• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಕ್ಕಳ ಸ್ಕ್ರೀನ್ ಟೈಮ್ ಎಷ್ಟಿರಬೇಕು? ಅದರಲ್ಲಿ ಪೋಷಕರ ಪಾತ್ರವೇನು?

|
Google Oneindia Kannada News

ಅಂತರ್ಜಾಲ ಮಕ್ಕಳ ಮೇಲೆ ಬೀಳುತ್ತಿರುವ ಪರಿಣಾಮ ಅಷ್ಟಿಟ್ಟಲ್ಲ, ಹುಟ್ಟಿ ಕೆಲವು ತಿಂಗಳಾದ ಮಗುವಿಗೆ ಮೊಬೈಲ್ ತೋರಿಸಿದರೆ ಇಷ್ಟವಾಗುತ್ತದೆ, ಕೆಲವು ಮಕ್ಕಳಿಗೆ ವರ್ಷವೂ ತುಂಬಿರುವುದಿಲ್ಲ, ಮೊಬೈಲ್‌ನಲ್ಲಿ ಯೂ ಟ್ಯೂಬ್ ಐಕಾನ್ ಯಾವುದು ಎಂಬುವುದು ಕೂಡ ಗೊತ್ತಿರುತ್ತದೆ. ಬೇರೆ ಎಲ್ಲಾ ಆಟಿಕೆಗಳಿಗಿಂತ ಮಕ್ಕಳಿಗೆ ಮೊಬೈಲ್ ಅಂದರೆ ಅದೇನೋ ಸೆಳೆತ. ಕೆಲ ಪೋಷಕರು ಮಕ್ಕಲು ತುಂಬಾ ಹಠಾ ಹಿಡಿಯುವಾಗ ಒಂದು ಕಡೆ ಸುಮ್ಮನೆ ಕೂರಲಿ ಎಂದು ಮೊಬೈಲ್‌ನಲ್ಲಿ ಮಕ್ಕಳ ಕತೆ, ಗೇಮ್ ಹಾಕಿ ಕೊಟ್ಟು ಬಿಡುತ್ತಾರೆ. ಇದರಿಂದ ಮಗು ಗಂಟೆ-ಗಟ್ಟಲೆ ಮೊಬೈಲ್‌ನಲ್ಲಿ ಕಳೆಯುತ್ತದೆ. ಇದರಿಂದ ನಿಮ್ಮ ಮಕ್ಕಳಲ್ಲಿ ಅಪಾಯಕಾರಿ ಸ್ವಭಾವಗಳು ಬೆಳೆಯಲು ಹೆಚ್ಚಾಗಿ ಮೊಬೈಲ್‌, ಟಿವಿ, ಲ್ಯಾಪ್‌ಟಾಪ್, ಟ್ಯಾಬ್‌ ನೋಡುವುದು ಸಾಕಾಗಿಬಿಡುತ್ತದೆ. ಹಾಗಾದ್ರೆ ಮಕ್ಕಳು ಸ್ಕ್ರೀನಿಂಗ್ ಟೈಮ್ ಎಷ್ಟಿರಬೇಕು? ಅದರಲ್ಲಿ ಪೋಷಕರ ಪಾತ್ರವೇನು? ಯಾವ ವಯಸ್ಸಿನ ಮಕ್ಕಳು ಯಾವ ಸ್ಕ್ರೀನ್ ಉತ್ತಮ? ಇಂತೆಲ್ಲಾ ವಿಚಾರಗಳನ್ನು ತಿಳಿಯಿರಿ.

ಐದು ವಯಸ್ಸಿನೊಳಗಿನ ಮಕ್ಕಳನ್ನು ಸ್ಕ್ರೀನ್ ಟೈಮ್ ಬೆಂಬಲಿಸಲು ಪ್ರಮುಖ ಸಲಹೆಗಳು

*ಪರದೆಯ ಸಮತೋಲಿತ ಬಳಕೆಯು ಮಕ್ಕಳಿಗೆ ತಮ್ಮ ಸುತ್ತಲಿನ ಪ್ರಪಂಚವನ್ನು ಕಲಿಯಲು, ಅನ್ವೇಷಿಸಲು ಮತ್ತು ಸಂವಹನ ಮಾಡಲು ಸಹಾಯ ಮಾಡುತ್ತದೆ.

ಮಕ್ಕಳ ಡಿಜಿಟಲ್ ಬಳಕೆಯ ಬಗ್ಗೆ ಆತಂಕವೇ? ಇದಕ್ಕೆ ತಜ್ಞರ ಸಲಹೆ ಏನು?ಮಕ್ಕಳ ಡಿಜಿಟಲ್ ಬಳಕೆಯ ಬಗ್ಗೆ ಆತಂಕವೇ? ಇದಕ್ಕೆ ತಜ್ಞರ ಸಲಹೆ ಏನು?

*10ರಲ್ಲಿ 6 ಪೋಷಕರು ತಮ್ಮ ಮಕ್ಕಳು ಹೆಚ್ಚು ಅಂತರ್ಜಾಲವನ್ನು ವೀಕ್ಷಿಸುವ ಬಗ್ಗೆ ಯೋಚಿಸುತ್ತಾರೆ. ಇದು ಯಾವ ರೀತಿ ಮಕ್ಕಳ ಮೇಲೆ ಪರಿಣಾಮ ಬೀರಲಿದೆ ಎಂದು ಚಿಂತಿಸುತ್ತಾರೆ. ಹಾಗಂತ ಮಕ್ಕಳನ್ನು ಪರದೆಯಿಂದ ದೂರವಿಡುವುದು ಬೇಡ. ಸ್ಕ್ರೀನ್ ಟೈಮ್ ಸಮತೋಲನ ಕಾಯ್ದುಕೊಳ್ಳುವುದರಿಂದ ಮಕ್ಕಳ ಕಲಿಕೆಗೆ, ಸಂವಹನಕ್ಕೆ ಸಹಾಯವಾಗುತ್ತದೆ.

*3-4 ವರ್ಷದ ಮಕ್ಕಳು ವಾರದಲ್ಲಿ 9ಗಂಟೆ ಯುಟ್ಯೂಬ್ ಗೇಮ್ ನೋಡುವ ಮೂಲಕ ಆನ್‌ಲೈನ್‌ನಲ್ಲಿ ಕಳೆಯುತ್ತಾರೆ. ನಿಮ್ಮ ಮಕ್ಕಳಿಗೆ ಆನ್‌ಲೈನ್‌ನಿಂದ ಪ್ರಯೋಜನ ಪಡೆಯಲು ಕೆಲ ಸರಳವಾದ ಸಲಹೆಗಳಿವೆ.

*ಮಕ್ಕಳಿಗೆ ಅವಶ್ಯಕವಾದ ವಿಚಾರಗಳನ್ನು ಮಾತ್ರ ನೋಡುವಂತೆ ಮಾಡಿ. ನಿಮ್ಮ ಮಕ್ಕಳಿಗೆ ಅಂತರ್ಜಾಲವನ್ನು ವೀಕ್ಷಿಸಲು ಮುಕ್ತ ಅವಕಾಶ ನೀಡಿ. ಆದರೆ ಅದರ ನಿರ್ವಹಣೆ ಟೂಲ್ಸ್ ಅನ್ನು ನೀವು ಬಳಕೆ ಮಾಡಬೇಕು.

*ಮಲಗುವ ಹಾಗೂ ಊಟದ ಸಮಯದಲ್ಲಿ ಅಂತರ್ಜಾಲ ವೀಕ್ಷಣೆಗೆ ಅವಕಾಶ ನೀಡುವುದು ಉತ್ತಮ ಹವ್ಯಾಸವಲ್ಲ.

ಮಕ್ಕಳ ಕೈಲಿ ಯಾವಾಗಲೂ ಮೊಬೈಲ್: ಒಳ್ಳೆಯದೋ, ಕೆಟ್ಟದೋ.. ತಜ್ಞರ ಅಭಿಪ್ರಾಯ ಇಲ್ಲಿದೆಮಕ್ಕಳ ಕೈಲಿ ಯಾವಾಗಲೂ ಮೊಬೈಲ್: ಒಳ್ಳೆಯದೋ, ಕೆಟ್ಟದೋ.. ತಜ್ಞರ ಅಭಿಪ್ರಾಯ ಇಲ್ಲಿದೆ

*ಮಕ್ಕಳನ್ನು ಆನ್‌ಲೈನ್‌ನಲ್ಲಿ ಬೆರೆಯಲು ಬಿಡಿ. ಅವರೊಂದಿಗೆ ಆಡಿ. ಜೊತೆಗೆ ಅವರು ಆನ್‌ಲೈನ್‌ ನಲ್ಲಿ ಏನನ್ನು ವೀಕ್ಷಿಸುತ್ತಿದ್ದಾರೆನ್ನುವ ಬಗ್ಗೆ ಗಮನಹರಿಸಿ. ಇದರ ಸುರಕ್ಷತೆ ಬಗ್ಗೆ ಅವರೊಂದಿಗೆ ಮಾತನಾಡಿ.

*ಮಕ್ಕಳ ವಯಸ್ಸಿಗೆ ತಕ್ಕಂತ ವಿಷಯಗಳನ್ನು ನೋಡಲು ಬಿಡಿ. ಅವರ ಕೌಶಲ್ಯವನ್ನು ಅರಿಯಿರಿ. ಆನ್‌ಲೈನ್ ಸಮಯವನ್ನು ನಿಗದಿಪಡಿಸಿ ಜೊತೆಗೆ ಅವರ ನಡವಳಿಕೆಯನ್ನು ಗಮನಿಸಿ.

5-7 ವಯಸ್ಸಿನ ಮಕ್ಕಳನ್ನು ಸ್ಕ್ರೀನ್ ಟೈಮ್ ಬೆಂಬಲಿಸಲು ಪ್ರಮುಖ ಸಲಹೆಗಳು

*ಮನೆಯಲ್ಲಿ ಮತ್ತು ಶಾಲೆಯಲ್ಲಿ ಸ್ಕ್ರೀನ್ ಟೈಮ್ ಚಿಕ್ಕ ಮಕ್ಕಳ ಜೀವನದ ದೊಡ್ಡ ಭಾಗವಾಗಿರುವುದರಿಂದ, ಇದನ್ನು ಹೊರತಾಗಿರಲು ಸಾಧ್ಯವಿಲ್ಲ. ಪ್ರಮುಖ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಮತ್ತು ಪರದೆಯ ಬಳಕೆಯಿಂದ ಪ್ರಯೋಜನವನ್ನು ಪಡೆಯವುದು ಇಂದಿಗೆ ಬಹುಮುಖ್ಯವಾಗಿದೆ.

*ಒಂದು ಮಗುವಿಗೆ ಶಾಲೆಯ ಬಳಿಕ ವಿದ್ಯುನ್ಮಾನ ಸಾಧನಗಳು (ಸ್ಮಾರ್ಟ್‌ಫೋನ್, ಟ್ಯಾಬ್ಲೆಟ್, ಕಂಪ್ಯೂಟರ್ ಅಥವಾ ಟಿವಿ) ಜೀವನದ ಒಂದು ದೊಡ್ಡ ಭಾಗವಾಗಿರುತ್ತವೆ. ಹೀಗಾಗಿ ಶಾಲೆ ಹಾಗೂ ಆನ್‌ಲೈನ್ ಕಲಿಕೆಯಲ್ಲಿ ಸಮತೋಲನ ಕಾಯ್ದುಕೊಳ್ಳುವ ಮೂಲಕ ಪ್ರಯೋಜನ ಪಡೆಯುವುದು ಉತ್ತಮ.

*ಯೂಟ್ಯೂಬ್‌ನಲ್ಲಿ ವಿಡಿಯೋ ಹಾಗೂ ಆಟ ಆಡುವ ಮೂಲಕ 5ರಿಂದ 7ವಯಸ್ಸಿನ 80%ರಷ್ಟು ಮಕ್ಕಳು ವಾರದಲ್ಲಿ 9ಗಂಟೆ ಆನ್‌ಲೈನ್‌ನಲ್ಲಿ ಕಳೆಯುತ್ತಾರೆ.

Screen Time for Kids: Recommendations For Parents in Kannada

*ಆನ್‌ಲೈನ್ ಸೃಜನಾತ್ಮಕತೆಗೆ ಉತ್ತಮ ವೇದಿಕೆಯಾಗಿದ್ದರೂ ಮಕ್ಕಳಿಗೆ ಹೋಮ್‌ ವರ್ಕ್ ಮಾಡಲು ತೊಂದರೆ ನೀಡುತ್ತದೆ ಹಾಗೂ ಕುಟುಂಬದೊಂದಿಗಿನ ಸಮಯವನ್ನು ಹಾಳು ಮಾಡುತ್ತದೆ.

*ಮಕ್ಕಳಿಗೆ ಶಾಲೆಯ ಆರಂಭಿಕ ದಿನಗಳಲ್ಲಿ ಆನ್‌ಲೈನ್‌ನ ಪ್ರಯೋಜನಗಳನ್ನು ಪಡೆಯಲು ಕೆಲ ಯೋಜನೆಗಳನ್ನು ಮಾಡಬಹುದು.

*ಮಕ್ಕಳಿಗೆ ವಿದ್ಯುನ್ಮಾನ ಸಾಧನಗಳ ಬಳಕೆಯಿಂದಾಗುವ ಪ್ರಯೋಜನಗಳನ್ನು ಮೊದಲು ನೀವು ಒಪ್ಪಿಕೊಳ್ಳಬೇಕು. ಅದರಂತೆ ಮಕ್ಕಳಿಗೆ ಅದರ ಪ್ರಯೋಜನೆ ನೀಡಲು ಸಹಕರಿಸಬೇಕು. ಆದರೆ ಇದರ ಸೀಮಿತಗೊಳಿಸುವ ಉಪಕರಣಗಳನ್ನು ಬಳಕೆ ಮಾಡಬೇಕು. ಇದರಿಂದ ಆರೋಗ್ಯದಲ್ಲಿ ಸಮತೋಲನ ಕಾಯ್ದುಕೊಳ್ಳಬಹುದು.

ಸ್ಕ್ರೀನ್ ಮುಂದೆ ಮಕ್ಕಳು ಕಳೆಯುವ ಸಮಯವೆಷ್ಟು ಗೊತ್ತಾ..?ಸ್ಕ್ರೀನ್ ಮುಂದೆ ಮಕ್ಕಳು ಕಳೆಯುವ ಸಮಯವೆಷ್ಟು ಗೊತ್ತಾ..?

*ಮಕ್ಕಳ ಆನ್‌ಲೈನ್ ಪ್ರಪಂಚದಲ್ಲಿ ನೀವು ನಿರತರಾಗಿ. ಮಕ್ಕಳು ಅದರಲ್ಲಿ ತೊಡಗಿಕೊಳ್ಳುವುದನ್ನು ನೀವು ಗೌರವಿಸಿ. ಆಗ ಅದು ಇನ್ನೂ ಪ್ರಭಾವಿತವಾಗಿರುತ್ತದೆ. ಮಕ್ಕಳು ನೋಡುವ ವಿಷಯಗಳ ಬಗ್ಗೆ ಪ್ರಶ್ನೆ ಮಾಡಿ, ಅವರಿಂದ ಮಕ್ಕಳು ಪ್ರತಿಕ್ರಿಯೆ ಪಡೆಯಲು ಪ್ರಯತ್ನಿಸಿ.

*ಇಂಟರ್‌ನೆಟ್‌ನಿಂದಾಗುವ ಪ್ರಯೋಜನ ಹಾಗೂ ತೊಂದರೆಗಳ ಬಗ್ಗೆ ಅವರಿಗೆ ತಿಳಿ ಹೇಳಿ. ಬಳಿಕೆ ಅವರಿಗೆ ಅವರ ಅಭಿಪ್ರಾಯವನ್ನು ತಿಳಿಸಲು ಹೇಳಿ. ಇದರಿಂದ ಅವರು ಇಂಟರ್‌ನೆಟ್ ಅರಿತುಕೊಳ್ಳುವ ಬಗ್ಗೆ ನಿಮಗೆ ಅರ್ಥವಾಗುತ್ತದೆ ಮತ್ತು ಅವರ ಕೌಶಲ್ಯ ತಿಳಿಯುತ್ತದೆ.

*ಆನ್‌ಲೈನ್ ಬಳಕೆಯ ಸುಲಭ ವಿಧಾನಗಳನ್ನು ಮಕ್ಕಳಿಗೆ ತಿಳಿಸಿ. ಜೊತೆಗೆ ಆನ್‌ಲೈನ್ ವೀಕ್ಷಣೆ ಮಿತಿ ಮೀರದಂತೆ ಮೊದಲು ನಿಮಗೆ ನೀವು ಬೌಂಡರಿಯನ್ನು ಹಾಕಿ. ಇದನ್ನು ಮಕ್ಕಳು ಸುಲಭವಾಗಿ ಪಾಲಿಸಲು ಸಾಧ್ಯವಾಗುತ್ತದೆ.(ಪೋಷಕರೇ ಮನೆಯಲ್ಲಿ ಮಕ್ಕಳ ಮುಂದೆ ಹೆಚ್ಚು ಕಾಲ ಮೊಬೈಲ್‌ನಲ್ಲಿ ಕಳೆಯುತ್ತಾರೆ)

*ನಿಮ್ಮ ಮಕ್ಕಳ ವಿದ್ಯುನ್ಮಾನ ಸಾಧನಗಳಲ್ಲಿ ನಿರ್ಧಿಷ್ಟ ಚಟುವಟಿಕೆಗಳನ್ನು ಮಾತ್ರ ಸೆಟ್ ಮಾಡಿ.

7-11 ವಯಸ್ಸಿನ ಮಕ್ಕಳನ್ನು ಸ್ಕ್ರೀನ್ ಟೈಮ್ ಬೆಂಬಲಿಸಲು ಪ್ರಮುಖ ಸಲಹೆಗಳು

*ಈ ವಯಸ್ಸಿನಲ್ಲಿ ಮಕ್ಕಳು ಆನ್‌ಲೈನ್‌ನಲ್ಲಿ ಹೆಚ್ಚು ಸಕ್ರಿಯರಾಗಲು ಪ್ರಾರಂಭಿಸುತ್ತಾರೆ. ಆದ್ದರಿಂದ ಅವರು ಆನ್‌ಲೈನ್‌ನಲ್ಲಿ ಕಳೆಯುವ ಸಮಯ ಮತ್ತು ಆಫ್‌ಲೈನ್‌ನಲ್ಲಿ ಕಳೆಯುವ ಸಮಯದಲ್ಲಿ ಸಮತೋಲನ ಸಾಧಿಸಲು ಅವರನ್ನು ಸಜ್ಜುಗೊಳಿಸುವುದು ಮುಖ್ಯವಾಗಿದೆ.

*7-11 ವಯಸ್ಸಿನ ಮಕ್ಕಳು ಹೆಚ್ಚು ಆನ್‌ಲೈನ್‌ನಲ್ಲಿ ಸಕ್ರಿಯರಾಗಿರುತ್ತಾರೆ. ಈ ವೇಳೆ ಶಾಲೆಯ ಸಮಯ ಹಾಗೂ ಆನ್‌ಲೈನ್ ಇವೆರಡರೊಂದಿಗೆ ಮಕ್ಕಳ ಆರೋಗ್ಯ ಕಾಯ್ದುಕೊಳ್ಳುವುದು ಮುಖ್ಯವಾಗಿರುತ್ತದೆ.

*7-11 ವಯಸ್ಸಿನ 80%ರಷ್ಟು ಮಕ್ಕಳು ವಾರದಲ್ಲಿ 14ಗಂಟೆಗಳ ಕಾಲ ಆನ್‌ಲೈನ್‌ನಲ್ಲಿ ಕಳೆಯುತ್ತಾರೆ.

*ಪರದೆಯ ಸಮಯವು ಸೃಜನಶೀಲತೆಯನ್ನು ಪ್ರದರ್ಶಿಸಲು ಉತ್ತಮ ಅವಕಾಶವನ್ನು ನೀಡುತ್ತದೆ ಆದರೆ ಜಡ ಜೀವನಶೈಲಿಯ ಕಡೆಗೆ ಮಕ್ಕಳನ್ನು ಕರೆದೊಯ್ಯಬಹುದು.

*ಶಾಲೆಯನ್ನು ಪ್ರಾರಂಭಿಸುವ ಮಕ್ಕಳಿಗೆ ಪರದೆಯ ಸಮಯದಿಂದ ಪ್ರಯೋಜನವನ್ನು ಪಡೆಯಲು ಸಹಾಯ ಮಾಡಲು ನೀವು ಮಾಡಬಹುದಾದ ಕೆಲವು ಸರಳ ವಿಷಯಗಳಿವೆ.

*ಡಿಜಿಟಲ್ ಸಮಯವನ್ನು ಒಟ್ಟಿಗೆ ಕಳಿಯಿರಿ. ಮನೆಯಲ್ಲಿ ವಿದ್ಯುನ್ಮಾನ ಸಾಧನ ಮುಕ್ತ ವಲಯಗಳನ್ನು ರಚಿಸಿ ಮತ್ತು ಆನ್‌ಲೈನ್ ಸಮಯವನ್ನು ಸೀಮಿತಗೊಳಿಸುವ ಸಾಧನಗಳನ್ನು ಬಳಸಿ.

*ನಿಮ್ಮನ್ನು ಡಿಜಿಟಲ್ ಲೈಫ್ ನಲ್ಲಿ ತೊಡಗಿಸಿಕೊಳ್ಳಿ. ಇದು ನಿಮ್ಮಿಬ್ಬರ ನಡುವೆ ಗೌರವವನ್ನು ಬೆಳೆಸುತ್ತದೆ. ಡಿಜಿಟಲ್ ಪ್ರಪಂಚದ ಮೇಲೆ ಪ್ರಭಾವ ಬೀರಲು ನಿಮಗೆ ಸಹಾಯ ಮಾಡುತ್ತದೆ.

*ಇಂಟರ್ನೆಟ್ ಬಳಸುವ ಅಪಾಯಗಳು ಮತ್ತು ಪ್ರಯೋಜನಗಳನ್ನು ಅರ್ಥಮಾಡಿಕೊಳ್ಳಲು ಅವರಿಗೆ ಸಹಾಯ ಮಾಡಿ ಮತ್ತು ಅವರ ಕೌಶಲ್ಯಗಳನ್ನು ಹೆಚ್ಚಿಸಲು ಅವರಿಗೆ ಮಾರ್ಗದರ್ಶನ ನೀಡಿ.

*ವಯಸ್ಸಿಗೆ ಸೂಕ್ತವಾದ ವಿಷಯವನ್ನು ತಿಳಿಯಲು ಮತ್ತು ಆನ್‌ಲೈನ್‌ನಲ್ಲಿ ನಿರ್ದಿಷ್ಟ ಚಟುವಟಿಕೆಗಳಲ್ಲಿ ಅವರು ಕಳೆಯುವ ಸಮಯವನ್ನು ಪರಿಶೀಲಿಸಲು ನಿಮ್ಮ ಮಗುವಿನ ಸಾಧನದಲ್ಲಿ ಪರಿಕರಗಳನ್ನು ಬಳಸಿ.

*ಬುದ್ದಿಹೀನ ಚಟುವಟಿಕೆಗಳನ್ನು ಟೀಕಿಸಲು ಅವರಿಗೆ ಸಹಾಯ ಮಾಡಿ. ನೈಜ ಜಗತ್ತಿನಲ್ಲಿ ಅವರು ಇಷ್ಟಪಡುವದನ್ನು ಅಭಿನಂದಿಸುವ ಮತ್ತು ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವ ಚಟುವಟಿಕೆಗಳನ್ನು ಪ್ರೋತ್ಸಾಹಿಸಿ.

11-14 ವಯಸ್ಸಿನ ಮಕ್ಕಳನ್ನು ಸ್ಕ್ರೀನಿಂಗ್ ಟೈಮ್ ಬೆಂಬಲಿಸಲು ಪ್ರಮುಖ ಸಲಹೆಗಳು

*ಮಕ್ಕಳು ಮಾಧ್ಯಮಿಕ ಶಾಲೆಯನ್ನು ಪ್ರಾರಂಭಿಸಿದಾಗ ಅವರ ಸ್ವಾತಂತ್ರ್ಯದ ಲಾಭವನ್ನು ಪಡೆದುಕೊಳ್ಳುವುದರಿಂದ, ಅವರು ತಮ್ಮ ಸಾಧನಗಳಲ್ಲಿ ಹೆಚ್ಚಿನ ಸಮಯವನ್ನು ಕಳೆಯುವ ಸಾಧ್ಯತೆಯಿದೆ. ಅವರ ಆನ್‌ಲೈನ್ ಸಮಯವನ್ನು ಹೇಗೆ ನಿರ್ವಹಿಸುವುದು ಮತ್ತು ಅವರ ಜೀವನದ ಆನ್ ಮತ್ತು ಆಫ್‌ಲೈನ್ ನಡುವೆ ಆರೋಗ್ಯಕರ ಸಮತೋಲನವನ್ನು ಕಂಡುಕೊಳ್ಳುವುದು ಹೇಗೆ ಎಂಬುದರ ಕುರಿತು ಅವರೊಂದಿಗೆ ಮಾತನಾಡಲು ಇದು ನಿರ್ಣಾಯಕ ಸಮಯವಾಗಿದೆ.

*12-15 ವಯಸ್ಸಿನ ಮಕ್ಕಳು ವಾರದಲ್ಲಿ 20ಗಂಟೆ ಆನ್‌ಲೈನ್‌ನಲ್ಲಿ ಸಮಯ ಕಳೆಯುತ್ತಾರೆ.

*ಅವರ ಸ್ಮಾರ್ಟ್‌ಫೋನ್ ಈಗ ಎಲ್ಲಾ ಸಮಯದಲ್ಲೂ ಸಂಪರ್ಕದಲ್ಲಿರಲು ಬಹುಕ್ರಿಯಾತ್ಮಕ ಸಾಧನವಾಗಿದರುತ್ತದೆ.

*11-14 ವಯಸ್ಸಿನ ಮಕ್ಕಳ 50% ಪೋಷಕರು ಆನ್‌ಲೈನ್‌ನ್ನು ಅನುಮತಿಸಲು ಹಿಂಜರಿಯುತ್ತಾರೆ. ಜೊತೆಗೆ ಅವರ ಮಗು ಅವರಿಂದ ದೂರವಾಗಲು ಭಾವಿಸುತ್ತಾರೆ.

*ಮಕ್ಕಳಿಗೆ ಆನ್‌ಲೈನ್ ಸಮಯದಿಂದ ಪ್ರಯೋಜನ ಪಡೆಯಲು, ಅವರಿಗೆ ಸಹಾಯ ಮಾಡಲು ನೀವು ಮಾಡಬಹುದಾದ ಕೆಲವು ಸರಳ ವಿಷಯಗಳಿವೆ.

*ನೀವು ಆನ್‌ಲೈನ್‌ನಲ್ಲಿ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬುದನ್ನು ನಿರ್ಧರಿಸಿ. ಸಮಯಕ್ಕೆ ಆದ್ಯತೆ ನೀಡಿ. ಅದರ ಬಗ್ಗೆ ಮಕ್ಕಳಿಗೆ ತಿಳಿ ಹೇಳಿ. ನಿದ್ರೆ, ಮುಖಾಮುಖಿ ಚರ್ಚೆ ಮತ್ತು ಕುಟುಂಬದೊಂದಿಗಿನ ಸಮಯವನ್ನು ಮಕ್ಕಳೊಂದಿಗೆ ಆರೋಗ್ಯಕರವಾಗಿ ಸಮತೋಲನದಿಂದ ಕಾಪಾಡಿ.

*ನಿಮ್ಮನ್ನು ಮಕ್ಕಳೊಂದಿಗೆ ಡಿಜಿಟಲ್ ಲೈಫ್ ನಲ್ಲಿ ತೊಡಗಿಸಿಕೊಳ್ಳಿ. ಇದು ನಿಮ್ಮಿಬ್ಬರ ನಡುವೆ ಗೌರವವನ್ನು ಬೆಳೆಸುತ್ತದೆ. ಡಿಜಿಟಲ್ ಪ್ರಪಂಚದ ಮೇಲೆ ಪ್ರಭಾವ ಬೀರಲು ನಿಮಗೆ ಸಹಾಯ ಮಾಡುತ್ತದೆ.

*ಆನ್‌ಲೈನ್ ಮತ್ತು ಆಫ್‌ಲೈನ್ ಚಟುವಟಿಕೆಗಳಿಗೆ ಸಮತೋಲನದ ಪ್ರಾಮುಖ್ಯತೆಯನ್ನು ವಿವರಿಸಿ. ಆನ್‌ಲೈನ್ ಸಮಸ್ಯೆಗಳನ್ನು ಹೇಗೆ ಎದುರಿಸುವುದು ಎಂಬುದನ್ನು ಚರ್ಚಿಸಿ.

*ವಯಸ್ಸಿಗೆ ಸೂಕ್ತವಾದ ವಿಷಯವನ್ನು ತಿಳಿಯಲು ಮತ್ತು ಆನ್‌ಲೈನ್‌ನಲ್ಲಿ ನಿರ್ದಿಷ್ಟ ಚಟುವಟಿಕೆಗಳಲ್ಲಿ ಅವರು ಕಲೆಯುವ ಸಮಯವನ್ನು ಪರಿಶೀಲಿಸಲು ನಿಮ್ಮ ಮಗುವಿನ ಸಾಧನದಲ್ಲಿ ಪರಿಕರಗಳನ್ನು(ಮೊಬೈಲ್, ಟ್ಯಾಬ್ ಹಿಸ್ಟ್ರಿ) ಬಳಸಿ.

14+ ವಯಸ್ಸಿನ ಮಕ್ಕಳನ್ನು ಸ್ಕ್ರೀನ್ ಟೈಮ್ ಬೆಂಬಲಿಸಲು ಪ್ರಮುಖ ಸಲಹೆಗಳು

*ಸ್ಮಾರ್ಟ್‌ಫೋನ್‌ಗಳು ಹದಿಹರೆಯದವರ ದೈನಂದಿನ ದಿನಚರಿಯಲ್ಲಿ ಅವಿಭಾಜ್ಯವಲ್ಲದಿದ್ದರೂ ಬಹುಮುಖ್ಯಪಾತ್ರ ವಹಿಸುತ್ತದೆ. Snapchat ನಲ್ಲಿ ಏನನ್ನಾದರೂ ಕಳುಹಿಸಲು, Twitter ನಲ್ಲಿ ಸುದ್ದಿಗಳನ್ನು ಪಡೆಯಲು ಅಥವಾ ಸಾಮಾಜಿಕ ಮಾಧ್ಯಮದಲ್ಲಿ ಲೈವ್ ಸ್ಟ್ರೀಮಿಂಗ್ ನಂತಹ ಚಟುವಟಿಕೆಗಳಿಂದಾಗಿ ಹದಿಹರೆಯದವರನ್ನು ಪರದೆಯಿಂದ ದೂರವಿಡುವುದು ಪೋಷಕರಿಗೆ ಕಷ್ಟಕರ.

*ಮಕ್ಕಳ ದೈನಂದಿನ ದಿನಚರಿಯಲ್ಲಿ ಸ್ಮಾರ್ಟ್‌ಫೋನ್‌, ಟ್ಯಾಬ್, ಲ್ಯಾಪ್‌ಟಾಪ್‌ಗಳು ಪ್ರಮುಖಪಾತ್ರ ವಹಿಸುತ್ತವೆ. ಹೀಗಾಗಿ ಹದಿಹರೆಯದವರನ್ನು ಆನ್‌ಲೈನ್‌ನಿಂದ ದೂರವಿಡುವುದು ಕಷ್ಟಕರವಾಗಿರುತ್ತದೆ. ಆದರೆ ಪೋಷಕರು ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಆರೋಗ್ಯಕರ ಸಮತೋಲನ ಕಾಯ್ದುಕೊಳ್ಳುವುದು ಮುಖ್ಯ.

*ಮಕ್ಕಳ ಆನ್‌ಲೈನ್ ಸಮಯವನ್ನು ಸ್ವಯಂ-ನಿಯಂತ್ರಿಸಲು ಸಾಧನಗಳೊಂದಿಗೆ ಸಜ್ಜುಗೊಳಿಸಿ ಮತ್ತು ಅದು ಅವರ ಯೋಗಕ್ಷೇಮದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂದು ತಿಳಿದುಕೊಳ್ಳಿ.

*ಮಕ್ಕಳಿಗೆ ಆನ್‌ಲೈನ್ ಸಮಯದಿಂದ ಪ್ರಯೋಜನ ಪಡೆಯಲು, ಅವರಿಗೆ ಸಹಾಯ ಮಾಡಲು ನೀವು ಮಾಡಬಹುದಾದ ಕೆಲವು ಸರಳ ವಿಷಯಗಳಿವೆ.

*ಕೆಲವು ಸರಳ ನಿಯಮಗಳನ್ನು ಅನುಸರಿಸಲು ಅವರಿಗೆ ಸಹಾಯ ಮಾಡಿ. ನಿದ್ರೆ ಮತ್ತು ಕುಟುಂಬದ ಸಮಯಕ್ಕೆ ಆದ್ಯತೆ ನೀಡಿ ಮತ್ತು ಅದಕ್ಕೆ ನೀವೇ ಉದಾಹರಣೆಯಾಗಿರಿ.

*ನಿಮ್ಮನ್ನು ಮಕ್ಕಳೊಂದಿಗೆ ಡಿಜಿಟಲ್ ಲೈಫ್ ನಲ್ಲಿ ತೊಡಗಿಸಿಕೊಳ್ಳಿ. ಇದು ನಿಮ್ಮಿಬ್ಬರ ನಡುವೆ ಗೌರವವನ್ನು ಬೆಳೆಸುತ್ತದೆ. ಡಿಜಿಟಲ್ ಪ್ರಪಂಚದ ಮೇಲೆ ಪ್ರಭಾವ ಬೀರಲು ನಿಮಗೆ ಸಹಾಯ ಮಾಡುತ್ತದೆ.

*ಆನ್‌ಲೈನ್ ಅಪಾಯಗಳ ಬಗ್ಗೆ ಮುಕ್ತವಾಗಿರಿ ಮತ್ತು ಪ್ರಾಮಾಣಿಕವಾಗಿರಿ. ಅತಿಯಾಗಿ ಪ್ರತಿಕ್ರಿಯಿಸಬೇಡಿ, ಇದರ ಬಗ್ಗೆ ಮುಕ್ತ ಸಂವಾದವನ್ನು ಇಟ್ಟುಕೊಳ್ಳುವುದು ಮುಖ್ಯ.

*ಮಕ್ಕಳು ಆನ್‌ಲೈನ್‌ನಲ್ಲಿ ಏನನ್ನು ನೋಡುತ್ತಾರೆ ಮತ್ತು ಏನನ್ನು ಕಲಿಯುತ್ತಾರೆ ಎನ್ನುವ ಬಗ್ಗೆ ಗೌಪ್ಯತೆ ಸೆಟ್ಟಿಂಗ್‌ಗಳ ಮೂಲಕ ತಿಳಿಯಿರಿ. ಜೊತೆಗೆ ಅವರು ಏನನ್ನು ಹಂಚಿಕೊಳ್ಳುತ್ತಾರೆ ಎಂಬುದರ ಮೇಲೂ ನೀವೂ ನಿಗಾ ವಹಿಸಬೇಕು.

*ಬುದ್ದಿಹೀನ ಸ್ಕ್ರೋಲಿಂಗ್ ಅನ್ನು ತಪ್ಪಿಸಲು ಮತ್ತು ನಕಲಿ ಸುದ್ದಿಗಳಿಗೆ ಬಲಿಯಾಗುವುದನ್ನು ತಪ್ಪಿಸಲು ಅವರು ಬಳಸುವ ಮಾಧ್ಯಮ ಮತ್ತು ಪ್ಲಾಟ್‌ಫಾರ್ಮ್‌ಗಳನ್ನು ಟೀಕಿಸಲು ಅವರಿಗೆ ಸಹಾಯ ಮಾಡಿ. ನೈಜ ಜಗತ್ತಿನಲ್ಲಿ ಅವರು ಇಷ್ಟಪಡುವದನ್ನು ಅಭಿನಂದಿಸುವ ಮತ್ತು ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವ ಚಟುವಟಿಕೆಗಳನ್ನು ಪ್ರೋತ್ಸಾಹಿಸಿ.

English summary
Parents and screen time: What parents can do: Instead of being the one to enforce strict rules on things like screen time, help your kids create their own boundaries.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X