Maha Kumbh Mela 2025: ಮಹಾ ಕುಂಭಮೇಳದಲ್ಲಿ ಸ್ಟೀವ್ ಜಾಬ್ಸ್ ಪತ್ನಿ ಲಾರೆನ್ ಪೊವೆಲ್ ಜಾಬ್ಸ್ ಅಸ್ವಸ್ಥ

ವಿಶ್ವದ ಅತಿದೊಡ್ಡ ಧಾರ್ಮಿಕ ಮೇಳಗಳಲ್ಲಿ ಒಂದಾದ ಮಹಾ ಕುಂಭ ಮೇಳ ಉತ್ತರ ಪ್ರದೇಶದ ಪ್ರಯಾಗ್‌ ರಾಜ್‌ನಲ್ಲಿ ಆರಂಭವಾಗಿ ಎರಡು ದಿನಗಳು ಕಳೆಯುತ್ತಿದೆ. ಕೋಟ್ಯಂತರ ಭಕ್ತರು ಈಗಾಗಲೇ ಗಂಗಾ, ಯಮುನಾ ಹಾಗೂ ಸರಸ್ವತಿ ಮಹಾ ನದಿಗಳ ಸಂಗಮ ಕ್ಷೇತ್ರವಾದ ತ್ರಿವೇಣಿ ಸಂಗಮದಲ್ಲಿ ಪವಿತ್ರಾ ಸ್ನಾನ ಮಾಡಿದ್ದಾರೆ. ಈ ಧಾರ್ಮಿಕ ಮೇಳದಲ್ಲಿ ಕೋಟಿಗಟ್ಟಲೇ ಸಾಧು-ಸಂತರು ನಾಗಸಾಧುಗಳು, ಭಕ್ತರು ಮಾತ್ರವಲ್ಲದೇ ವಿದೇಶಿಗರು ಕೂಡ ಭಾಗಿಯಾಗುತ್ತಿದ್ದಾರೆ.

ಹನ್ನೆರಡು ವರ್ಷಗಳಿಗೊಮ್ಮೆ ನಡೆಯುವ ಮಹಾ ಕುಂಭಮೇಳದಲ್ಲಿ ವಿದೇಶಿ ಗಣ್ಯರು ಕೂಡ ಭಾಗಿಯಾಗುತ್ತಿದ್ದು, ಆ್ಯಪಲ್‌(Apple) ಸಂಸ್ಥೆಯ ಸಹ ಸಂಸ್ಥಾಪಕ ಸ್ಟೀವ್ ಜಾಬ್ಸ್ ಅವರ ಪತ್ನಿ ಲಾರೆನ್ ಪೊವೆಲ್ ಜಾಬ್ಸ್ ಕೂಡ ಕುಂಭ ಮೇಳದಲ್ಲಿ ಪವಿತ್ರಾ ಸ್ನಾನ ಮಾಡಲು ಆಗಮಿಸಿದ್ದಾರೆ. ಆದರೆ ಉತ್ತರ ಪ್ರದೇಶದ ಪ್ರಯಾಗ್‌ ರಾಜ್‌ನಲ್ಲಿ ಅತಿಯಾದ ಚಳಿ ಇರುವ ಕಾರಣ ಅವರು ಅನಾರೋಗ್ಯಕ್ಕೀಡಾಗಿದ್ದಾರೆ.

Steve Jobs wife Laurene Powell Jobs Fall Ill At Maha Kumbh Mela

ಆ್ಯಪಲ್‌(Apple) ಸಂಸ್ಥೆಯ ಸಹ ಸಂಸ್ಥಾಪಕ ಸ್ಟೀವ್ ಜಾಬ್ಸ್ ಅವರ ಪತ್ನಿ ಲಾರೆನ್ ಪೊವೆಲ್ ಜಾಬ್ಸ್ ಕುಂಭ ಮೇಳದಲ್ಲಿ ಭಾಗವಹಿಸಲು ಉತ್ತರ ಪ್ರದೇಶದ ಪ್ರಯಾಗರಾಜ್‌ಗೆ ಬಂದಿದ್ದು, ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲಾಗದೇ ಅಸ್ವಸ್ಥರಾಗಿದ್ದರು. ಕೂಡಲೇ ಅವರಿಗೆ ನಿರಂಜನಿ ಅಖಾಡದ ಮಹಾ ಮಂಡಲೇಶ್ವರ ಸ್ವಾಮಿ ಕೈಲಾಸಾನಂದ ಗಿರಿ ಮಹಾರಾಜ್ ಸ್ಥಾಪಿಸಿರುವ ಶಿಬಿರದಲ್ಲಿ ಚಿಕಿತ್ಸೆ ವ್ಯವಸ್ಥೆ ಮಾಡಲಾಗಿತ್ತು.

ಸ್ಟೀವ್ ಜಾಬ್ಸ್ ಅವರ ಪತ್ನಿ ಲಾರೆನ್ ಪೊವೆಲ್ ಜಾಬ್ಸ್ ತಮ್ಮ ಜೀವನದಲ್ಲಿ ಒಮ್ಮೆಯೂ ಇಂತಹ ಪ್ರಮಾಣದ ಜನಸಾಗರ ನೋಡಿರಲಿಲ್ಲವಂತೆ. ಮೊದಲೇ ಅಲರ್ಜಿ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಜನದಟ್ಟಣೆ ಹಾಗೂ ಚಳಿಯಲ್ಲಿ ಕುಂಭ ಸ್ನಾನ ಮಾಡಲಾಗದೇ ಅಸ್ವಸ್ಥಗೊಂಡಿದ್ದರು. ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಮಹಾ ಮಂಡಲೇಶ್ವರ ಸ್ವಾಮಿ ಶಿಬಿರದಲ್ಲಿ ಚಿಕಿತ್ಸೆ ಪಡೆದು ವಿಶ್ರಾಂತಿ ಪಡೆದುಕೊಂಡರು.

Steve Jobs wife Laurene Powell Jobs Fall Ill At Maha Kumbh Mela

ಬಳಿಕ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದ ಹಿನ್ನೆಲೆಯಲ್ಲಿ ಸಹಾಯಕರ ನೆರವು ಪಡೆದು ಅಮೃತ ಸ್ನಾನ ಮಾಡಿದ್ದಾರೆ. ಕೇಸರಿ, ಹಳದಿ ಸಲ್ವಾರ್ ಧರಿಸಿ ಕುತ್ತಿಗೆಯಲ್ಲಿ ರುದ್ರಾಕ್ಷಿಯ ಹಾರವನ್ನು ಧರಿಸಿರುವ ಲಾರೆನ್ ಪೊವೆಲ್ ಜಾಬ್ಸ್ ಅವರ ಕೆಲವು ವಿಡಿಯೋ ಹಾಗೂ ಫೋಟೋಗಳು ವೈರಲ್‌ ಆಗುತ್ತಿದೆ. ಸದ್ಯ ಶಿಬಿರದಲ್ಲಿ ವಿಶ್ರಾಂತಿ ಪಡೆಯುತ್ತಿರುವ ಲಾರೆನ್ ಪೊವೆಲ್ ಜಾಬ್ಸ್ ಅವರು ಪ್ರಯಾಗ್‌ ರಾಜ್‌ಗೆ ಸಮೀಪವಾಗಿರುವ ಅಯೋಧ್ಯೆ ರಾಮ ಮಂದಿರಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ. ಇನ್ನು ಜನವರಿ 20ರಂದು ಅಮೇರಿಕಾ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪ್ರಮಾಣ ವಚನ ಸಮಾರಂಭದಲ್ಲಿ ಭಾಗವಹಿಸ ಬೇಕಾಗಿರುವ ಕಾರಣ ಲಾರೆನ್ ಪೊವೆಲ್ ಜಾಬ್ಸ್ ಇನ್ನೆರಡು ದಿನದಲ್ಲಿ ಅಮೆರಿಕಕ್ಕೆ ಮರಳುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+