ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿಕ್ಷಕರ ದಿನಾಚರಣೆ 2021: ಶುಭಕೋರಲು ಇಲ್ಲಿವೆ ಸಂದೇಶ ಹಾಗೂ ಉಲ್ಲೇಖಗಳು

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 03: ಪ್ರತಿ ವರ್ಷವೂ ಸೆಪ್ಟೆಂಬರ್ 5 ರಂದು ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನದ ಅಂಗವಾಗಿ ಶಿಕ್ಷಕರ ದಿನಾಚರಣೆಯನ್ನು ಆಚರಣೆ ಮಾಡಲಾಗುತ್ತದೆ.

ಬೋಧನೆ ಎಂಬುದು ಒಂದು ಉದಾತ್ತ ವೃತ್ತಿಯಾಗಿದ್ದು, ಒಬ್ಬ ವ್ಯಕ್ತಿಯು ಜ್ಞಾನವನ್ನು ಹರಡಲು, ಬುದ್ಧಿವಂತಿಕೆಯನ್ನು ಹಂಚಿಕೊಳ್ಳಲು ಮತ್ತು ಭವಿಷ್ಯದಲ್ಲಿ ಯುವಕರನ್ನು ಸಮರ್ಥ ಹಾಗೂ ಜವಾಬ್ದಾರಿಯುತ ವಯಸ್ಕರಂತೆ ನಿರ್ಮಿಸಲು ಅನುವು ಮಾಡಿಕೊಡುತ್ತದೆ.

ಆದರ್ಶ ಶಿಕ್ಷಕ, ಮಾಜಿ ರಾಷ್ಟ್ರಪತಿ, ಭಾರತ ರತ್ನ ಡಾ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ಸ್ಮರಣೆಯಾಗಿ ಈ ದಿನವನ್ನು ಆಚರಿಸಲಾಗುತ್ತದೆ. ಇದು ನಮ್ಮ ಬದುಕನ್ನು ರೂಪಿಸಿದ ಶಿಕ್ಷಕರಿಗೆ ಧನ್ಯವಾದ, ಕೃತಜ್ಞತೆ ಸಲ್ಲಿಸಲು ಇರುವ ಅತ್ಯಂತ ಮಹತ್ವದ ದಿನವೂ ಹೌದು. ಹೀಗಾಗಿ, ಈ ಶುಭ ದಿನದಂದು ಶಿಕ್ಷಕರಿಗೆ ಕಳುಹಿಸಿಕೊಡಬಹುದಾದಂತಹ ಶುಭಾಶಯದ ಸಂದೇಶಗಳು ಇಲ್ಲಿವೆ.

Teachers day 2021 History, Significance, Wishes, Quotes and Messages in Kannada

ಆ ಅರ್ಥದಲ್ಲಿ ಈ ಪ್ರಪಂಚದ ಭವಿಷ್ಯವು ನಿಜವಾಗಿಯೂ ಶಿಕ್ಷಕರ ಕೈಯಲ್ಲಿದೆ. ಶಿಕ್ಷಕರು ವಿದ್ಯಾರ್ಥಿಗಳಿಗೆ ಹೆಚ್ಚಿನ ಕಾಳಜಿ ಮತ್ತು ತಾಳ್ಮೆಯಿಂದ ಕಲಿಸುತ್ತಾರೆ, ಮತ್ತು ಅವರ ಕಠಿಣ ಪರಿಶ್ರಮವನ್ನು ಸಮಾಜವು ಗುರುತಿಸಬೇಕು.

ಕೇವಲ ಓದಿನ ಸಂದರ್ಭದಲ್ಲಿ ಮಾತ್ರವಲ್ಲದೇ, ವಿದ್ಯಾರ್ಥಿಗಳು ಕೆಲಸಕ್ಕೆ ಸೇರಿದ ಮೇಲೂ ಎಷ್ಟೋ ಮಂದಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಸಲಹೆ ನೀಡುತ್ತಲೇ ಇರುತ್ತಾರೆ.
ಶಿಕ್ಷಕ ವೃತ್ತಿ ಎಂಬುದು ಅತ್ಯಂತ ಕಠಿಣ ಮತ್ತು ಜವಾಬ್ದಾರಿಯುತ ವೃತ್ತಿ. ಎಲ್ಲರ ಬದುಕು ಸಮರ್ಥವಾಗಿ ರೂಪುಗೊಳ್ಳುವಲ್ಲಿ ಶಿಕ್ಷಕರ ಪಾತ್ರ ಹಿರಿದು. ಭಾರತದಲ್ಲಿ ಸೆಪ್ಟೆಂಬರ್ 5ನ್ನು ಪ್ರತಿವರ್ಷ ಶಿಕ್ಷಕರ ದಿನವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ.

ಶಿಕ್ಷಕರ ದಿನಾಚರಣೆಯಂದು ನೀವು ನಿಮ್ಮ ನೆಚ್ಚಿನ ಶಿಕ್ಷಕರಿಗೆ ಕೃತಜ್ಞತೆಯನ್ನು ಸಲ್ಲಿಸುವುದಷ್ಟೇ ಅಲ್ಲದೆ ವಾಟ್ಸಾಪ್ ಸಂದೇಶ, ಫೇಸ್ಬುಕ್‌ ಸಂದೇಶವನ್ನು ರವಾನಿಸಬಹುದಾಗಿದೆ ಅದರಲ್ಲಿ ಕೆಲವು ಆಯ್ದ ಸಂದೇಶಗಳನ್ನು ಇಲ್ಲಿ ನೀಡಲಾಗಿದೆ.

* ನನಗೆ ಮಾರ್ಗದರ್ಶಿಯಾಗಿದ್ದಕ್ಕಾಗಿ, ನನಗೆ ಜೀವನ ಪಾಠಗಳನ್ನು ಕಲಿಸಿದ್ದಕ್ಕೆ ನಾನು ಸದಾ ನಿಮಗೆ ಋಣಿಯಾಗಿದ್ದೇನೆ. ನನ್ನ ಎಲ್ಲಾ ಗುರುಗಳಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು

*ನೀವು ನಮಗೆ ಶಿಕ್ಷಕರಂತೆ ಕಲಿಸಿದ್ದೀರಿ, ಪೋಷಕರಂತೆ ರಕ್ಷಿಸಿದ್ದೀರಿ ಮತ್ತು ಮಾರ್ಗದರ್ಶಕರಂತೆ ಮಾರ್ಗದರ್ಶನ ಮಾಡಿದ್ದೀರಿ. ನೀವು ನಿಜವಾಗಿಯೂ ಈ ದಿನಕ್ಕೆ ಅರ್ಹರು. ನನ್ನ ಅತ್ಯಂತ ಪ್ರೀತಿಯ ಶಿಕ್ಷಕರಿಗೆ ಶಿಕ್ಷಕರ ದಿನದ ಶುಭಾಶಯಗಳು

*ನಾನು ನಿಮ್ಮಲ್ಲಿ ಮಾರ್ಗದರ್ಶನ, ಸ್ನೇಹ, ಶಿಸ್ತು ಮತ್ತು ಪ್ರೀತಿ ಎಲ್ಲವನ್ನೂ ಕಂಡುಕೊಂಡೆ. ನನ್ನ ಬದುಕಿನ ಪಥ ಬದಲಾಯಿಸಿದ ತಮಗೆ ಶಿಕ್ಷಕರ ದಿನದ ಶುಭಾಶಯಗಳು

*ಬೋಧನೆಯು ಇತರ ಎಲ್ಲಾ ವೃತ್ತಿಗಳನ್ನು ಸೃಷ್ಟಿಸುವ ಒಂದು ವೃತ್ತಿಯಾಗಿದೆ. ನಾನು ಇಂದು ಉತ್ತಮ ವ್ಯಕ್ತಿಯಾಗಲು ಸಹಾಯ ಮಾಡಿದ್ದಕ್ಕಾಗಿ ತಮಗೆ ಧನ್ಯವಾದಗಳು. ನನ್ನೆಲ್ಲಾ ಗುರುಗಳಿಗೆ ಶಿಕ್ಷಕರ ದಿನದ ಶುಭಾಶಯಗಳು.

*ನನ್ನನ್ನು ಜೀವನದಲ್ಲಿ ಉತ್ತಮ ವ್ಯಕ್ತಿಯನ್ನಾಗಿ ರೂಪಿಸಲು ನೀವು ಮಾಡಿದ ಎಲ್ಲಾ ಪ್ರಯತ್ನಗಳಿಗೆ ನಾನು ನಿಮಗೆ ಧನ್ಯವಾದ ಅರ್ಪಿಸುತ್ತೇನೆ - ನನ್ನ ಎಲ್ಲಾ ಶಿಕ್ಷಕರಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.

*ನಮ್ಮಲ್ಲಿರುವ ಉತ್ತಮವಾದದ್ದನ್ನು ಹೊರತರಲು ನೀವು ಹೂಡಿದ ಎಲ್ಲಾ ಪ್ರಯತ್ನಗಳು ಮತ್ತು ಕಠಿಣ ಪರಿಶ್ರಮಗಳನ್ನು ಎಂದಿಗೂ ಕೇವಲ ಪದಗಳಲ್ಲಿ ಮರುಪಾವತಿಸಲಾಗುವುದಿಲ್ಲ. ನಿಮ್ಮಂತಹ ಶಿಕ್ಷಕರನ್ನು ಹೊಂದಿದ್ದಕ್ಕಾಗಿ ಮಾತ್ರ ನಾವು ಕೃತಜ್ಞರಾಗಿರುತ್ತೇವೆ!

ಉಲ್ಲೇಖಗಳು:
*ಒಂದು ದೇಶ ಭ್ರಷ್ಟಾಚಾರ ಮುಕ್ತ ಮತ್ತು ಸುಂದರ ಮನಸ್ಸುಗಳಿರುವ ರಾಷ್ಟ್ರವಾಗಿ ರೂಪುಗೊಳಿಸಲು ಮೂವರು ಪ್ರಮುಖ ಸಾಮಾಜಿಕ ಸದಸ್ಯರಾದ ತಂದೆ, ತಾಯಿ ಮತ್ತು ಶಿಕ್ಷಕರಿಂದ ಸಾಧ್ಯ ಎಂಬುದು ನನ್ನ ಬಲವಾದ ನಂಬಿಕೆ - ಡಾ ಎಪಿಜೆ ಅಬ್ದುಲ್ ಕಲಾಂ

*ಶಿಕ್ಷಣ ಎಂಬುದು ಮನುಷ್ಯನೊಳಗೆ ಅದಾಗಲೇ ಹುದುಗಿದ್ದ ಪರಿಪೂರ್ಣತೆಯನ್ನು ಅಭಿವ್ಯಕ್ತಿಗೊಳಿಸುವ ಪ್ರಯತ್ನ - ಸ್ವಾಮಿ ವಿವೇಕಾನಂದ

*ವಿದ್ಯಾರ್ಥಿಗೆ ಅವನ ಶಿಕ್ಷಕರೇ ನಿಜವಾದ ಪಠ್ಯ ಪುಸ್ತಕ ಎಂಬುದನ್ನು ನಾನು ಯಾವಾಗಲೂ ನಂಬುತ್ತೇನೆ - ಮಹಾತ್ಮ ಗಾಂಧೀಜಿ

*ಶಿಕ್ಷಣ ಎಂಬುದು ಈ ಜಗತ್ತನ್ನು ಬದಲಾಯಿಸಲು ನೀವು ಬಳಸಬಹುದಾದ ಅತ್ಯಂತ ಶಕ್ತಿಶಾಲಿ ಅಸ್ತ್ರ - ನೆಲ್ಸನ್ ಮಂಡೇಲಾ

*ಒಂದು ಪುಸ್ತಕ, ಒಂದು ಪೆನ್, ಒಂದು ಮಗು ಮತ್ತು ಒಬ್ಬ ಶಿಕ್ಷಕರು ಜಗತ್ತನ್ನು ಬದಲಾಯಿಸಬಹುದು." - ಮಲಾಲಾ ಯೂಸಫ್‌ಜಾ

English summary
Every year, September 5 is as the Teacher's Day in India. Students from all over the country honour their teachers on the Teacher's Day. Teachers play a very important role in our personality development and overall mental growth.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X