Star Fruit Benefits: ಸ್ಟಾರ್ ಫ್ರೂಟ್ ತಿನ್ನೋದ್ರಿಂದ ಆರೋಗ್ಯಕ್ಕೆ ಎಷ್ಟು ಲಾಭವಿದೆ ಗೊತ್ತಾ ? ಇಲ್ಲಿದೆ ಬೆನಿಫಿಟ್ಸ್
ಮಳೆಗಾಲದಲ್ಲಿ ತಂಪಾದ ವಾತಾವರಣ ಎಲ್ಲೆಡೆ ಹಸಿರು ನೋಡಲು ಅತ್ಯಂತ ಸುಂದರವಾದ ವಾತಾವರಣ ನಿರ್ಮಾಣವಾಗುತ್ತದೆ. ಕಾಲ ಬದಲಾವಣೆ ಹಲವಾರು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಬದಲಾದ ವಾತಾವರಣದಲ್ಲಿ ಮನುಷ್ಯನ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಆಗಿ ಹಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಈ ಎಲ್ಲಾ ಸಮಸ್ಯೆಗಳಿಂದ ದೂರವಿರಲು ಹಾಗೂ ಮನುಷ್ಯನ ರೋಗ ನಿರೋಧ ಶಕ್ತಿಯನ್ನ ಹೆಚ್ಚಿಗೆ ಮಾಡಲು ಕಾಲ ಕಾಲಕ್ಕೆ ಸಿಗುವ ಹಣ್ಣು ಹಾಗೂ ತರಕಾರಿಗಳು ತಿನ್ನುವುದರಿಂದ ಆರೋಗ್ಯದಲ್ಲಿ ಉಂಟಾಗುವ ಸಮಸ್ಯೆಗಳನ್ನ ತಪ್ಪಿಸಬಹುದಾಗಿದೆ.
ಹೌದು, ಕೆಮ್ಮು, ಶೀತ ಮತ್ತು ಜ್ವರವು ಕಾಲ ಬದಲಾಗುವ ಕಂಡುಬರುವ ಸಾಮಾನ್ಯ ಆರೋಗ್ಯ ಸಮಸ್ಯೆಗಳಾಗಿವೆ. ಹೀಗಾಗಿ ಆಹಾರ ತಜ್ಞರು ಸೀಸನಲ್ ನಲ್ಲಿ ಸಿಗುವ ಹಣ್ಣು ಹಾಗೂ ತರಕಾರಿಗಳ ಸೇವಿಸಲು ಸಲಹೆ ನೀಡುತ್ತಾರೆ. ಹಣ್ಣು, ತರಕಾರಿಗಳು ಯಾವುದೇ ಆಗಿರಬಹುದು ಋತುಮಾನದ ಉತ್ಪನ್ನಗಳನ್ನು ಸೇವಿಸುವಂತೆ ಸಲಹೆ ನೀಡುತ್ತಾರೆ. ಯಾಕೆಂದರೆ ಇದು ಆ ಕಾಲಕ್ಕೆ ತಕ್ಕಂತೆ ನೈಸರ್ಗಿಕವಾಗಿ ಹಲವಾರು ಆರೋಗ್ಯ ಪ್ರಯೋಜನಕಾರಿಯಾಗಿರುತ್ತದೆ. ಇನ್ನೂ ಮಳೆಗಾಲ ಆರಂಭವಾಗಿದ್ದು, ಮಳೆಗಾಲಕ್ಕೆ ಉತ್ತಮ ಹಣ್ಣಿನ ಬಗ್ಗೆ ನಿಮಗೆ ಮಾಹಿತಿ ನೀಡುತ್ತಿದ್ದೇವೆ.

ಉತ್ತಮ ಆರೋಗ್ಯಕ್ಕೆ ಸ್ಟಾರ್ ಹಣ್ಣು ಉಪಯುಕ್ತವಾಗಿದೆ. ಇದು ಸಿಹಿ ಮತ್ತು ಹುಳಿ ಎರಡನ್ನೂ ಹೊಂದಿಕೊಂಡಿದೆ. ಇದು ತಿನ್ನಲು ಮಾತ್ರ ರುಚಿಯಲ್ಲ ಆರೋಗ್ಯದ ವಿಚಾರದಲ್ಲಿ ಸಹ ಇದು ಬಹಳ ಸಹಕಾರಿಯಾಗಿದೆ. ಸ್ಟಾರ್ ಹಣ್ಣು ಹಳದಿ ಅಥವಾ ಹಸಿರು ಬಣ್ಣವನ್ನು ಹೊಂದಿರುತ್ತದೆ. ಇದನ್ನು ಕಮ್ರಾಖ್ ಎಂದು ಕೂಡ ಕರೆಯುತ್ತಾರೆ. ಸ್ಟಾರ್‌ಫ್ರೂಟ್‌ನ್ನು ಹಿಂದಿಯಲ್ಲಿ 'ಕಮ್ರಾಖ್', ಮರಾಠಿಯಲ್ಲಿ 'ಕರಂಬಲ್', ಬಂಗಾಳಿಯಲ್ಲಿ 'ಕಮರಂಗಾ' ಮತ್ತು ವಿಶ್ವದ ಇತರ ಭಾಗಗಳಲ್ಲಿ 'ಕ್ಯಾರಂಬೋಲಾ' ಎಂದು ಕರೆಯಲಾಗುತ್ತದೆ.
ಸ್ಟಾರ್ ಫ್ರೂಟ್ ಹಣ್ಣನ್ನು ಕತ್ತರಿಸಿದ ನಂತರ ನಕ್ಷತ್ರದಂತಹ ಸ್ಲೈಸ್ ಕಾಣಬಹುದಾಗಿದೆ. ಇದು ಕ್ವೆರ್ಸೆಟಿನ್, ಗ್ಯಾಲಿಕ್ ಆಮ್ಲ ಮತ್ತು ಎಪಿಕಾಟೆಚಿನ್ ಸೇರಿದಂತೆ ಹಲವು ಪೋಷಕಾಂಶಗಳಂತಹ ಅಂಶಗಳನ್ನ ಹೊಂದಿದ್ದು ಆರೋಗ್ಯಕ್ಕೆ ಉತ್ತಮವಾಗಿರುತ್ತದೆ. ಉತ್ಕರ್ಷಣ ನಿರೋಧಕ ಗುಣಲಕ್ಷಣಗಳನ್ನು ಮತ್ತು ವಿವಿಧ ಆರೋಗ್ಯ ಪ್ರಯೋಜನಗಳನ್ನು ಈ ಸ್ಟಾರ್ ಫ್ರೂಟ್ ಹೊಂದಿವೆ. ಸ್ಟಾರ್ ಫ್ರೂಟ್ ನಲ್ಲಿ ಕೊಬ್ಬಿನ ಅಂಶಗಳನ್ನು ಕಡಿಮೆ ಮಾಡುತ್ತದೆ.
ಸ್ಟಾರ್‌ಫ್ರೂಟ್‌ನ ಪೌಷ್ಠಿಕಾಂಶದ ಮೌಲ್ಯ ಎಷ್ಟಿರುತ್ತೇ ಗೊತ್ತಾ?
100 ಗ್ರಾಂ ಸ್ಟಾರ್‌ಫ್ರೂಟ್‌ನಲ್ಲಿ 34.4 ಮಿಗ್ರಾಂ ವಿಟಮಿನ್ ಸಿ, 1 ಗ್ರಾಂ ಪ್ರೋಟೀನ್, 133 ಮಿಗ್ರಾಂ ಪೊಟ್ಯಾಸಿಯಮ್, 10 ಮಿಗ್ರಾಂ ಮೆಗ್ನೀಸಿಯಮ್, 2 ಮಿಗ್ರಾಂ ಸೋಡಿಯಂ, 61 ಐಯು ವಿಟಮಿನ್ ಎ, 3 ಮಿಗ್ರಾಂ ಕ್ಯಾಲ್ಸಿಯಂ ಮತ್ತು 0.1 ಮಿಗ್ರಾಂ ಕಬ್ಬಿಣವಿದೆ. ಇದು ಫೈಬರ್, 7 ಗ್ರಾಂ ಕಾರ್ಬೋಹೈಡ್ರೇಟ್ ಹಾಗೂ 31 ಕ್ಯಾಲೊರಿಗಳನ್ನು ಹೊಂದಿರುತ್ತದೆ. ಇದು ಕಡಿಮೆ ಕ್ಯಾಲೋರಿ ಹಣ್ಣಾಗಿರುತ್ತದೆ. ಪಾಲಿಫಿನೋಲಿಕ್ ಸಂಯುಕ್ತಗಳು, ಗ್ಯಾಲಿಕ್ ಆಮ್ಲ, ಕ್ವೆರ್ಸೆಟಿನ್ ಮತ್ತು ಎಪಿಕಾಟೆಚಿನ್ ನಂತಹ ಹೆಚ್ಚಿನ ಪ್ರಮಾಣದ ಉತ್ಕರ್ಷಣ ನಿರೋಧಕಗಳು ಇರುತ್ತವೆ.
ಸ್ಟಾರ್ ಹಣ್ಣಿನ ಪ್ರಯೋಜನಗಳು ಇಲ್ಲಿವೆ?
ಸ್ಟಾರ್ ಫ್ರೂಟ್ ಸೋಂಕುಗಳ ವಿರುದ್ಧ ಹೋರಾಡಲು ಸಹಾಯಕಾರಿಯಾಗಿದೆ. ಈ ಹಣ್ಣಿನಲ್ಲಿ ವಿಟಮಿನ್‌ಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿರುವ ಸೋಂಕನ್ನು ಉಂಟುಮಾಡುವ ಸ್ವತಂತ್ರ ರಾಡಿಕಲ್‌ಗಳ ವಿರುದ್ಧ ಹೋರಾಡುವ ಪ್ರತಿರಕ್ಷಣಾ ವ್ಯವಸ್ಥೆಯನ್ನು ಉತ್ತಮಗೊಳಿಸುತ್ತವೆ.
ಈ ಹಣ್ಣಿನಿಂದ ಉರಿಯೂತವನ್ನು ಕಡಿಮೆ ಮಾಡುವ ಉತ್ತಮ ಕ್ರಿಯಾಕಾರಿಯಾಗಿದೆ. ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಉರಿಯೂತವು ನಿಮಗೆ ಅನಾರೋಗ್ಯವನ್ನು ಉಂಟುಮಾಡುತ್ತದೆ. ಅಲ್ಲದೇ ರಕ್ತದೊತ್ತಡವನ್ನು ನಿರ್ವಹಿಸುತ್ತದೆ, ಆರೋಗ್ಯಕರ ಹೃದಯಕ್ಕೆ ಬೇಕಾಗುವ ಪೂರಕ ಆರೋಗ್ಯವನ್ನು ಸ್ಟಾರ್ ಫ್ರೂಟ್ ನೀಡುತ್ತದೆ.
ಇನ್ನೂ ತೂಕ ನಷ್ಟಕ್ಕೆ ಸಹ ಸ್ಟಾರ್ ಫ್ರೂಟ್ ಸಹಾಯ ಮಾಡುತ್ತದೆ. ಸ್ಟಾರ್ ಫ್ರೂಟ್ ಚಯಾಪಚಯವನ್ನು ಅಧಿಕವಾಗಿಡಲು ಸಹಾಯ ಮಾಡುತ್ತದೆ. ಇನ್ನೂ ಉಸಿರಾಟವನ್ನು ಸುಧಾರಿಸಲು ಹೆಚ್ಚು ಸಹಾಯಕಾರಿಯಾಗಿದ್ದು, ಇದು ಉರಿಯೂತದ ಗುಣಲಕ್ಷಣಗಳನ್ನು ಹೊಂದಿರುವುದರಿಂದ, ಸ್ಟಾರ್ ಫ್ರೂಟ್ ನೋಯುತ್ತಿರುವ ಗಂಟಲು , ಉಸಿರಾಟದ ಸೋಂಕುಗಳಿಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ.
ಜೀರ್ಣಕ್ರಿಯೆಯನ್ನು ಸುಧಾರಿಸಲು ಈ ಹಣ್ಣು ಹೆಚ್ಚು ಸಹಾಯಕವಾಗಿದ್ದು, ಈ ಹಣ್ಣು ಫೈಬರ್‌ನಿಂದ ಸಮೃದ್ಧವಾಗಿದೆ. ಆದ್ದರಿಂದ ಜೀರ್ಣಾಂಗವ್ಯೂಹದ ಮೂಲಕ ದೇಹದ ತ್ಯಾಜ್ಯವನ್ನು ಹೊರ ಹಾಕಲು ಸುಲಭವಾಗುವಂತೆ ಮಾಡುವ ಕ್ರಿಯೆಯನ್ನು ಮಾಡುತ್ತದೆ. ಮಿದುಳು, ಹೃದಯ ಮತ್ತು ಹೊಟ್ಟೆಗೆ ಸಂಬಂಧಿಸಿದ ವಿವಿಧ ಕಾಯಿಲೆಗಳನ್ನು ನಿರ್ವಹಿಸಲು ಸ್ಟಾರ್ ಹಣ್ಣು ಸಹಾಯ ಮಾಡುತ್ತದೆ.
ಸ್ಟಾರ್ ಫ್ರೂಟ್‌ನ ಅಡ್ಡ ಪರಿಣಾಮಗಳೇನು?
ಸ್ಟಾರ್ ಫ್ರೂಟ್‌ನಲ್ಲಿ ಆಕ್ಸಾಲಿಕ್ ಆಮ್ಲ ಮತ್ತು ಕ್ಯಾರಂಬಾಕ್ಸಿನ್ ಅತ್ಯಗತ್ಯ ಜೈವಿಕ ಸಕ್ರಿಯ ಘಟಕಗಳಿವೆ, ಇದು ಮೂತ್ರಪಿಂಡದ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಹಾನಿಕಾರಕವಾಗಿದೆ. ನಕ್ಷತ್ರದ ಹಣ್ಣಿನ ಅತಿಯಾದ ಸೇವನೆಯು ವಾಂತಿ, ಬಿಕ್ಕಳಿಕೆ, ಮಾನಸಿಕ ಗೊಂದಲಕ್ಕೆ ಕಾರಣವಾಗಬಹುದು. ಮೂತ್ರಪಿಂಡದ ಕಲ್ಲುಗಳು, ಮೂತ್ರಪಿಂಡ ವೈಫಲ್ಯ ಅಥವಾ ಡಯಾಲಿಸಿಸ್ ನಿರ್ವಹಣೆಗೆ ಒಳಗಾಗುವ ವ್ಯಕ್ತಿಗಳು ನಕ್ಷತ್ರದ ಹಣ್ಣುಗಳನ್ನು ಸೇವಿಸಬಾರದು ಎಂದು ಶಿಫಾರಸು ಮಾಡಲಾಗಿದೆ. ನಕ್ಷತ್ರದ ಹಣ್ಣಿನ ಅತಿಯಾದ ಸೇವನೆಯು ನರರೋಗಕ್ಕೆ ಕಾರಣವಾಗಬಹುದು
ಸ್ಟಾರ್ ಫ್ರೂಟ್ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳೇನು?
ಸ್ಟಾರ್ ಫ್ರೂಟ್ ಅನ್ನು ಸಾಮಾನ್ಯವಾಗಿ ಮಧ್ಯಮ ಪ್ರಮಾಣದಲ್ಲಿ ಸೇವಿಸಿದರೆ ಸುರಕ್ಷಿತವೆಂದು ಪರಿಗಣಿಸಲಾಗುತ್ತದೆ. ಏಕೆಂದರೆ ನಕ್ಷತ್ರ ಹಣ್ಣುಗಳನ್ನು ಸೇವಿಸುವಾಗ ಸಾಮಾನ್ಯ ಮುನ್ನೆಚ್ಚರಿಕೆಗಳನ್ನು ಅನುಸರಿಸಬೇಕು. ನಕ್ಷತ್ರದ ಹಣ್ಣಿನ ಅತಿಯಾದ ಸೇವನೆಯು ತೀವ್ರವಾದ ಮೂತ್ರಪಿಂಡದ ಹಾನಿಯನ್ನು ಉಂಟುಮಾಡಬಹುದು, ವಿಶೇಷವಾಗಿ ಖಾಲಿ ಹೊಟ್ಟೆಯಲ್ಲಿ ತೆಗೆದುಕೊಂಡರೆ. ಆದ್ದರಿಂದ, ವಯಸ್ಸಾದ ರೋಗಿಗಳು ಅಥವಾ ಖಾಲಿ ಹೊಟ್ಟೆಯಲ್ಲಿರುವ ವ್ಯಕ್ತಿಗಳು ನಕ್ಷತ್ರದ ಫಲವನ್ನು ತಿನ್ನಲು ಸಲಹೆ ನೀಡಲಾಗುವುದಿಲ್ಲ. ಯಾವುದೇ ಆರೋಗ್ಯ ಸಂಬಂಧಿತ ಸಮಸ್ಯೆ ಕಂಡುಬಂದರೆ, ನಿಮ್ಮ ಆಯುರ್ವೇದ ವೈದ್ಯರನ್ನು ಸಂಪರ್ಕಿಸಿ.
-
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್












Click it and Unblock the Notifications