• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮರಣಶಯ್ಯೆಯಲ್ಲಿ ಮೌಲನಾ, ಮಸೂದ್ ಅಜರ್ -ಪತ್ರಕರ್ತನಿಂದ ಉಗ್ರನಾದ ತನಕ

|
   Surgical Strike 2: ಮರಣಶಯ್ಯೆಯಲ್ಲಿ ಮೌಲನಾ, ಮಸೂದ್ ಅಜರ್ -ಪತ್ರಕರ್ತನಿಂದ ಉಗ್ರನಾದ ತನಕ

   ಪತ್ರಕರ್ತ ಎಂದು ತನ್ನನ್ನು ತಾನು ಕರೆದುಕೊಳ್ಳುತ್ತಿದ್ದ ವ್ಯಕ್ತಿಯೊಬ್ಬನನ್ನು 1994ನೇ ಇಸವಿಯಲ್ಲಿ ಶ್ರೀನಗರದ ಪೊಲೀಸರು ಬಂಧಿಸುತ್ತಾರೆ. ಆತನ ಬಳಿ ಆಗ ಪೋರ್ಚುಗೀಸ್ ಪಾಸ್ ಪೋರ್ಟ್ ಇರುತ್ತದೆ. ಅಂದು ಸಿಕ್ಕಿಬಿದ್ದಿದ್ದ ಆ ವ್ಯಕ್ತಿ ಇಂದು ಮೋಸ್ಟ್ ವಾಂಟೆಂಡ್ ಕ್ರಿಮಿನಲ್, ಭಯೋತ್ಪಾದಕನಾಗಿ ಬೆಳೆದಿದ್ದಾನೆ. ಹೌದು, ಅವನೇ ಮೌಲನಾ ಮಸೂದ್ ಅಜರ್.

   ಜೈಷ್ ಎ ಮೊಹಮ್ಮದ್ ಎಂಬ ಪುಟ್ಟ ಸಂಘಟನೆಯನ್ನು ಕಟ್ಟುಕೊಂಡು ಭಾರತದ ಪಾಲಿಗೆ ಕೆಟ್ಟ ಕನಸಾಗಿ ಉಳಿದಿದ್ದಾನೆ. ಸದ್ಯ ಲಭ್ಯವಿರುವ ಮಾಹಿತಿಯಂತೆ ಆತನಿಗೆ ಕಿಡ್ನಿ ವೈಫಲ್ಯವಷ್ಟೇ ಅಲ್ಲ, ಸ್ಪೈನಲ್ ಕ್ಯಾನ್ಸರ್ ಕೂಡಾ ಅವರಿಸಿಕೊಂಡಿದೆಯಂತೆ. ಮರಣಶಯ್ಯೆಯಲ್ಲಿರುವ ಆತನನ್ನು ಉಳಿಸಿಕೊಳ್ಳಲು ಪಾಕಿಸ್ತಾನ ಇನ್ನಿಲ್ಲದ ಸಾಹಸ ಪಡುತ್ತಿದೆ.

   ಭಯೋತ್ಪಾದನೆಯ ತವರು ನೆಲ ಪಾಕ್ ಗೆ ಇರಾನ್ ನ ಖಡಕ್ ವಾರ್ನಿಂಗ್

   ಹರ್ಕತ್ ಉಲ್ ಮುಜಾಹಿದ್ದೀನ್ ಸಂಘಟನೆಯ ಉಸ್ತುವಾರಿ ನೋಡಿಕೊಳ್ಳಲು ಭಾರತಕ್ಕೆ ಬಂದ ಮಸೂದ್, ಮುಂದೆ ತನ್ನದೇ ಸಂಘಟನೆ ಕಟ್ಟಿದ. ಆತ್ಮಾಹುತಿ ದಳ ರೂಪಿಸಿದ, ಅತ್ಯಾಧುನಿಕ ಶಸ್ತ್ರಾಸ್ತ್ರ ಬಳಕೆ ತರಬೇತಿ ನೀಡತೊಡಗಿದ.

   ಉತ್ತಮ ವಾಗ್ಮಿ: ಈತ ಬೆಳೆಯುತ್ತಿದ್ದ ರೀತಿ ನೋಡಿದ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ, ಈತನ ಯೋಚನೆ, ಕುತಂತ್ರಗಳಿಗೆ ತಕ್ಕ ಪೋಷಣೆ ನೀಡತೊಡಗಿತು. ಜನರನ್ನು ಸೆಳೆಯುವಲ್ಲಿ, ಮರಳು ಮಾಡುವಲ್ಲಿ, ಅಮಾಯಕ ಯುವಕರನ್ನು ಜಿಹಾದಿ ಹೆಸರಿನಲ್ಲಿ ಬಲಿ ಪಡೆಯುವಲ್ಲಿ ಅಜರ್ ಮಾತುಗಳು ಬಹುತೇಕ ಕೆಲಸ ಮಾಡಿವೆ. ಮೌಲನಾ ಎಂಬ ಹೆಸರು ಸುಮ್ಮನೆ ಬಂದಿದ್ದಲ್ಲ. ಇಸ್ಲಾಂನ ಶಾಂತಿ ಮಂತ್ರ ಬೋಧಿಸುವ ಕಾರ್ಯ ಮಾಡುವ ಅವಕಾಶವಿದ್ದರೂಮಸೂದ್ ಹೊರಳಿದ್ದು ಮಾತ್ರ ಜಿಹಾದ್ ಮಾರ್ಗಕ್ಕೆ ಹಾಗೂ ತನ್ನದೇ ಪಾತಕಿಗಳ ಗುಂಪು ಕಟ್ಟುವತ್ತ.

   ಮಸೂದ್ ಅಜರ್ ಸೇನಾ ಆಸ್ಪತ್ರೆಯಿಂದ ಸ್ಥಳಾಂತರ, ಹೆಚ್ಚಿದ ಭದ್ರತೆ

   ಐದು ವರ್ಷ ಜೈಲಿನಲ್ಲಿದ್ದ : 1999ರಲ್ಲಿ ಇಂಡಿಯನ್ ಏರ್ ಲೈನ್ಸ್ ವಿಮಾನ ಅಪಹರಣ ಮಾಡಿದ ಉಗ್ರರು ಕಂದಹಾರಕ್ಕೆ ಕೊಂಡೊಯ್ದರು. ಮಸೂದ್ ಸೋದರ ಮೊಹಮ್ಮದ್ ರಾಫ್ ನಡೆಸಿದ ಈ ಕೃತ್ಯ, ಭಾರತಕ್ಕೆ ಮುಳುವಾಯಿತು. ಅಂದಿನ ವಾಜಪೇಯಿ ಸರ್ಕಾರವು ಪ್ರಯಾಣಿಕರನ್ನು ರಕ್ಷಿಸುವ ಸಲುವಾಗಿ ಮಸೂದ್ ಹಾಗೂ ಇನ್ನಿಬ್ಬರು ಉಗ್ರರು ಜೈಲಿನಿಂದ ಹೊರ ಬಿಟ್ಟರು. ಆದಾದ ಬಳಿಕ 2001ರಲ್ಲಿ ಭಾರತದ ಸಂಸತ್ ದಾಳಿ, ಪಠಾಣ್ ಕೋಟ್ ದಾಳಿ, ಇತ್ತೀಚಿನ ಪುಲ್ವಾಮಾ ದಾಳಿತನಕ ಎಲ್ಲದರಲ್ಲೂ ಮಸೂದ್ ಸಂಚು ಇತ್ತು.

   ಮಸೂದ್ ಸತ್ತಿದ್ದಾನೆ ಎಂಬ ಸುದ್ದಿ ಸುಳ್ಳು: ಜೈಷ್ ನಿಂದಲೇ ಸ್ಪಷ್ಟನೆ

   ಹಿಜ್ಬುಲ್ ಹಾಗೂ ಲಷ್ಕರ್ ಪ್ರಾಬಲ್ಯ ಕಡಿಮೆಯಾಗುತ್ತಿದ್ದಂತೆ ಜೈಷ್ ಸಂಘಟನೆ ಪ್ರವರ್ಧಮಾನಕ್ಕೆ ಬಂದಿತು. ಸರಿ ಸುಮಾರು 60 ಉಗ್ರರನ್ನು ಹೊಂದಿರುವ ಜೈಷ್ , ಉರಿ, ನಗ್ರೋತಾದಲ್ಲೂ ದಾಳಿ ನಡೆಸಿತ್ತು. ಈಗ ಈ ಎಲ್ಲ ಕುಕೃತ್ಯಗಳ ಹಿಂದಿನ ಶಕ್ತಿ ಮಸೂದ್ ಸಾವಿನ ಕ್ಷಣ ಎಣಿಸುತ್ತಿದ್ದಾನೆ.

   English summary
   There were unconfirmed reports that suggested that Jaish-e-Mohammad chief, Maulana Masood Azhar had died. Here we look back at The Maulana menace: From a journalist, how Azhar became a dreaded terrorist
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X