Post Viral: ಸ್ಮಾರ್ಟ್ ವಾಚ್‌ನಲ್ಲಿ QR ಕೋಡ್ ಪ್ರದರ್ಶಿಸಿದ ಆಟೋ ಚಾಲಕ: ಪಿ.ಚಿದಂಬರಂಗೆ ಆರ್.ಅಶೋಕ್ ಕೇಳಿದ್ದೇನು!
ಬೆಂಗಳೂರು, ಸೆಪ್ಟಂಬರ್ 22: ರಾಜಧಾನಿ ಬೆಂಗಳೂರು ತಂತ್ರಜ್ಞಾನ ಸೇರಿದಂತೆ ಅನೇಕ ಮೊದಲುಗಳಿಗೆ ಕಾರಣವಾಗಿದೆ. ಅದೇ ಇಲ್ಲೊಬ್ಬ ವ್ಯಕ್ತಿ ಆಟೋದಲ್ಲಿ ಮಾಡಿರುವ ಕೆಲಸವು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಇದರ ಫೋಟೋವನ್ನು ನೆಟ್ಟಿಗರು ಹಂಚಿಕೊಂಡಿದ್ದಲ್ಲದೇ, ವಿಪಕ್ಷ ನಾಯಕ ಆರ್.ಅಶೋಕ್ ಅವರು ಸಹ ಪೋಸ್ಟ್ ಹಂಚಿಕೊಂಡು ಇದು ಡಿಜಿಟಲ್ ಇಂಡಿಯಾದ ಶಕ್ತಿ ಎಂದು ತಿಳಿಸಿದ್ದಾರೆ.
ಬೆಂಗಳೂರು ಮತ್ತೊಂದು ಹೊಸ ವಿಚಾರಕ್ಕೆ ಸಾಕ್ಷಿಯಾಗಿದೆ. ಇಲ್ಲಿ ಜನ ಸಾಮಾನ್ಯರಲ್ಲಿ ಸಹ ಡಿಜಿಟಲ್ ಸಾಕ್ಷರತೆ ಇದೆ. ಇದಕ್ಕೆ ಪೂರಕವೆಂಬಂತೆ ಸಾಮಾಜಿಕ ಜಾಲತಾಣದಲ್ಲಿ 'ಪೀಕ್ ಬೆಂಗಳೂರು' ಎಕ್ಸ್ ಹ್ಯಾಂಡಲ್ ಆಟೋರಿಕ್ಷಾ ಚಾಲಕನ ಫೊಟೋ ಪೋಸ್ಟ್ ಮಾಡಿದೆ.

ಈ ಆಟೋ ಚಾಲಕ ಸೇವೆ ನೀಡಿದ ನಂತರ ಹಣ ಪಡೆದಯಲು ಸ್ಮಾರ್ಟ್ ವಾಚ್‌ನಲ್ಲಿ ಕ್ಯೂಆರ್ ಪ್ರದರ್ಶಿಸಿ ಹಣ ಪಡೆದ ಫೋಟೋ ವೈರಲ್ ಆಗಿದೆ. ಸಾಮಾನ್ಯವಾಗಿ ನೀವು ಕ್ಯೊಆರ್ ಕೋಟ್ ಸ್ಟಿಕ್ಕರ್ ಅನ್ನು ಸ್ಕ್ಯಾನ್ ಮಾಡಿ ಪೋನ್ ಪೆ ಇಲ್ಲವೇ ಗೂಗಲ್ ಮೂಲಕ ಹಣ ಪಾವತಿಸಿರುತ್ತೀರಿ.
ಡಿಜಿಟಲ್ ಅಪ್ಡೇಟ್ ಆಗಿರುವ ಆಟೋ ಚಾಲಕ
ಬೆಂಗಳೂರಿನಲ್ಲಿ ಆಟೋರಿಕ್ಷಾ ಚಾಲಕರೊಬ್ಬರು ತಮ್ಮ ಸ್ಮಾರ್ಟ್ ವಾಚ್‌ನಲ್ಲಿ ಕ್ಯೂಆರ್ ಕೋಡ್ ಮೂಲಕ ಹಣ ಸ್ವೀಕರಿಸುತ್ತಿರುವ ಫೋಟೋ ವೈರಲ್ ಆಗಿದೆ. ಆಟೋ ಚಾಲಕರು ಸಹ ಎಷ್ಟು ಅಪ್‌ಗ್ರೇಡ್ ಆಗಿದ್ದಾರೆ ಎಂಬ ಮಾತು ಕೇಳಿ ಬಂದಿದೆ. ಈ ಘಟನೆ ಬೆಂಗಳೂರಿನ ಕೋರಮಂಗಲದಲ್ಲಿ ನಡೆದಿದೆ.
#peakBengaluru move" ಎಂಬ ಶೀರ್ಷಿಕೆಯಡಿ ಆಟೋ ಚಾಲಕನ ಫೋಟೋ ವೈರಲ್ ಆಗಿದೆ. ಹಿಂದೆ ಕೂತ ಪ್ರಯಾಣಿಕರು ತೆಗೆದ ಫೋಟೋದಲ್ಲಿ ಸ್ಮಾರ್ಟ್ ವಾಚ್ ಕ್ಯೂಆರ್ ಕೋಡ್ ಚಿತ್ರ ಜೊತೆಗೆ ನಮ್ಮ ಯಾತ್ರಿ ಚಾಲಕನ ಕಾಣಿಸುತ್ತಾರೆ. ಚಾಲಕನ ಇಷ್ಟು ಅಪ್ಡೇಟ್ ಆಗಿದ್ದು ಕಂಡು ಗ್ರಾಹಕರು ಮತ್ತು ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ನಮ್ಮ ಯಾತ್ರಿ ಆಟೋ ಚಾಲಕ ಇಂಜಿನಿಯರ್!
ಆಟೋ ಸೇವೆ ಬಳಿಕ ಪ್ರಯಾಣಿಕರು ಆನ್‌ಲೈನ್ ಪಾವತಿಗೆ ಕ್ಯೂಆರ್ ಕೋಡ್ ಕೇಳುತ್ತಾರೆ. ಆಗ ಈ ಚಾಲಕ ತನ್ನ ಕೈಯಲಿದ್ದ ಸ್ಮಾರ್ಟ್ ವಾಚ್ ಅನ್ನು ಪ್ರದರ್ಶಿಸಿದ್ದಾರೆ. ಈ ಚಾಲಕರು ಎಂಜಿನಿಯರ್ ಆಗಿದ್ದು, ವಾರಾಂತ್ಯದಲ್ಲಿ ನಮ್ಮ ಯಾತ್ರಿ ಆಟೋ ಓಡಿಸಿದ್ದಾರೆ. ಅವರೇ ಈ ಸ್ಮಾರ್ಟ್ ವಾಚ್ ಕ್ಯೂಆರ್ ಕೋಡ್ ಮೂಲಕ ಹಣ ಸ್ವೀಕರಿಸಿದ್ದಾರೆ. ಹಣ ಅವರ ಬ್ಯಾಂಕ್ ಖತೆಗೆ ನೇರವಾಗಿ ಜಮೆ ಆಗುತ್ತದೆ.
ನಿತ್ಯ Rapido ಟ್ರಿಪ್ ಹೊಡೆಯುವ ಈ ಚಾಲಕರು ದೊಡ್ಡ ಕಾರ್ಪೊರೇಟ್ ಕಂಪನಿಯಲ್ಲಿ ಕೆಲಸ ಮಾಡುತ್ತಾರೆ ಎಂದು ಗ್ರಾಹಕರು ಬಹಿರಂಗಪಡಿಸಿದ್ದಾರೆ. ಈ ಬುದ್ಧಿವಂತ ಚಾಲಕ ಗ್ರಾಹಕರಿಗೆ ಸೂಕ್ತ ಬೆಲೆಯಲ್ಲಿ ಗಮ್ಯಸ್ಥಾನವನ್ನು ತಲುಪಲು ಸಹಾಯ ಮಾಡುತ್ತಾರೆ. ಇದರ ಹೊರತು ಚಾಲಕ ವ್ಯಕ್ತಿಯಕ ಗೌಪ್ಯತೆ ಕಾರಣಕ್ಕೆ ಅವರ ಹೆಚ್ಚಿನ ಮಾಹಿತಿಯನ್ನು ಗ್ರಾಹಕರ ನೀಡಿಲ್ಲ.
An autorickshaw driver displaying QR code on his smart-watch to passengers for the payment of his trip via UPI directly to his bank account.
— R. Ashoka (@RAshokaBJP) September 21, 2024
This is the power of Financial Inclusion and #DigitalIndia that PM @narendramodi has ushered in the last 10 years.
Any comments Shri… pic.twitter.com/tNV26CTumo
ಡಿಜಿಟಲ್ ಶಕ್ತಿ ಬಗ್ಗೆ ಪಿ.ಚಿದಂಬರಂಗೆ ಆರ್.ಅಶೋಕ್ ಪ್ರಶ್ನೆ
ಈ ಕುರಿತು ವಿಪಕ್ಷ ನಾಯಕ ಆರ್.ಅಶೋಕ್ ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಚಾಲಕನ ಫೋಟೋ ಸಮೇತ ಮಾಹಿತಿ ಹಂಚಿಕೊಂಡಿದ್ದಾರೆ. ಆಟೊರಿಕ್ಷಾ ಚಾಲಕನು ತನ್ನ ಸ್ಮಾರ್ಟ್ ವಾಚ್‌ನಲ್ಲಿ ಕ್ಯೂಆರ್ ಕೋಡ್ ಪ್ರದರ್ಶಿಸಿ ಗ್ರಾಹಕರಿಂದ ಹಣ ಪಡೆಯುತ್ತಾರೆ. ಈ ಹಣವ ನೇರ ಅವರ ಬ್ಯಾಂಕ್ ಖಾತೆಗೆ UPI ಮೂಲಕ ಪಾವತಿ ಆಗುತ್ತದೆ ಎಂದು ಬರೆದುಕೊಂಡಿದ್ದಾರೆ.
ಇದೊಂದು ಉತ್ತಮ ಬೆಳವಣಿಗೆ ಆಗಿದ್ದು, #DigitalIndia ಶಕ್ತಿಯಿಂದಾಗಿ ಇದೆಲ್ಲವು ಸಾಧ್ಯವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಕಳೆದ 10 ವರ್ಷಗಳಲ್ಲಿ ಇಂತಹ ಅದ್ಭುತ ಶಕ್ತಿಗೆ ನಾಂದಿ ಹಾಡಿದ್ದಾರೆ. ಇದಕ್ಕೆ ಏನಾದರು ಪ್ರತಿಕ್ರಿಯಿಸುವಿರಾ ಎಂದು ಕಾಂಗ್ರೆಸ್ ಹಿರಿಯ ನಾಯಕ ಪಿ.ಚಿದಂಬರಂ ಅವರನ್ನು ಟ್ಯಾಗ್ ಮಾಡಿ ಆರ್.ಅಶೋಕ್ ಪ್ರಶ್ನಿಸಿದ್ದಾರೆ.












Click it and Unblock the Notifications