಜ್ 40
ಈ ಫೋನಿನ ಹಿಂಭಾಗದಲ್ಲಿ 50 ಮೆಗಾ ಪಿಕ್ಸಲ್ ಹಾಗೂ 13 ಮೆಗಾ ಪಿಕ್ಸಲ್ ರೇರ್ ಕ್ಯಾಮೆರಾ ನೀಡಲಾಗಿದ್ದು, ಮುಂಭಾಗದಲ್ಲಿ ಸೆಲ್ಫಿ ಹಾಗೂ ಕಾಲ್ ರೆಕಾರ್ಡಿಂಗ್‌ಗೆ 32 ಮೆಗಾ ಪಿಕ್ಸಲ್ ಕ್ಯಾಮೆರಾ ನೀಡಲಾಗಿದೆ. ಈ ಸ್ಮಾರ್ಟ್‌ಫೋನ್ ಮಿಡಿಯಾಟೆಕ್ ಡಿಮೆನ್ಸಿಟಿ 8020 ಪ್ರೊಸೆಸರ್ ಹೊಂದಿದ್ದು, 8 ಜಿಬಿ ರ್ಯಾಮ್, 256 ಜಿಬಿ ಸ್ಟೋರೇಜ್ ನೀಡಲಾಗಿದೆ. ಇದರಲ್ಲಿ 4400 ಎಂಎಎಚ್ ಬ್ಯಾಟರಿ ಜೊತೆಗೆ 33 ವ್ಯಾಟ್ ಫಾಸ್ಟ್ ಚಾರ್ಜ ಲಭ್ಯ.
ಬೆಲೆ 31,890 ರೂ.
ಮೊಟೊರಾಲಾ ಎಡ್ಜ್ 20 ಫ್ಯೂಸನ್
ಈ ಮೊಬೈಲ್ ಕ್ಯಾಮೆರಾ ಸಖತ್ ಆಗಿದೆ. ಇದರ ಹಿಂಬಾಗದಲ್ಲಿ 108 ಮೆಗಾ ಪಿಕ್ಸಲ್ ಕ್ಯಾಮೆರಾ ನೀಡಿದ್ದು, 8 ಮೆಗಾ ಪಿಕ್ಸಲ್ ಅಲ್ಟ್ರಾ ವೈಡ್ ಕ್ಯಾಮೆರಾ ನೀಡಲಾಗಿದೆ. ಅಲ್ಲದೆ 2 ಮೆಗಾ ಪಿಕ್ಸಲ್ ಕ್ಯಾಮೆರಾ ಸೆಟಪ್ ಸಹ ಇದೆ. ಈ ಫೋನ್ ಮಿಡಿಯಾ ಟೆಕ್ ಡಿಮೆನ್ಸಿಟಿ 800 ಯು ಪ್ರೊಸೆಸರ್‌ನಲ್ಲಿ ಕಾರ್ಯ ನಿರ್ವಹಿಸುತ್ತದೆ. ಈ ಮೊಬೈಲ್‌ಗೆ ಮುಂಭಾಗದಲ್ಲಿ 32 ಮೆಗಾ ಪಿಕ್ಸಲ್ ಕ್ಯಾಮೆರಾ ನೀಡಲಾಗಿದ್ದು, 8 ಜಿಬಿ ರ್ಯಾಮ್, 128 ಜಿಬಿ ಇಂಟರ್ನಲ್ ಸ್ಟೋರೇಜ್ ಹೊಂದಿದೆ. ಈ ಸ್ಮಾರ್ಟ್‌ಫೋನ್ 5000 ಎಂಎಎಚ್ ಬ್ಯಾಟರಿ, 30 ವ್ಯಾಟ್ ಫಾಸ್ಟ್ ಚಾರ್ಜಿಂಗ್ ಹೊಂದಿದೆ.
ಬೆಲೆ 23,990 ರೂ.

ಮೊಟೊರಾಲಾ ಮೊಟೊ ಜಿ84 5ಜಿ
ಈ ಮಿಡ್ ಬಜೆಟ್ ಫೋನ್‌ನಲ್ಲಿ ಕ್ವಾಲ್‌ಕೋಮ್ ಸ್ನ್ಯಾಪ್‌ಡ್ರ್ಯಾಗನ್ 695 ಪ್ರೊಸೆಸರ್ ನೀಡಲಾಗುತ್ತಿದೆ. ಇದರಲ್ಲಿ 50 ಮೆಗಾ ಪಿಕ್ಸಲ್ ಕ್ಯಾಮೆರಾ, 8 ಮೆಗಾ ಪಿಕ್ಸಲ್ ಕ್ಯಾಮೆರಾ, 2 ಮೆಗಾ ಪಿಕ್ಸಲ್ ಕ್ಯಾಮೆರಾ ಸೆಟಪ್ ಇದೆ. ಮುಂಭಾಗದಲ್ಲಿ 16 ಎಂಪಿ ಕ್ಯಾಮೆರಾ ನೀಡಲಾಗಿದೆ. 12 ಜಿಬಿ ರ್ಯಾಮ್, 256 ಜಿಬಿ ಇಂಟರ್ನಲ್ ಸ್ಟೋರೆಜ್ ಹೊಂದಿರುವ ಈ ಫೋನ್‌ನಲ್ಲಿ 5000 ಎಂಎಎಚ್ ಬ್ಯಾಟರಿ ಇದ್ದು, 30 ವ್ಯಾಟ್ ಫಾಸ್ಟ್ ಚಾರ್ಜಿಂಗ್ ಗೆ ಸಪೋರ್ಟ್ ಮಾಡುತ್ತದೆ.
ಬೆಲೆ: 20000 ರೂ.












Click it and Unblock the Notifications