ಬಿಸಿಲಿನ ಬೇಗೆಯೂ ಆಯ್ತು ಜೋಕ್: ಮೀಮ್ಸ್ ಹಂಚಿಕೊಂಡ ನೆಟ್ಟಿಗರು

ಭಾರತದ ಹಲವಾರು ಭಾಗಗಳಲ್ಲಿ ಈಗ ಬಿಸಿಲಿನ ಬೇಗೆಯೂ ತೀವ್ರತರವಾಗಿ ಏರಿದೆ. ದೇಶದ ಹಲವಾರು ನಗರಗಳಲ್ಲಿ, ಹಳ್ಳಿಗಳಲ್ಲಿ ತಾಪಮಾನವು 40 ಡಿಗ್ರಿ ಸೆಲ್ಸಿಯಸ್ ಅನ್ನು ದಾಟಿದೆ. ಹಲವಾರು ಮಂದಿ ಮನೆಯಿಂದ ಹೊರಗೆ ಬರಲು ಕೂಡಾ ಇಷ್ಟಪಡುತ್ತಿಲ್ಲ. ಬಿಸಿ ಗಾಳಿಯಿಂದಾಗಿ ಜನರು ತತ್ತರಿಸಿಹೋಗಿದ್ದಾರೆ.

ಈ ತೀವ್ರವಾದ ಬಿಸಿಲು ಜನರು ದಿನನಿತ್ಯದ ಕೆಲಸವನ್ನು ಕೂಡಾ ಮಾಡಲು ಸಾಧ್ಯವಾಗದಂತಹ ಸವಾಲಾಗಿದೆ. ಪರಿಸ್ಥಿತಿಯು ಕಠಿಣವಾಗುತ್ತಿದೆ. ಆದರೆ ಈ ನಡುವೆ ನೆಟ್ಟಿಗರು ತಮ್ಮ ಹಾಸ್ಯ ಪ್ರಜ್ಞೆಯನ್ನು ಮೆರೆದಿದ್ದಾರೆ.

ಉಸಿರುಗಟ್ಟಿಸುವ ಹವಾಮಾನವು ತಮಾಷೆಯಲ್ಲ. ಆದರೆ ನೆಟ್ಟಿಗರು ಈ ತಾಪಮಾನ ಏರಿಕೆ ವಿಚಾರದಲ್ಲಿ ಮೀಮ್ಸ್‌ಗಳನ್ನು ಮಾಡಿದ್ದಾರೆ. ಹಾಸ್ಯವು ಸುಟ್ಟಗಾಯಗಳಿಗೆ ಹಿತವಾದ ಮುಲಾಮು ಆಗಿ ಕಾರ್ಯನಿರ್ವಹಿಸುತ್ತದೆ ಎಂದು ನಮಗೆಲ್ಲರಿಗೂ ತಿಳಿದಿದೆ!. ನೆಟ್ಟಿಗರು ಈ ಬಿಸಿಲಿನ ತಾಪಕ್ಕೆ ಹಾಸ್ಯವನ್ನೇ ಮುಲಾಮಾಗಿಸುವ ಮೀಮ್ಸ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ನೆಟ್ಟಿಗರು ಈ ಹೀಟ್‌ ವೇವ್‌ಗೆ ಸರಿಯಾದ ಮೀಮ್ಸ್‌ಗಳನ್ನು ರಚಿಸುವಲ್ಲಿ ನಿರತರಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಬಿಸಿಲಿನ ತಾಪದ ಬಗ್ಗೆ ಯಾವೆಲ್ಲಾ ಮೀಮ್ಸ್ ಹರಿದಾಡುತ್ತಿದೆ ನೋಡೋಣ ಬನ್ನಿ....

Sweltering Heat Scorches Various Parts of India: Netizens Share Memes

ಕಾರಿನ ಮೇಲೆ ಚಪಾತಿ ತಯಾರಿ..!

ಸದ್ಯ ಬಿಸಿಲಿನ ಬೇಗೆ ಹೆಚ್ಚಳವಾಗುತ್ತಿರುವಾಗ ನಾವು ಎಲ್‌ಪಿಜಿ ಬಳಕೆಯನ್ನು ಹೆಚ್ಚು ಮಾಡಬೇಕಾಗಿಲ್ಲ ಎಂಬಂತಹ ಮೀಮ್ಸ್ ಅನ್ನು ನೆಟ್ಟಿಗರು ಹಂಚಿಕೊಳ್ಳುತ್ತಿದ್ದಾರೆ. ನಾವು ಎಲ್‌ಪಿಜಿ ಬೆಲೆ ಹೆಚ್ಚಳದ ನಡುವೆ ಕಾರಿನ ಬೋನೆಟ್ ಮೇಲೆಯೇ ಚಪಾತಿ, ರೊಟ್ಟಿ ಬೇಯಿಸಿಕೊಳ್ಳಬಹುದು ಎಂದು ವಿಡಿಯೋವೊಂದನ್ನು ಹಂಚಿಕೊಂಡು ನೆಟ್ಟಿಗರು ಹಾಸ್ಯ ಮಾಡಿದ್ದಾರೆ.

ಇನ್ನು ಕೆಲವು ನೆಟ್ಟಿಗರು ಕೋಳಿಯನ್ನು ನೇರವಾಗಿ ಸೂರ್ಯನ ಶಾಖದಡಿಯಲ್ಲಿ ಬೇಯಿಸಿಕೊಳ್ಳುತ್ತಿರುವ ಕಾರ್ಟೂನ್ ಚಿತ್ರವನ್ನು ಹಂಚಿಕೊಂಡಿದ್ದಾರೆ. ಭಾರತೀಯರು ಈ ಹೀಟ್‌ ವೇವ್ ಅನ್ನು ವ್ಯರ್ಥವಾಗಲು ಬಿಡುವುದಿಲ್ಲ. ಅದರಿಂದಲೂ ಕೂಡಾ ಸಾಧ್ಯವಾದಷ್ಟು ಉಪಯೋಗವನ್ನು ಪಡೆಯುತ್ತಾರೆ ಎಂದು ಹಾಸ್ಯ ಮಾಡಿದ್ದಾರೆ.

ವ್ಯಕ್ತಿಯೊಬ್ಬರು ಐಸ್‌ನಿಂದ ತುಂಬಿರುವ ಬಕೆಟ್‌ನಲ್ಲಿ ಸ್ನಾನ ಮಾಡುತ್ತಿರುವ ದೃಶ್ಯವನ್ನು ಕೂಡಾ ಹಂಚಿಕೊಂಡಿದ್ದಾರೆ. ಇದನ್ನು ಹಂಚಿಕೊಂಡ ನೆಟ್ಟಿಗರೊಬ್ಬರು ಕೋಲ್ಕತ್ತಾದಲ್ಲಿ ಹೀಟ್‌ ವೇವ್ ಇದೆ. ಈ ಬಗ್ಗೆ ಹವಾಮಾನ ಇಲಾಖೆ ನೋಟಿಫಿಕೇಶನ್ ನೀಡಿದೆ. ನಾನು ಕೂಡಾ ಈ ರೀತಿಯಲ್ಲಿ ಐಸ್‌ನಲ್ಲಿ ಸ್ನಾನ ಮಾಡಬೇಕು ಎಂದನಿಸುತ್ತಿದೆ ಎಂದಿದ್ದಾರೆ.

ನೆಟ್ಟಿಗರ ಕ್ರಿಯೇಟಿವಿಟಿ ನೋಡಿ!!

ನೆಟ್ಟಿಗರ ಮೀಮ್ಸ್‌ನ ಕ್ರಿಯೇಟಿವಿಟಿ ಅಷ್ಟಕ್ಕೆ ನಿಂತಿಲ್ಲ. ಸೂರ್ಯನಿಂದ ದೂರದಲ್ಲಿ ಭೂಮಿ ಇರುವಾಗ ದೆಹಲಿ ಮಾತ್ರ ಸೂರ್ಯನ ಸಮೀಪದಲ್ಲಿ ಇದೆ ಎಂಬಂತೆ ರಾಷ್ಟ್ರ ರಾಜಧಾನಿಯಲ್ಲಿ ಬಿಸಿಲು ಹೆಚ್ಚಳವಾಗಿದೆ ಎಂದು ಸೂಚಿಸುವ ಮೀಮ್ಸ್‌ ಅನ್ನು ನೆಟ್ಟಿಗರು ಹಂಚಿಕೊಂಡಿದ್ದಾರೆ. ಇನ್ನು ಮುಂಬೈನಲ್ಲೂ ಕೂಡಾ ಬಿಸಿಲು ತೀವ್ರವಾಗಿರುವ ಕಾರಣ ಜನರು ಈ ಇದೇ ರೀತಿಯ ಮೀಮ್ಸ್ ಹಂಚಿಕೊಂಡಿದ್ದಾರೆ. ಮುಂಬೈ ಮಾತ್ರ ಸೂರ್ಯನ ಸಮೀಪದಲ್ಲೇ ಇದೆ ಎಂಬಂತೆ ಈ ಮೀಮ್ಸ್ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+