17 ನೇ ಲೋಕಸಭೆಯಲ್ಲಿ ಮುಸ್ಲಿಮ್ ಸಂಸದರ ಸಂಖ್ಯೆ 27

ನವದೆಹಲಿ, ಮೇ 28: ಹದಿನೇಳನೇ ಲೋಕಸಭೆ ಚುನಾವಣೆಯಲ್ಲಿ ಕೇವಲ 27 ಮುಸ್ಲಿಂ ಅಭ್ಯರ್ಥಿಗಳು ಸಂಸದರಾಗಿ ಆಯ್ಕೆಯಾಗಿದ್ದು, 303(542) ಸ್ಥಾನಗಳಲ್ಲಿ ಗೆದ್ದ ಬಿಜೆಪಿ ಕೇವಲ ಒಬ್ಬ ಮುಸ್ಲಿಂ ಸಂಸದರನ್ನು ಹೊಂದಿದೆ.

ಆದರೆ 2014 ರ ಲೋಕಸಭೆ ಚುನಾಣೆಗೆ ಹೋಲಿಸಿದರೆ ಈ ಬಾರಿ ಮುಸ್ಲಿಂ ಸಂಸದರ ಸಂಖ್ಯೆ ಕೊಂಚ ಹೆಚ್ಚಿದೆ. ಕಳೆದ ಬಾರಿ ಕೇವಲ 22 ಮುಸ್ಲಿಂ ಅಭ್ಯರ್ಥಿಗಳಷ್ಟೇ ಲೋಕಸಭಾ ಸದಸ್ಯರಾಗಿದ್ದರು.

ಬಿಜೆಪಿಯ ಒಟ್ಟು 303 ಸಂಸದರಲ್ಲಿ ಪಶ್ಚಿಮ ಬಂಗಾಳದ ಸೌಮಿತ್ರಾ ಖಾನ್ ಅವರು ಮಾತ್ರವೇ ಮುಸ್ಲಿಂ ಸಂಸದರು. ಅವರು ಟಿಎಂಸಿಯ ಶ್ಯಾಮಲಾಲ್ ಸಂತ್ರಾ ಅವರನ್ನು 78,047 ಮತಗಳಿಂದ ಸೋಲಿಸಿದ್ದರು.

There are 27 Muslim MPS in 17th Lok Sabha

ಜೊತೆಗೆ ಲೋಕ ಜನಶಕ್ತಿ ಪಕ್ಷದ ಮಹ್ಬೂಬ್ ಅಲಿ ಕೈಸರ್ ಅವರು ಸಹ ಎನ್ ಡಿಎ ಜೊತೆ ಗುರುತಿಸಿಕೊಂಡಿದ್ದು, ಎನ್ ಡಿಎ ಪಡೆದ ಒಟ್ಟು 353 ಸ್ಥಾನಗಳಲ್ಲಿ ಇಬ್ಬರು ಮಾತ್ರವೇ ಮುಸ್ಲಿಮರಾಗಿದ್ದಾರೆ.

ಕಾಂಗ್ರೆಸ್ ಮತ್ತು ಟಿಎಂಸಿ ಪಕ್ಷಗಳಲ್ಲಿ ತಲಾ 5, ಸಮಾಜವಾದಿ ಪಕ್ಷ, ಬಹುಜನ ಸಮಾಜ ಪಕ್ಷ, ನ್ಯಾಶ್ನಲ್ ಕಾನ್ಫಿರೆನ್ಸ್ ಪಕ್ಷದಿಂದ ತಲಾ 3, ಕೇರಳದಿಂದ ಮೂವರು, ಅಸ್ಸಾಂನಿಂದ ಬ್ಬರು ಮುಸ್ಲಿಂ ಸಂಸದರು ಆಯ್ಕೆಯಾಗಿದ್ದಾರೆ.

ಈ ಬಾರಿ ಸಂಸತ್ತಿನಲ್ಲಿ ಒಟ್ಟು 78 ಮಹಿಳಾ ಸಂಸದರಿದ್ದು, ಇದೇ ಮೊದಲ ಬಾರಿಗೆ ಸಂಸತ್ತಿನಲ್ಲಿ ಮಹಿಳಾ ಪ್ರಾತಿನಿಧ್ಯ ಹೆಚ್ಚಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+