Ravi Belagere: ನಾನು ಇನ್ನೊಂದು ಮದುವೆ ಆಗಿದ್ದೇನೆ- ಕುಟುಂಬಸ್ಥರಿಗೆ ನೇರವಾಗಿ ಹೇಳಿದ್ದ ರವಿ ಬೆಳಗೆರೆ- ಮುಂದಾಗಿದ್ದೇನು?
ಶ್ರಮಿಕ ಪತ್ರಕರ್ತ, ಅಕ್ಷರ ಯೋಗಿ ರವಿ ಬೆಳಗೆರೆನಂತವರು ಮತ್ತೆಂದು ಹುಟ್ಟಲು ಸಾಧ್ಯವೇ ಇಲ್ಲ. ಕನ್ನಡದಲ್ಲಿ ಹಲವಾರು ಪುಸ್ತಕಗಳನ್ನು ಬರೆದಿರುವ ಮತ್ತು ಭಾಷಾಂತರಿಸಿರುವ ಕೀರ್ತಿ ರವಿ ಬೆಳಗೆರೆ ಅವರಿಗಿದೆ. ಕನ್ನಡ ಭಾಷೆಯ ಟ್ಯಾಬ್ಲಾಯ್ಡ್ ಹೈ ಬೆಂಗಳೂರು ಮತ್ತು ಪತ್ರಿಕೆ ಓ ಮನಸೇ ಸಂಪಾದಕರಾಗಿದ್ದ ರವಿ ಬೆಳಗೆರೆ ಅವರ ಬಗ್ಗೆ ಯಾರಿಗೂ ತಿಳಿಯದ ಕೆಲವೊಂದಿಷ್ಟು ವಿಚಾರಗಳನ್ನು ಅವರ ಪುತ್ರಿ ಭಾವನಾ ಬೆಳಗೆರೆ ಅವರು ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ.
ಹೌದು... ರವಿ ಬೆಳಗೆರೆ ಉತ್ತಮ ಬರಹಗಾರ ಮತ್ತು ಪತ್ರಕರ್ತರು. ಅಲ್ಲದೆ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕ್ರೈಂ ಡೈರಿಯಲ್ಲಿ ಅವರ ಧ್ವನಿ ಇಂದಿಗೂ ಕೂಡ ಯಾರೂ ಮರೆಯಲು ಸಾಧ್ಯವೇ ಇಲ್ಲ. ಇವರ ನಿರೂಪಣೆಯ ಎಂದೂ ಮರೆಯದ ಹಾಡು' ಕನ್ನಡದ ಜನಪ್ರಿಯ ಕಾರ್ಯಕ್ರಮಗಳಲ್ಲಿ ಒಂದು. ಅಲ್ಲದೆ ಇವರು ಕೆಲವು ಕಿರುತೆರೆ ಮತ್ತು ಚಿತ್ರಗಳಲ್ಲಿಯೂ ನಟಿಸಿದ್ದಾರೆ. ಇವರ ಮೊದಲ ಪತ್ನಿಯ ಮಗಳಾದ ಭಾವನಾ ಕನ್ನಡ ಚಿತ್ರನಟ ಶ್ರೀನಗರ ಕಿಟ್ಟಿಯವರನ್ನು ವರಿಸಿದ್ದಾರೆ.

ಇತ್ತೀಚೆಗೆ ವಿಶ್ವವಾಣಿ ಯೂಟ್ಯೂಬ್ ಚಾನೆಲ್ ಸಂದರ್ಶನದಲ್ಲಿ ಮಾತನಾಡಿದ ಭಾವನಾ ತಂದೆಯ ಬಗ್ಗೆ ಕೆಲವೊಂದಿಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ. ರವಿ ಬೆಳಗೆರೆ ಅವರಿಗೆ ಇಬ್ಬರು ಪತ್ನಿಯರು. ಭಾವನಾ ಮೊದಲ ಪತ್ನಿಯ ಕೊನೆಯ ಮಗಳು. ರವಿ ಬೆಳಗೆರೆ ಅವರು ತಾವು ಮತ್ತೊಂದು ಮದುವೆಯಾಗಿರುವ ಬಗ್ಗೆ ಮುಚ್ಚಿಡಲು ಪ್ರಯತ್ನ ಮಾಡಿರಲಿಲ್ಲ. ಅವರು ನೇರವಾಗಿ ತಮ್ಮ ಮಕ್ಕಳು ಹಾಗೂ ಮೊದಲ ಪತ್ನಿ ಲಲಿತಾ ಮುಂದೆ ತಾವು ಎರಡನೇ ಮದುವೆಯಾಗಿರುವ ಬಗ್ಗೆ ಮುಚ್ಚುಮರೆಯಿಲ್ಲದೆ ಹೇಳಿಕೊಂಡಿದ್ದರಂತೆ.
ರವಿ ಬೆಳಗೆರೆ ಅವರ ಮಾತು ಕೇಳಿ ಮಗಳು ಭಾವನಾ ಹಾಗೂ ಪತ್ನಿ ಲಲಿತಾ ಶಾಕ್ ಆಗಿದ್ದರಂತೆ. ಆದರೂ ಪತ್ನಿ ಲಲಿತಾ ರವಿ ಬೆಳಗೆರೆ ಮೇಲೆ ಕೋಪಗೊಂಡಿರಲಿಲ್ಲ. ಯಾವತ್ತೂ ಕೂಡ ರವಿ ಅವರ ಮೇಲೆ ದ್ವೇಷ ಕಾರಿರಲಿಲ್ಲ. ರವಿ ಬೆಳಗೆರೆ ಅವರ ಎರಡನೇ ಪತ್ನಿ ಯಶೋಮತಿ ಮೇಲೂ ದ್ವೇಷ ಇಟ್ಟುಕೊಂಡಿರಲಿಲ್ಲ. ರವಿ ಬೆಳಗೆರೆ ಹಾಗೂ ಎರಡನೇ ಪತ್ನಿ ಯಶೋಮತಿಗೂ ಮಗನಿದ್ದಾನೆ. ಆ ಮಗನನ್ನು ರವಿ ಬೆಳಗೆರೆ ಮೊದಲ ಪತ್ನಿ ಮಗ ಕರ್ಣ ಬೆಳಗೆರೆ ಓದಿಸುತ್ತಿದ್ದಾರೆ. ಯಾಕೆಂದರೆ ಯಶೋಮತಿ ಮಗ ಈಗ ಹತ್ತನೇ ತರಗತಿಯಲ್ಲಿ ಓದುತ್ತಿದ್ದಾನೆ. ಯಶೋಮತಿ ರವಿ ಬೆಳಗೆರೆ ಅವರ ಹಿರಿಯ ಮಗಳ ಆಪ್ತ ಸ್ನೇಹಿತೆ ಕೂಡ ಆಗಿದ್ದರು. ಯಶೋಮತಿಗೆ ಮಗ ರವಿ ಬೆಳಗೆರೆ ಮಗಳ ಮಗಳ ಹೆಚ್ಚು ಕಡಿಮೆ ಒಂದೇ ವಯಸ್ಸಿನವರು.

ರವಿ ಬೆಳಗೆರೆ ಅವರು ತಮಗೆ ಇನ್ನೊಂದು ಮದುವೆ ಆಗಿದೆ ಅನ್ನೋದನ್ನು ಕುಟುಂಬಸ್ಥರಿಗೆ ನೇರವಾಗಿ ಹೇಳಿಕೊಂಡಿದ್ದರು. ಮೊದಲ ಪತ್ನಿ ಲಲಿತಾಗೆ ಈ ಬಗ್ಗೆ ಎಲ್ಲವನ್ನೂ ತಿಳಿ ಹೇಳಿದ್ದರು. ಈ ವಿಚಾರ ಗೊತ್ತಾಗಿಯೂ ಕೂಡ ರವಿ ಬೆಳಗೆರೆ ಅವರೊಂದಿಗೆ ಲಲಿತಾ ಜಗಳ ಆಡಿರಲಿಲ್ಲ. ಕೋಪ ಮಾಡಿಕೊಂಡಿರಲಿಲ್ಲ. ಮನಸ್ಸಿನಲ್ಲಿ ಬೇಸರ ಇತ್ತು. ಆದರೆ ಅದನ್ನು ತೋರಿಸಿಕೊಂಡಿರಲಿಲ್ಲ.
ರವಿ ಬೆಳಗೆರೆ ಕೂಡ ಎರಡನೇ ಮದುವೆ ಆದ ಮೇಲೆ ಲಲಿತಾ ಅವರನ್ನು ಕೀಳಾಗಿ ಕಾಣೋದು, ಅಸಡ್ಡೆ ಮಾಡೋದು, ಜಗಳ ಮಾಡೋದು ಮಾಡಿರಲಿಲ್ಲವಂತೆ. ಯಶೋಮತಿ ಬಂದ ಮೇಲೆ ಲಲಿತಾ ಅವರ ಮೇಲೆ ಇರುವ ಪ್ರೀತಿ ರವಿ ಅವರಿಗೆ ಒಂದಿಷ್ಟು ಕಡಿಮೆ ಆಗಿರಲಿಲ್ಲವಂತೆ. ರವಿ ಹಾಗೂ ಲಲಿತಾ ಅವರ ನಡುವೆ ಇಂಥಹ ಪ್ರೀತಿ ಇರುವುದರಿಂದಲೇ ಯಶೋಮತಿ ಬಂದ ಮೇಲೂ ಇವರಿಬ್ಬರ ನಡುವೆ ಯಾವುದೇ ಜಗಳ ಆಗಿರಲಿಲ್ಲ. ರವಿ ಹಾಗೂ ಲಲಿತಾ ಯಾವತ್ತೂ ಕೂಡ ಜಗಳ ಆಡಿದವರೇ ಅಲ್ಲ ಎಂದು ಮಗಳು ಭಾವನಾ ಹೇಳಿದ್ದಾರೆ.
ಯಶೋಮತಿ ಅವರು ರವಿ ಅರೊಂದಿಗೆ ಕೆಲಸ ಮಾಡುತ್ತಿದ್ದರು. ಆಗ ಸ್ನೇಹವಾಗಿ ಸ್ನೇಹ ಪ್ರೀತಿಯಾಗಿ ಇಬ್ಬರು ಮದುವೆಯಾಗಿದ್ದುರು. ಆರಂಭದಲ್ಲಿ ಲಲಿತಾ ಹಾಗೂ ಅವರ ಮಕ್ಕಳಿಗೆ ಯಶೋಮತಿ ಅವರ ಮೇಲೆ ಕೋಪ ಇತ್ತು. ಆದರೆ ರವಿ ಅವರ ಸಮಾನ ಪ್ರೀತಿ, ಬದಲಾಗದ ಅವರ ವ್ಯಕ್ತಿತ್ವ ಕಂಡು ಯಶೋಮತಿ ಮೇಲೆ ಇದ್ದ ಅಲ್ಪಸ್ವಲ್ಪ ಬೇಸರವೂ ಕಡಿಮೆ ಆಯ್ತು. ಆದರೆ ಯಶೋಮತಿ ತುಂಬಾ ಸಣ್ಣವಯಸ್ಸಿನಲ್ಲಿ ಅಪ್ಪನೊಂದಿಗೆ ಮದುವೆಯಾಗಿ ಈಗ ಅವರು ಅಪ್ಪನನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಯಶೋಮತಿಯನ್ನು ನೋಡಿದರೆ ನಮಗೆ ಪಾಪ ಎನಿಸುತ್ತದೆ ಎಂದು ಭಾವನಾ ಹೇಳಿದ್ದಾರೆ.












Click it and Unblock the Notifications