ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ಟೋಬರ್ ಕೊನೆ ವಾರದಲ್ಲಿ ಸೂರ್ಯಗ್ರಹಣ; ಸ್ಥಳ, ಸಮಯ ಮಾಹಿತಿ ತಿಳಿಯಿರಿ; ಪುರಾಣ ಕತೆ ಏನು ಹೇಳುತ್ತೆ?

|
Google Oneindia Kannada News

ನಮ್ಮ ಕಣ್ಣೆದುರು ಕಾಣುವ ಹಲವು ಗಗನಕೌತುಕಗಳಲ್ಲಿ ಸೂರ್ಯ ಗ್ರಹಣ ಮತ್ತು ಚಂದ್ರಗ್ರಹಣ ಪ್ರಮುಖವಾದುವು. ವರ್ಷದಲ್ಲಿ ಹಲವು ಬಾರಿ ಗ್ರಹಣಗಳು ಸಂಭವಿಸುತ್ತವೆ.

ಭೂಮಿಯಿಂದ ಚಂದ್ರ ಮರೆಯಾಗುವ ರೀತಿಯಲ್ಲಿ ಸೂರ್ಯ ಅಡ್ಡ ಬಂದರೆ ಅದು ಚಂದ್ರ ಗ್ರಹಣ. ಇನ್ನು, ಭೂಮಿಯಿಂದ ಸೂರ್ಯ ಮರೆಯಾಗುವಂತೆ ಚಂದ್ರ ಅಡ್ಡ ಬಂದರೆ ಅದು ಸೂರ್ಯಗ್ರಹಣ. ಸೂರ್ಯಗ್ರಹಣದ ವೇಳೆ ಸೌರ ಕಿರಣಗಳು ಭೂಮಿಗೆ ತಾಗುವುದಿಲ್ಲ.

World Space Week 2022- ಬಾಹ್ಯಾಕಾಶ ವಾರ ವಿಶೇಷತೆ ಏನು? ಯಾಕೆ ಆಚರಿಸಲಾಗುತ್ತದೆ?World Space Week 2022- ಬಾಹ್ಯಾಕಾಶ ವಾರ ವಿಶೇಷತೆ ಏನು? ಯಾಕೆ ಆಚರಿಸಲಾಗುತ್ತದೆ?

ಆದರೆ, ಚಂದ್ರನ ನೆರಳು ಇಡೀ ಭೂಮಿಯನ್ನು ಅವರಿಸುವಷ್ಟು ವಿಶಾಲವಾಗಿರುವುದಿಲ್ಲ. ಹೀಗಾಗಿ, ಕೆಲ ನಿರ್ದಿಷ್ಟ ಪ್ರದೇಶಗಳಲ್ಲಿ ಮಾತ್ರ ಸೂರ್ಯಗ್ರಹಣವನ್ನು ಕಾಣಬಹುದು. ಇವು ಪಾರ್ಶ್ವ ಖಗ್ರಾಸ ಸೂರ್ಯಗ್ರಹಣಗಳಾಗಿವೆ. ಬಹುತೇಕ ಸೂರ್ಯಗ್ರಹಣಗಳು ಪಾರ್ಶ್ವ ಸೂರ್ಯಗ್ರಹಣಗಳೇ ಆಗಿವೆ.

Solar Eclipse 2022 in October : Date, Time and 2nd Surya Grahan Visibility in India in Kannada

ಕೆಲ ಸೂರ್ಯಗ್ರಹಣಗಳು ಪೂರ್ಣ ಅಥವಾ ಖಗ್ರಾಸ ಸೂರ್ಯಗ್ರಹಣಗಳಾಗಿರುತ್ತವೆ. ಖಗ್ರಾಸ ಸೂರ್ಯಗ್ರಹಣದಲ್ಲಿ ಇಡೀ ಭೂಮಿಗೆ ಕಾಣದ ರೀತಿಯಲ್ಲಿ ಸೂರ್ಯನನ್ನು ಚಂದ್ರ ಮರೆ ಮಾಡಿರುತ್ತಾನೆ.

ಈಗ ಅಕ್ಟೋಬರ್ 25, 2022ರಂದು ಸಂಭವಿಸಲಿರುವುದು ಪಾರ್ಶ್ವ ಸೂರ್ಯಗ್ರಹಣ. ಭೂಮಿಯ ಧ್ರುವ ಪ್ರದೇಶಗಳಲ್ಲಿ ಗ್ರಹಣ ವ್ಯಕ್ತವಾಗುತ್ತದೆ. ಆದರೆ, ಚಂದ್ರನ ನೆರಳು ಭೂಮಿಯ ಮಧ್ಯಭಾಗಕ್ಕೆ ತಲುಪುವುದಿಲ್ಲ.

ನವರಾತ್ರಿ 2022: ದುರ್ಗಾ ಅಷ್ಟಮಿ ಯಾವಾಗ? ದಿನಾಂಕ, ಮಹತ್ವ, ಶುಭ ಮುಹೂರ್ತ ಮತ್ತು ಪೂಜಾ ವಿಧಿನವರಾತ್ರಿ 2022: ದುರ್ಗಾ ಅಷ್ಟಮಿ ಯಾವಾಗ? ದಿನಾಂಕ, ಮಹತ್ವ, ಶುಭ ಮುಹೂರ್ತ ಮತ್ತು ಪೂಜಾ ವಿಧಿ

ಏನಿದು ಪಾರ್ಶ್ವ ಸೂರ್ಯಗ್ರಹಣ?

ಚಂದ್ರನಿಗೆ ಇಡೀ ಸೂರ್ಯನನ್ನು ಮರೆಯಾಗಿಸಲು ಸಾಧ್ಯವಾಗುವುದಿಲ್ಲ. ಸೂರ್ಯನ ಸ್ವಲ್ಪ ಭಾಗವನ್ನು ಮಾತ್ರ ಚಂದ್ರ ಮರೆಮಾಚಿದರೆ ಅದು ಪಾರ್ಶ್ವ ಸೂರ್ಯಗ್ರಹಣ ಎನಿಸುತ್ತದೆ. ಖಗ್ರಾಸ ಸೂರ್ಯಗ್ರಹಣದ ವೇಳೆ ಭೂಮಿ, ಚಂದ್ರ ಮತ್ತು ಸೂರ್ಯ ಒಂದೇ ರೇಖೆಗೆ ಬರುತ್ತವೆ. ಅಗ ಸೂರ್ಯ ಕೆಲ ಹೊತ್ತು ಸಂಪೂರ್ಣ ಮರೆಯಾಗುತ್ತಾನೆ. ಆದರೆ, ಪಾರ್ಶ್ವ ಸೂರ್ಯಗ್ರಹಣದ ವೇಳೆ ಈ ಮೂರು ಗ್ರಹಗಳು ಒಂದೇ ರೇಖೆಗೆ ಬರುವುದಿಲ್ಲ. ಹೀಗಾಗಿ, ಸೂರ್ಯನ ಸ್ವಲ್ಪ ಭಾಗಕ್ಕೆ ಮಾತ್ರ ಗ್ರಹಣವಾಗುತ್ತದೆ.

ಸೂರ್ಯಗ್ರಹಣ ಸಮಯ

ಭಾರತೀಯ ಕಾಲಮಾನದಲ್ಲಿ ಅಕ್ಟೋಬರ್ 25ರಂದು ಮಧ್ಯಾಹ್ನ 2:28ಕ್ಕೆ ಸೂರ್ಯಗ್ರಹಣ ಆರಂಭವಾಗುತ್ತದೆ. ಸಂಜೆ 6:32ರವರೆಗೂ ಗ್ರಹಣ ಇರುತ್ತದೆ. ಸೂರ್ಯಗ್ರಹಣದ ಉಚ್ಛ್ರಾಯ ಸ್ಥಿತಿ ಸಂಜೆ 4:30ಕ್ಕೆ ಆಗುತ್ತದೆ.

Solar Eclipse 2022 in October : Date, Time and 2nd Surya Grahan Visibility in India in Kannada

ಎಲ್ಲಿ ವೀಕ್ಷಿಸಬಹುದು?

ಅಕ್ಟೋಬರ್ 25ರಂದು ಸಂಭವಿಸುವ ಸೂರ್ಯಗ್ರಹಣವನ್ನು ಭೂಮಿಯ ಎಲ್ಲೆಡೆ ವೀಕ್ಷಿಸಲು ಸಾಧ್ಯವಿಲ್ಲ. ಭಾರತದಲ್ಲಿ ಇದು ಕಾಣಸಿಗಲ್ಲ. ಯೂರೋಪ್, ಪಶ್ಚಿಮ ಸೈಬೀರಿಯಾ, ಮಧ್ಯ ಏಷ್ಯಾ, ಪಶ್ಚಿಮ ಏಷ್ಯಾ, ಈಶಾನ್ಯ ಆಫ್ರಿಕಾದಿಂದ ಸೂರ್ಯಗ್ರಹಣವನ್ನು ವೀಕ್ಷಿಸಬಹುದು. ರಷ್ಯಾದ ಪಶ್ಚಿಮ ಸೈಬೀರಿಯಾದಲ್ಲಿ ಗ್ರಹಣ ಹೆಚ್ಚು ಅವಧಿ ಇರುತ್ತದೆ.

ಎಚ್ಚರಿಕೆ

ಸೂರ್ಯಗ್ರಹಣವನ್ನು ಬರಿಗಣ್ಣಿನಿಂದ ನೋಡುವ ಧೈರ್ಯ ಮಾಡಬೇಡಿ. ಹಾಗೆ ನೋಡಿದರೆ ಕಣ್ಣಿಗೆ ಹಾನಿಯಾಗುತ್ತದೆ. ಕುರುಡುತನ ಬರಬಹುದು ಎಂದು ವೈದ್ಯರು ಹೇಳುತ್ತಾರೆ. ಸೂರ್ಯಗ್ರಹಣಗಳನ್ನು ವೀಕ್ಷಿಸಲು ಕೆಲ ಪರೋಕ್ಷ ತಂತ್ರಜ್ಞಾನಗಳ ವಿಧಾನಗಳುಂಟು. ಅದನ್ನು ಬಳಸಬಹುದು.

ಜ್ಯೋತಿಷ್ಯ ಮತ್ತು ಸೂರ್ಯಗ್ರಹಣ

ಭಾರತೀಯ ಜ್ಯೋತಿಷ್ಯದ ಪ್ರಕಾರ ಚಂದ್ರ ಮನಸು ಕಾರಕ, ಸೂರ್ಯ ಆತ್ಮ. ಗ್ರಹಣವಾದಾಗ ಇವೆರಡೂ ಕೂಡ ಗ್ರಹಣ ಪ್ರದೇಶಗಳಲ್ಲಿನ ಜನರ ಮೇಲೆ ಪರಿಣಾಮ ಬೀರುತ್ತದೆ.

ಸೂರ್ಯಗ್ರಹಣದ ವೇಳೆ ವೃಶ್ಚಿಕ ರಾಶಿಯಲ್ಲಿ ಸೂರ್ಯ, ಚಂದ್ರ, ಬುಧನ ಮತ್ತು ಕೇತು ಇರುತ್ತಾರೆ. ವೃಷಭ ರಾಶಿಯಲ್ಲಿ ರಾಹು, ತುಲಾ ರಾಶಿಯಲ್ಲಿ ಮಂಗಳ, ಧನು ರಾಶಿಯಲ್ಲಿ ಶುಕ್ರ, ಮಕರ ರಾಶಿಯಲ್ಲಿ ಶನಿ, ಕುಂಭ ರಾಶಿಯಲ್ಲಿ ಗುರು ಇರುತ್ತಾನೆಂದು ಭಾವಿಸಲಾಗುತ್ತದೆ.

ಪುರಾಣ ಕಥೆ

ಭಾರತೀಯ ಪುರಾಣಗಳಲ್ಲಿ ಸೂರ್ಯಗ್ರಹಣ, ಚಂದ್ರಗ್ರಹಣಗಳನ್ನು ಅಶುಭ ಘಟನೆಗಳೆಂದು ಪರಿಗಣಿಸಲಾಗುತ್ತದೆ. ಸೂರ್ಯಗ್ರಹಣ ಮತ್ತು ಚಂದ್ರಗ್ರಹಣವನ್ನು ರಾಹು-ಕೇತುಗಳ ಸಂಕ್ರಮಣವೆಂದು ಹೇಳಲಾಗುತ್ತದೆ. ರಾಹುಕೇತು ಮೂಲದಲ್ಲಿ ರಾಕ್ಷಸನಾಗಿದ್ದವ. ಸಮುದ್ರಮಂಥನದ ವೇಳೆ ಬಂದ ಅಮೃತವನ್ನು ಕುಡಿಯಲು ದೇವತೆಗಳ ಜೊತೆ ರಾಕ್ಷಸರೂ ಮುಗಿಬೀಳುತ್ತಾರೆ. ರಾಕ್ಷಸರಿಗೆ ಅಮೃತ ಸಿಗಬಾರದೆಂದು ವಿಷ್ಣು ಮೋಹಿನಿ ರೂಪ ತಾಳಿ ಬರುತ್ತಾನೆ. ರಾಕ್ಷಸರು ಮತ್ತು ದೇವತೆಗಳೆಲ್ಲರಿಗೂ ತಾನೇ ಅಮೃತ ಕುಡಿಸುವುದಾಗಿ ಮೋಹಿನಿ ಹೇಳುತ್ತಾಳೆ. ಇದನ್ನು ರಾಕ್ಷಸರು ನಂಬಿಬಿಡುತ್ತಾರೆ. ಮೋಹಿನಿಯು ದೇವತಯ ಗಣಗಳಿಗೆ ಅಮೃತವನ್ನು ಕುಡಿಸಿದರೆ, ರಾಕ್ಷಸ ಪಂಕ್ತಿಯಲ್ಲಿರುವವರಿಗೆ ಬರೀ ನೀರು ಸಿಗುತ್ತದೆ.

ವಿಷ್ಣುವಿನ ಮೋಹಿನಿ ರೂಪ ಮತ್ತು ಆತ ರಾಕ್ಷಸರಿಗೆ ಮಾಡುತ್ತಿರುವ ವಂಚನೆ ರಾಹುಕೇತುವಿಗೆ ಗೊತ್ತಾಗಿ ಹೋಗುತ್ತದೆ. ದೇವತೆಗಳ ಸಾಲಿಗೆ ಹೋಗಿ ನಿಂತು ಮೋಹಿನಿ ಕೈಯಿಂದ ಅಮೃತ ಕುಡಿಯುತ್ತಾನೆ. ಇದನ್ನು ಸೂರ್ಯ ಮತ್ತು ಚಂದ್ರರು ನೋಡಿ ವಿಷ್ಣುವಿನ ಗಮನಕ್ಕೆ ತರುತ್ತಾರೆ. ಕ್ರುದ್ಧಗೊಂಡ ವಿಷ್ಣು ತನ್ನ ಸುದರ್ಶನ ಚಕ್ರದಿಂದ ರಾಹುಕೇತುವಿನ ತಲೆ ಕಡಿಯುತ್ತಾನೆ. ಆದರೆ, ಅಷ್ಟರಲ್ಲಿ ರಾಹುಕೇತು ಅಮೃತ ಕುಡಿದಿದ್ದರಿಂದ ಸಾಯುವುದಿಲ್ಲ. ರುಂಡ ಮತ್ತು ಮುಂಡ ಬೇರ್ಪಡುತ್ತದೆ ಅಷ್ಟೇ. ರುಂಡವನ್ನ ರಾಹು ಎಂದು ಎಂದು ಮುಂಡವನ್ನು ಕೇತು ಎಂದು ಕರೆಯಲಾಗುತ್ತದೆ. ಭೂಮಿಯಿಂದ ಆಗಾಗ್ಗೆ ಸೂರ್ಯ ಮತ್ತು ಚಂದ್ರರನ್ನು ಮರೆ ಮಾಡುತ್ತಿರುತ್ತಾರೆ. ಅದೇ ಸೂರ್ಯಗ್ರಹಣ ಮತ್ತು ಚಂದ್ರಗ್ರಹಣ ಎಂದು ಪುರಾಣ ಕಥೆಗಳು ಹೇಳುತ್ತವೆ.

ಆದರೆ, ವೈಜ್ಞಾನಿಕವಾಗಿ ನೋಡಿದಾಗ ಭೂಮಿ ಮತ್ತು ಸೂರ್ಯನ ಮಧ್ಯೆ ಚಂದ್ರ ಬಂದಾಗ ಸೂರ್ಯ ಮರೆಯಾದರೆ ಅದು ಸೂರ್ಯಗ್ರಹಣವೆನಿಸುತ್ತದೆ.

(ಒನ್ಇಂಡಿಯಾ ಸುದ್ದಿ)

English summary
Solar Eclipse October 2022: The second Surya Grahan of the year 2022 will occur on Tuesday, 25 October 2022. Know Date, Time and second Surya Grahan Visibility in India in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X