ಭಾರತದಲ್ಲಿ 3ನೇ ಡೋಸ್ ಲಸಿಕೆಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು; ಕಾರಣವೇ ಕೋವಿಡ್!?

ನವದೆಹಲಿ, ಏಪ್ರಿಲ್ 25: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ನಾಲ್ಕನೇ ಅಲೆಯ ಭೀತಿ ಹೆಚ್ಚುತ್ತಿದ್ದಂತೆ ಮುನ್ನೆಚ್ಚರಿಕೆ ಡೋಸ್ ಅನ್ನು ಪಡೆದುಕೊಳ್ಳುವವರ ಸಂಖ್ಯೆ ದಿಢೀರ್ ಏರಿಕೆ ಆಗಿದೆ. ಭಾರತದಲ್ಲಿ ಏಪ್ರಿಲ್ 10ರಂದು 18 ರಿಂದ 59 ವರ್ಷದ ಎಲ್ಲರೂ ಬೂಸ್ಟರ್ ಡೋಸ್ ಪಡೆದುಕೊಳ್ಳಬಹುದು ಎಂದು ಕೇಂದ್ರ ಸ್ರಕಾರದ ಆದೇಶ ಹೊರಡಿಸಿತ್ತು. ಆದರೆ ಅಂದಿನಿಂದ ಇಂದಿನವರೆಗೂ ಈ ವಯೋಮಾನದ ಕೇವಲ 3.8 ಲಕ್ಷ ಜನರು 3ನೇ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

ದೇಶದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ ಏರಿಕೆ ಆಗುತ್ತಿದ್ದಂತೆ ಅಲರ್ಟ್ ಆಗಿರುವ ಜನರು ಮೂರನೇ ಡೋಸ್ ಲಸಿಕೆಗಾಗಿ ಮುಗಿ ಬೀಳುತ್ತಿದ್ದಾರೆ. ಬೂಸ್ಟರ್ ಡೋಸ್ ಪಡೆದುಕೊಂಡ ಒಟ್ಟು ಫಲಾನುಭವಿಗಳಲ್ಲಿ ಶೇ.51ರಷ್ಟು ಜನರು ಕಳೆದ ನಾಲ್ಕು ದಿನಗಳಲ್ಲಿ ಲಸಿಕೆ ಹಾಕಿಸಿಕೊಂಡಿದ್ದಾರೆ ಎಂದು ಗೊತ್ತಾಗಿದೆ. ಅಂದರೆ ಇದುವರೆಗೂ 100 ಜನರು ಮುನ್ನೆಚ್ಚರಿಕೆ ಲಸಿಕೆ ಹಾಕಿಸಿಕೊಂಡಿದ್ದರೆ, ಅದರಲ್ಲಿ 51 ಮಂದಿ ಕಳೆದ ನಾಲ್ಕು ದಿನಗಳಿಂದ ಈಚೆಗೆ ಲಸಿಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಭಾರತದಲ್ಲಿ ಕೋವಿಡ್-19 ಸೋಂಕಿನ ಭೀತಿ ಎಷ್ಟರ ಮಟ್ಟಿಗಿದೆ?, ಮೂರನೇ ಡೋಸ್ ಬಗ್ಗೆ ಜನರು ಸೀರಿಯಸ್ ಆಗುವುದಕ್ಕೆ ನಾಲ್ಕನೇ ಅಲೆಯ ಭೀತಿ ಕಾರಣವಾಯಿತೇ?, ಈ ಡೋಸ್ ಪಡೆದುಕೊಳ್ಳುವುದಕ್ಕೆ ಎಲ್ಲರೂ ಅರ್ಹರಾಗಿರುತ್ತಾರೆಯೇ ಎಂಬುದರ ಕುರಿತು ವಿವರಣಾತ್ಮಕ ವರದಿ ಇಲ್ಲಿದೆ ಓದಿ.

ಭಾರತದಲ್ಲಿ ಬೂಸ್ಟರ್ ಡೋಸ್ ಪಡೆದುಕೊಂಡವರ ಸಂಖ್ಯೆ ಎಷ್ಟಿದೆ?

ಭಾರತದಲ್ಲಿ ಬೂಸ್ಟರ್ ಡೋಸ್ ಪಡೆದುಕೊಂಡವರ ಸಂಖ್ಯೆ ಎಷ್ಟಿದೆ?

ದೇಶದಲ್ಲಿ ಏಪ್ರಿಲ್ 10 ರಿಂದ 18 ರಿಂದ 59 ವರ್ಷದವರು ಕೊರೊನಾವೈರಸ್ ಬೂಸ್ಟರ್ ಡೋಸ್ ಪಡೆದುಕೊಳ್ಳುವುದಕ್ಕೆ ಅನುಮತಿ ನೀಡಲಾಗಿತ್ತು. ಅಂದಿನಿಂದ ಇಂದಿನವರೆಗೆ ಒಟ್ಟು 14 ದಿನಗಳಲ್ಲಿ 3,87,719 ಜನರು 3ನೇ ಡೋಸ್ ಲಸಿಕೆಯನ್ನು ಹಾಕಿಸಿಕೊಂಡಿದ್ದಾರೆ. ಈ ಪೈಕಿ ಏಪ್ರಿಲ್ 20 ರಿಂದ ಏಪ್ರಿಲ್ 24ರ ಅವಧಿಯಲ್ಲಿ 1.98 ಲಕ್ಷ ಜನರು ಮುನ್ನೆಚ್ಚರಿಕೆ ಡೋಸ್ ಅನ್ನು ಪಡೆದುಕೊಂಡಿದ್ದಾರೆ ಎಂದು ಅಂಕಿ-ಅಂಶಗಳು ಹೇಳುತ್ತವೆ.

ಇದರ ಹೊರತಾಗಿ, 18-59 ಗುಂಪಿನ ಒಟ್ಟು ಮೂರನೇ ಡೋಸ್‌ಗಳ ಅರ್ಧದಷ್ಟು ದೊಡ್ಡ ಮೆಟ್ರೋ ಪ್ರದೇಶಗಳನ್ನು ಹೊಂದಿರುವ ರಾಜ್ಯಗಳಲ್ಲಿ ನೀಡಲಾಗಿದೆ. ಜನವರಿಯಲ್ಲಿ ಓಮಿಕ್ರಾನ್ ಆತಂಕ ಶುರುವಾದ ನಂತರದಲ್ಲಿ ಮುಂಚೂಣಿ ಮತ್ತು ಆರೋಗ್ಯ ಕಾರ್ಯಕರ್ತರು ಸೇರಿದಂತೆ ಆದ್ಯತೆಯ ಗುಂಪಿಗೆ ಮೂರನೇ-ಡೋಸ್ ನೀಡುವುದಕ್ಕೆ ಶುರು ಮಾಡಲಾಗಿತ್ತು. ಆದರೆ ಇತ್ತೀಚಿಗೆ ಅವರಿಗೆ ನೀಡುವ ಲಸಿಕೆಯ ಪ್ರಮಾಣವು ತಗ್ಗಿದೆ.

ಜನರು ಮೊದಲೇ ಏಕೆ 3ನೇ ಡೋಸ್ ಪಡೆದುಕೊಳ್ಳಲಿಲ್ಲ?

ಜನರು ಮೊದಲೇ ಏಕೆ 3ನೇ ಡೋಸ್ ಪಡೆದುಕೊಳ್ಳಲಿಲ್ಲ?

ದೇಶದಲ್ಲಿ 18 ರಿಂದ 59 ವಯೋಮಾನದವರಿಗೆ ಖಾಸಗಿ ಕೇಂದ್ರಗಳಲ್ಲಿ ಮಾತ್ರ ಬೂಸ್ಟರ್ ಡೋಸ್ ನೀಡಲಾಗುತ್ತಿದೆ. ಹೀಗೆ ಪಡೆಯುವ ಲಸಿಕೆಗೆ ಜನರೇ ಹಣ ಪಾವತಿ ಮಾಡಬೇಕು. ಈ ಕಾರಣದಿಂದಾಗಿಯೇ ಮುನ್ನೆಚ್ಚರಿಕೆ ಡೋಸ್ ಪಡೆದುಕೊಳ್ಳುವವರ ಸಂಖ್ಯೆ ಕಡಿಮೆಯಾಗಿದೆ. 18-59 ವರ್ಗದಲ್ಲಿ ಮುನ್ನೆಚ್ಚರಿಕೆಯ ಡೋಸ್‌ಗಳನ್ನು "ಮುಖ್ಯವಾಗಿ ವಿದೇಶದಲ್ಲಿ ಪ್ರಯಾಣಿಸಲು ಅಗತ್ಯವಿರುವವರು ಮತ್ತು ತೀವ್ರ ಅಸ್ವಸ್ಥತೆಯಿಂದ ಬಳಲುತ್ತಿರುವವರು ಮಾತ್ರ ತೆಗೆದುಕೊಳ್ಳುತ್ತಾರೆ" ಎಂದು ತಜ್ಞರು ಹೇಳಿದರು.

ಬೂಸ್ಟರ್ ಡೋಸ್ ಲಸಿಕೆಯ ಲಭ್ಯತೆಯಲ್ಲಿನ ಕೊರತೆ

ಬೂಸ್ಟರ್ ಡೋಸ್ ಲಸಿಕೆಯ ಲಭ್ಯತೆಯಲ್ಲಿನ ಕೊರತೆ

ದೆಹಲಿ, ಮುಂಬೈ, ಬೆಂಗಳೂರು ಮತ್ತು ಕೋಲ್ಕತ್ತಾದಂತಹ ಮೆಟ್ರೋ ಪ್ರದೇಶಗಳಲ್ಲಿ ಕೇಂದ್ರೀಕೃತವಾಗಿರುವ ಖಾಸಗಿ ಲಸಿಕೆ ಕೇಂದ್ರಗಳು ಇದಕ್ಕೆ ಪ್ರಮುಖ ಕಾರಣವಾಗಿದೆ. CoWin ಮಾಹಿತಿಯ ಪ್ರಕಾರ, 19,494 ಸರ್ಕಾರಿ ಲಸಿಕೆ ಸೈಟ್‌ಗಳಿಗೆ ಹೋಲಿಸಿದರೆ 893 ಖಾಸಗಿ ಲಸಿಕೆ ಸೈಟ್‌ಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಖಾಸಗಿ ಲಸಿಕೆ ಕೇಂದ್ರಗಳ ಸಂಖ್ಯೆ ಕಡಿಮೆಯಾಗಿರುವ ದೊಡ್ಡ ಮತ್ತು ಮಧ್ಯಮ ಗಾತ್ರದ ರಾಜ್ಯಗಳಲ್ಲಿ 18-59 ವಯಸ್ಸಿನವರಿಗೆ 5,500ಕ್ಕಿಂತ ಕಡಿಮೆ ಜನರು ಮೂರನೇ ಡೋಸ್‌ಗಳನ್ನು ಪಡೆದುಕೊಂಡಿದ್ದಾರೆ. ರಾಜಸ್ಥಾನದಲ್ಲಿ 3,918, ಮಧ್ಯಪ್ರದೇಶ 4,303 ಮತ್ತು ಜಾರ್ಖಂಡ್ 5,290 ಮಂದಿಗೆ ಮುನ್ನೆಚ್ಚರಿಕೆ ಡೋಸ್ ವಿತರಣೆ ಮಾಡಲಾಗಿದೆ. ಛತ್ತೀಸ್‌ಗಢವು ಇದುವರೆಗೆ 18-59 ವಯಸ್ಸಿನವರಿಗೆ ಕೇವಲ 532 ಮುನ್ನೆಚ್ಚರಿಕೆ ಡೋಸ್‌ಗಳನ್ನು ನೀಡಿದೆ. ಬಿಹಾರದಲ್ಲಿ ಇದೇ ವಯೋಮಾನದ 22,141 ಮಂದಿಗೆ ಮಾತ್ರ 3ನೇ ಡೋಸ್ ಲಸಿಕೆ ನೀಡಲಾಗಿದೆ. ಹರಿಯಾಣ 20 ಸಾವಿರಕ್ಕಿಂತ ಹೆಚ್ಚು ಜನರು ಮೂರನೇ ಡೋಸ್ ಪಡೆದುಕೊಂಡಿದ್ದರೆ, ದೆಹಲಿಯ ಗುರುಗಾವ್ ಪ್ರದೇಶದಲ್ಲಿ 19,908 ಮಂದಿ ಮುನ್ನೆಚ್ಚರಿಕೆ ಡೋಸ್ ಹಾಕಿಸಿಕೊಂಡಿದ್ದಾರೆ.

ಆದ್ಯತೆ ವರ್ಗದ ಸಿಬ್ಬಂದಿಗೆ ಉಚಿತವಾಗಿ ಮೂರನೇ ಡೋಸ್

ಆದ್ಯತೆ ವರ್ಗದ ಸಿಬ್ಬಂದಿಗೆ ಉಚಿತವಾಗಿ ಮೂರನೇ ಡೋಸ್

ಮುಂಚೂಣಿಯಲ್ಲಿರುವ ಮತ್ತು ಆರೋಗ್ಯ ಕಾರ್ಯಕರ್ತರು, ಮತ್ತು 60 ವರ್ಷ ಮೇಲ್ಪಟ್ಟವರಿಗೆ ಜನವರಿ 10 ರಿಂದಲೇ ಸರ್ಕಾರಿ ಲಸಿಕೆ ಕೇಂದ್ರಗಳಲ್ಲಿ ಮೂರನೇ ಡೋಸ್ ಅನ್ನು ಉಚಿತವಾಗಿ ನೀಡಲಾಗುತ್ತಿದೆ. ಆದರೆ ಮೂರನೇ ಡೋಸ್ ಪಡೆದುಕೊಳ್ಳುವವರ ಸಂಖ್ಯೆ ಕಡಿಮೆಯಾಗಿದೆ. 1.04 ಕೋಟಿ ಆರೋಗ್ಯ ಕಾರ್ಯಕರ್ತರಲ್ಲಿ ಕೇವಲ ಶೇ. 45ರಷ್ಟು ಜನರು ಹಾಗೂ 1.84 ಕೋಟಿ ಮೊದಲ ಶ್ರೇಣಿ ಕಾರ್ಯಕರ್ತರಲ್ಲಿ ಶೇ.38ರಷ್ಟು ಮಂದಿಗೆ ಮಾತ್ರ ಮೂರನೇ ಡೋಸ್ ಲಸಿಕೆಯನ್ನು ನೀಡಲಾಗಿದೆ.

ಜನವರಿ 10 ರಿಂದ ಫೆಬ್ರವರಿ 10 ರವರೆಗೆ ಈ 2.62 ಕೋಟಿ ಡೋಸ್‌ಗಳಲ್ಲಿ ಸುಮಾರು ಶೇ.63ರಷ್ಟು ಮೂರನೇ ಡೋಸ್ ಲಸಿಕೆಯನ್ನು ನೀಡಲಾಗಿದೆ. ಇದರಲ್ಲಿ 38 ಲಕ್ಷ ಡೋಸ್ ಆರೋಗ್ಯ ಕಾರ್ಯಕರ್ತರಿಗೆ, 51 ಲಕ್ಷ ಮೊದಲ ಶ್ರೇಣಿ ಕಾರ್ಯಕರ್ತರಿಗೆ ಮತ್ತು 60 ಲಕ್ಷ ಮೇಲ್ಪಟ್ಟ 75.31 ಲಕ್ಷ ಜನರಿಗೆ ಮುನ್ನೆಚ್ಚರಿಕೆ ಲಸಿಕೆ ನೀಡಲಾಗಿದೆ.

ಯಾರು ಬೂಸ್ಟರ್ ಡೋಸ್ ಪಡೆಯಲು ಅರ್ಹರು?

ಯಾರು ಬೂಸ್ಟರ್ ಡೋಸ್ ಪಡೆಯಲು ಅರ್ಹರು?

ದೇಶದ ಖಾಸಗಿ ಆಸ್ಪತ್ರೆಗಳಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲರೂ ಏಪ್ರಿಲ್ 10 ರಿಂದ ಕೋವಿಡ್-19 ಬೂಸ್ಟರ್ ಲಸಿಕೆಯನ್ನು ನೀಡಲಾಗುವುದು ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಘೋಷಿಸಿದೆ. ಆದರೆ 18 ವರ್ಷ ಮೇಲ್ಪಟ್ಟ ನೀವು ಎರಡನೇ ಡೋಸ್ ಲಸಿಕೆಯನ್ನು ಪಡೆದು 9 ತಿಂಗಳು ಕಳೆದಿದ್ದರೆ ಮಾತ್ರ, ಬೂಸ್ಟರ್ ಡೋಸ್ ಲಸಿಕೆ ಪಡೆದುಕೊಳ್ಳುವುದಕ್ಕೆ ಅರ್ಹರಾಗಿರುತ್ತೀರಿ.

ದೇಶದಲ್ಲಿ ಬೂಸ್ಟರ್ ಡೋಸ್ ಲಸಿಕೆ ಬೆಲೆ ಎಷ್ಟು?

ದೇಶದಲ್ಲಿ ಬೂಸ್ಟರ್ ಡೋಸ್ ಲಸಿಕೆ ಬೆಲೆ ಎಷ್ಟು?

ದೇಶದ ಖಾಸಗಿ ಕೋವಿಡ್-19 ಲಸಿಕೆ ಕೇಂದ್ರದಲ್ಲಿ ಕೋವಿಶೀಲ್ಡ್ ಬೂಸ್ಟರ್ ಲಸಿಕೆ ಒಂದು ಡೋಸ್ ದರವನ್ನು 600 ರೂಪಾಯಿ ಹಾಗೂ ಕೊವ್ಯಾಕ್ಸಿನ್ ಲಸಿಕೆಯ ಒಂದು ಡೋಸ್ ದರವನ್ನು 1200 ರೂಪಾಯಿಯಿಂದ 225 ರೂಪಾಯಿಗೆ ಕಡಿತಗೊಳಿಸಲಾಗಿದೆ. ಸೆರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಸಿಇಒ ಆದರ್ ಪೂನಾವಲ್ಲಾ ಮತ್ತು ಭಾರತ್ ಬಯೋಟೆಕ್ ಸಹ-ಸಂಸ್ಥಾಪಕಿ ಸುಚಿತ್ರಾ ಎಲಾ ಅವರು ಕೇಂದ್ರ ಸರ್ಕಾರದ ಜೊತೆ ನಡೆಸಿದ ಚರ್ಚೆಯ ನಂತರ ಟ್ವಿಟರ್‌ನಲ್ಲಿ ಬೆಲೆ ಕಡಿತದ ಬಗ್ಗೆ ಘೋಷಿಸಿದ್ದಾರೆ. ದೇಶದ ಖಾಸಗಿ ಆಸ್ಪತ್ರೆಗಳಲ್ಲಿ ಭಾನುವಾರದಿಂದ ಬೂಸ್ಟರ್ ಡೋಸ್ ಲಸಿಕೆ ಲಭ್ಯವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+