Samsung Galaxy S23: ಈ ಪ್ರೀಮಿಯಂ ಫೋನ್ ಖರೀದಿಸಿ 34 ಸಾವಿರ ಉಳಿಸಬಹುದು
ಪ್ರೀಮಿಯಂ ಫೋನ್‌ಗಳ ಗ್ರಾಹಕರ ಸಂಖ್ಯೆಯೂ ಭಾರತದಲ್ಲಿ ಕಡಿಮೆ ಏನು ಇಲ್ಲ. ಈ ಗ್ರಾಹಕರನ್ನು ಹಲವು ಬ್ರ್ಯಾಂಡ್ ಕಂಪನಿಯ ಮೊಬೈಲ್‌ಗಳು ಸೆಳೆಯುತ್ತಿವೆ. ಹಲವು ಕಂಪನಿಯ ಮೊಬೈಲ್‌ಗಳು ಆಫರ್ ಮೇಲೆ ಆಫರ್ ನೀಡಿ ತನ್ನತ್ತ ಗ್ರಾಹಕರ ಚಿತ್ತ ಸೆಳೆಯುತ್ತಿವೆ. ಭಾರತೀಯ ಮೊಬೈಲ್ ಮಾರುಕಟ್ಟೆಯಲ್ಲಿ ತನ್ನದೇ ಆದ ಛಾಪು ಹೊಂದಿರುವ ಸ್ಯಾಮ್‌ಸಂಗ್ ಗ್ರಾಹಕರಿಗೆ ಬಿಗ್ ಆಫರ್ ನೀಡಿದೆ.
ಪ್ರೀಮಿಯಂ ಸ್ಮಾರ್ಟ್‌ಫೋನ್ ಸಹ ತಮ್ಮ ಜೇಬಿನಲ್ಲಿ ಇರಬೇಕು ಎಂದು ಬಯಸುವವರಿಗೆ ಇದು ಬೆಸ್ಟ್ ಚಾನ್ಸ್.. Samsung ತನ್ನ Galaxy S 23 ಸರಣಿಯ ಪ್ರೀಮಿಯಂ ಮತ್ತು ಪ್ರಮುಖ ಸ್ಮಾರ್ಟ್‌ಫೋನ್‌ನ ಬೆಲೆಯನ್ನು ಗಣನೀಯವಾಗಿ ಕಡಿಮೆ ಮಾಡಿದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಈಗ ಕಡಿಮೆ ಬಜೆಟ್‌ನಲ್ಲಿ ಪ್ರೀಮಿಯಂ ವಿನ್ಯಾಸ ಮತ್ತು ಪ್ರಮುಖ ವೈಶಿಷ್ಟ್ಯಗಳೊಂದಿಗೆ ಉತ್ತಮ ಸ್ಮಾರ್ಟ್‌ಫೋನ್ ಖರೀದಿಸಬಹುದು.

ಈ ಸ್ಮಾರ್ಟ್‌ಫೋನ್‌ನಲ್ಲಿ, ಭರ್ಜರಿ ಕ್ಯಾಮೆರಾ ಸೆಟಪ್ ನೀಡಲಾಗಿದೆ. ಅಲ್ಲದೆ ಕ್ವಾಲ್ಕೊಂ ಸ್ನ್ಯಾಪ್‌ಡ್ರ್ಯಾಗನ್ 8 ಜನರೇಷನ್ 2 ಪ್ರೊಸೆಸರ್ ಹೊಂದಿದೆ. ಇದು ಫೋನ್‌ಗೆ ಹೆಚ್ಚಿನ ಕಾರ್ಯಕ್ಷಮತೆಯನ್ನು ನೀಡಲು ಸಹಾಯ ಮಾಡುತ್ತದೆ. ಈ ಫೋನ್ AI ವೈಶಿಷ್ಟ್ಯಗಳನ್ನು ಸಹ ಬೆಂಬಲಿಸಿದೆ.
ಬೆಲೆ ಎಷ್ಟು ಕಡಿತು?
ನೀವು ಕಾಂಪ್ಯಾಕ್ಟ್ ಗಾತ್ರದ ಪ್ರೀಮಿಯಂ ಸ್ಮಾರ್ಟ್‌ಫೋನ್ ಖರೀದಿಸಲು ಬಯಸಿದರೆ ಈ ಸ್ಮಾರ್ಟ್‌ಫೋನ್ ನಿಮಗೆ ಅತ್ಯುತ್ತಮ ಆಯ್ಕೆಯಾಗಿದೆ. ಇ-ಕಾಮರ್ಸ್ ವೆಬ್‌ಸೈಟ್ ಫ್ಲಿಪ್‌ಕಾರ್ಟ್‌ನಲ್ಲಿ ಪ್ರಸ್ತುತ SAMSUNG Galaxy S23 5G ಯಲ್ಲಿ ಉತ್ತಮ ಕೊಡುಗೆಯನ್ನು ನೀಡಲಾಗುತ್ತಿದೆ. ಈ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ನಲ್ಲಿ ಲಭ್ಯವಿರುವ ಬಲವಾದ ಕೊಡುಗೆಗಳ ಬಗ್ಗೆ ನಾವು ನಿಮಗೆ ವಿವರವಾಗಿ ಹೇಳೋಣ.
SAMSUNG Galaxy S23 5G ಅನ್ನು ರಿಯಾಯಿತಿಯೊಂದಿಗೆ ಖರೀದಿಸಬಹುದು. ಈ ಸ್ಮಾರ್ಟ್‌ಫೋನ್ ಅನ್ನು ಫ್ಲಿಪ್‌ಕಾರ್ಟ್‌ನಲ್ಲಿ ಭರ್ಜರಿ ಡಿಸ್ಕೌಂಟ್ ನೀಡಲಾಗುತ್ತಿದೆ. ಈ ಮೂಲಕ ಪ್ರೀಮಿಯಂ ಫೋನ್ ಖರೀದಿಸುವ ಆಸೆಯನ್ನು ಹೊಂದಿದ ಗ್ರಾಹಕರ ಆಸೆ ಕೈಗೂಡುವಂತೆ ಆಗುತ್ತಿದೆ. ನೀವು ಸ್ಯಾಮ್‌ಸಂಗ್ ಆಕ್ಸಿಸ್ ಬ್ಯಾಂಕ್ ಸಿಗ್ನೇಚರ್ ಕ್ರೆಡಿಟ್ ಅಥವಾ ಸ್ಯಾಮ್‌ಸಂಗ್ ಆಕ್ಸಿಸ್ ಬ್ಯಾಂಕ್ ಇನ್ಫೈನೈಟ್ ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಸಿದರೆ, ನೀವು 10% ಹೆಚ್ಚುವರಿ ರಿಯಾಯಿತಿಯನ್ನು ಪಡೆಯುತ್ತೀರಿ.

ಶೇಕಡಾ 45 ರಿಯಾಯಿತಿ
ಈ ಮೊಬೈಲ್ ಲಾಂಚ್ ಬೆಲೆ 95999 ರೂಪಾಯಿ ಆಗಿದ್ದು, ಫ್ಲಿಪ್ ಕಾರ್ಟ್ ಈ ಮೊಬೈಲ್‌ನ್ನು ಶೇಕಡಾ 45 ರಷ್ಟು ರಿಯಾಯಿತಿಯಲ್ಲಿ ನೀಡುತ್ತಿದೆ. ಅಂದರೆ 34 ಸಾವಿರ ರಿಯಾಯಿತಿಯೊಂದಿಗೆ ಈ ಫೋನ್ 51999 ರೂಗೆ ಲಭ್ಯ.
ಈ ಸ್ಮಾರ್ಟ್‌ಫೋನ್ ಖರೀದಿಸುವ ಗ್ರಾಹಕರಿಗೆ ಫ್ಲಿಪ್‌ಕಾರ್ಟ್ ಎಕ್ಸ್‌ಚೇಂಜ್ ಆಫರ್ ಅನ್ನು ಸಹ ನೀಡುತ್ತಿದೆ. SAMSUNG Galaxy S23 5G ಖರೀದಿಯಲ್ಲಿ ನೀವು ನಿಮ್ಮ ಹಳೆಯ ಫೋನ್ ನೀಡಿ ಡಿಸ್ಕೌಂಟ್ ಸಹ ಪಡೆಯಬಹುದು.
ಈ ಫೋಮ್ 8 ಜಿಬಿ ರ್ಯಾಮ್, 256 ಜಿಬಿ ಇಂಟರ್ನಲ್ ಸ್ಟೊರೇಜ್ ಹೊಂದಿದೆ. 6.1 ಇಂಚಿನ ಫುಲ್ ಎಚ್‌ಡಿ ಪ್ಲಸ್ ಡಿಸ್‌ಪ್ಲೇ ಹೊಂದಿದೆ. ಈ ಮೊಬೈಲ್ ಹಿಂಭಾಗದಲ್ಲಿ ಮೂರು ಕ್ಯಾಮೆರಾ ಸೆಟಪ್ ನೀಡಲಾಗಿದೆ. ಪ್ರೈಮರಿ ಕ್ಯಾಮೆರಾ 50 ಮೆಗಾ ಪಿಕ್ಸಲ್, ಎರಡನೇ ಕ್ಯಾಮೆರಾ 12 ಮೆಗಾ ಪಿಕ್ಸಲ್ ಹಾಗೂ ಮೂರನೇ ಕ್ಯಾಮೆರಾ 10 ಮೆಗಾ ಪಿಕ್ಸಲ್ ಫೆಸಿಲೀಟಿ ಹೊಂದಿದೆ. ಅಲ್ಲದೆ ಸೆಲ್ಫಿ ಹಾಗೂ ವಿಡಿಯೋ ರೆಕಾರ್ಡ್ ಗಾಗಿ 12 ಮೆಗಾ ಪಿಕ್ಸಲ್ ಕ್ಯಾಮೆರಾ ನೀಡಲಾಗುತ್ತಿದೆ.












Click it and Unblock the Notifications