ಹಾರ ಹಾಕುವ ಮುನ್ನ ಸಿಡಿದ ಪಟಾಕಿಗೆ ಬೆಚ್ಚಿಬಿದ್ದ ವರ: ವಿಡಿಯೋ
ಹಾರ ಹಾಕುವ ಮುನ್ನ ಸಿಡಿದ ಪಟಾಕಿಗೆ ವೇದಿಕೆ ಮೇಲಿದ್ದ ವರ ಬೆಚ್ಚಿ ಬಿದ್ದಿದ್ದಾನೆ. ಈ ಘಟನೆ ವಿಡಿಯೋ ವೈರಲ್ ಆಗಿದೆ.
ಮದುವೆಯಲ್ಲಿ ಪಟಾಕಿ ಸಿಡಿಸುವುದಿಲ್ಲವೂ ಸರ್ವೇ ಸಾಮಾನ್ಯ. ಮದುವೆ ಮನೆಯಲ್ಲಿ ಹಾಡು ಮತ್ತು ಪಟಾಕಿ ಇಲ್ಲದೇ ಇದ್ದಲ್ಲಿ ಮದುವೆ ಪೂರ್ಣವಾಗುವುದೇ ಇಲ್ಲ. ಇಂದಿನ ದಿನಗಳಲ್ಲಿ ವಿಶೇಷ ಸಂದರ್ಭದ ಸಂಭ್ರಮಾಚರಣೆಗೆ ಹಲವು ಬಗೆಯ ಪಟಾಕಿಗಳನ್ನು ಸಿಡಿಸಲಾಗುತ್ತದೆ. ಆದರೆ ಇದೇ ಪಟಾಕಿ ವರನನ್ನು ಕೆರಳುವಂತೆ ಮಾಡಿದೆ.
ವೈರಲ್ ವಿಡಿಯೋದಲ್ಲಿ ಮದುವೆ ಸಂದರ್ಭದಲ್ಲಿ ಮದುಮಗ ವಧುವಿಗೆ ಮಾಲೆ ಹಾಕುತ್ತಿದ್ದಾಗ ಇದ್ದಕ್ಕಿದ್ದಂತೆ ಯಾರೋ ಪಟಾಕಿ ಸಿಡಿಸಿದ್ದು ಗಲಾಟೆಗೆ ಕಾರಣವಾಗಿದೆ. ಇದಾದ ಬಳಿಕ ನಡೆದ ಘಟನೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸದ್ಯ ಮದುವೆ ಸೀಸನ್ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಇದಕ್ಕೆ ಸಂಬಂಧಿಸಿದ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಮದುವೆಗಳಲ್ಲಿ ನೃತ್ಯ, ಆಹಾರ, ಅಲಂಕಾರ ಎಷ್ಟು ಅವಶ್ಯವೋ, ಪಟಾಕಿಗಳಿಗೂ ಈಗ ಅಷ್ಟೇ ಪ್ರಾಮುಖ್ಯತೆ ನೀಡಲಾಗುತ್ತಿದೆ. ಹೀಗೆ ಮದುವೆಯ ವೇದಿಕೆಯಲ್ಲಿ ವಿವಿಧ ರೀತಿಯ ಪಟಾಕಿ ಸಿಡಿಸಲಾಗಿದೆ. ಇವುಗಳನ್ನು ಪಾಪ್ಪರ್ಸ್ ಎಂದು ಕರೆಯಲಾಗುತ್ತದೆ. ಇದರಿಂದ ವಿವಿಧ ಬಗೆಯ ಬಣ್ಣದ ಕಾಗದಗಳು ಹೊರಬರುತ್ತದೆ.
ವರನಿಗೆ ಪಟಾಕಿಯ ಭಯ, ವಧುವಿಗೆ ನಗು
ಮದುವೆಯಲ್ಲಿ ಪಾಪ್ಪರ್ಸ್ ಹಾರಿಸಲಾಗಿದ್ದು ವಧುವಿಗೆ ಮಾಲೆ ಹಾಕುವಾಗ ವರ ನಡುಗಿಹೋಗಿದ್ದಾನೆ. ಪಟಾಕಿ ಶಬ್ದಕ್ಕೆ ವರನು ಭಯದಿಂದ ಕುಗ್ಗಿದ್ದಾನೆ. ನಂತರ ಅಲ್ಲಿದ್ದ ಜನರು ನಕ್ಕಿದ್ದಾರೆ. ಸದ್ಯ ವರ ಪಟಾಕಿಗಳಿಗೆ ಹೆದರುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಈ ವಿಡಿಯೋ 90 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ.

ಮಾಲೆ ಹಾಕುವಾಗ ಸಿಡಿದ ಪಟಾಕಿ
ವಧು-ವರರು ವೇದಿಕೆಯಲ್ಲಿ ಹಾರ ಬದಲಾಯಿಸಿಕೊಳ್ಳುವ ವಿಧಿ ನಡೆಯುತ್ತಿತ್ತು. ಈ ವೇಳೆ ಯಾರೋ ಗುಂಪಿನಲ್ಲಿ ಪಟಾಕಿ ಸಿಡಿಸಿದ್ದಾರೆ. ಈ ವೇಳೆ ವರ ಬೆಚ್ಚಿಬಿದ್ದಿದ್ದಾನೆ. ವರನಿಗೆ ಗಾಬರಿಯಾಗುವಷ್ಟು ಸದ್ದು ಜೋರಾಗಿರುವುದನ್ನು ವೈರಲ್ ಆಗಿರುವ ವಿಡಿಯೋದಲ್ಲಿ ನೀವು ನೋಡಬಹುದು. ವರ ಹೆದರುವುದನ್ನು ಕಂಡು ಅಲ್ಲಿದ್ದವರು ಜೋರಾಗಿ ನಕ್ಕಿದ್ದಾರೆ. ಈ ವಿಡಿಯೋ ಯಾವಾಗ ಮತ್ತು ಎಲ್ಲಿಂದ ಬಂದಿದೆ ಎಂಬುದರ ಕುರಿತು ಮಾಹಿತಿ ತಿಳಿದಿಲ್ಲ. ಆದರೆ ಜನರು ಇದನ್ನು ಸಾಮಾಜಿಕ ಮಾಧ್ಯಮದಲ್ಲಿ ತೀವ್ರವಾಗಿ ಆನಂದಿಸುತ್ತಿದ್ದಾರೆ.












Click it and Unblock the Notifications