ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರೆಸ್ಸೆಸ್ ಕಾರ್ಯಕ್ರಮಕ್ಕೆ ಪ್ರಣವ್ ಮುಖರ್ಜಿ, ಕಾಂಗ್ರೆಸ್ ನಲ್ಲಿ ಕಂಪನ

|
Google Oneindia Kannada News

ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರ ನಿರ್ಧಾರ ಕಾಂಗ್ರೆಸ್ ನಲ್ಲಿ ಅಚ್ಚರಿಗೂ ಹಾಗೂ ಮುಜುಗರಕ್ಕೂ ಕಾರಣವಾಗಿದೆ. ನಾಗ್ ಪುರ್ ನಲ್ಲಿ ನಡೆಯಲಿರುವ ಆರೆಸ್ಸೆಸ್ ನ ವಾರ್ಷಿಕ ಕಾರ್ಯಕ್ರಮವೊಂದರಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲು ಪ್ರಣವ್ ಮುಖರ್ಜಿ ಒಪ್ಪಿಗೆ ಸೂಚಿಸಿರುವುದು ಕಾಂಗ್ರೆಸ್ ಪಕ್ಷದೊಳಗೆ ಹಲವರು ಹುಬ್ಬೇರಿಸುವಂತೆ ಮಾಡಿದೆ.

ಇನ್ನು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಇಬ್ಬರೂ ದೇಶದಲ್ಲಿ ಇಲ್ಲ ಆದ್ದರಿಂದ ತಕ್ಷಣಕ್ಕೆ ಅವರ ಪ್ರತಿಕ್ರಿಯೆ ಏನು ಎಂಬುದು ಗೊತ್ತಾಗಿಲ್ಲ. ಇನ್ನು ಕಾಂಗ್ರೆಸ್ ನ ಹಲವು ನಾಯಕರು ಸಾರ್ವಜನಿಕವಾಗಿ ಈ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಲು ನಿರಾಕರಿಸುತ್ತಿದ್ದಾರೆ.

ಆರೆಸ್ಸೆಸ್ ತೃತೀಯ ವರ್ಷ ಸಮಾರಂಭಕ್ಕೆ ಪ್ರಣಬ್ ಮುಖರ್ಜಿ ಅತಿಥಿ!ಆರೆಸ್ಸೆಸ್ ತೃತೀಯ ವರ್ಷ ಸಮಾರಂಭಕ್ಕೆ ಪ್ರಣಬ್ ಮುಖರ್ಜಿ ಅತಿಥಿ!

ಆರೆಸ್ಸೆಸ್ ಮೂಲಗಳ ಪ್ರಕಾರ, ತೃತೀಯ ವರ್ಷ ವರ್ಗದ ಸಮಾರೋಪ ಸಮಾರಂಭಕ್ಕೆ ಜೂನ್ ಏಳರಂದು ಪ್ರಣವ್ ಮುಖರ್ಜಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. "ಮಾಜಿ ರಾಷ್ಟ್ರಪತಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದೇವೆ. ಅದಕ್ಕೆ ಅವರು ಒಪ್ಪಿಗೆ ಕೂಡ ಸೂಚಿಸಿದ್ದಾರೆ" ಎಂದು ಆರೆಸ್ಸೆಸ್ ನ ಪ್ರಮುಖರೊಬ್ಬರು ತಿಳಿಸಿದ್ದಾರೆ.

ತನಿಖೆ ನಡೆಯಲಿ ಎಂದು ಒತ್ತಾಯಿಸಿದ್ದರು

ತನಿಖೆ ನಡೆಯಲಿ ಎಂದು ಒತ್ತಾಯಿಸಿದ್ದರು

"ಎಂಟು ವರ್ಷದ ಹಿಂದೆ ಇದೇ ಪ್ರಣವ್ ಮುಖರ್ಜಿ ಆಗಿನ ಯುಪಿಎ ಸರಕಾರವನ್ನು ಒತ್ತಾಯಿಸಿದ್ದರು: ಆರೆಸ್ಸೆಸ್ ಮತ್ತು ಅದರ ಸಹವರ್ತಿ ಸಂಸ್ಥೆಗಳ ಜತೆಗೆ ಉಗ್ರಗಾಮಿಗಳ ನಂಟಿನ ಬಗ್ಗೆ ತನಿಖೆ ಆಗಬೇಕು ಎಂದಿದ್ದರು" ಎಂಬುದನ್ನು ಕಾಂಗ್ರೆಸ್ ಮುಖಂಡರೊಬ್ಬರು ನೆನಪಿಸಿಕೊಂಡಿದ್ದಾರೆ.

ಪ್ರತಿಕ್ರಿಯಿಸಲು ನಿರಾಕರಿಸಿದ ಎ.ಕೆ.ಆಂಟನಿ

ಪ್ರತಿಕ್ರಿಯಿಸಲು ನಿರಾಕರಿಸಿದ ಎ.ಕೆ.ಆಂಟನಿ

ಕಾಂಗ್ರೆಸ್ ನ ಹಿರಿಯ ನಾಯಕರಾದ ಎ.ಕೆ.ಆಂಟನಿ ಸೇರಿದಂತೆ ಹಲವರು ಈ ವಿಚಾರವಾಗಿ ಅಭಿಪ್ರಾಯ ವ್ಯಕ್ತಪಡಿಸಲು ನಿರಾಕರಿಸಿದ್ದಾರೆ. "ಅವರು ಬುದ್ಧಿವಂತರು. ಭಾರತದ ರಾಷ್ಟ್ರಪತಿಯಾಗಿದ್ದರು. ಅಲ್ಲಿಗೆ ಹೋಗುವುದರಿಂದ ಅವರ ನಡವಳಿಕೆಯಲ್ಲಿ ಯಾವುದೇ ವ್ಯತ್ಯಾಸ ಆಗಲ್ಲ. ಅವರು ಅವರಾಗಿಯೇ ಇರುತ್ತಾರೆ" ಎಂದಿದ್ದಾರೆ ಕೇಂದ್ರದ ಮಾಜಿ ಸಚಿವ ಸುಶೀಲ್ ಕುಮಾರ್ ಶಿಂಧೆ.

ಪ್ರಣವ್ ಮುಖರ್ಜಿ ಮಾತ್ರ ಉತ್ತರಿಸಬಲ್ಲರು

ಪ್ರಣವ್ ಮುಖರ್ಜಿ ಮಾತ್ರ ಉತ್ತರಿಸಬಲ್ಲರು

"ನಿಮ್ಮ ಪ್ರಶ್ನೆಗೆ ಉತ್ತರಿಸುವುದಕ್ಕೆ ಪ್ರಣವ್ ಮುಖರ್ಜಿ ಅವರೇ ಸರಿ. ಆಹ್ವಾನವನ್ನು ಅವರು ಒಪ್ಪಿದ್ದಾರೆ. ಈ ಬಗ್ಗೆ ಯಾವುದೇ ಪ್ರಶ್ನೆ ಉದ್ಭವ ಆದರೆ ಅದಕ್ಕೆ ಉತ್ತರಿಸುವುದಕ್ಕೆ ಪ್ರಣವ್ ಮುಖರ್ಜಿ ಅವರೇ ಸರಿಯಾದ ವ್ಯಕ್ತಿ" ಎಂದು ಕಾಂಗ್ರೆಸ್ ವಕ್ತಾರ ಮನೀಶ್ ತಿವಾರಿ ಪ್ರತಿಕ್ರಿಯಿಸಿದ್ದಾರೆ.

ಮೋಹನ್ ಭಾಗ್ವತ್ ಜತೆ ನಾಲ್ಕು ಸಲ ಭೇಟಿ

ಮೋಹನ್ ಭಾಗ್ವತ್ ಜತೆ ನಾಲ್ಕು ಸಲ ಭೇಟಿ

ಆರೆಸ್ಸೆಸ್ ನ ಮೂಲಗಳ ಪ್ರಕಾರ, ರಾಷ್ಟ್ರಪತಿ ಸ್ಥಾನದ ಅವಧಿ ಪೂರೈಸಿದ ನಂತರ ನಾಲ್ಕು ಬಾರಿ ಆರೆಸ್ಸೆಸ್ ನ ಮುಖ್ಯಸ್ಥ ಮೋಹನ್ ಭಾಗ್ವತ್ ರನ್ನು ಪ್ರಣವ್ ಮುಖರ್ಜಿ ಭೇಟಿಯಾಗಿದ್ದಾರೆ. ಇನ್ನು ಆರೆಸ್ಸೆಸ್ ನ ಸಂಪ್ರದಾಯದ ಪ್ರಕಾರ, ನಾಗ್ ಪುರ್ ನಲ್ಲಿ ನಡೆಯುವ ಅದರ ಎರಡು ಮುಖ್ಯ ಕಾರ್ಯಕ್ರಮಗಳಿಗೆ ಆರೆಸ್ಸೆಸೇತರ ಸಿದ್ಧಾಂತಗಳನ್ನು ಅನುಸರಿಸುವ ವ್ಯಕ್ತಿಗಳನ್ನು ಆಹ್ವಾನಿಸಲಾಗುತ್ತದೆ.

English summary
Former President Pranab Mukherjee’s reported decision to be the chief guest at an annual RSS event at its headquarters in Nagpur has surprised many in the Congress. Many party leaders refrained from airing their views publicly.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X