ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಾವ್ಯಾವ ದೇಶದಲ್ಲಿ ಬುರ್ಖಾ ಧರಿಸುವುದಕ್ಕೆ ನಿಷೇಧವಿದೆ ಗೊತ್ತಾ?

By ಅನಿಲ್ ಆಚಾರ್
|
Google Oneindia Kannada News

ಶ್ರೀಲಂಕಾದಲ್ಲಿ ಇತ್ತೀಚೆಗೆ ಸರಣಿ ಬಾಂಬ್ ಸ್ಫೋಟ ಸಂಭವಿಸಿದ ನಂತರ ಮುಸ್ಲಿಂ ಮಹಿಳೆಯರು ಬುರ್ಖಾ ಧರಿಸುವುದಕ್ಕೆ ನಿಷೇಧ ವಿಧಿಸಲಾಗಿದೆ. ಭದ್ರತಾ ಕಾರಣಗಳಿಗಾಗಿ ಇಂಥದ್ದೊಂದು ತೀರ್ಮಾನ ಮಾಡಲಾಗಿದೆ. ಹಾಗಂತ ಇಂಥ ನಿರ್ಧಾರ ಇದೇ ಮೊದಲಲ್ಲ. ಇತರ ದೇಶಗಳಲ್ಲೂ ಬುರ್ಖಾಗೆ ಸಂಪೂರ್ಣ ಅಥವಾ ಭಾಗಶಃ ನಿಷೇಧ ಇದೆ. ಅದಕ್ಕೂ ಮುನ್ನ ಇಸ್ಲಾಮ್ ನಲ್ಲಿ ಬುರ್ಖಾಗೆ ಇರುವ ಪ್ರಾಮುಖ್ಯತೆ ಬಗ್ಗೆ ತಿಳಿದುಕೊಳ್ಳಿ.

ಕುರ್ ಆನ್ ನ ಪ್ರಕಾರ ಮಹಿಳೆಯರಾಗಲೀ ಪುರುಷರಾಗಲೀ ಗೌರವಯುತವಾಗಿ ದಿರಿಸು ಧರಿಸಬೇಕು. ತಮ್ಮ ದೇಹದ ಅಗತ್ಯ ಭಾಗ ಹೊರತುಪಡಿಸಿ ಉಳಿದ್ಯಾವುದನ್ನೂ ಹೊರ ಜಗತ್ತಿಗೆ ಪ್ರದರ್ಶಿಸಬಾರದು. ಇದರ ಹೊರತಾಗಿ ಮಹಿಳೆಯರ ವಸ್ತ್ರದ ಬಗ್ಗೆ ಪವಿತ್ರ ಕುರ್ ಆನ್ ನಲ್ಲಿ ಬೇರೆ ಪ್ರಸ್ತಾವ ಇಲ್ಲ.

ಬುರ್ಖಾ ನಿಷೇಧ: ಫ್ರಾನ್ ನಂತರ ಕೆನಡಾ ಸರದಿಬುರ್ಖಾ ನಿಷೇಧ: ಫ್ರಾನ್ ನಂತರ ಕೆನಡಾ ಸರದಿ

ಹಾಗೆ ನೋಡಿದರೆ ಈ ಬಗ್ಗೆ ಬುರ್ಖಾ ಮತ್ತೊಂದರ ಬಗ್ಗೆ ಪ್ರಸ್ತಾವ ಮಾಡಿಲ್ಲ. ಬುರ್ಖಾದ ಮೂಲ ಪರ್ಶಿಯಾ. ಹತ್ತನೇ ಶತಮಾನದಲ್ಲಿ ಕಂಡುಬರುತ್ತದೆ. ಆ ನಂತರ ಅದು ಅರೇಬಿಯಾ ಭಾಗಗಳಲ್ಲಿ ಮತ್ತು ಈಗಿನ ಪಾಕಿಸ್ತಾನ, ಅಫ್ಘಾನಿಸ್ತಾನಗಳಿಗೆ ವ್ಯಾಪಿಸುತ್ತದೆ. ಅರೇಬಿಯಾದಲ್ಲಿ ಇದನ್ನು 'ನಿಕಾಬ್' ಎನ್ನಲಾಗುತ್ತದೆ. ಸಂಪ್ರದಾಯವಾದಿ ವಹಾಬಿಗಳು ಇದನ್ನು ಹೆಚ್ಚು ಬಳಸುವಂತೆ ಸೂಚಿಸುತ್ತಾರೆ. ದಕ್ಷಿಣ ಏಷ್ಯಾದಲ್ಲಿ ದೇವ್ ಬಂದಿಗಳು ಬುರ್ಖಾವನ್ನು ಅಳವಡಿಸಿಕೊಂಡರು.

ಬುರ್ಖಾ ಎಂಬುದು ಸಂಸ್ಕೃತಿಯೇ ವಿನಾ ಕುರ್ ಆನ್ ನಲ್ಲಿ ಪ್ರಸ್ತಾವ ಆಗಿರುವ ವಿಚಾರ ಅಲ್ಲ. ಆದರೂ ಹಲವಾರು ಮುಸ್ಲಿಂ ದೇಶದಲ್ಲಿ ಇದನ್ನು ಕಡ್ಡಾಯ ಮಾಡಲಾಗಿದೆ. ಯಾವಾಹ ಬೊಕೋ ಹರಾಮ್ ಉಗ್ರ ಸಂಘಟನೆ ಪ್ರವರ್ಧಮಾನಕ್ಕೆ ಬಂದಿತೋ ಆಗ ಭದ್ರತಾ ದೃಷ್ಟಿಯಿಂದ ಪಶ್ಚಿಮ ಆಫ್ರಿಕಾದಲ್ಲಿ ಬುರ್ಖಾಗೆ ನಿಷೇಧವಿದೆ.

ಇನ್ನು ಯಾವ ದೇಶಗಳಲ್ಲಿ ಬುರ್ಖಾ ಧರಿಸುವುದಕ್ಕೆ ನಿಷೇಧವಿದೆ ಎಂಬುದನ್ನು ತಿಳಿದುಕೊಳ್ಳೋಣ.

ಬುರ್ಖಾ ನಿಷೇಧಿಸಿದ ಮೊದಲ ಯುರೋಪಿಯನ್ ದೇಶ ಫ್ರಾನ್ಸ್

ಬುರ್ಖಾ ನಿಷೇಧಿಸಿದ ಮೊದಲ ಯುರೋಪಿಯನ್ ದೇಶ ಫ್ರಾನ್ಸ್

ಫ್ರಾನ್ಸ್: ಸಾರ್ವಜನಿಕವಾಗಿ ಬುರ್ಖಾ ಧರಿಸುವಂತಿಲ್ಲ ಎಂದು ನಿಷೇಧ ಹೇರಿದ ಮೊದಲ ಯುರೋಪಿಯನ್ ದೇಶ. ಹದಿನೈದು ವರ್ಷಗಳ ಹಿಂದೆ ಅಲ್ಲಿನ ಸರಕಾರಿ ಶಾಲೆಯಲ್ಲಿ ಯಾವುದೇ ಧಾರ್ಮಿಕ ಸಂಕೇತ ಬಳಸುವಂತಿಲ್ಲ ಎಂಬ ನಿಯಮ ಮಾಡಿತು. ಎಂಟು ವರ್ಷಗಳ ಹಿಂದೆ ಮುಖವನ್ನು ಸಂಪೂರ್ಣವಾಗಿ ಮುಚ್ಚುವಂಥ ಬುರ್ಖಾಗೆ ನಿಷೇಧ ಹೇರಿತು. ಒಂದು ವೇಳೆ ನಿಷೇಧ ಮೀರಿದರೆ ಮಹಿಳೆ ನೂರೈವತ್ತು ಯುರೋ ದಂಡ. ಬುರ್ಖಾ ಧರಿಸಲೇ ಬೇಕು ಎಂದು ಒತ್ತಾಯಿಸುವವರಿಗೆ ಮೂವತ್ತು ಸಾವಿರ ಯುರೋ ದಂಡ ವಿಧಿಸಲಾಗುತ್ತದೆ.

ಬೆಲ್ಜಿಯಂ: ಈ ದೇಶ ಕೂಡ ಫ್ರಾನ್ಸ್ ಹಾದಿಯನ್ನೇ ಅನುಸರಿಸಿತು. ಎಂಟು ವರ್ಷದ ಹಿಂದೆ ಪೂರ್ತಿಯಾಗಿ ಮುಖ ಮುಚ್ಚುವ ಬುರ್ಖಾ ನಿಷೇಧಿಸಿತು. ಅಷ್ಟೇ ಅಲ್ಲ, ಸಾರ್ವಜನಿಕ ಸ್ಥಳದಲ್ಲಿ ಪೂರ್ತಿ ಮುಖ ಮುಚ್ಚುವ ಬಟ್ಟೆ ತೊಡದಂತೆ ಕಾನೂನು ಮಾಡಿತು. ಮಹಿಳೆ ಬುರ್ಖಾ ಧರಿಸಿ ಸಿಕ್ಕಿಬಿದ್ದರೆ ಏಳು ದಿನದ ತನಕ ಜೈಲು ಅಥವಾ ಸಾವಿರದ ಮುನ್ನೂರಾ ಐವತ್ತು ಯುರೋಗೂ ಹೆಚ್ಚು ದಂಡ ಹಾಕಲಾಗುತ್ತದೆ. ಈ ಬಗ್ಗೆ ಸರಕಾರವು ಸರ್ವಸಮ್ಮತ ಕಾನೂನು ಜಾರಿ ಮಾಡಿತು.

ಇಸ್ಲಾಮಿಕ್ ಈಜುಡುಗೆಗೆ ನಿಷೇಧ

ಇಸ್ಲಾಮಿಕ್ ಈಜುಡುಗೆಗೆ ನಿಷೇಧ

ನೆದರ್ಲೆಂಡ್ಸ್: ಈ ದೇಶದಲ್ಲಿ ನಾಲ್ಕು ವರ್ಷಗಳ ಹಿಂದೆ ಭಾಗಶಃ ನಿಷೇಧ ಜಾರಿಯಾಯಿತು. ಅಂದರೆ, ಅಲ್ಲಿನ ಶಾಲೆ, ಆಸ್ಪತ್ರೆ ಹಾಗೂ ಸಾರ್ವಜನಿಕ ಸಾರಿಗೆಯಲ್ಲಿ ಪೂರ್ಣವಾಗಿ ಮುಖ ಮುಚ್ಚುವ ಬುರ್ಖಾ ಧರಿಸುವಂತಿಲ್ಲ. ಬೇರೆ ಸ್ಥಳಗಳಲ್ಲಿ ಬುರ್ಖಾ ಧರಿಸಬಹುದು. ಆದರೆ ಅಗತ್ಯ ಇರುವ ಕಡೆ ಹಾಗೂ ಭದ್ರತಾ ಕಾರಣಗಳಿಗಾಗಿ ಅಗತ್ಯ ಇರುವೆಡೆ ಧರಿಸುವಂತಿಲ್ಲ.

ಇಟಲಿ: ಇಲ್ಲಿ ರಾಷ್ಟ್ರಾದ್ಯಂತ ನಿಷೇಧವಿಲ್ಲ್. ಒಂಬತ್ತು ವರ್ಷದ ಹಿಂದೆ ನೊವಾರಾ ಎಂಬಲ್ಲಿ ನಿಷೇಧ ಹಾಕಲಾಯಿತು. ಸದ್ಯಕ್ಕೆ ಅಲ್ಲಿ ದಂಡ ವಿಧಿಸುವ ನಿಯಮವಿಲ್ಲ. ಇಟಲಿಯ ಕೆಲ ಭಾಗದಲ್ಲಿ ಸ್ಥಳೀಯ ಅಧಿಕಾರಿಗಳು ಇಸ್ಲಾಮಿಕ್ ಈಜುಡುಗೆ ಹಾಗೂ ಬುರ್ಖಿನೀಸ್ ಅನ್ನು ನಿಷೇಧ ಮಾಡಿದ್ದಾರೆ.

ಆತ್ಮಾಹುತಿ ಬಾಂಬ್ ದಾಳಿ: ಶ್ರೀಲಂಕಾದಲ್ಲಿ ಇಂದಿನಿಂದ ಬುರ್ಖಾ ನಿಷೇಧಆತ್ಮಾಹುತಿ ಬಾಂಬ್ ದಾಳಿ: ಶ್ರೀಲಂಕಾದಲ್ಲಿ ಇಂದಿನಿಂದ ಬುರ್ಖಾ ನಿಷೇಧ

ಬೊಕೋಹರಾಮ್ ಉಪಟಳದಿಂದ ನಿಷೇಧ

ಬೊಕೋಹರಾಮ್ ಉಪಟಳದಿಂದ ನಿಷೇಧ

ಸ್ಪೇನ್: ಈ ದೇಶದ ಹಲವೆಡೆ ಬುರ್ಖಾ, ನಿಕಾಬ್ ಧರಿಸುವುದಕ್ಕೆ ನಿಷೇಧವಿದೆ. ಆರು ವರ್ಷದ ಹಿಂದೆ ದೇಶದ ಕೆಲ ಭಾಗದಲ್ಲಿನ ನಿಷೇಧವನ್ನು ಸುಪ್ರೀಂ ಕೋರ್ಟ್ ಹಿಂಪಡೆಯಿತು. "ಹೀಗೆ ಮಾಡುವುದರಿಂದ ಧಾರ್ಮಿಕ ಸ್ವಾತಂತ್ರ್ಯ ಹರಣವಾಗುತ್ತದೆ" ಎಂದಿತ್ತು. ಆದರೆ ಇತರೆಡೆ ನಿಷೇಧ ಮುಂದುವರಿದಿದೆ.

ಛಾಡ್: ನಾಲ್ಕು ವರ್ಷದ ಹಿಂದೆ ಈ ದೇಶದಲ್ಲಿ ಎರಡು ಆತ್ಮಹತ್ಯಾ ದಾಳಿ ನಡೆದ ನಂತರ ನಿಷೇಧ ಹೇರಲಾಯಿತು. ಆ ದೇಶದ ಪ್ರಧಾನಿ, ಬುರ್ಖಾ ಮಾರಾಟ ಮಾಡುವುದು ಕಂಡುಬಂದರೆ ಅವುಗಳನ್ನೆಲ್ಲ ಸುಟ್ಟು ಹಾಕುವುದಾಗಿ ಹೇಳಿದ್ದರು. ಅವುಗಳನ್ನು ಧರಿಸುವವರನ್ನು ಬಂಧಿಸಿ, ಜೈಲಿಗೆ ಕಳಿಸುವುದಾಗಿಯೂ ಹೇಳಿದ್ದರು.

ನ್ಯಾಯಾಂಗ, ಸೈನ್ಯ ಹಾಗೂ ಪೊಲೀಸ್ ಇಲಾಖೆಯಲ್ಲಿ ನಿಷೇಧ

ನ್ಯಾಯಾಂಗ, ಸೈನ್ಯ ಹಾಗೂ ಪೊಲೀಸ್ ಇಲಾಖೆಯಲ್ಲಿ ನಿಷೇಧ

ಕ್ಯಾಮೆರೂನ್: ಬುರ್ಖಾ ಧರಿಸಿದವರಿಂದ ದೇಶದಲ್ಲಿ ಆತ್ಮಹತ್ಯಾ ದಾಳಿಗಳು ಆದ ನಂತರ ಸದ್ಯಕ್ಕೆ ಇಲ್ಲಿನ ಐದು ಪ್ರಾಂತ್ಯಗಳಲ್ಲಿ ನಿಷೇಧ ಜಾರಿಯಲ್ಲಿದೆ.

ನೈಜೆರ್: ಡಿಫಾ ಎಂಬಲ್ಲಿ ಬೊಕೊ ಹರಾಮ್ ಉಗ್ರ ಸಂಘಟನೆ ಉಪಟಳ ಹೆಚ್ಚಿದ್ದು, ಅಲ್ಲಿ ಬುರ್ಖಾ ನಿಷೇಧಿಸಲಾಗಿದೆ. ಶಿರವಸ್ತ್ರಕ್ಕೆ ಕೂಡ ನಿಷೇಧ ಹೇರಬಹುದು ಎಂದು ಅಲ್ಲಿನ ಅಧ್ಯಕ್ಷರು ಸಲಹೆ ಮಾಡಿದ್ದಾರೆ.

ಕಾಂಗೋ-ಬ್ರಜವಿಲ್ಲೆ: ಭಯೋತ್ಪಾದಕರ ದಾಳಿ ತಡೆಯುವ ನಿಟ್ಟಿನಲ್ಲಿ ನಾಲ್ಕು ವರ್ಷಗಳ ಹಿಂದೆ ಬುರ್ಖಾಗೆ ನಿಷೇಧ ಹಾಕಲಾಗಿದೆ.

ಟರ್ಕಿ: ಮುಸ್ಲಿಮರೇ ಬಹು ಸಂಖ್ಯಾತರಿರುವ ದೇಶ ಇದು. ಆರು ವರ್ಷದ ಹಿಂದಿನ ತನಕ ಅಲ್ಲಿನ ಸರಕಾರಿ ಸಂಸ್ಥೆಗಳಲ್ಲಿ ಶಿರವಸ್ತ್ರ್ ನಿಷೇಧಿಸಿ ನಿಯಮವಿತ್ತು. ಈಗ ನ್ಯಾಯಾಂಗ, ಸೈನ್ಯ ಹಾಗೂ ಪೊಲೀಸ್ ಇಲಾಖೆಯಲ್ಲಿ ಬುರ್ಖಾಗೆ ನಿಷೇಧವಿದೆ.

ಸ್ವಿಟ್ಜರ್ಲೆಂಡ್: ತೀರಾ ಇತ್ತೀಚೆಗೆ ಅಂದರೆ ಮೂರು ವರ್ಷಗಳ ಹಿಂದೆ ಇಲ್ಲಿ ಪೂರ್ತಿಯಾಗಿ ಮುಖ ಮುಚ್ಚುವಂಥ ಬುರ್ಖಾಗೆ ನಿಷೇಧ ಹೇರಲಾಯಿತು. ಅದು ಟೆಸ್ಸಿನ್ ಭಾಗದಲ್ಲಿ ಮಾತ್ರ ಅನ್ವಯ ಆಗುತ್ತದೆ. ಬುರ್ಖಾ ಧರಿಸಿ ಯಾರಾದರೂ ಸಿಕ್ಕಿಬಿದ್ದರೆ ಒಂಬತ್ತು ಸಾವಿರದ ಮುನ್ನೂರು ಯುರೋ ತನಕ ದಂಡ ವಿಧಿಸಬಹುದು.

ಮಸೀದಿಗೆ ಮಹಿಳೆಯರ ಪ್ರವೇಶ: 'ಶಬರಿಮಲೆ'ಗಾಗಿ ವಿಚಾರಣೆಗೆ ಅಸ್ತು ಎಂದ SC!ಮಸೀದಿಗೆ ಮಹಿಳೆಯರ ಪ್ರವೇಶ: 'ಶಬರಿಮಲೆ'ಗಾಗಿ ವಿಚಾರಣೆಗೆ ಅಸ್ತು ಎಂದ SC!

English summary
Burka ban: Here is where Muslim women stand on wearing the veil across the world.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X