Vimal Bus: ಕಣಕಣದಲ್ಲೂ ಕೇಸರಿ ವಿಮಲ್ ಬಸ್ ಟಿಕೆಟ್ ಬುಕ್ ಮಾಡಿ, ಟ್ರಿಪ್ ಎಂಜಾಯ್ ಮಾಡಿ!
ಬೆಂಗಳೂರು, ಮೇ. 14 : ಗುಟ್ಕಾ ಜಗಿಯಲು ಕಲಿತವರು ಗುಟ್ಕಾವನ್ನು ತುಂಬಾ ಇಷ್ಟಪಡುತ್ತಾರೆ. ಎಲ್ಲಿ, ಯಾರಿದ್ದಾರೆ..? ಯಾವ ಜಾಗದಲ್ಲಿದ್ದೇವೆ ಎಂಬ ಯಾವ ಪರಿವೇಯೂ ಇಲ್ಲದೆ ಆರಾಮವಾಗಿ ಗುಟ್ಕಾ ತೆಗೆದು ಬಾಯಿಯಲ್ಲಿ ಹಾಕಿ ಜಗಿಯಲು ಶುರು ಮಾಡುತ್ತಾರೆ. ಅವರ ಮನೆಗಳು, ಬ್ಯಾಗ್‌ಗಳಲ್ಲಿ ಗುಟ್ಕಾ ಪ್ಯಾಕ್‌ಗಳು ಸಿಗದ ಜಾಗವೇ ಇರಲ್ಲ ಬಿಡಿ.
ಆದರೆ, ಇಲ್ಲೊಂದಿಷ್ಟು ಗುಟ್ಕಾ ಪ್ರೇಮಿಗಳು ಮನೆ, ಬ್ಯಾಗ್, ಬಟ್ಟೆಯ ಜೇಬುಗಳು ಮಾತ್ರವಲ್ಲ ಇಡೀ ಬಸ್ ಒಂದನ್ನೇ ಗುಟ್ಕಾ ಬಸ್ ಆಗಿ ಬದಲಾಯಿಸಿದ್ದಾರೆ. ಇಡೀ ಬಸ್‌ಗೆ ಗುಟ್ಕಾ ಪಾಕೆಟ್‌ಗಳನ್ನು ಅಂಟಿಸಿ ವಿಮಲ್ ಬಸ್ ಅನ್ನು ಅಲಂಕರಿಸಿ ರೋಡಿಗೆ ಇಳಿಸಿದ್ದಾರೆ. ಈ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ಸದ್ದು ಮಾಡುತ್ತಿವೆ.

ವಿಮಲ್ ಬಸ್ ನೋಡೋದಲ್ಲ... ರೈಡ್‌ಗೂ ಹೋಗಬಹುದು!
ಕೋಲಾರ ಜಿಲ್ಲೆಯ ಶ್ರೀನಿವಾಸಪುರದ ವಿಮಲ್ ಪ್ರೇಮಿಗಳು ಇಂತಹ ದೊಡ್ಡ ಸಾಹಸಕ್ಕೆ ಕೈ ಹಾಕಿದ್ದಾರೆ. super_star_mr_nizam (Mohammed Nizam) ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಕೆಲವು ತಿಂಗಳ ಹಿಂದೆ ವಿಮಲ್ ಪ್ಯಾಕ್‌ಗಳನ್ನು ಬಳಸಿ ಬಸ್ ಅನ್ನು ಅಲಂಕರಿಸಿದ ವೀಡಿಯೊವನ್ನು ಪೋಸ್ಟ್ ಮಾಡಲಾಗಿದೆ. ಬಸ್ಸಿನ ವೀಡಿಯೊ ಸಕತ್ ವೈರಲ್ ಆಗುತ್ತಿದೆ.
ವಿಮಲ್ ಗುಟ್ಕಾ ಜಾಹೀರಾತಿನಲ್ಲಿ ಅಜಯ್ ದೇವಗನ್ ಕಾಣಿಸಿಕೊಂಡಿದ್ದಾರೆ. ಈ ಪೋಸ್ಟರ್ ಅನ್ನು ಬಸ್‌ನ ಮುಂದೆ ಅಳವಡಿಸಲಾಗಿದೆ. ಅದರಲ್ಲಿ ಕೋಲಾರ ಜಿಲ್ಲೆ, ಶ್ರೀನಿವಾಸಪುರ, ವಿಮಲ್ ಉತ್ಸವ ಎಂದೂ ಬರೆಯಲಾಗಿದೆ. ಬಸ್ಸಿನ ಮುಂಭಾಗದಲ್ಲಿ ಎರಡು ಮನುಷ್ಯಾಕೃತಿಗಳನ್ನು ಸಹ ಅಳವಡಿಸಲಾಗಿದ್ದು, ಅವುಗಳನ್ನು ಕೂಟ ವಿಮಲ್ ಪ್ಯಾಕ್‌ಗಳಿಂದ ಅಲಂಕರಿಸಲಾಗಿದೆ. ಬಸ್ಸಿನ ಗಾಜಿನ ಮೇಲೂ ಬಂಡಲ್ ನೇತು ಹಾಕಲಾಗಿದೆ. ಬಸ್ಸಿನ ಮುಂಭಾಗದಿಂದ ಹಿಂದಕ್ಕೆ ಗುಟ್ಕಾ ಪ್ಯಾಕೆಟ್‌ಗಳನ್ನು ಅಂಟಿಸಿ, ಪೂರ್ತಿ ಬಸ್ ಅನ್ನು ವಿಮಲ್ ಬಸ್ ಮಾಡಲಾಗಿದೆ.
ನಟ ಅಜಯ್ ದೇವಗನ್ ವಿಮಲ್ ರಾಯಭಾರಿಯಾಗಿದ್ದಾರೆ. ಇವರೊಂದಿಗೆ ಬಾಲಿವುಡ್ ನಟ ಶಾರುಖ್ ಮತ್ತು ಅಕ್ಷಯ್ ಕುಮಾರ್ ಕೂಡ ಕೆಲ ಕಾಲ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದರ ನಂತರ ಈಗ ಟೈಗರ್ ಶ್ರಾಫ್ ಕೂಡ ವಿಮಲ್ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ.
ಈ ವಿಮಲ್ ಬಸ್ ವಿಡಿಯೋ 10 ಕೋಟಿಗೂ ಹೆಚ್ಚು ವೀಕ್ಷಣೆ ಪಡೆದಿದ್ದು, ಹಲವರು ಕಾಮೆಂಟ್ ಮೂಲಕ ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಈ ವಿಡಿಯೋಗೆ ಹಲವರು ಕಾಮೆಂಟ್ ಮಾಡಿದ್ದಾರೆ. ಈ ಬಸ್ ಖಂಡಿತವಾಗಿಯೂ ಅಜಯ್ ದೇವಗನ್ ಅವರಿಗೆ ಸೇರಿರಬೇಕು ಎಂದು ಹಲವರು ವ್ಯಂಗ್ಯವಾಡಿದ್ದಾರೆ.












Click it and Unblock the Notifications