ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೀಗೊಂದು ಸಲಹೆ: ಮನೆ ವಿದ್ಯುತ್ ಬಿಲ್ ಕಡಿಮೆ ಮಾಡಿಕೊಳ್ಳುವುದು ಹೇಗೆ?

|
Google Oneindia Kannada News

ಬೆಂಗಳೂರು, ಡಿಸೆಂಬರ್ 01: ಹೊಸ್ತಿಲು ಹುಣ್ಣಿಮೆ ದಾಟಿದರೆ ಸಾಕು ಮೈಕೊರೆಯುವ ಚಳಿ ಶುರುವಾಗಿ ಬಿಡುತ್ತೆ. ಇದರ ಮಧ್ಯೆ ಮನೆಯ ವಿದ್ಯುತ್ ಬಿಲ್ ಏರಿಕೆಯು ಮೈ ಸುಡುವ ಮಟ್ಟಿಗೆ ಏರಿಕೆ ಆಗುತ್ತದೆ. ಚಳಿಗಾಲದಲ್ಲಿ ನಿಮ್ಮ ಮನೆಯ ವಿದ್ಯುತ್ ಬಿಲ್ ಅನ್ನು ಕಡಿಮೆ ಮಾಡುವುದು ಹೇಗೆ ಎಂಬುದಕ್ಕೆ ಹಲವು ಉಪಾಯಗಳಿವೆ.

ಸಾಮಾನ್ಯವಾಗಿ ರೂಮ್ ಹಿಟರ್, ವಾಟರ್ ಹಿಟರ್ ಹೀಗೆ ಎಲೆಕ್ಟ್ರಾನಿಕ್ ವಸ್ತುಗಳ ಬಳಕೆಯಿಂದಾಗಿ ವಿದ್ಯುತ್ ಬಿಲ್ ಹೆಚ್ಚಾಗಿ ಬರುತ್ತದೆ. ವಿದ್ಯುತ್ ಬಿಲ್ ನೋಡಿ ಶಾಕ್ ಆಗುವ ಜನರಿಗೆ ಸ್ವೀಟ್ ಉಪಾಯಗಳನ್ನು ನಾವಿಲ್ಲಿ ನೀಡುತ್ತಿದ್ದೇವೆ.

ದಾವಣಗೆರೆಯಲ್ಲಿ ಮುಂದಿನ 3 ದಿನ ವಿದ್ಯುತ್ ಕಡಿತ: ಸಮಯ, ಪ್ರದೇಶಗಳ ಪಟ್ಟಿ ತಿಳಿಯಿರಿದಾವಣಗೆರೆಯಲ್ಲಿ ಮುಂದಿನ 3 ದಿನ ವಿದ್ಯುತ್ ಕಡಿತ: ಸಮಯ, ಪ್ರದೇಶಗಳ ಪಟ್ಟಿ ತಿಳಿಯಿರಿ

ಹಾಗಿದ್ದರೆ ಚಳಿಗಾಲದ ಸಂದರ್ಭದಲ್ಲಿ ಮನೆಯ ವಿದ್ಯುತ್ ಬಿಲ್ ಅನ್ನು ಅರ್ಧದಷ್ಟು ಕಡಿಮೆ ಮಾಡುವುದು ಹೇಗೆ? ಯಾವೆಲ್ಲ ಕ್ರಮಗಳ ಮೂಲಕ ನೀವು ನಿಮ್ಮ ಮನೆಯ ವಿದ್ಯುತ್ ಬಿಲ್ ಅನ್ನು ಕಡಿಮೆ ಮಾಡಬಹುದು ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳಿರಿ.

ಎಸಿ ಬಿಟ್ಟಾಕಿ, ಗ್ಯಾಸ್ ಹೀಟರ್ ಬಳಸಿ

ಎಸಿ ಬಿಟ್ಟಾಕಿ, ಗ್ಯಾಸ್ ಹೀಟರ್ ಬಳಸಿ

ಚಳಿಗಾಲದ ಸಂದರ್ಭದಲ್ಲಿ ಬಿಸಿ ಗಾಳಿಗಾಗಿ ಹವಾನಿಯಂತ್ರಣ(ಎಸಿ)ವನ್ನು ಬಳಕೆ ಮಾಡುತ್ತಾರೆ. ಈ ರೀತಿ ಎಸಿಯನ್ನು ಬಳಸುವುದರಿಂದ ನಿಮ್ಮ ವಿದ್ಯುತ್ ಬಿಲ್ ಡಬಲ್ ಆಗುತ್ತದೆ. ಹೀಗಾಗಿ ಇಂದೇ ನೀವು ಬಳಸುವ ಎಸಿಗೆ ಗುಡ್ ಬಾಯ್ ಹೇಳಿರಿ. ಅದರ ಬದಲಿಗೆ ಗ್ಯಾಸ್ ಹೀಟರ್ ಅನ್ನು ಬಳಸುವುದು ಉತ್ತಮವಾಗಿರುತ್ತದೆ. ಗ್ಯಾಸ್ ಹೀಟರ್ ಬಳಕೆಯಿಂದ ನಿಮ್ಮ ವಿದ್ಯುತ್ ಬಿಲ್ ಏರಿಕೆಗೆ ಕೊಂಚ ಬ್ರೇಕ್ ಹಾಕಿದಂತೆ ಆಗುತ್ತದೆ.

ವಿದ್ಯುತ್ ಉಳಿಸಲು ಒಲೆ ಬಳಸಿ

ವಿದ್ಯುತ್ ಉಳಿಸಲು ಒಲೆ ಬಳಸಿ

ಸಾಮಾನ್ಯವಾಗಿ ನೀವು ಮನೆಯಲ್ಲಿ ಏರ್ ಫ್ರೈಯರ್ ಅನ್ನು ಬಳಸುತ್ತಿದ್ದರೆ ಅದರಿಂದ ಅಂತರ ಕಾಯ್ದುಕೊಳ್ಳಿ. ಏರ್ ಫ್ರೈಯರ್ ಆರೋಗ್ಯಕರ ಅಡುಗೆಗೆ ಪೂರಕವಾಗಿಯೇ ಇರುತ್ತದೆ. ಅದಾಗ್ಯೂ, ಇದರಿಂದ ಹೆಚ್ಚು ವಿದ್ಯುತ್ ವ್ಯಯವಾಗುತ್ತದೆ. ಇದರ ಬದಲಿಗೆ ಆಹಾರವನ್ನು ಒಲೆಯಲ್ಲಿ ಬೇಯಿಸುವುದರಿಂದ ವಿದ್ಯುತ್ ಉಳಿತಾಯ ಮಾಡಲು ಸಾಧ್ಯವಾಗುತ್ತದೆ. ನೀವು ಮನೆಯಲ್ಲಿ ದೊಡ್ಡ ಹೈ ಪವರ್ ಹೀಟರ್ ಅನ್ನು ಸಹ ಬಳಸುತ್ತಿದ್ದರೆ, ಅದನ್ನು ನಿಲ್ಲಿಸಿ. ಮಾರುಕಟ್ಟೆಯಲ್ಲಿ ಕಡಿಮೆ ವಿದ್ಯುತ್ ಬಳಕೆಯ ಎಲೆಕ್ಟ್ರಿಕ್ ಬ್ಲೋವರ್‌ಗಳನ್ನು ಬಳಸಿಕೊಳ್ಳಿ. ಇವು ಗಾತ್ರದಲ್ಲಿ ಚಿಕ್ಕದಾಗಿರುತ್ತವೆ ಮತ್ತು ಕಡಿಮೆ ವಿದ್ಯುತ್ ಅನ್ನು ಸೆಳೆಯುತ್ತವೆ. ಇದರಿಂದ ವಿದ್ಯುತ್ ಬಿಲ್ ಕಡಿಮೆ ಆಗುತ್ತದೆ.

ಹಳೆಯ ಬಲ್ಬ್‌ಗಳ ಬದಲಿಗೆ ಎಲ್ಇಡಿ ಬಲ್ಡ್ ಬಳಸಿ

ಹಳೆಯ ಬಲ್ಬ್‌ಗಳ ಬದಲಿಗೆ ಎಲ್ಇಡಿ ಬಲ್ಡ್ ಬಳಸಿ

ಅತ್ಯಾಧುನಿಕತೆಯ ಕಾಲದಲ್ಲೂ ಜನರು ಇಂದಿಗೂ ಹಳೆಯ ಬಲ್ಡ್ ಅನ್ನು ಬಳಸುವುದಕ್ಕೆ ಜೋತು ಬಿದ್ದಿರುತ್ತಾರೆ. ಇಂಥ ಅಭ್ಯಾಸಕ್ಕೆ ಇಂದೇ ಪೂರ್ಣವಿರಾಮ ಇಡಿ. ಹಳೆಯ 100 ವ್ಯಾಟ್ ಬಲ್ಬ್‌ಗಳ ಬದಲಿಗೆ ಮಾರುಕಟ್ಟೆಯಲ್ಲಿ ಸಿಗುವ ಎಲ್‌ಇಡಿ ಬಲ್ಬ್‌ಗಳನ್ನು ಬಳಸಿ, ಇಲ್ಲವೇ ಟ್ಯೂಬ್‌ಲೈಟ್‌ಗಳೊಂದಿಗೆ ಬದಲಾಯಿಸಿಕೊಳ್ಳಿ. ಆ ಮೂಲಕ ನೀವು ವಿದ್ಯುತ್ ಬಿಲ್ ಅನ್ನು ಅರ್ಧದಷ್ಟು ಕಡಿಮೆ ಮಾಡಬಹುದು, ಏಕೆಂದರೆ ಹಳೆಯ ಬಲ್ಬ್‌ಗಳು ಹೆಚ್ಚು ವಿದ್ಯುತ್ ಸೆಳೆಯುತ್ತವೆ.

ಎಲೆಕ್ಟ್ರಿಕ್ ಗೀಸರ್ ಬಳಕೆಗೆ ಗುಡ್ ಬಾಯ್ ಹೇಳಿರಿ

ಎಲೆಕ್ಟ್ರಿಕ್ ಗೀಸರ್ ಬಳಕೆಗೆ ಗುಡ್ ಬಾಯ್ ಹೇಳಿರಿ

ಚಳಿಗಾಲದಲ್ಲಿ ಜನರು ಗೀಸರ್ ಅನ್ನು ಬಳಸುವುದು ಸರ್ವೇ ಸಾಮಾನ್ಯ. ಹೀಗಿರುವಾಗ ಎಲೆಕ್ಟ್ರಿಕ್ ಗೀಸರ್ ಬಳಸಿದರೆ, ಚಳಿಗಾಲದಲ್ಲಿ ವಿದ್ಯುತ್ ಬಿಲ್ ಹೆಚ್ಚಾಗುತ್ತದೆ. ಇದರ ಬದಲು ನೀವು ಗ್ಯಾಸ್ ಗೀಸರ್ ಬಳಿಸಿದರೆ, ವಿದ್ಯುತ್ ಬಿಲ್ ಅರ್ಧದಷ್ಟು ಬರುತ್ತದೆ. ಗ್ಯಾಸ್ ಗೀಸರ್ ಸುಲಭವಾಗಿ ಮಾರುಕಟ್ಟೆಯಲ್ಲಿ ಲಭ್ಯವಿರುತ್ತದೆ. ಇದು ಸಾಮಾನ್ಯ ಗೀಸರ್‌ನಂತೆ ಕಾರ್ಯನಿರ್ವಹಿಸುತ್ತದೆ. ಅದನ್ನು ಬಳಸಿದರೆ ಕೆಲವೇ ನಿಮಿಷಗಳಲ್ಲಿ ನೀರನ್ನು ಬಿಸಿ ಮಾಡುತ್ತದೆ. ಇಂಥ ಕೆಲವು ಸಣ್ಣ-ಪುಟ್ಟ ಬದಲಾವಣೆಗಳ ಮೂಲಕ ನೀವು ನಿಮ್ಮ ಮನೆಯ ವಿದ್ಯುತ್ ಬಿಲ್ ಅನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ.

English summary
Simple & Effective Tips to reduce electricity Bill in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X