ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Papankush Ekadashi 2022: ಏಕಾದಶಿಯ ಪೂಜಾ ವಿಧಿ, ಮಂತ್ರ, ಸಮಯ ಕಥೆ ತಿಳಿಯಿರಿ

|
Google Oneindia Kannada News

ಅಶ್ವಿನ್ ಮಾಸದ ಶುಕ್ಲ ಪಕ್ಷದ ಏಕಾದಶಿಯನ್ನು ಪಾಪಾಂಕುಶ ಏಕಾದಶಿ ಎಂದು ಕರೆಯಲಾಗುತ್ತದೆ. ಈ ಏಕಾದಶಿ ವ್ರತವನ್ನು ಆಚರಿಸುವುದರಿಂದ ತಿಳಿಯದೆ ಮಾಡಿದ ಪಾಪಗಳಿಂದ ಮುಕ್ತರಾಗುತ್ತಾರೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಈ ಬಾರಿಯ ಪಾಪಾಂಕುಶ ಏಕಾದಶಿ ಗುರುವಾರ ಬಂದಿರುವುದರಿಂದ ಜೀವನದಲ್ಲಿ ಅಡೆತಡೆಗಳನ್ನು ಎದುರಾಗುವವರು ಈ ವ್ರತವನ್ನು ಆಚರಿಸುವುದು ಉತ್ತಮ. ಮತ್ತೊಂದು ವಿಚಾರ ಅಂದರೆ ಯಾವುದೋ ಕಾರಣಕ್ಕೆ ಮದುವೆ ನಿಶ್ಚಯವಾಗದ ಯುವಕ-ಯುವತಿಯರು ಕೂಡ ಈ ವ್ರತವನ್ನು ಕಡ್ಡಾಯವಾಗಿ ಆಚರಿಸುತ್ತಾರೆ. ಇದರೊಂದಿಗೆ ದಾಂಪತ್ಯ ಜೀವನ ಸುಖಮಯವಾಗಿರದ ದಂಪತಿಗಳು ಕೂಡ ಈ ಉಪವಾಸವನ್ನು ಆಚರಿಸುತ್ತಾರೆ.

ಪಾಪಾಂಕುಶ ಏಕಾದಶಿಯ ದಿನ ವಿಷ್ಣುವನ್ನು ಯಥಾಪ್ರಕಾರ ಪೂಜಿಸಲಾಗುತ್ತದೆ. ದಿನವಿಡೀ ಉಪವಾಸವಿದ್ದು ದೇವರಿಗೆ ಭಕ್ತಿಯಿಂದ ಪೂಜೆ ಮಾಡಲಾಗುತ್ತದೆ. ಎರಡನೇ ದಿನ ಬ್ರಾಹ್ಮಣರಿಗೆ ಅನ್ನದಾನ ಮಾಡಿ ದಕ್ಷಿಣೆ ಕೊಟ್ಟು ಆಶೀರ್ವಾದ ಪಡೆಯಲಾಗುತ್ತದೆ. ಮದುವೆಯ ಆಸೆಯಿಂದ ಉಪವಾಸ ಮಾಡುವವರು ವಿಷ್ಣುವಿಗೆ ಹಳದಿ ಹೂಗಳಿಂದ ಅಲಂಕರಿಸಿ ಹಳದಿ ಸಿಹಿ ನೈವೇದ್ಯವನ್ನು ಮಾಡುತ್ತಾರೆ. ಭಗವಂತನಿಗೆ ಪೀತಾಂಬರವನ್ನು ಅರ್ಪಿಸಿ ಮತ್ತು ಹಳದಿ ಬಟ್ಟೆಗಳಿಂದ ಅಲಂಕರಿಸಲಾಗುತ್ತದೆ. ವೈವಾಹಿಕ ಜೀವನದ ತೊಂದರೆಗಳನ್ನು ನಿವಾರಿಸಲು ಮತ್ತು ಶಕ್ತಿ ನೀಡಲು ಶ್ರೀಹರಿಗೆ ಶುದ್ಧ ತುಪ್ಪವನ್ನು ಅರ್ಪಿಸಿ ಪೂಜಿಸಲಾಗುತ್ತದೆ.

ಪಾಪಾಂಕುಶ ಏಕಾದಶಿ ಕಥೆ

ಪಾಪಾಂಕುಶ ಏಕಾದಶಿ ಕಥೆ

ವಿಂಧ್ಯಾಚಲ ಪರ್ವತದಲ್ಲಿ ಒಬ್ಬ ಕ್ರೂರ ವಾಸಿಸುತ್ತಿದ್ದ. ಅವನ ಹೆಸರು ಕ್ರೋಧನ. ಅವನು ತನ್ನ ಜೀವನವನ್ನು ಹಿಂಸೆ, ರಕ್ತಪಾತ, ಲೂಟಿ, ಸುಳ್ಳು ಮತ್ತು ಪಾಪದ ಕೆಲಸಗಳಲ್ಲಿ ಕಳೆದನು. ಯಮರಾಜನು ತನ್ನ ಕೊನೆಯ ಸಮಯಕ್ಕೆ ಒಂದು ದಿನ ಮುಂಚಿತವಾಗಿ ಅವನನ್ನು ಕರೆತರಲು ತನ್ನ ದೂತರನ್ನು ಕಳುಹಿಸಿದನು. ದೂತರು ಕ್ರೋಧನನಿಗೆ ನಾಳೆ ನಿಮ್ಮ ಕೊನೆಯ ಸಮಯ, ನಾವು ನಿಮ್ಮನ್ನು ಕರೆದೊಯ್ಯಲು ಬಂದಿದ್ದೇವೆ ಎಂದು ಹೇಳಿದರು. ಸಾವಿನ ಭಯದಿಂದ ಕ್ರೋಧನು ಅಂಗೀರ ಋಷಿಯ ಆಶ್ರಮವನ್ನು ತಲುಪಿದನು. ತನ್ನನ್ನು ರಕ್ಷಿಸುವಂತೆ ಋಷಿಯನ್ನು ಬೇಡಿಕೊಂಡನು. ಋಷಿಯು ಅವನ ಮೇಲೆ ಕರುಣೆ ತೋರಿದನು. ಪ್ರಾಸಂಗಿಕವಾಗಿ ಆ ದಿನ ಪಾಪಂಕುಶ ಏಕಾದಶಿ. ಋಷಿಯು ಪಾಪಾಂಕುಶ ಏಕಾದಶಿಯಂದು ಉಪವಾಸವನ್ನು ಆಚರಿಸುವಂತೆ ಹೇಳಿದನು. ಕ್ರೋಧನಿಗೆ ಪೂಜೆಯ ನಿಯಮವನ್ನೂ ಹೇಳಿದರು. ಅದರಂತೆ ಕ್ರೋಧನು ಉಪವಾಸ ಮಾಡಿದರು. ಭಗವಂತನ ಕೃಪೆಯಿಂದ ನೇರವಾಗಿ ವಿಷ್ಣುಲೋಕವನ್ನು ತಲುಪಿದನು.

ಏಕಾದಶಿ ಸಮಯ

ಏಕಾದಶಿ ಸಮಯ

ಏಕಾದಶಿ ದಿನಾಂಕ ಅಕ್ಟೋಬರ್ 5 ರಂದು ಮಧ್ಯಾಹ್ನ 12.02 ರಿಂದ ಪ್ರಾರಂಭವಾಗುತ್ತದೆ

ಏಕಾದಶಿ ದಿನಾಂಕ ಅಕ್ಟೋಬರ್ 6 ರಂದು ಬೆಳಗ್ಗೆ 9.42 ರವರೆಗೆ ಪೂರ್ಣಗೊಂಡಿದೆ

ಅಕ್ಟೋಬರ್ 7 ರಂದು ಬೆಳಗ್ಗೆ 6.20 ರಿಂದ 7.26 ರವರೆಗೆ ಉಪವಾಸದ ಪಾರಣ

ಪೂಜಾ ವಿಧಿ

ಪೂಜಾ ವಿಧಿ

ಪಾಪಾಂಕುಶ ಏಕಾದಶಿ ದಿನದಂದು ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಬೇಕು. ಮನೆಯ ದೇವರ ಕೋಣೆಯಲ್ಲಿ ದೀಪವನ್ನು ಹಚ್ಚಿ. ಗಂಗಾಜಲದಿಂದ ವಿಷ್ಣುವಿಗೆ ಅಭಿಷೇಕ ಮಾಡಿ. ವಿಷ್ಣುವಿಗೆ ಹೂವುಗಳು ಮತ್ತು ತುಳಸಿ ದಳವನ್ನು ಅರ್ಪಿಸಿ. ಸಾಧ್ಯವಾದರೆ ಈ ದಿನವೂ ಉಪವಾಸವಿರಿ. ದೇವರನ್ನು ಆರಾಧಿಸಿ. ದೇವರಿಗೆ ಭೋಗವನ್ನು ಅರ್ಪಿಸಿ. ಸಾತ್ವಿಕ ವಸ್ತುಗಳನ್ನು ಮಾತ್ರ ದೇವರಿಗೆ ಅರ್ಪಿಸಲಾಗುತ್ತದೆ ಎಂಬುದನ್ನು ನೆನಪಿನಲ್ಲಿಡಿ. ತುಳಸಿಯನ್ನು ತಪ್ಪದೇ ವಿಷ್ಣುವಿಗೆ ಅರ್ಪಿಸುವ ಭೋಗದಲ್ಲಿ ಸೇರಿಸಬೇಕು. ತುಳಸಿ ಇಲ್ಲದೆ ಭಗವಾನ್ ವಿಷ್ಣು ಭೋಗವನ್ನು ಸ್ವೀಕರಿಸುವುದಿಲ್ಲ ಎಂದು ನಂಬಲಾಗಿದೆ. ಈ ಪವಿತ್ರ ದಿನದಂದು ಭಗವಾನ್ ವಿಷ್ಣುವಿನ ಜೊತೆಗೆ ಲಕ್ಷ್ಮಿ ದೇವಿಯನ್ನು ಪೂಜಿಸಿ. ಈ ದಿನ ನಿಮ್ಮ ಬಳಿ ಎಷ್ಟು ಸಾಧ್ಯವೋ ಅಷ್ಟು ಬಾರಿ ದೇವರನ್ನು ಧ್ಯಾನಿಸಿ.

ಮಂತ್ರ

ಮಂತ್ರ

ಶಾಂತಾಕಾರಂ ಭುಜಂಗಶಯನಂ ಪದ್ಮನಾಭಂ ಸುರೇಶಂ|

ವಿಶ್ವಧರಂ ಗಗನ ಸದೃಶಂ ಮೇಘವರ್ಣ ಶುಭಾಂಗಂ|

ಲಕ್ಷ್ಮೀಕಾಂತ ಕಮಲನಯನಂ ಯೋಗಿಭಿರ್ಧ್ಯಾನಗಮ್ಯಂ

ವಂದೇ ವಿಷ್ಣು ಭವಭಯಹರಂ ಸರ್ವ ಲೋಕೈಕನಾಥಂ||

ಯಂ ಬ್ರಹ್ಮ ವರುಣೈಂದ್ರು ರುದ್ರಮೃತಃ ಸ್ತುನ್ವಾನಿ ದಿವ್ಯೈ ಸ್ತವೈವೇದೇಃ|

ಸಾಂಗ ಪದಕ್ರಮೋಪನಿಷದೈ ಗಾರ್ಯಂತಿ ಯಂ ಸಾಮಗಾಃ||

ಧ್ಯಾನಾವಸ್ಥಿತ ತದ್ಗತೇನ್ ಮನಸಾ ಪಶ್ಯತಿ ಯಂ ಯೋಗಿನೋ|

English summary
Papankusha Ekadashi 2022: Here is Date, Shubh Muhurat, Puja Vidhi and Significance in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X