ಸದ್ದಿಲ್ಲದೇ ಮಾರುಕಟ್ಟೆಗೆ ಬರಲು ಸಿದ್ಧವಾಗಿದೆ ಟೆಕ್ನೋ ಮೊಬೈಲ್: 108 MP ಕ್ಯಾಮೆರಾ ಲಭ್ಯ
ನೀವು ಬಜೆಟ್ ಸೆಗ್ಮೆಂಟ್‌ನಲ್ಲಿ ಕ್ಲಾಸಿಕ್ ಫೋನ್ ಒಂದನ್ನು ನೋಡ್ತಾ ಇದ್ದೀರಾ. ಹಾಗಿದ್ದರೆ ಕೆಲವು ದಿನಗಳ ಕಾಲದರೇ ನೀವು ಕಡಿಮೆ ಬೆಲೆಯಲ್ಲಿ ಉತ್ತಮ ಫೀಚರ್ಸ್‌ಗಳು ಇರುವ ಫೋನ್ ಪಡೆಯಬಹುದು. ಹೊಸ ಫೋನ್‌ನ್ನು Tecno ಶೀಘ್ರದಲ್ಲಿ ಮಾರುಕಟ್ಟೆಗೆ ಬಿಡಲಿದೆ. ಈ ಬಗ್ಗೆ ಮಾಹಿತಿ ಹೊರ ಬಿದ್ದಿದೆ.
ಈಗಾಗಲೇ ಟೆಕ್ನೋ ಕಂಪನಿ ತನ್ನ ಸ್ಟೈಲಿಷ್ ಫೋನ್‌ಗಳಿಂದ ಮಾರುಕಟ್ಟೆಯಲ್ಲಿ ಹವಾ ಕ್ರಿಯೇಟ್ ಮಾಡಿದೆ. ಈ ಕಂಪನಿಯ ಮೊಬೈಲ್‌ಗಳು ಸಹ ಎಲ್ಲ ರೇಂಜ್‌ನಲ್ಲಿವೆ. ಈಗ ಈ ಕಂಪನಿ ಬಜೆಟ್ ಫ್ರೆಂಡ್ಲಿ ಸೆಗ್ಮೆಂಟ್ ನಲ್ಲಿ ಮತ್ತೊಂದು ಫೋನ್ ಲಾಚ್ ಮಾಡಲಿದೆ. ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿರುವ ಈ ಫೋನ್ 108 ಮೆಗಾಪಿಕ್ಸಲ್ ಕ್ಯಾಮೆರಾ ಕ್ಲೀಯಾರಿಟಿ ಹೊಂದಿದೆ.

Tecno ಶೀಘ್ರದಲ್ಲೇ ತನ್ನ ಮೊಬೈಲ್‌ಗಳ ಪಟ್ಟಿಗೆ ಮತ್ತೊಂದು ಹೊಸ ಸ್ಮಾರ್ಟ್‌ಫೋನ್ ಅನ್ನು ಸೇರಸಲಿದ್ದು, ಇದಕ್ಕೆ ಕಂಪನಿಯು Tecno Spark 20 Pro 5G ಎಂದು ಹೆಸರಿಸಿದೆ. ಈ ತಿಂಗಳು ಮಾರುಕಟ್ಟೆಯಲ್ಲಿ ಹಲವು ಕಂಪನಿಯ ಮೊಬೈಲ್ ಫೋನ್‌ಗಳು ಲಾಂಚ್ ಆಗಲಿವೆ. ಈ ತಿಂಗಳು, Samsung, Honor, OnePlus, Vivo, Oppo ಸೇರಿದಂತೆ ಹಲವು ಟೆಕ್ ಕಂಪನಿಗಳು ತಮ್ಮ ಹೊಸ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಲಿವೆ. ಈ ಸಾಲಿಗೆ ಟೆಕ್ನೋ ಸೇರಿಕೊಳ್ಳಲಿದೆ.
ಟೆಕ್ನೋ ಟೆಕ್ನೋ ಸ್ಪಾರ್ಕ್ 20 ಪ್ರೊ 5 ಜಿ ಬಿಡುಗಡೆಗೆ ತಯಾರಿ ನಡೆಸಿದೆ. ಕಂಪನಿಯು ಇ-ಕಾಮರ್ಸ್ ವೆಬ್‌ಸೈಟ್ Amazon ನಲ್ಲಿ ಮೀಸಲಾದ ಮೈಕ್ರೋಸೈಟ್ ಲೈವ್ ನಲ್ಲಿ ಕಾಣಿಸಿಕೊಂಡಿದೆ. ಇದರಿಂದ ನೀವು ಮುಂಬರುವ ಫೋನ್ ಅನ್ನು Amazon ಹಾಗೂ ಕಂಪನಿಯ ವೆಬ್ ಸೈಟ್‌ನಿಂದ ಖರೀದಿಸ ಬಹುದಾಗಿದೆ.
ಟೆಕ್ನೋ ಕಂಪನಿ ಸ್ಪಾರ್ಕ್ 20 ಪ್ರೊ 5 ಜಿ ಬಿಡುಗಡೆಯ ದಿನಾಂಕದ ಬಗ್ಗೆ ಇನ್ನು ಯಾವುದೇ ಬಹಿರಂಗ ಹೇಳಿಕೆ ನೀಡಿಲ್ಲ. ಆದರೆ ಮೂಲಗಳ ಪ್ರಕಾರ ಕಂಪನಿಯು 15 ಸಾವಿರದಿಂದ 20 ಸಾವಿರದವಳಗೆ ಫೋನ್ ಬಿಡುಗಡೆ ಮಾಡಬಹುದು ಎಂದು ನಂಬಲಾಗಿದೆ.

ಏನೆಲ್ಲಾ ವಿಶೇಷತೆಗಳಿಂದ ಕೂಡಿದೆ?
ಟೆಕ್ನೋ ಸ್ಪಾರ್ಕ್ 20 ಪ್ರೋ 5 ಜಿ 6.78 ಇಂಚಿನ ಡಿಸ್‌ಪ್ಲೇ ಯನ್ನು ಹೊಂದಿರುವ ಸಾಧ್ಯತೆ ಇದ್ದು, IPS LCD ಪ್ಯಾನೆಲ್ ಮತ್ತು 120Hz ನ ರಿಫ್ರೆಶ್ ದರವನ್ನು ಹೊಂದಿರಬಹುದಾಗಿದೆ. ಈ ಫೋನ್ ಆಂಡ್ರಾಯ್ಡ್ 14 ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದರಲ್ಲಿ Mediatek ಡೈಮೆನ್ಸಿಟಿ 6080 ಪ್ರೊಸೆಸರ್ ಅನ್ನು ನೀಡಿರುವ ಸಾಧ್ಯತೆ ಇದೆ. ಈ ಸ್ಮಾರ್ಟ್‌ಫೋನ್‌ನಲ್ಲಿ, ಕಂಪನಿಯು ಗ್ರಾಹಕರಿಗೆ 8GB RAM ಮತ್ತು 256GB ಇಂಟರ್ನಲ್ ಸ್ಟೋರೇಜ್ ನಲ್ಲಿ ಗ್ರಾಹಕರ ಕೈಗೆ ಸಿಗಲಿದೆ.
ಕ್ಯಾಮೆರಾ, ಬ್ಯಾಟರಿ ಹೇಗಿದೆ?
ಈ ಮೊಬೈಲ್‌ನ ಹಿಂಭಾಗದಲ್ಲಿ 108 MP ಕ್ಯಾಮೆರಾ ಸೆಟ್‌ಅಪ್ ನೀಡಲಾಗಿದೆ. ಮುಂಭಾಗದಲ್ಲಿ ವಿಡಿಯೋ ಮತ್ತು ಕರೆಗಾಗಿ 8MP ಕ್ಯಾಮೆರಾವನ್ನು ಒದಗಿಸಬದಾಗಿದೆ. ಸ್ಮಾರ್ಟ್‌ಫೋನ್ ಜೊತೆಗೆ 33 ವ್ಯಾಟ್ ವೇಗದ ಚಾರ್ಜಿಂಗ್ ಹಾಗೂ 5000mAh ಬ್ಯಾಟರಿ ಇರುವ ಸಂಭವ ಇದೆ.












Click it and Unblock the Notifications