ಇತ್ತೀಚೆಗೆ ಅಕ್ರಮ ಸಂಬಂಧಗಳು ಹೆಚ್ಚಾಗುತ್ತಿರುವುದಕ್ಕೆ ಕಾರಣ ಹೇಳಿದ ತಾರಾ ಮಂಜುನಾಥ್

ದಂಪತಿಗಳು ದೂರವಾಗುವ ಘಟನೆಗಳು ಇತ್ತೇಚೆಗೆ ಹೆಚ್ಚಾಗುತ್ತಿವೆ. ಒಂದು ದಾಂಪತ್ಯ ಜೀವನದಲ್ಲಿ ಬಿರುಕು ಕಾಣಿಸಿಕೊಂಡಾಗ ಗಂಡ ಸರಿಯಾಗಿಲ್ಲ ಅಥವಾ ಹೆಂಡತಿ ಸರಿಯಾಗಿಲ್ಲ ಎನ್ನುವ ಮಾತುಗಳು ಕೇಳಿ ಬರುತ್ತವೆ. ಅಂದರೆ ಗಂಡ ಅಥವಾ ಹೆಂಡತಿ ಯಾವುದೋ ಅಕ್ರಮ ಸಂಬಂಧ ಹೊಂದಿದ್ದಾರೆ ಅದಕ್ಕಾಗಿ ಸಂಬಂಧ ಹಾಳಾಗಿದೆ ಎನ್ನುವ ಮಾತುಗಳು ಕೇಳಿ ಬರುತ್ತವೆ. ನಿಜವಾಗಲೂ ಅಕ್ರಮ ಸಂಬಂಧಕ್ಕೆ ಸೆಕ್ಸ್ ಕಾರಣ ಎಂದು ಹಲವರ ಅಭಿಫ್ರಾಯ. ಆದರೆ ಈ ಅಭಿಪ್ರಾಯವನ್ನು ತಾರಾ ಮಂಜುನಾಥ್ ಒಪ್ಪುವುದಿಲ್ಲ. ಅಕ್ರಮ ಸಂಬಂಧ ಸೃಷ್ಟಿಯಾಗಲು ಹಲವಾರು ಕಾರಣಗಳಿವೆ ಎಂದು ತಾರಾ ಹೇಳುತ್ತಾರೆ. ಹಾಗಾದರೆ ಇತ್ತೀಚೆಗೆ ಅಕ್ರಮ ಸಂಬಂಧಗಳು ಹೆಚ್ಚಾಗುತ್ತಿರುವುದಕ್ಕೆ ಕಾರಣಗಳೇನು?

ಯೋಗ ಬೋಧಕಿ ಮತ್ತು ಹೋಲಿಸ್ಟಿಕ್ ಕೌನ್ಸಿಲರ್ ಹಾಗೂ ಲೈಫ್ ಕೋಚ್ ಆಗಿರುವ ತಾರಾ ಮಂಜುನಾಥ್ ಅವರು ಇತ್ತೀಚಿನ ದಿನಗಳಲ್ಲಿ ಯಾಕೆ ಅಕ್ರಮ ಸಂಬಂಧಗಳು ಹೆಚ್ಚಾಗುತ್ತಿವೆ ಎನ್ನುವುದಕ್ಕೆ ಕಾರಣ ಹೇಳಿದ್ದಾರೆ. ಸಮಾಜದಲ್ಲಿ ನಾವು ನಮ್ಮ ಸುತ್ತಲು ನೋಡುವ ಘಟನೆಗಳು, ನಮ್ಮ ಜೀವನದಲ್ಲಿ ನಾವು ಯಾವ ರೀತಿ ಅವುಗಳನ್ನು ಅಳವಡಿಸಿಕೊಳ್ಳುತ್ತೇವೆ, ಸಂಬಂಧಗಳಲ್ಲಿ ಬಿರುಕು ಕಾಣಿಸಿಕೊಳ್ಳುತ್ತಿರುವುದೇಕೆ ಎನ್ನುವ ಪ್ರಶ್ನೆಗಳಿಗೆ ತಾರಾ ಮಂಜುನಾಥ್ ಉತ್ತರ ಕೊಟ್ಟಿದ್ದಾರೆ.

tara manjunath reveals the reason behind the recent increase in illicit relationships

ರಾಜೇಶ್ ರಿವೀಲ್ಸ್ ಯೂಟ್ಯೂಬ್ ಚಾನೆಲ್ ಸಂದರ್ಶನದಲ್ಲಿ ಮಾತನಾಡಿದ ತಾರಾ ಮಂಜುನಾಥ್ ಅಕ್ರಮ ಸಂಬಂಧಗಳು ಹೆಚ್ಚಾಗುತ್ತಿರುವುದಕ್ಕೆ ಕಾರಣವನ್ನು ಹೇಳಿದ್ದಾರೆ. ಹಾಗಾದರೆ ತಾರಾ ಮಂಜುನಾಥ್ ಹೇಳಿದ್ದೇನು ಅನ್ನೋದನ್ನು ಸವಿಸ್ತಾರವಾಗಿ ತಿಳಿಯೋಣ. ಒಬ್ಬ ವಿವಾಹಿತ ಮಹಿಳೆ ಅಥವಾ ಒಬ್ಬ ವಿವಾಹಿತ ಗಂಡು ಅಕ್ರಮ ಸಂಬಂಧ ಹೊಂದಲು ನಾನಾ ಕಾರಣಗಳಿವೆ. ಮುಖ್ಯವಾಗಿ ಗಂಡಾ ಅಥವಾ ಹೆಂಡತಿ ಜವಬ್ದಾರಿ ತೆಗೆದುಕೊಳ್ಳದೇ ಇದ್ದಾಗ ಸಂಬಂಧದಲ್ಲಿ ಬಿರುಕು ಕಾಣಿಸಿಕೊಳ್ಳುತ್ತದೆ. ಮನಸ್ತಾಪಗಳು ಹೆಚ್ಚಾಗುತ್ತವೆ. ಜಗಳಗಳು ಶುರುವಾಗುತ್ತವೆ.

ಜೊತೆಗೆ ಗಂಡನಿಂದ ಅಥವಾ ಹೆಂಡತಿಯಿಂದ ಪರಸ್ಪರ ಗೌರವ ಸಿಗದೇ ಇದ್ದಾಗ ಇಬ್ಬರು ಬೇರೆಯಾಗುವ ಸಂದರ್ಭ ಸೃಷ್ಟಿಯಾಗುತ್ತದೆ. ದಾಂಪತ್ಯದಲ್ಲಿ ಪರಸ್ಪರ ಗೌರವ ನೀಡುವುದು ತುಂಬಾ ಮುಖ್ಯವಾಗಿರುತ್ತದೆ. ಯಾವಾಗ ಗಂಡನಿಂದ ಹೆಂಡತಿಗೆ ಹೆಂಡತಿಯಿಂದ ಗಂಡನಿಗೆ ಗೌರವ ಸಿಗೋದಿಲವೋ ಯಾರಿಂದ ಗೌರವ ಸಿಗುತ್ತೋ ಅವರತ್ತ ದಂಪತಿಗಳು ಆಕರ್ಷಣೆ ಹೆಚ್ಚಾಗುತ್ತಾರೆ. ಆಗ ಅಕ್ರಮ ಸಂಬಂಧಗಳು ಸೃಷ್ಟಿಯಾಗುತ್ತದೆ ಎಂದು ತಾರಾ ಹೇಳಿದ್ದಾರೆ.

tara manjunath reveals the reason behind the recent increase in illicit relationships

ಜೊತೆಗೆ ಇತ್ತೀಚೆಗೆ ಗಂಡನ್ನಲ್ಲಾಗಲಿ ಹೆಂಡತಿಯಲ್ಲಾಗಲಿ ಸೆಲ್ಫ ಕಂಟ್ರೋಲ್ ಇಲ್ಲದೇ ಇರುವುದು ಕೂಡ ಹೆಚ್ಚಾಗಿದೆ. ಮನುಷ್ಯನಲ್ಲಿ ಹಿಡಿತವಿಲ್ಲ. ನಾವು ಏನ್ ಮಾಡುತ್ತಿದ್ದೇವೆ? ಏನು ಮಾಡಬೇಕು ಏನ್ ಮಾಡಬಾರದು? ಅವಳ ಅಥವಾ ಅವನ ಮೇಲೆ ಕೋಪ ಬಂದರೆ ನಾವು ಏನ್ ಬೇಕಾದರೂ ಮಾಡಲು ಸಿದ್ಧ ಅನ್ನೋ ರೀತಿ ವರ್ತಿಸುತ್ತೇವೆ. ಇದರಿಂದ ಸೇಡು ಸಿಟ್ಟು ಬೆಳೆಯುತ್ತವೆ.

ಅಲ್ಲದೆ ಅಕ್ರಮ ಸಂಬಂಧಗಳು ಹೆಚ್ಚಾಗುತ್ತಿರುವುದಕ್ಕೆ ಮತ್ತೊಂದು ಪ್ರಮುಖ ಕಾರಣ ಅಂದರೆ ನಿಮ್ಮ ಒಳಗೆ ಸಂತೋಷ ಇಲ್ಲದೇ ಇರುವುದು. ದಾಂಪತ್ಯದಲ್ಲಿ ಆಂತರಿಕ ಸಂತೋಷ ತುಂಬಾ ಮುಖ್ಯ. ನನ್ನ ಪತಿ, ನನ್ನ ಪತ್ನಿ ಅನ್ನೋ ಪ್ರೀತಿ ಹುಟ್ಟುವುದು ಬಲವಾಗಿರೋದು ಆಗಲೇ. ನಮ್ಮ ಒಳಗೆ ತಮ್ಮ ದಾಂಪತ್ಯದ ಬಗ್ಗೆ ಖುಷಿ ಇಲ್ಲ ಅಂದರೆ ನಮ್ಮ ಮನಸ್ಸು ಬೇರೆಡೆ ಸೆಳೆಯಲು ಶುರುವಾಗುತ್ತದೆ. ಇದು ಅಕ್ರಮ ಸಂಬಂಧಗಳಿಗೆ ಕಾರಣವಾಗುತ್ತದೆ ಎಂದು ತಾರಾ ವಿವರಿಸಿದ್ದಾರೆ.

tara manjunath reveals the reason behind the recent increase in illicit relationships

ಅಲ್ಲದೆ ತುಂಬಾ ಜನ ಮಕ್ಕಳಿಗೆ ಮದುವೆ ಬೇಡ ಅಂತ ಅನ್ನಿಸೋದು ಅವರ ಪೋಷಕರ ವರ್ತನೆಯಿಂದ, ಅವರ ಜಗಳದಿಂದ, ಅವರಿಬ್ಬರ ನಡುವೆ ಖುಷಿ ಇಲ್ಲದೇ ಇರುವುದರಿಂದ ಮಕ್ಕಳು ಕೂಡ ಮದುವೆ ನಿರಾಕರಿಸುವುದು, ಅಕ್ರಮ ಸಂಬಂಧಗಳಿಗೆ ಹೆಚ್ಚು ಆಕರ್ಷಿತರಾಗುತ್ತಿರುವುದು ಕಂಡುಬರುತ್ತಿದೆ ಎಂದು ತಾರಾ ವಿವರಿಸಿದ್ದಾರೆ.

ಒಟ್ಟಿನಲ್ಲಿ ಇಂತಹ ಬೆಳವಣಿಗೆಗಳು ಸಮಾಜಕ್ಕೆ ಒಳ್ಳೆಯದಲ್ಲ. ಇದು ಸಮಾಜಕ್ಕೆ ಕೆಟ್ಟ ಸಂದೇಶದ ಜೊತೆಗೆ ಆರೋಗ್ಯಕ್ಕೂ ಕೂಡ ಹಾನಿಕಾರಕವಾಗಿದೆ. ಹೀಗಾಗಿ ಸಮಸ್ಯೆಗಳನ್ನು ಆಳವಾಗಿ ಅರೆತು ಅದಕ್ಕೆ ಪರಿಹಾರ ಕಂಡುಕೊಂಡರೆ ದಾಂಪತ್ಯ ಜೀವನ ಸುಖಮಯವಾಗಿರುತ್ತದೆ ಅನ್ನೋದು ಲೈಫ್ ಕೋಚ್ ಆಗಿರುವ ತಾರಾ ಮಂಜುನಾಥ್ ಅವರ ಸಲಹೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+