Video: ಬಿಸಿಲಿಗೆ ಕಂಗೆಟ್ಟು 'ಆಟೋ ರಿಕ್ಷಾ' ಮೇಲೆ ಹುಲ್ಲು ಬೆಳೆಸಿದ ಚಾಲಕ: ಜನರು ಫಿದಾ
ತೆಲಂಗಾಣ, ಮೇ 05: ಪ್ರಸಕ್ತ ಬೇಸಿಗೆಯಲ್ಲಿ ಬಿಸಿಲಿನ ಶಾಖಕ್ಕೆ ನಲುಗದ ರಾಜ್ಯಗಳು, ಹಳ್ಳಿಗಳೇ ಇಲ್ಲ. ಇದೇ ರೀತಿ ತೆಲಂಗಾಣದಲ್ಲಿ ಆಟೋ ಚಾಲಕನೊಬ್ಬ ಅಧಿಕ ತಾಪಮಾನದ ಝಳಕ್ಕೆ ತಪ್ಪಿಸಿಕೊಳ್ಳಲು ಕಂಡುಕೊಂಡ ಐಡಿಯಾ ನೆಟ್ಟಿಗರು ಫೀದಾ ಆಗಿದ್ದಾರೆ. ಈ ಕುರಿತು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಹೌದು, ಈ ವರ್ಷದ ಫೆಬ್ರವರಿಯಿಂದ ಈ ವರೆಗೆ ತೀವ್ರ ತಾಪಮಾನ ದಾಖಲಾತಿಯಿಂದ ಜನರು ಹೈರಾಣಾಗಿದ್ದರು. ಇದಕ್ಕೆ ವಾಹನ ಸವಾರರು ಹೊರತಾಗಿಲ್ಲ. ಬಿಸಿಲ ಝಳಕ್ಕೆ ಬೇಸತ್ತ ಆಟೋ ತೆಲಂಗಾಣದಲ್ಲಿ ಆಟೋ ಚಾಲಕರೊಬ್ಬರು ತಮ್ಮ ಆಟೋ ರಿಕ್ಷಾ ಮೇಲೆ ಹುಲ್ಲು ಬೆಳೆಸುವ ಮೂಲಕ ಕೂಲ್ ಸಂಚಾರ ಮಾಡುತ್ತಿದ್ದಾರೆ.

ಅಚ್ಚರಿ ಅನಿಸಿದರೂ ಇದು ಸತ್ಯ. ಆಟೋ ಮೇಲೆ ಹುಲ್ಲು ಬೆಳೆಸಿ, ಅದಕ್ಕೆ ನೀರು ಹಾಕುವ ಮೂಲಕ ಆಟೋದ ಒಳಗೆ ತಣ್ಣನೆಯ ವಾತಾವರಣ ಕಾಪಾಡಿಕೊಂಡಿದ್ದಾರೆ ಈ ಚಾಲಕ.
ನಿರಂತರ ಬಿಸಿಲಿನಿಂದ ತಪ್ಪಿಸಿಕೊಳ್ಳಲು ಈ ಆಟೋ ಡ್ರೈವರ್ ತಮ್ಮ ಆಟೋ ಮೇಲೆ ತುಂಬಲೂ ಗೋಣಿ ಚೀಲ ಹಾಕಿದ್ದಾರೆ. ಅದರ ಮೇಲೆ ಹುಲ್ಲು ಬೆಳೆಸಿದ್ದಾರೆ. ಆಗಾಗ ಆ ಗೋಣಿಚೀಲದ ಮೇಲೆ ನೀರು ಹಾಕುತ್ತಾರೆ. ಇದರಿಂದ ಆಟೋದ ಒಳಗೆ ಬಿಸಲಿನ ಝಳ ಕಡಿಮೆ ಮಾಡಿಕೊಂಡು ಕೂಲ್ ಆಗಿ ಅವರು ಆಟೋ ಓಡಿಸುತ್ತಿದ್ದಾರೆ.
ಆಟೋ ಹತ್ತುವವರ ಸಂಖ್ಯೆ ಕೊಂಚ ಏರಿಕೆ
ಆಟೋ ನೋಡಿದ ಜನರು ಫೀದಾ ಆಗಿದ್ದಾರೆ. ಇವರ ಆಟೋ ಹತ್ತುವ ಪ್ರಯಾಣಿಕರ ಸಂಖ್ಯೆ ತುಸು ಹೆಚ್ಚಾಗಿದೆ. ಈ ಕುರಿತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದನ್ನು ನೋಡಿದ ನೆಟ್ಟಿಗರು ಬಿಸಿಲಿನ ವಿರುದ್ಧ ಡ್ರೈವರ್ ಒಳ್ಳೆಯ ಐಡಿಯಾ ಕಂಡುಕೊಂಡಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ.

ಆಟೋ ಸಂಚಾರದಲ್ಲಿ ಬಿಡುವು ಮಾಡಿಕೊಂಡು ಹುಲ್ಲಿಗೆ ನೀರು ಹಾಕುವ ಮೂಲಕ ಕೂಲ್ ಆಗಿ ಆಟೋ ರೀಕ್ಷಾ ಓಡಿಸುತ್ತಿದ್ದಾರೆ. ಈ ಐಡಿಯಾಗೆ ಜನರು ಮನಸೋತಿದ್ದಾರೆ.
An auto driver in #Mahabubabad turns his auto-rickshaw into a moving garden.
— Sudhakar Udumula (@sudhakarudumula) January 31, 2024
Auto driver Anji from Mahabubabad installed a small garden on his auto-rickshaw. He decorated his auto-rickshaw uniquely by switching the seat covers with artificial grass.#GreenIndia #Telangana pic.twitter.com/zkF4Su5ydm
ಆಟೋ ಮೇಲೆ ಮಿನಿ ಗಾರ್ಡನ್
ಇದೇ ರೀತಿ ತೆಲಂಗಾಣದಲ್ಲಿ ಆಟೋ ಮೇಲೆ ಮಿನಿ ಗಾರ್ಡ್ ಮಾಡಿದ್ದ ವಿಡಿಯೋ, ಫೋಟೋಗಳು ಕಳೆದ ಜನವರಿ ತಿಂಗಳಲ್ಲಿ ವೈರಲ್ ಆಗಿತ್ತು. ತೆಲಂಗಾಣದ ಮಹಬೂಬಾಬಾದ್‌ನಲ್ಲಿ ಆಟೋ ಚಾಲಕನೊಬ್ಬ ತನ್ನ ಆಟೋ ರಿಕ್ಷಾವನ್ನು ಚಲಿಸುವ ಉದ್ಯಾನವನ್ನಾಗಿ ಮಾಡಿದ್ದಾನೆ.
ಆಟೋ ಚಾಲಕ ಅಂಜಿ ಎಂಬುವವರು ತನ್ನ ಆಟೋ-ರಿಕ್ಷಾದಲ್ಲಿ ಸಣ್ಣ ಉದ್ಯಾನವನ್ನು ಸ್ಥಾಪಿಸಿದ್ದಾರೆ. ಅವರು ತಮ್ಮ ಆಟೋ ರಿಕ್ಷಾವನ್ನು ಕೃತಕ ಹುಲ್ಲಿನಿಂದ ಸೀಟ್ ಕವರ್‌ಗಳನ್ನು ಬದಲಾಯಿಸುವ ಮೂಲಕ ಆಟೋ ಟಾಪ್‌ಅನ್ನು ಅಲಂಕರಿಸಿದ್ದಾರೆ. ಆಗಾಗ ನೀರು ಹಾಕುವ ಮೂಲಕ ಉದ್ಯಾನ ರಕ್ಷಿಸುತ್ತಾರೆ. ಈ ಫೋಟೊ ಸಹ ಭಾರೀ ವೈರಲ್ ಆಗಿದ್ದವು.












Click it and Unblock the Notifications