ಇಸ್ರೋ ಹೊಸ ರಾಕೆಟ್ ವಿಫಲ; ತಪ್ಪು ಕಕ್ಷೆಗೆ ಸೇರಿದ ಸೆಟಿಲೈಟ್‌ಗಳು
ನವದೆಹಲಿ, ಆಗಸ್ಟ್ 7: ಇಸ್ರೋ ಅಭಿವೃದ್ಧಿಪಡಿಸಿರುವ ಹೊಸ ರಾಕೆಟ್ ತನ್ನ ಮೊದಲ ಮಿಷನ್‌ನಲ್ಲಿ ವಿಫಲವಾಗಿದೆ. ಎಸ್‌ಎಸ್‌ಎಲ್‌ವಿ-ಡಿ1 ರಾಕೆಟ್ ಉಡಾವಣೆಯಲ್ಲಿ ಯಶಸ್ವಿಯಾದರೂ ತನ್ನೊಂದಿಗಿದ್ದ ಎರಡು ಸೆಟಿಲೈಟ್‌ಗಳನ್ನು ನಿಗದಿತ ಕಕ್ಷೆಗೆ ಸೇರಿಸುವ ಕಾರ್ಯದಲ್ಲಿ ವಿಫಲವಾಗಿದೆ.
ಎರಡು ಸೆಟಿಲೈಟ್‌ಗಳು ಅಸ್ಥಿರ ಕಕ್ಷೆಗೆ ಸೇರಿದ್ದು, ಅದನ್ನು ಬಳಸಲು ಅಸಾಧ್ಯವಾಗಿದೆ. ಇವತ್ತಿನ ಮಿಷನ್‌ನ ಒಟ್ಟಾರೆ ಗುರಿ ಈಡೇರದಂತಾಗಿದೆ ಎಂದು ಇಸ್ರೋ ಸಂಸ್ಥೆ ಹೇಳಿದೆ.
"ಸಮಸ್ಯೆ ಏನೆಂದು ಗೊತ್ತಾಗಿದೆ. ಸೆನ್ಸಾರ್ ವೈಫಲ್ಯವನ್ನು ಗುರುತಿಸುವ ತರ್ಕದಲ್ಲಿ ಹಾಗು ಅದನ್ನು ಸರಿಪಡಿಸುವ ಕಾರ್ಯದಲ್ಲಿ ವಿಫಲತೆಯಾಗಿದ್ದರಿಂದ ನಿಗದಿತ ಕಕ್ಷೆಗೆ ಸೆಟಿಲೈಟ್‌ಗಳನ್ನು ಸೇರಿಸಲಾಗಲಿಲ್ಲ. ಈ ಸಂಗತಿಯನ್ನು ವಿಶ್ಲೇಷಿಸಿ ಮುಂದಿನ ಹೆಜ್ಜೆಗಳನ್ನು ಶಿಫಾರಸು ಮಾಡಲು ಒಂದು ಸಮಿತಿ ಮಾಡಿದ್ದೇವೆ. ಇದು ಮಾಡುವ ಶಿಫಾರಸುಗಳನ್ನು ಜಾರಿಗೊಳಿಸಿ ಇಸ್ರೋದಿಂದ ಮತ್ತೆ ಎಸ್‌ಎಸ್‌ಎಲ್-ಡಿ2 ರಾಕೆಟ್ ಸಿದ್ಧವಾಗುತ್ತದೆ," ಎಂದು ಇಸ್ರೋ ಹೇಳಿದೆ.
(1/2) SSLV-D1/EOS-02 Mission update: SSLV-D1 placed the satellites into 356 km x 76 km elliptical orbit instead of 356 km circular orbit. Satellites are no longer usable. Issue is reasonably identified. Failure of a logic to identify a sensor failure and go for a salvage action
— ISRO (@isro) August 7, 2022
ಎರಡು ಸೆಟಿಲೈಟ್‌ಗಳನ್ನು 356 ಕಿಮೀ ವೃತ್ತೀಯ ಕಕ್ಷೆಗೆ (Circular Orbit) ಸೇರಿಸಬೇಕಿತ್ತು. ಆದರೆ, ತಾಂತ್ರಿಕ ವೈಫಲ್ಯದಿಂದಾಗಿ ಅವು 356 X 76 ಕಿಮೀ ಅಂಡಾಕಾರದ ಕಕ್ಷೆಗೆ (Elliptical Orbit) ಸೇರಿದವು ಎಂದು ಹೇಳಲಾಗಿದೆ.
ಮಕ್ಕಳು ಅಭಿವೃದ್ಧಿಪಡಿಸಿದ್ದ ಸೆಟಿಲೈಟ್
ಇಸ್ರೋ ಸಂಸ್ಥೆ ಈವರೆಗೆ ಜಿಎಸ್‌ಎಲ್‌ವಿ ರಾಕೆಟ್ ಅನ್ನು ಎಲ್ಲಾ ಕಾರ್ಯಕ್ಕೂ ಉಪಯೋಗಿಸುತ್ತಿತ್ತು. ಸಣ್ಣ ಲೋಡ್‌ಗಳನ್ನು ಕಳುಹಿಸಲೆಂದು ಎಸ್‌ಎಸ್‌ಎಲ್‌ವಿ ರಾಕೆಟ್ ಅನ್ನು ಅಭಿವೃದ್ಧಿಪಡಿಸಿದೆ. ಇದೇ ಮೊದಲ ಬಾರಿಗೆ ಭಾನುವಾರ ಅದರ ಉಡಾವಣೆ ಆಗಿದ್ದು. ರಾಕೆಟ್ ಹೊತ್ತೊಯ್ದಿದ್ದ ಎರಡು ಸೆಟಿಲೈಟ್‌ಗಳಲ್ಲಿ ಸರಕಾರಿ ಶಾಲೆಗಳ ಮಕ್ಕಳು ಸೇರಿ ಅಭಿವೃದ್ಧಿಪಡಿಸಿದ್ದ ಆಜಾದಿಸ್ಯಾಟ್ (AzaadiSAT) ಕೂಡ ಇದೆ. ಮತ್ತೊಂದು ಭೂ ವೀಕ್ಷಣಾ (Earth Observation Satellite-2) ಉಪಗ್ರಹವಾಗಿದೆ.

ಆಜಾದಿಸ್ಯಾಟ್ ಉಪಗ್ರಹವನ್ನು 75ನೇ ಸ್ವಾತಂತ್ರ್ಯೋತ್ಸವದ ನಿಮಿತ್ತ 750 ಸರಕಾರ ಶಾಲಾ ವಿದ್ಯಾರ್ಥಿಗಳು ನಿರ್ಮಿಸಿದ್ದರು. ಇದರಲ್ಲಿ 75 ಪೇಲೋಡ್‌ಗಳಿದ್ದವು. ಇವುಗಳನ್ನು ಅಭಿವೃದ್ಧಿಪಡಿಸಿದ್ದ ಮಕ್ಕಳು ಭಾನುವಾರ ಶ್ರೀಹರಿಕೋಟಾದಲ್ಲಿ ರಾಕೆಟ್ ಉಡಾವಣೆಯನ್ನು ಕಣ್ಣಾರೆ ಕಂಡು ಆನಂದ ತುಂದಿಲರಾಗಿದ್ದರು.
ಮಾಧವನ್ ನಾಯರ್ ಪ್ರತಿಕ್ರಿಯೆ:
ಇಸ್ರೋ ಅಭಿವೃದ್ಧಿಪಡಿಸಿರುವ ಎಸ್‌ಎಸ್‌ಎಲ್‌ವಿ ತನ್ನ ಚೊಚ್ಚಲ ಮಿಷನ್‌ನಲ್ಲಿ ವಿಫಲವಾದರೂ ಇಸ್ರೋ ಕಾರ್ಯಕ್ಕೆ ಹಲವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇಸ್ರೋದ ಮಾಜಿ ಛೇರ್ಮನ್ ಡಾ. ಮಾಧವನ್ ನಾಯರ್ ಪ್ರತಿಕ್ರಿಯಿಸಿ, ಇಷ್ಟು ಕಿರು ಅವಧಿಯಲ್ಲಿ ರಾಕೆಟ್ ನಿರ್ಮಿಸುವುದು ಸಣ್ಣ ವಿಷಯವಲ್ಲ ಎಂದಿದ್ದಾರೆ.
"ಬಹಳ ಕಿರು ಅವಧಿಯಲ್ಲಿ ಇದರ ಪರಿಕಲ್ಪನೆ ಹುಟ್ಟಿ ಜಾರಿಯೂ ಆಗಿದೆ. ವೆಚ್ಚ, ತೂಕ, ವಾಣಿಜ್ಯಾತ್ಮಕತೆ ಈ ಮೂರನ್ನೂ ಕೂಡ ಕಡಿಮೆ ಅವಧಿಯಲ್ಲಿ ಗ್ರಹಿಸಿ ಜಾರಿ ಮಾಡಲಾಗಿದೆ. ಇದು ನಿಜಕ್ಕೂ ಒಳ್ಳೆಯ ಸಾಧನೆ" ಎಂದವರು ಅಭಿಪ್ರಾಯಪಟ್ಟಿದ್ದಾರೆ.
ಈಗ ರಾಕೆಟ್‌ನ ಮಿಷನ್ ಬಹಳ ಸಂಕೀರ್ಣವಾಗಿತ್ತು ಎಂದು ಹೇಳಿದ ಅವರು, "ಸಾವಿರಾರು ಪುಟಗಳ ದತ್ತಾಂಶ ಹರಿದುಬರಲಿದೆ. ಹಲವು ತಜ್ಞರು ಈ ಡಾಟಾವನ್ನು ಪರಿಶೀಲಿಸಲಿದ್ದಾರೆ. ಮೂರನೇ ಹಂತದವರೆಗೂ ಎಲ್ಲವೂ ಸರಾಗವಾಗಿಸಾಗಿತ್ತು. ಅಂತಿಮ ಹಂತದಲ್ಲಿ ಮಾರ್ಗದಲ್ಲಿ ತುಸು ವ್ಯತ್ಯಾಸವಾಯಿತು. ಮಿಷನ್ ಫೇಲ್ ಆಗಲು ಅದು ಒಂದು ಕಾರಣ ಇರಬಹುದು. ಅಥವಾ ರಾಕೆಟ್‌ನಿಂದ ಸೆಟಿಲೈಟ್ ಪ್ರತ್ಯೇಕವಾಗಬೇಕಾದರೆ ಏನೋ ವ್ಯತ್ಯಾಸವಾಗಿರಬಹುದು" ಎಂದು ಮಾಧವನ್ ನಾಯರ್ ಹೇಳಿದ್ದಾರೆ.
(ಒನ್ಇಂಡಿಯಾ ಸುದ್ದಿ)
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications