ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿಂತಾಮಣಿ ಎಕ್ಸಿಟ್ ಪೋಲ್: ದಕ್ಷಿಣದಲ್ಲಿ ಕರ್ನಾಟಕ ಬಿಟ್ಟರೆ ಬಿಜೆಪಿಗೆ ನೆಲೆ ಇಲ್ಲ!

|
Google Oneindia Kannada News

ಲೋಕಸಭೆ ಚುನಾವಣೆ 2019ರ ಮತದಾನ ಪ್ರಕ್ರಿಯೆ ನಂತರ ಜನಪ್ರಿಯ ರಾಜಕೀಯ ತಜ್ಞ ಚಿಂತಾಮಣಿ ಅವರು ಎಲೆಕ್ಷನ್. ಇನ್ ವೆಬ್ ತಾಣಕ್ಕಾಗಿ ಸಂಗ್ರಹಿಸಿರುವ ಜನಾಭಿಪ್ರಾಯ ಸಮೀಕ್ಷೆ ಎಕ್ಸಿಟ್ ಪೋಲ್ ವರದಿ ಇಲ್ಲಿದೆ.

ಚಿಂತಾಮಣಿ 5 ಡಾಟ್ಸ್ ಸಮೀಕ್ಷಾ ವರದಿಯಂತೆ ಬಿಜೆಪಿ 271 ಗಳಿಸಲಿದ್ದು, ಎನ್ಡಿಎ 335 ಸ್ಕೋರ್ ಮಾಡಲಿದೆ. ಯುಪಿಎ 100 ಸ್ಥಾನ ಮುಟ್ಟಲು ಕಷ್ಟಪಡಲಿದೆ ಎಂದು ಏಪ್ರಿಲ್ ತಿಂಗಳಿನಲ್ಲಿ ನೀಡಿದ ಸಮೀಕ್ಷೆಯಲ್ಲಿ ಹೇಳಿತ್ತು. ಆದರೆ, ಈಗ ಏಳು ಹಂತದ ಮತದಾನ ಪ್ರಕ್ರಿಯೆ ಮುಕ್ತಾಯವಾದ ಬಳಿಕ ಎಕ್ಸಿಟ್ ಪೋಲ್ ವರದಿಯಂತೆ ಬಿಜೆಪಿ 285, ಎನ್ಡಿಎ 347, ಕಾಂಗ್ರೆಸ್ 53, ಯುಪಿಎ 89 ಹಾಗೂ ಇತರೆ 107 ಸ್ಥಾನಗಳು ಎಂದಿದೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ದಕ್ಷಿಣ ಭಾರತದಲ್ಲಿ ಮಾತ್ರ ಎನ್ಡಿಎ ವಿರುದ್ಧ ಯುಪಿಎ ಹೆಚ್ಚಿನ ಸ್ಥಾನ ಗಳಿಸಲು ಸಾಧ್ಯವಾಗಲಿದೆ. ಆದರೆ, ಕರ್ನಾಟಕದಲ್ಲಿ ಬಿಜೆಪಿಯ ಪ್ರಾಬಲ್ಯವನ್ನು ಮುರಿಯಲು ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟಕ್ಕೆ ಸಾಧ್ಯವಾಗಿಲ್ಲ. 2009ರಂತೆ 2019ರಲ್ಲೂ ಉತ್ತಮ ಫಲಿತಾಂಶ ನೀಡಲಿದೆ ಎಂದು ಸಮೀಕ್ಷಾ ವರದಿ ಹೇಳಿದೆ. ಮಿಕ್ಕಂತೆ ತಮಿಳುನಾಡಿನಲ್ಲಿ ಡಿಎಂಕೆ ಅಧಿಕಾರಕ್ಕೆ ಬರಲಿದೆ.

ಚಿಂತಾಮಣಿ ಸಮೀಕ್ಷೆ : ಸುಮಲತಾಗೆ ಸೋಲು, ಬಿಜೆಪಿಗೆ 22 ಸ್ಥಾನ ಚಿಂತಾಮಣಿ ಸಮೀಕ್ಷೆ : ಸುಮಲತಾಗೆ ಸೋಲು, ಬಿಜೆಪಿಗೆ 22 ಸ್ಥಾನ

543 ಸ್ಥಾನಗಳಿಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಮತದಾನ ಪ್ರಕ್ರಿಯೆ, ಶೇಕಡಾವಾರು ಮತದಾನದ ಆಧಾರದ ಮೇಲೆ ವಿವಿಧ ಮಾಧ್ಯಮ ಸಂಸ್ಥೆಗಳು 2019ರಲ್ಲಿ ಯಾರು ಅಧಿಕಾರಕ್ಕೇರಲಿದ್ದಾರೆ ಎಂಬುದರ ಮುನ್ಸೂಚನೆ ಸಿಗಲಿದೆ. ತಮಿಳುನಾಡಿನ ವೆಲ್ಲೂರಿನಲ್ಲಿ ಚುನಾವಣಾ ಅಕ್ರಮ ಅಧಿಕವಾಗಿದ್ದರಿಂದ ಚುನಾವಣೆ ಮುಂದೂಡಲಾಗಿದೆ. ಹೀಗಾಗಿ, 542 ಸ್ಥಾನಗಳನ್ನು ಮಾತ್ರ ಪರಿಗಣಿಸಿ ಎಕ್ಸಿಟ್ ಪೋಲ್ ಫಲಿತಾಂಶ ನೀಡಲಾಗಿದೆ.

ತಮಿಳುನಾಡು (39)

ತಮಿಳುನಾಡು (39)

ಬಿಜೆಪಿ ಬಲ ಸಿಕ್ಕರೂ ಎಐಎಡಿಎಂಕೆಗೆ ನಿರಾಶೆ ಕಾದಿದೆ. ಸ್ಟಾಲಿನ್ ನೇತೃತ್ವದ ಡಿಎಂಕೆ ಹೆಚ್ಚಿನ ಲಾಭ ಗಳಿಸಲಿದೆ. ಬಿಜೆಪಿ ತನ್ನ ಸ್ಥಾನವನ್ನು ಹೆಚ್ಚಿಸಿಕೊಳ್ಳಲಿದೆ.
ಏಪ್ರಿಲ್ ನಲ್ಲಿ ಬಂದ ವರದಿ:
ಡಿಎಂಕೆ 15(2014ರಲ್ಲಿ 0), ಕಾಂಗ್ರೆಸ್ 5(0), ಎಎಂಎಂಕೆ 3(0), ಪಿಎಂಕೆ 3(1), ಎಐಎಡಿಎಂಕೆ 10(37), ಬಿಜೆಪಿ 3(1) ಗಳಿಸಲಿದೆ ಎಂದು ಚಿಂತಾಮಣಿ 5 ಡಾಟ್ಸ್ ಸಮೀಕ್ಷೆ ತಿಳಿಸಿದೆ.
ಎಕ್ಸಿಟ್ ಪೋಲ್ 2019 ವರದಿ
ಡಿಎಂಕೆ 15(2014ರಲ್ಲಿ 0), ಕಾಂಗ್ರೆಸ್ 5(0), ಎಎಂಎಂಕೆ 1(0), ಪಿಎಂಕೆ 3(1), ಎಐಎಡಿಎಂಕೆ 11(37), ಬಿಜೆಪಿ 2 (1), ಪಿಎಂಕೆ 2

Exit Poll 2019 : ದಕ್ಷಿಣದಲ್ಲಿ ಎನ್ಡಿಎಗಿಂತ ಯುಪಿಎ ಮೇಲುಗೈ Exit Poll 2019 : ದಕ್ಷಿಣದಲ್ಲಿ ಎನ್ಡಿಎಗಿಂತ ಯುಪಿಎ ಮೇಲುಗೈ

ಕೇರಳ (20)

ಕೇರಳ (20)

ಕಾಂಗ್ರೆಸ್ ಹಾಗೂ ಎಡಪಕ್ಷಗಳ ನಡುವಿನ ಪೈಪೋಟಿಯಲ್ಲೂ ದೇವರನಾಡು ಕೇರಳದಲ್ಲಿ ಬಿಜೆಪಿ ತನ್ನ ಖಾತೆ ತೆರೆಯಲಿದೆ. ಯುಡಿಎಫ್ ವಿರುದ್ಧ ಎಲ್ ಡಿಎಫ್ ಗೆ ನಿರಾಶೆ ಕಾದಿದೆ.
ಏಪ್ರಿಲ್ ವರದಿ:
ಕಾಂಗ್ರೆಸ್ 11(2014ರಲ್ಲಿ 8), ಯುಡಿಎಫ್ ಪ್ಲಸ್ 15(12), ಸಿಪಿಎಂ 4(5), ಎಲ್ ಡಿ ಎಫ್ ಪ್ಲಸ್ 4(8)ಎಂದು ಚಿಂತಾಮಣಿ 5ಡಾಟ್ಸ್ ಸಮೀಕ್ಷಾ ವರದಿ ತಿಳಿಸಿದೆ.

ಎಕ್ಸಿಟ್ ಪೋಲ್ 2019 ವರದಿ
ಬಿಜೆಪಿ 1, ಕಾಂಗ್ರೆಸ್ 11, ಇತರೆ 4, ಎಲ್ ಡಿ ಎಫ್ 4, ಯುಡಿ ಎಫ್ ಪ್ಲಸ್ 15

ದೆಹಲಿಯಲ್ಲಿ 2014ರ ಫಲಿತಾಂಶ ಮತ್ತೆ ರಿಪೀಟ್, ಕಮಲ ಕ್ಲೀನ್ ಸ್ವೀಪ್ದೆಹಲಿಯಲ್ಲಿ 2014ರ ಫಲಿತಾಂಶ ಮತ್ತೆ ರಿಪೀಟ್, ಕಮಲ ಕ್ಲೀನ್ ಸ್ವೀಪ್

ಕರ್ನಾಟಕ (28)

ಕರ್ನಾಟಕ (28)

ಬಿಜೆಪಿ ವಿರುದ್ಧ ಕಾಂಗ್ರೆಸ್ -ಜೆಡಿಎಸ್ ಮೈತ್ರಿಕೂಟ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗಲಿದೆ. ಬಿಜೆಪಿ 19 ಸ್ಥಾನ ಗಳಿಸಲಿದ್ದು, ಬಿಜೆಪಿ ಬೆಂಬಲಿತ ಅಭ್ಯರ್ಥಿ ಸುಮಲತಾಗೆ ಗೆಲುವು ಸಿಗಲಿದೆ ಎಂದು ಸಮೀಕ್ಷೆ ಹೇಳಿದೆ, ಜೆಡಿಎಸ್ ಏಕೈಕ ಸ್ಥಾನ ಗಳಿಸಲಿದ್ದು, ಕಾಂಗ್ರೆಸ್ 7ಕ್ಕೆ ಕುಸಿಯಲಿದೆ.
ಏಪ್ರಿಲ್ ನಲ್ಲಿ ಬಂದ ವರದಿ
ಬಿಜೆಪಿ 19(2014ರಲ್ಲಿ 17), ಕಾಂಗ್ರೆಸ್ 7(9), ಜೆಡಿಎಸ್ 1(2), ಇತರೆ 1(0)ಎಂದು ಚಿಂತಾಮಣಿ -5ಡಾಟ್ಸ್ ಸಮೀಕ್ಷಾ ವರದಿ ಹೇಳಿದೆ.
ಎಕ್ಸಿಟ್ ಪೋಲ್ ವರದಿ
ಬಿಜೆಪಿ 22, ಕಾಂಗ್ರೆಸ್ 4, ಜೆಡಿಎಸ್ 2, ಇತರೆ 0

ಆಂಧ್ರಪ್ರದೇಶ(25)

ಆಂಧ್ರಪ್ರದೇಶ(25)

ಬಿಜೆಪಿ ಸಖ್ಯ ಕಳೆದುಕೊಂಡ ಬಳಿಕ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗುದೇಶಂ ಪಕ್ಷ(ಟಿಡಿಪಿ) ತನ್ನ ಪ್ರಾಬಲ್ಯ ಕಳೆದುಕೊಂಡಿದೆ. ಕಳೆದ ಚುನಾವಣೆಯಲ್ಲಿ ಟಿಡಿಪಿ ಆಂಧ್ರದಲ್ಲಿ 15, ತೆಲಂಗಾಣದಲ್ಲಿ 1 ಸ್ಥಾನ ಗಳಿಸಿತ್ತು. ಈ ಬಾರಿ ಕೇವಲ 6 ಸ್ಥಾನಕ್ಕೆ ಕುಸಿಯಲಿದೆ. ಟಿಡಿಪಿಯ ನಷ್ಟ, ವೈಎಸ್ಸಾರ್ ಕಾಂಗ್ರೆಸ್ಸಿಗೆ ಲಾಭವಾಗಲಿದೆ. ವೈಸ್ಸಾರ್ ಕಾಂಗ್ರೆಸ್ 16 ಸ್ಥಾನ ಗಳಿಸಲಿದೆ(2014ರಲ್ಲಿ 8 ಗಳಿಸಿತ್ತು), ಬಿಜೆಪಿ 2014ರಲ್ಲಿ ಗಳಿಸಿದ್ದ 2 ಸ್ಥಾನವನ್ನು ಈ ಬಾರಿ ಕಳೆದುಕೊಳ್ಳಲಿದೆ.

ಎಕ್ಸಿಟ್ ಪೋಲ್ ಸಮೀಕ್ಷೆ: ವೈಎಸ್ಸಾರ್ ಕಾಂಗ್ರೆಸ್ 20, ಟಿಡಿಪಿ 5

ಗೋವಾ (2)

ಗೋವಾ (2)

ಹಿರಿಯ ಬಿಜೆಪಿ ನಾಯಕ, ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್ ನಿಧನದ ಬಳಿಕ ಕರಾವಳಿ ರಾಜ್ಯದಲ್ಲಿ ಬಿಜೆಪಿಗೆ ಮತ್ತೊಮ್ಮೆ 2 ಸ್ಥಾನವನ್ನು ಉಳಿಸಿಕೊಳ್ಳಲಿದೆ. ಕಾಂಗ್ರೆಸ್ಸಿಗೆ 2014 ರಂತೆ ಈ ಬಾರಿ ಕೂಡಾ ಶೂನ್ಯ ಸಂಪಾದನೆ ಮಾಡಲಿದೆ.
ಎಕ್ಸಿಟ್ ಪೋಲ್ ಸಮೀಕ್ಷೆಯಲ್ಲೂ ಬಿಜೆಪಿಗೆ 2 ಸ್ಥಾನ ಸಿಗಲಿದೆ.

ತೆಲಂಗಾಣ (17)

ತೆಲಂಗಾಣ (17)

ತೆಲಂಗಾಣದಲ್ಲಿ ಆಡಳಿತಾರೂಢ ಟಿಆರ್ ಎಸ್ ಮತ್ತೊಮ್ಮೆ ತನ್ನ ಪ್ರಾಬಲ್ಯ ಮೆರೆಯಲಿದ್ದು, 2014ರಲ್ಲಿ ಗಳಿಸಿದ್ದಕ್ಕಿಂತ ಹೆಚ್ಚಿನ ಸ್ಥಾನ ಪಡೆಯಲಿದೆ. ಟಿಆರ್ ಎಸ್ 15(2014ರಲ್ಲಿ 11), ಬಿಜೆಪಿ 1(1), ಕಾಂಗ್ರೆಸ್ 0(2), ಎಐಎಂಐಎಂ 1(4), ಟಿಡಿಪಿ 0(1), ವೈಎಸ್ಸಾರ್ ಸಿಪಿ 0(1)

ಎಕ್ಸಿಟ್ ಪೋಲ್ ಸಮೀಕ್ಷೆ
ಟಿಆರ್ ಎಸ್ 15, ಎಐಎಂಐಎಂ 1, ಬಿಜೆಪಿ 1

English summary
South India Exit Poll results 2019: Political analyzer Mr. Chintamani carried out an intensive Exit poll for Elections dot in website. According to the Chintamain-5 Dots opinion poll survey, the BJP supported candidate A Sumalatha may be defeated in a narrow margin by Nikhil Kumaraswamy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X