ಸೊಪ್ಪು ಹುಲ್ಲು ಹಾಕಿ ಬೆಸಿದವರನ್ನು ಮರೆಯದ ರಾಜು: ಏನಿದು ಸ್ಟೋರಿ?
ಇದು ಸೊಪ್ಪು, ಹುಲ್ಲು ಹಾಕಿ ಬೆಳೆಸಿದ ಕಡವೆಯ ಮಮತೆಯ ಸ್ಟೋರಿ ಆದರೆ ಇವತ್ತಿನದಲ್ಲ... ಏಳೆಂಟು ವರ್ಷಗಳ ಹಿಂದಿನ ಕಥೆ. ಅನ್ನ ಹಾಕಿದವರ ಬೆನ್ನಿಗೆ ಚೂರಿ ಹಾಕುವ ಮನುಷ್ಯರ ನಡುವೆ ಕಾಡಿನಿಂದ ಬಂದು ನಾಡಿಗೆ ಸೇರಿಕೊಂಡು ಹುಲ್ಲು ಸೊಪ್ಪು ಹಾಕಿದವರನ್ನು ಮರೆಯದೆ ನೆನಪಿಸಿಕೊಂಡು ಓಡೋಡಿ ಬಂದ ಕಡವೆಯೊಂದರೆ ಕಥೆ. ಪ್ರಾಣಿಗಳಲ್ಲೂ ಕೃತಜ್ಞತಾ ಭಾವವಿರುತ್ತದೆ ಎಂಬುದಕ್ಕೆ ಇದೊಂದು ಸಾಕ್ಷಿಯಾಗಿದೆ.
ಅದು 2017ನೇ ಇಸವಿಯ ಮಾರ್ಚ್ ತಿಂಗಳು ಉರಿ ಬಿಸಿಲು ಅರಣ್ಯವನ್ನೆಲ್ಲ ಬೋಳು ಮಾಡಿತ್ತು. ಆಗಿನ ವರ್ಷಗಳಲ್ಲಿ ಸರಿಯಾಗಿ ಮಳೆಯೂ ಸುರಿದಿರಲಿಲ್ಲ. ಹೀಗಾಗಿ ಅರಣ್ಯ ಇಲಾಖೆ ವಶದಲ್ಲಿದ್ದ ಅರಣ್ಯಧಾಮಗಳಲ್ಲಿದ್ದ ಅದರಲ್ಲೂ ಹಾಸನದ ಗೆಂಡೆಕಟ್ಟೆ ಅರಣ್ಯಧಾಮ ಹಸಿರು ಹುಲ್ಲು ಸೇರಿದಂತೆ ಸಸ್ಯಗಳು ಬಿಸಿಲಿಗೆ ಒಣಗಿ ಹೋಗಿದ್ದವು. ಮುಗಿಲೆತ್ತರಕ್ಕೆ ಬೆಳೆದು ನಿಂತ ಮರ ಬಿಟ್ಟರೆ, ಉಳಿದಂತೆ ಎಲ್ಲ ಸಸ್ಯಗಳು ಅಲ್ಲಿ ಬಿಸಿಲಿಗೆ ಸುಟ್ಟು ಹೋಗಿ ನೆಲ ಬಿಟ್ಟರೆ ಮತ್ತೇನು ಕಾಣಿಸುತ್ತಿರಲಿಲ್ಲ. ಹೀಗಿರುವಾಗ ಅರಣ್ಯದಲ್ಲಿರುವ ವನ್ಯ ಪ್ರಾಣಿಗಳ ಕಥೆ ಏನಾಗಬೇಕು?.

ಇಂತಹದೊಂದು ಪರಿಸ್ಥಿತಿಯನ್ನು ಕಂಡ ಸಕಲೇಶಪುರ ತಾಲೂಕಿನ ಹತ್ತಿಹಳ್ಳಿ ಗ್ರಾಮದ ನಿವಾಸಿ ಪರಮೇಶ್ ಮತ್ತು ಕುಸುಮ ದಂಪತಿಗೆ ಸಂಕಟ ಶುರುವಾಗಿತ್ತು. ಅದಕ್ಕೆ ಕಾರಣವೂ ಇತ್ತು. ಅವರು ಪ್ರೀತಿಯಿಂದ ಹುಲ್ಲುಸೊಪ್ಪು ಹಾಕಿ ನಾಲ್ಕು ವರ್ಷಗಳ ಕಾಲ ತಮ್ಮ ಸಾಕು ಪ್ರಾಣಿಗಳೊಂದಿಗೆ ಸಾಕಿದ್ದ ವನ್ಯ ಪ್ರಾಣಿ ಕಡವೆ ರಾಜು ಅದೇ ಗೆಂಡೆಕಟ್ಟೆ ಅರಣ್ಯಧಾಮ ಸೇರಿತ್ತು. ಅದನ್ನು ನೆನೆದಾಗಲೆಲ್ಲ ಅವರ ಕಣ್ಣಲ್ಲಿ ನೀರು, ಹೊಟ್ಟೆಯಲ್ಲಿ ಸಂಕಟ ಶುರುವಾಗಿತ್ತು. ನಮ್ಮ ರಾಜು ಹೇಗಿದ್ದಾನೋ ಎಂಬ ಯೋಚನೆಗೆ ಬಿದ್ದಿದ್ದರು.
ಕಡವೆಗೆ ಪ್ರೀತಿಯಿಂದ ಇಟ್ಟ ಹೆಸರು ರಾಜು
ವನ್ಯಪ್ರಾಣಿಯಾಗಿದ್ದ ರಾಜು(ಕಡವೆಗೆ ದಂಪತಿಯಿಟ್ಟ ಹೆಸರು) ಪರಮೇಶ್ ಮತ್ತು ಕುಸುಮ ದಂಪತಿ ಮನೆಗೆ ಬಂದಿದ್ದೇಗೆ? ಆತ್ಮೀಯತೆ ಬೆಳೆದಿದ್ದೇಗೆ? ಎಲ್ಲವೂ ತುಂಬಾ ಇಂಟರೆಸ್ಟಿಂಗ್ ಸ್ಟೋರಿಯೇ.. ರೈತರಾದ ಪರಮೇಶ್ ಮತ್ತು ಕುಸುಮ ದಂಪತಿ ಹಸು ಸಾಕಿದ್ದರು. ಆ ಹಸು ಕರು ಹಾಕಿತ್ತಾದರೂ ಕರು ಬದುಕಲಿಲ್ಲ. ಪ್ರತಿದಿನವೂ ಈ ಹಸುವನ್ನು ಇತರೆ ದನಗಳ ಜೊತೆ ಅರಣ್ಯದಂಚಿನಲ್ಲಿ ಮೇಯಿಸಿಕೊಂಡು ಬರುತ್ತಿದ್ದರು. ಅತ್ತ ಕಾಡನಲ್ಲಿ ಮರಿಯೊಂದಿಗಿದ್ದ ಕಡವೆಯನ್ನು ಯಾರೋ ಬೇಟೆಯಾಡಿಬಿಟ್ಟರು. ಮರಿ ತಬ್ಬಲಿಯಾಯಿತು. ಅದು ದಿಕ್ಕು ತಪ್ಪಿ ಕಾಡಿನಿಂದ ಹೊರ ಬಂದಾಗ ನಾಯಿಗಳು ಅಟ್ಟಿಸಿಕೊಂಡು ಬಂದವು. ಆಗ ಅದು ಬಂದು ದನಗಳ ಹಿಂಡನ್ನು ಸೇರಿಕೊಂಡಿತು.

ದನಗಳೊಂದಿಗೆ ಬಂದ ಆ ಕಡವೆ ಮರಿಯನ್ನು ಪರಮೇಶ್ ಮತ್ತು ಕುಸುಮ ದಂಪತಿ ಲಾಲನೆ, ಪಾಲನೆ ಮಾಡಿದರು. ಅದು ಕರು ಸತ್ತಿದ್ದ ಹಸುವಿನ ಹಾಲನ್ನೇ ಕುಡಿದು ಬದುಕತೊಡಗಿತು. ದಂಪತಿ ಅದಕ್ಕೆ ಪ್ರೀತಿಯಿಂದ ರಾಜು ಎಂದು ಹೆಸರಿಟ್ಟರು. ದನಗಳ ಒಡನಾಟದಲ್ಲಿದ್ದ ಅದು ದಷ್ಟಪುಷ್ಟವಾಗಿ ಬೆಳೆದಿತ್ತು. ಹೀಗೆ ವರ್ಷಗಳೇ ಕಳೆದು ಹೋದವು. ಇದನ್ನು ನೋಡಿದ ಕೆಲವರು ಅರಣ್ಯ ಇಲಾಖೆಗೆ ದೂರು ನೀಡಿದರು. ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಬಂದು ವನ್ಯ ಪ್ರಾಣಿಯನ್ನು ಸಾಕುವುದು ಅಪರಾಧ ಹೀಗಾಗಿ ತಮಗೆ ಒಪ್ಪಿಸುವಂತೆ ಸೂಚನೆ ನೀಡಿದರು.
ಅರಣ್ಯ ಇಲಾಖೆಗೆ ಒಪ್ಪಿಸಬೇಕಾದ ಪರಿಸ್ಥಿತಿ
ಅರಣ್ಯಾಧಿಕಾರಿಗಳ ಮಾತಿಗೆ ಒಲ್ಲದ ಮನಸ್ಸಿನಿಂದ ದಂಪತಿ ಒಪ್ಪಿದರು. ಅದರಂತೆ ಸುರಕ್ಷಿತವಾಗಿ ಕಡವೆಯನ್ನು ನಮಗೆ ಒಪ್ಪಿಸಿದ್ದೀರಿ ಎಂದು ಪ್ರಶಂಸೆಯ ಪತ್ರವನ್ನು ಆ ದಂಪತಿಗೆ ನೀಡಿ ಕಡವೆಯನ್ನು ಕೊಂಡೊಯ್ದು ಗೆಂಡೆಕಟ್ಟೆ ಅರಣ್ಯಧಾಮಕ್ಕೆ ಬಿಟ್ಟಿದ್ದರು. ಈ ಘಟನೆ ನಡೆದು ಮೂರು ವರ್ಷಗಳೇ ಆಗಿ ಹೋಗಿತ್ತು. 2017ರ ವೇಳೆಗೆ ಬರ ಕಾಣಿಸಿತ್ತು. ಹೀಗಾಗಿ ಬರದಿಂದ ಗೆಂಡೆಕಟ್ಟೆ ಅರಣ್ಯದಲ್ಲಿ ಪ್ರಾಣಿಗಳಿಗೆ ಸಂಕಷ್ಟ ಎದುರಾಗಿದೆ ಎಂಬ ಸುದ್ದಿ ಬಂದಿತ್ತು
ಈ ವಿಚಾರ ತಿಳಿಯುತ್ತಿದ್ದಂತೆಯೇ ಸಕಲೇಶಪುರ ತಾಲೂಕಿನ ಹತ್ತಿಹಳ್ಳಿ ಗ್ರಾಮದ ನಿವಾಸಿ ಪರಮೇಶ್ ಮತ್ತು ಕುಸುಮ ದಂಪತಿಗೆ ಸಂಕಟ ಶುರುವಾಗಿತ್ತು. ಏನೋ ಒಂದು ರೀತಿಯ ನೋವು ಅವರನ್ನು ಕಾಡತೊಡಗಿತು. ಇದೇ ಅರಣ್ಯಧಾಮದಲ್ಲಿರುವ ನಮ್ಮ ರಾಜು ಹೇಗಿದ್ದಾನೋ ಎಂಬ ಆಲೋಚನೆ ಆರಂಭವಾಯಿತು. ಆತ ಮನೆಯಲ್ಲಿ ಹಸು ಕರುಗಳೊಂದಿಗೆ ಕಳೆಯುತ್ತಿದ್ದ ನೆನಪುಗಳು ಅವರ ಮುಂದೆ ಹಾದು ಹೋಯಿತು. ಏನಾದರಾಗಲಿ ಅಲ್ಲಿಗೆ ತೆರಳಿ ಸೊಪ್ಪು ನೀಡಿ ಬರುವ ತೀರ್ಮಾನಕ್ಕೆ ಬಂದು ಬಿಟ್ಟರು.
ಅದರಂತೆ ದಂಪತಿ ಅದೊಂದು ದಿನ ಒಂದಷ್ಟು ಹಸಿರು ಸೊಪ್ಪನ್ನು ಹೊತ್ತು ಹಾಸನದ ಗೆಂಡೆಕಟ್ಟೆ ಅರಣ್ಯಧಾಮದ ಬಳಿಗೆ ತೆರಳಿದರು. ಮುಗಿಲೆತ್ತರಕ್ಕೆ ಬೆಳೆದ ಒಂದಷ್ಟು ನೀಲಗಿರಿ ಮರ ಹೊರತುಪಡಿಸಿದರೆ, ಇನ್ನೇನು ಅಲ್ಲಿ ಇರಲಿಲ್ಲ. ಎಲ್ಲವೂ ಒಣಗಿ ಮೈದಾನದಂತಾಗಿತ್ತು. ಆ ಪರಿಸ್ಥಿತಿ ನೋಡಿ ಅವರ ಕಣ್ಣಂಚಲ್ಲಿ ನೀರು ಜಿನುಗಿತ್ತು. ಕಣ್ಣು ಹಾಯಿಸಿದರಾದರೂ ಅಲ್ಲಿ ತಾವು ನೋಡಲೆಂದು ಬಂದ ರಾಜು ಕಾಣಿಸಲಿಲ್ಲ. ಸ್ವಲ್ಪ ಹೊತ್ತು ಅಡ್ಡಾಡುತ್ತಾ ಹುಡುಕಾಡಿದರು.
ಹುಲ್ಲು ಸೊಪ್ಪು ಹಾಕಿದವರ ಮರೆಯದ ರಾಜು
ಆಗ ಅಲ್ಲೊಂದು ಕಡವೆ ಕಾಣಿಸಿತು. ಅದು ನಮ್ಮ ರಾಜು ಆಗಿರಬಹುದಾ ಎಂಬ ಅನುಮಾನ. ಆದರೂ ನೋಡಿಯೇ ಬಿಡೋಣ ಎಂದು ಜೋರಾಗಿ ರಾಜು ಎಂದು ಕರೆದರು. ಆ ಧ್ವನಿಗೆ ಅದು ತಲೆ ಎತ್ತಿ ಇವರತ್ತ ನೋಡಿ ನಿಧಾನವಾಗಿ ಹೆಜ್ಜೆ ಹಾಕುತ್ತಾ ಬಂದಿತ್ತು. ಅವರಿಗೆ ಅಚ್ಚರಿಯೋ ಅಚ್ಚರಿ ಜತೆಗೆ ತಾವು ಸಾಕಿ ಬೆಳೆಸಿದ ಮೂಕ ಜೀವ ಮೂರು ವರ್ಷದ ಬಳಿಕವೂ ನೆನಪು ಮಾಡಿಕೊಂಡು ಬಂತಲ್ಲ ಎಂಬ ಸಂತಸವಾಗಿತ್ತು.
ಅನಾಥವಾಗಿದ್ದ ತನ್ನನ್ನು ಸಾಕಿ ಸಲಹಿದ ಆ ದಂಪತಿಯನ್ನು ಮರೆಯದೆ ಅವರ ಬಳಿ ಬಂದ ರಾಜು ಸೊಪ್ಪು ತಿಂದು ಖುಷಿಪಟ್ಟರೆ ಅವರಿಗೆ ಹೃದಯ ಕಿತ್ತು ಬಂದ ಅನುಭವವಾಗಿತ್ತು. ರಾಜುನ ನಮ್ಮೊಂದಿಗೆ ಕಳುಹಿಸಿ ಒಂದಷ್ಟು ದಿನ ಸಾಕಿ ಮಳೆ ಬಂದು ಮೇವು ಹುಟ್ಟಿದ ಮೇಲೆ ಕಳುಹಿಸಿಕೊಡುತ್ತೇವೆ ಎಂದು ಅರಣ್ಯಾಧಿಕಾರಿಗಳನ್ನು ಕೋರಿ ಕೊಂಡರು ಅದಕ್ಕೆ ಅರಣ್ಯಾಧಿಕಾರಿಗಳು ಸಾಧ್ಯವಿಲ್ಲ ಕೇಂದ್ರ ವನ್ಯಜೀವಿ ವಿಭಾಗದಿಂದ ಅನುಮತಿ ಪಡೆಯಬೇಕು ಎಂದು ಹೇಳಿದರು. ಬೇರೆ ದಾರಿ ಕಾಣದ ಆ ದಂಪತಿ ಮುದ್ದಿನ ರಾಜುವನ್ನು ನೆನೆಯುತ್ತಾ ಭಾರದ ಮನಸ್ಸಿನಿಂದ ಹಿಂತಿರುಗಿದ್ದರು.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ











Click it and Unblock the Notifications