ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರೆಸ್ಸೆಸ್‌ನಲ್ಲಿ ಹೊಸ ಜವಾಬ್ದಾರಿ: ದತ್ತಾತ್ರೇಯ ಹೊಸಬಾಳೆ ಜೀವನ, ಸಾಧನೆ

|
Google Oneindia Kannada News

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಎರಡನೆಯ ಅತ್ಯುನ್ನತ ಹುದ್ದೆಗೆ ಕರ್ನಾಟಕದವರಾದ ದತ್ತಾತ್ರೇಯ ಹೊಸಬಾಳೆ ಅವರು ಆಯ್ಕೆಯಾಗಿದ್ದಾರೆ. ಬೆಂಗಳೂರಿನಲ್ಲಿ ನಡೆದ ಆರೆಸ್ಸೆಸ್‌ಸ ವಾರ್ಷಿಕ ಸಭೆಯಲ್ಲಿ ದತ್ತಾತ್ರೇಯ ಹೊಸಬಾಳೆ ಅವರನ್ನು ಸರಕಾರ್ಯವಾಹರನ್ನಾಗಿ ನೇಮಿಸಲಾಗಿದೆ. ಸತತ 12 ವರ್ಷ ದಾಖಲೆಯ ಅವಧಿಗೆ ಸರಕಾರ್ಯವಾಹರಾಗಿ ಮಹತ್ವದ ಜವಾಬ್ದಾರಿ ನಿರ್ವಹಿಸಿದ್ದ ಸುರೇಶ್ 'ಭಯ್ಯಾಜಿ' ಜೋಶಿ ಅವರ ಹುದ್ದೆಯನ್ನು ಹೊಸಬಾಳೆ ಅಲಂಕರಿಸಿದ್ದಾರೆ. ಅವರ ಅಧಿಕಾರದ ಅವಧಿ ಮೂರು ವರ್ಷ.

ದತ್ತಾತ್ರೇಯ ಹೊಸಬಾಳೆ, ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಹೊಸಬಾಳೆ ಗ್ರಾಮದವರು. ತಂದೆ ಹೊಸಬಾಳೆ ಶೇಷಗಿರಿಯಪ್ಪ, ತಾಯಿ ಮೀನಾಕ್ಷಮ್ಮ. ಸಂಘದ ವಲಯದಲ್ಲಿ ದತ್ತಾಜಿ ಎಂದೇ ಅವರು ಪ್ರಖ್ಯಾತರು. ದತ್ತಾತ್ರೇಯ ಹೊಸಬಾಳೆ ಅವರದು ಆರೆಸ್ಸೆಸ್ ಹಿನ್ನೆಲೆಯ ಕುಟುಂಬ. ಹೀಗಾಗಿ ಬಾಲ್ಯದಿಂದಲೂ ಸಂಘದ ಚಟುವಟಿಕೆಗಳಲ್ಲಿ ಅಸಕ್ತಿ ಹೊಂದಿದ್ದರು. 1954ರ ಡಿಸೆಂಬರ್ 1ರಂದು ಜನಿಸಿದ ಅವರು, ಸಾಗರದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಣ ಪಡೆದರು.

ಆರೆಸ್ಸೆಸ್ ಸರಕಾರ್ಯವಾಹರಾಗಿ ದತ್ತಾತ್ರೇಯ ಹೊಸಬಾಳೆ ಆಯ್ಕೆಆರೆಸ್ಸೆಸ್ ಸರಕಾರ್ಯವಾಹರಾಗಿ ದತ್ತಾತ್ರೇಯ ಹೊಸಬಾಳೆ ಆಯ್ಕೆ

ವಿದ್ಯಾರ್ಥಿ ದೆಸೆಯಿಂದಲೇ ಚಳವಳಿ, ಸಂಘಟನೆಗಳಲ್ಲಿ ಸಕ್ರಿಯರಾಗಿದ್ದ ಅವರು, ಕಾಲೇಜು ಶಿಕ್ಷಣಕ್ಕಾಗಿ ಬೆಂಗಳೂರಿನ ನ್ಯಾಷನಲ್ ಕಾಲೇಜು ಸೇರಿಕೊಂಡಾಗ ಎಚ್. ನರಸಿಂಹಯ್ಯ ಅವರ ಮಾರ್ಗದರ್ಶನ ದೊರಕಿತು. ಬಳಿಕ ಇಂಗ್ಲಿಷ್ ಸಾಹಿತ್ಯದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಗಳಿಸಿದರು. ಮುಂದೆ ಓದಿ.

ಎಬಿವಿಪಿಯಲ್ಲಿ ಚಟುವಟಿಕೆ

ಎಬಿವಿಪಿಯಲ್ಲಿ ಚಟುವಟಿಕೆ

1968ರಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಸೇರಿಕೊಂಡ ಹೊಸಬಾಳೆ, 1972ರಲ್ಲಿ ವಿದ್ಯಾರ್ಥಿ ಸಂಘಟನೆ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ಸದಸ್ಯರಾದರು. ನಂತರ ಅದರ 15 ವರ್ಷ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಾಗಿ ಚಳವಳಿಗಳಲ್ಲಿ ಭಾಗವಹಿಸಿದ್ದರು.

ಮೀಸಾ ಬಂಧನ

ಮೀಸಾ ಬಂಧನ

ಪ್ರಧಾನಿ ಇಂದಿರಾ ಗಾಂಧಿ ಅವರು ತುರ್ತು ಪರಿಸ್ಥಿತಿ ಹೇರಿದ್ದ ಸಂದರ್ಭದಲ್ಲಿ ಅದರ ವಿರುದ್ಧ ಹೋರಾಟ ನಡೆಸಿದ್ದ ಗುಂಪಿನಲ್ಲಿ ಸಕ್ರಿಯರಾಗಿದ್ದ ಹೊಸಬಾಳೆ, ಒಂದು ವರ್ಷಕ್ಕೂ ಹೆಚ್ಚು ಕಾಲ ಮೀಸಾ ಬಂಧನಕ್ಕೆ ಒಳಗಾಗಿದ್ದರು. ತುರ್ತು ಪರಿಸ್ಥಿತಿ ಕುರಿತಾಗಿ ಮಾಜಿ ಸರಕಾರ್ಯನಿರ್ವಾಹ ಹೋ.ವೆ. ಶೇಷಾದ್ರಿ ಅವರು ಬರೆದ 'ಭುಗಿಲು' ಪುಸ್ತಕದ ಕಾರ್ಯದಲ್ಲಿ ಹೊಸಬಾಳೆ ಅವರು ತೊಡಗಿಸಿಕೊಂಡಿದ್ದರು.

ಮುಂದಿನ 3 ವರ್ಷದಲ್ಲಿ ಎಲ್ಲಾ ಮಂಡಲಗಳಲ್ಲಿ ಆರ್‌ಎಸ್‌ಎಸ್‌ ಶಾಖೆಮುಂದಿನ 3 ವರ್ಷದಲ್ಲಿ ಎಲ್ಲಾ ಮಂಡಲಗಳಲ್ಲಿ ಆರ್‌ಎಸ್‌ಎಸ್‌ ಶಾಖೆ

ಅಸೀಮಾ ಮಾಸ ಪತ್ರಿಕೆ

ಅಸೀಮಾ ಮಾಸ ಪತ್ರಿಕೆ

ವೋಸಿ (ವಿದ್ಯಾರ್ಥಿಗಳು ಮತ್ತು ಯುವಜನರ ಜಾಗತಿಕ ಸಂಘಟನೆ) ಎಂಬ ವಿದ್ಯಾರ್ಥಿಗಳ ಅಂತಾರಾಷ್ಟ್ರೀಯ ಸಂಘಟನೆಯ ಜತೆಗೆ ಅನೇಕ ಸಂಘಟನೆಗಳ ಸೃಷ್ಟಿಯಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಜತೆಗೆ ಕನ್ನಡದಲ್ಲಿ ರಾಷ್ಟ್ರೀಯ ವಿಚಾರಗಳನ್ನು ಪ್ರಕಟಿಸುವ 'ಅಸೀಮಾ' ಮಾಸಪತ್ರಿಕೆಯನ್ನು ಸ್ಥಾಪಿಸಿದರು.

Recommended Video

ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಉಪಚುನಾವಣೆ, ಮೀಸಲಾತಿ ಬಗ್ಗೆ ಚರ್ಚೆ- ಸಿಟಿ ರವಿ ಮಾಹಿತಿ | Oneindia Kannada
2004ರಲ್ಲಿ ಆರೆಸ್ಸೆಸ್‌ಗೆ ವಾಪಸ್

2004ರಲ್ಲಿ ಆರೆಸ್ಸೆಸ್‌ಗೆ ವಾಪಸ್

2004ರಲ್ಲಿ ಆರೆಸ್ಸೆಸ್‌ಗೆ ಮರಳಿದ ಬಳಿಕ ಸಂಘದ ಚಟುವಟಿಕೆಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡರು. ಅಖಿಲ ಭಾರತೀಯ ಸಹ ಬೌದ್ಧಿಕ ಪ್ರಮುಖ್ ಜವಾಬ್ದಾರಿ ನಿಭಾಯಿಸಿದರು. ಆರೆಸ್ಸೆಸ್‌ನ ಕಾರ್ಯನಿರ್ವಾಹರಾಗುವ ಮೊದಲು ಸಹ ಕಾರ್ಯನಿರ್ವಾಹರಾಗಿ ಸೇವೆ ಸಲ್ಲಿಸಿದ್ದರು. ಸಂಘಟನೆ, ಸಾಹಿತ್ಯ, ಕಲೆ ಮುಂತಾದವು ಅವರ ಆಸಕ್ತಿಯ ಕ್ಷೇತ್ರಗಳು.

English summary
Dattatreya Hosabale elected as RSS new Sarkaryavah. Here is his brief profile.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X