ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2025ರೊಳಗೆ ಶಾಲಾ ದಾಖಲಾತಿ ಇಳಿಕೆ! ಮಕ್ಕಳ ಜನನ ಕಡಿಮೆ ಆಗುತ್ತಾ?

|
Google Oneindia Kannada News

ದೇಶದಲ್ಲಿ ಮಕ್ಕಳ ಜನಸಂಖ್ಯೆಯ ಬೆಳವಣಿಗೆ ದರ ಕುಸಿತದಿಂದ ಪ್ರಾಥಮಿಕ ಶಾಲೆಗಳಲ್ಲಿ ದಾಖಲಾತಿ ವೇಗವಾಗಿ ಕುಸಿಯುತ್ತಿದೆ ಎಂದು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ಹೇಳಿದೆ. 2011ರಿಂದ 1ರಿಂದ 5ತರಗತಿಗಳಲ್ಲಿ ದಾಖಲಾತಿ ಕಡಿಮೆಯಾಗಲು ಪ್ರಾರಂಭಿಸಿತು. ಈ ಪ್ರವೃತ್ತಿಯು 2025ರವರೆಗೆ ಮುಂದುವರಿಯುವ ನಿರೀಕ್ಷೆಯಿದೆ.

6ರಿಂದ ಹದಿನಾರು(16) ವರ್ಷದೊಳಗಿನ ಜನಸಂಖ್ಯೆಯಲ್ಲಿನ ಕುಸಿತದಿಂದಾಗಿ 2025ರ ವೇಳೆಗೆ ಶಾಲಾ ದಾಖಲಾತಿ ಎಲ್ಲಾ ಹಂತಗಳಲ್ಲಿ ಕುಸಿಯುವ ನಿರೀಕ್ಷೆಯಿದೆ ಎಂದು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ಗುರುವಾರ ಬಿಡುಗಡೆ ಮಾಡಿದ ಅಧ್ಯಯನವು ಸೂಚಿಸಿದೆ.

ದೇಶದಲ್ಲಿ ಮಕ್ಕಳ ಜನಸಂಖ್ಯೆಯ ಬೆಳವಣಿಗೆ ದರ ಕುಸಿತದಿಂದ ಪ್ರಾಥಮಿಕ ಶಾಲೆಗಳಲ್ಲಿ ದಾಖಲಾತಿ ವೇಗವಾಗಿ ಕುಸಿಯುತ್ತಿದೆ ಎಂದು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ಹೇಳಿದೆ. 2011 ರಿಂದ 1ರಿಂದ 5ನೇ ತರಗತಿಗಳಲ್ಲಿ ದಾಖಲಾತಿ ಕಡಿಮೆಯಾಗಲು ಪ್ರಾರಂಭಿಸಿತು. ಈ ಪ್ರವೃತ್ತಿಯು 2025ರವರೆಗೆ ಮುಂದುವರಿಯುವ ನಿರೀಕ್ಷೆಯಿದೆ.

 ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ ವರದಿ

ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ ವರದಿ

ಎನ್‌ಸಿಇಆರ್‌ಟಿ ಬಿಡುಗಡೆ ಮಾಡಿದ ಪ್ರೊಜೆಕ್ಷನ್ ಮತ್ತು ಟ್ರೆಂಡ್ಸ್ ವರದಿಯಲ್ಲಿ ಈ ಅಂಕಿ-ಅಂಶಗಳನ್ನು ಬಹಿರಂಗಪಡಿಸಲಾಗಿದೆ. 2011ರಿಂದ ಪ್ರಾಥಮಿಕ ಹಂತದಲ್ಲಿ ವಿದ್ಯಾರ್ಥಿಗಳ ದಾಖಲಾತಿ ಕಡಿಮೆಯಾಗಿದೆ ಎಂದು ವರದಿ ಹೇಳಿದೆ. 2016ರಲ್ಲಿ ಉನ್ನತ ಪ್ರಾಥಮಿಕ (6 ರಿಂದ 8ನೇ ತರಗತಿಗಳು) ದಾಖಲಾತಿಗಳು ಮತ್ತು 2019ರಲ್ಲಿ ದ್ವಿತೀಯ ಹಂತದ (9ರಿಂದ 10ನೇ ತರಗತಿಗಳು) ದಾಖಲಾತಿಗಳು ಕುಸಿತವನ್ನು ದಾಖಲಿಸಿವೆ.

 2011ರಿಂದ 2025ರ ನಡುವೆ ದಾಖಲಾತಿ 14.37% ಇಳಿಕೆ?

2011ರಿಂದ 2025ರ ನಡುವೆ ದಾಖಲಾತಿ 14.37% ಇಳಿಕೆ?

ಈ ಅವಧಿಯಲ್ಲಿ ಶೇ.13.28ರಷ್ಟು ಹುಡುಗರು ಮತ್ತು ಶೇ.15.54ರಷ್ಟು ಹುಡುಗಿಯರ ದಾಖಲಾತಿ ಕಡಿಮೆಯಾಗಬಹುದು. 2016ರಿಂದ 2025ರವರೆಗೆ ಉನ್ನತ ಪ್ರಾಥಮಿಕ ಹಂತದಲ್ಲಿ ದಾಖಲಾತಿಯು ಶೇಕಡಾ 9.47 ರಷ್ಟು ಕಡಿಮೆಯಾಗುವ ನಿರೀಕ್ಷೆಯಿದೆ. ಇವರಲ್ಲಿ ಶೇಕಡಾ 8.07ರಷ್ಟು ಹುಡುಗರು ಮತ್ತು ಶೇಕಡಾ 10.94 ರಷ್ಟು ಹುಡುಗಿಯರು. 1991 ಮತ್ತು 2011ರ ನಡುವೆ, ಒಟ್ಟು ಜನಸಂಖ್ಯೆಯಲ್ಲಿ 0-6 ವರ್ಷ ವಯಸ್ಸಿನ ಜನಸಂಖ್ಯೆಯ ಪ್ರಮಾಣವು ಶೇಕಡಾ 18 ರಿಂದ 13.12ಕ್ಕೆ ಇಳಿದಿದೆ ಎಂದು ವರದಿ ಹೇಳಿದೆ. ಅದರ ಪರಿಣಾಮ ದಾಖಲಾತಿ ಮೇಲೆ ಕಂಡುಬಂದಿದೆ. ಎಸ್‌ಸಿ ಮತ್ತು ಎಸ್‌ಟಿ ವಿದ್ಯಾರ್ಥಿಗಳ ದಾಖಲಾತಿಯಲ್ಲಿ ಕುಸಿತವು 1990 ರಲ್ಲಿ ಪ್ರಾರಂಭವಾಯಿತು. ವರದಿ ಪ್ರಕಾರ, 2011ರಿಂದ 2016ರ ನಡುವೆ ಎಸ್‌ಸಿ ಮಕ್ಕಳ ದಾಖಲಾತಿಯಲ್ಲಿ ಶೇ.5.27 ಮತ್ತು ಎಸ್‌ಟಿ ವಿದ್ಯಾರ್ಥಿಗಳ ದಾಖಲಾತಿಯಲ್ಲಿ ಶೇ.12.20ರಷ್ಟು ಕುಸಿತವಾಗಿದೆ.

 ದಾಖಲಾತಿಗಳು 1950-2016ರ ನಡುವೆ 900% ಹೆಚ್ಚಳವಿತ್ತು!

ದಾಖಲಾತಿಗಳು 1950-2016ರ ನಡುವೆ 900% ಹೆಚ್ಚಳವಿತ್ತು!

ದೇಶದಲ್ಲಿ 2.38 ಕೋಟಿ ವಿದ್ಯಾರ್ಥಿಗಳು ಮತ್ತು 2,171 ಶಾಲೆಗಳಿದ್ದವು ಆದರೆ, ಮುಂದಿನ ದಿನಗಳಲ್ಲಿ ಇದು ಕಡಿಮೆಯಾಗಲಿದೆ. 1ರಿಂದ 10ನೇ ತರಗತಿಗಳ ದಾಖಲಾತಿಯು 1950 ಮತ್ತು 2016ರ ನಡುವೆ 900 ಪ್ರತಿಶತದಷ್ಟು ಹೆಚ್ಚಳವನ್ನು ದಾಖಲಿಸಿದೆ. ಇನ್ನು ವಿದ್ಯಾರ್ಥಿನಿಯರ ದಾಖಲಾತಿಯಲ್ಲಿ 1,000 ಪ್ರತಿಶತದಷ್ಟು ಹೆಚ್ಚಳವಾಗಿದೆ. ಎನ್‌ಸಿಇಆರ್‌ಟಿ ವರದಿಯು ಶಿಕ್ಷಣ ಸಚಿವಾಲಯವು ಪ್ರಕಟಿಸಿದ ಶಿಕ್ಷಣ ಅಂಕಿ-ಅಂಶಗಳು, ಕೌನ್ಸಿಲ್ ಸ್ವತಃ ನಡೆಸಿದ ಅಖಿಲ ಭಾರತ ಶಾಲಾ ಶಿಕ್ಷಣ ಸಮೀಕ್ಷೆ ಮತ್ತು ಶಿಕ್ಷಣ ಸಚಿವಾಲಯವು ಸಂಗ್ರಹಿಸಿದ ಮತ್ತು 20 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡಿರುವ ಶಿಕ್ಷಣಕ್ಕಾಗಿ ಏಕೀಕೃತ ಜಿಲ್ಲಾ ಮಾಹಿತಿ ವ್ಯವಸ್ಥೆ (ಯುಡಿಐಎಸ್‌ಇ) ಡೇಟಾವನ್ನು ಉಲ್ಲೇಖಿಸಿದೆ.

 ಈ ವರದಿಯ ಉದ್ದೇಶವೇನು?

ಈ ವರದಿಯ ಉದ್ದೇಶವೇನು?

NCERT 2025 ರವರೆಗೆ ಶಾಲೆಗಳಲ್ಲಿ ದಾಖಲಾತಿಯನ್ನು ಅಧ್ಯಯನ ಮಾಡಿದೆ. ಇದು ಶಾಲೆಗಳಿಗೆ ಸಂಬಂಧಿಸಿದ ನೀತಿ ನಿರೂಪಣೆ, ಹೂಡಿಕೆ ನಿರ್ಧಾರಗಳಿಗೆ ಸಹಾಯ ಮಾಡುತ್ತದೆ. ಈ ಅಧ್ಯಯನದ ಆಧಾರದ ಮೇಲೆ ಹೊಸ ಶಾಲೆಗಳನ್ನು ತೆರೆಯುವುದು, ಶಾಲೆಗಳ ಮೇಲ್ದರ್ಜೆಗೆ ಏರಿಸುವುದು ಮತ್ತು ಶಿಕ್ಷಕರ ನೇಮಕದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು

English summary
2025: School Enrollment Down! Are you having fewer children Check more details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X