ಟೀಚರ್ ಮೇಲೆ ವಿದ್ಯಾರ್ಥಿಯಿಂದ ಹಲ್ಲೆ: ವಿಡಿಯೋ ವೈರಲ್
ಇತ್ತೀಚೆಗೆ ಗುರು ಶಿಷ್ಯರ ನಡುವಿನ ವರ್ತನೆ ಯಾರೂ ನಿರೀಕ್ಷಿಸದಷ್ಟು ಹದಗೆಡುತ್ತಿದೆ. ಹೀಗೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೋಡುಗರನ್ನು ಬೆಚ್ಚಿ ಬೀಳಿಸಿದೆ. ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ವರ್ತನೆ ಶೋಚನೀಯವಾಗಿರುತ್ತಿದೆ. ಈ ವಿಚಾರಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗುತ್ತಿದೆ.
ವಿದ್ಯಾರ್ಥಿಯೊಬ್ಬ ತರಗತಿಯಲ್ಲಿ ಮಹಿಳಾ ಶಿಕ್ಷಕಿಯ ಮೇಲೆ ತಿರುಗಿ ಬಿದ್ದಿದ್ದಾನೆ. ಮಹಿಳಾ ಶಿಕ್ಷಕಿಯ ಮೇಲೆ ತಿರುಗಿ ಬಿದ್ದಿದ್ದಾನೆ. ಮಹಿಳಾ ಶಿಕ್ಷಕಿ ವಿದ್ಯಾರ್ಥಿಗೆ ಛೀಮಾರಿ ಹಾಕಲು ಯತ್ನಿಸಿದ್ದಾರೆ. ಆದರೆ ವಿದ್ಯಾರ್ಥಿ ಶಿಕ್ಷಕಿಯ ಮೇಲೆ ಹಲ್ಲೆ ನಡೆಸಿದ್ದಾನೆ. ಈ ವಿಡಿಯೋವನ್ನು @BaharKeKalesh ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದ್ದು, ವೈರಲ್ ಆಗುತ್ತಿದೆ.
Kalesh b/w Teacher and Student Over less Markspic.twitter.com/zfUiy5VdA0
— BaharKeKalesh (@Baharikekalesh) December 19, 2022
ಸಾಮಾನ್ಯವಾಗಿ ವಿದ್ಯಾರ್ಥಿ ಮೇಲೆ ಶಿಕ್ಷಕರು ಹಲ್ಲೆ ಮಾಡುವುದು ಶಿಕ್ಷೆ ನೀಡುವುದು ಸರ್ವೇ ಸಾಮಾನ್ಯ. ಆದರೆ ಇಲ್ಲಿ ವಿದ್ಯಾರ್ಥಿಯೇ ಶಿಕ್ಷಕಿ ಮೇಲೆ ಹಲ್ಲೆ ಮಾಡಿದ್ದಾನೆ. ತರಗತಿಯಲ್ಲಿ ಶಿಕ್ಷಕಿ ಮೇಲೆ ವಿದ್ಯಾರ್ಥಿ ಕೈ ಮಾಡಿದ್ದಾನೆ. ಇದರಿಂದ ಮಹಿಳಾ ಶಿಕ್ಷಕಿ ವಿದ್ಯಾರ್ಥಿ ಮೇಲೆ ಕೈ ಮಾಡಿಲು ಮುಂದಾಗಿದ್ದಾಳೆ. ಆದರೆ ವಿದ್ಯಾರ್ಥಿ ಕೋಪಗೊಂಡು ಶಿಕ್ಷಕಿ ಮೇಲೆ ಕೈ ಮಾಡಿದ್ದಾನೆ. ಬಳಿಕ ಇತರ ವಿದ್ಯಾರ್ಥಿಗಳು ಜಗಳ ತಡೆಯಲು ಮುಂದಾಗುವುದನ್ನು ವಿಡಿಯೋದಲ್ಲಿ ಕಾಣಬಹುದು. ಆದರೆ ಈ ವಿಡಿಯೋ ಎಲ್ಲಿಯದ್ದು ಎನ್ನುವ ಬಗ್ಗೆ ಮಾಹಿತಿ ಇಲ್ಲ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕೆಲ ವರ್ಷಗಳ ಹಿಂದೆ ಶಾಲಾ ಕೊಠಡಿಯಲ್ಲಿ ಶಿಕ್ಷಕನೊಬ್ಬ ವಿದ್ಯಾರ್ಥಿಗೆ ಮನ ಬಂದಂತೆ ಥಳಿಸಿ ಹಲ್ಲೆ ನಡೆಸಿರುವ ಘಟನೆ ಶಿಕ್ಷಣ ಸಚಿವರ ಕ್ಷೇತ್ರವಾದ ಬೆಂಗಳೂರಿನ ರಾಜಾಜಿನಗರದ ಬಸವೇಶ್ವರ ಕಾಲೇಜಿಲ್ಲಿ ನಡೆದಿದೆ. ಹರೀಶ್ ಎನ್ನುವ ಶಿಕ್ಷಕ ವಿದ್ಯಾರ್ಥಿ ರವಿಯನ್ನು ಕೊಠಡಿಯಲ್ಲಿ ಥಳಿಸಿದ್ದಾರೆ. ವಿದ್ಯಾರ್ಥಿಗೆ ಶಿಕ್ಷಕ ಹಲ್ಲೆ ಮಾಡುವ ದೃಶ್ಯ ಸಾಮಾಜಿಕ ಜಾತಾಣದಲ್ಲಿ ವೈರಲ್ ಆಗಿದೆ. ಹಲ್ಲೆ ನಡೆಸಿದ ಘಟನೆಯ ದೃಶ್ಯಗಳನ್ನು ವಿದ್ಯಾರ್ಥಿಗಳು ಚಿತ್ರೀಕರಣ ಮಾಡಿ ಅಪ್ ಲೋಡ್ ಮಾಡಿದ್ದಾರೆ ಎನ್ನಲಾಗಿದೆ.

ಮೊದಲು ಕೈಯಿಂದ ಹಿಗ್ಗಾಮುಗ್ಗಾ ಹಲ್ಲೆ ನಡೆಸಿದ ಹರೀಶ್ ಇಷ್ಟಕ್ಕೆ ಸುಮ್ಮನಾಗದೆ ಕೈಗೆ ಸಿಕ್ಕ ಬ್ಯಾಗ್‌ನಿಂದಲೂ ಹಲ್ಲೆ ನಡೆಸಿದ್ದಾರೆ. ಬಳಿಕ ವಿದ್ಯಾರ್ಥಿಯನ್ನು ಅಟ್ಟಾಡಿಸಿಕೊಂಡು ಓಡಿಸಿ ಹಲ್ಲೆ ನಡೆಸಿದ್ದಾರೆ. ಶಿಕ್ಷರ ಹರೀಶ್ ರೌದ್ರಾವತಾರಕ್ಕೆ ತರಗತಿಯ ವಿದ್ಯಾರ್ಥಿಗಳು ಬೆಚ್ಚಿಬಿದ್ದಿದ್ದಾರೆ. ಸ್ಟಿಕ್ ಮುರಿದ ಅನ್ನೋ ಕಾರಣಕ್ಕೆ ವಿದ್ಯಾರ್ಥಿ ಮೇಲೆ ಶಿಕ್ಷಕ ಹರೀಶ್ ಹಲ್ಲೆ ಮಾಡಿದ್ದು, ಸದ್ಯ ಹಲ್ಲೆಗೊಳಲಾಗದ ವಿದ್ಯಾರ್ಥಿ ರವಿ ಶಾಲೆಗೆ ಬರುತ್ತಿಲ್ಲ. ಹಲ್ಲೆ ನಡೆಸಿದ ಶಿಕ್ಷಕ ಹರೀಶ್ ಕೂಡ ನಾಪತ್ತೆಯಾಗಿದ್ದಾರೆ.












Click it and Unblock the Notifications