ಈ ದಿನ ಟ್ರೆಂಡಿಂಗ್ ಸಾಧನ: ನಿಖರ, ಬದ್ಧ, ಸ್ಪಷ್ಟ ರಿಸಲ್ಟ್ ಕೊಡುವ ವಿವಿಪ್ಯಾಟ್ + ಇವಿಎಂ
ಎರಡು ತಿಂಗಳಲ್ಲಿ ಒಟ್ಟು 690 ವಿಧಾನಸಭಾ ಕ್ಷೇತ್ರಗಳು ಮತದಾನವಾಗಿದ್ದು, ಯುಪಿಯಲ್ಲಿ ಗರಿಷ್ಠ (403 ಸ್ಥಾನಗಳು) ನಂತರ ಪಂಜಾಬ್ (117), ಉತ್ತರಾಖಂಡ್ (70), ಮಣಿಪುರ (60), ಮತ್ತು ಗೋವಾ (40)ದ ಮುಂದಿನ ಸರ್ಕಾರ ಯಾವುದು ಎಂದು ಮಾರ್ಚ್ 10 ರಂದು ನಿರ್ಧಾರವಾಗಲಿದೆ. ಹಲವು ನಾಯಕರು, ರಾಜಕೀಯ ಪಕ್ಷಗಳ ಹಣೆಬರಹ ಎಲೆಕ್ಟ್ರಾನಿಕ್ ಮತ ಯಂತ್ರಗಳಲ್ಲಿ ಅಡಕವಾಗಿವೆ.ಈ ಯಂತ್ರಗಳನ್ನು ಒಮ್ಮೆ ತೆರೆದರೆ ರಾಜ್ಯದ ಭವಿಷ್ಯವೇ ಬದಲಾಗುತ್ತದೆ. ಇವಿಎಂ ಬಗ್ಗೆ ಅಪಸ್ವರಗಳು ಇವೆ, ಆದರೆ ಏನೇ ಇರಲಿ, ಇವಿಎಂ ಮತ್ತು ವಿವಿಪ್ಯಾಟ್ ಯಂತ್ರಗಳೇ ಈ ದಿನದ ಟ್ರೆಂಡಿಂಗ್ ಸಾಧನಗಳೆನಿಸಿವೆ.
'ಈ ಬಾರಿ ವೋಟ್ ಮಾಡಲು ಕಾತರದಿಂದ ಕಾಯುತ್ತಿದ್ದೇನೆ, ಏಕೆಂದರೆ ಇದು ನಾನು ಚಲಾಯಿಸುತ್ತಿರುವ ಮೊಟ್ಟಮೊದಲ ವೋಟ್. ಮತದಾನ ಮಾಡುವುದು ನನ್ನ ಹಕ್ಕು. ಅದರಲ್ಲೂ ನಾನು ಮತದಾನ ಮಾಡಿರುವ ಬಗ್ಗೆ ಗ್ಯಾರಂಟಿ ನೀಡಲು ಹೊಸದಾಗಿ ವಿವಿಪ್ಯಾಟ್ ಯಂತ್ರ ಬಂದಿದೆಯಲ್ಲಾ... ಮೋಸ ಮಾಡೋದಂತೂ ಸಾಧ್ಯವೇ ಇಲ್ಲ. ಅದಕ್ಕೆ ನಾನು ವೋಟ್ ಮಾಡುವುದನ್ನು ತಪ್ಪಿಸುವುದಿಲ್ಲ." ಮಣಿಪುರದ್ ಗುಡ್ಡಗಾಡು ಪ್ರದೇಶದ ಯುವ ಮತದಾರ ಪ್ರದೀಪ್ ಚಾನು ಹೇಳಿದ ಮಾತುಗಳಿವು.
ಮತದಾನ ಖಾತ್ರಿ ಪಡಿಸಿಕೊಳ್ಳುವುದು ಹೇಗೆ?
ಮತದಾರ ಮತದಾನ ಮಾಡುವ ಸಂದರ್ಭದಲ್ಲಿ ತಾನು ಮತ ಚಲಾಯಿಸಬೇಕೆಂದಿರುವ ಚಿಹ್ನೆ ಮತ್ತು ಹೆಸರಿನ ಪಕ್ಕದಲ್ಲಿರುವ ನೀಲಿ ಬಣ್ಣ ಬಟನ್ ಒತ್ತಿದ ಕೂಡಲೇ ಕೆಂಪು ದೀಪ ಬೆಳಗುತ್ತದೆ. ಇವಿಎಂಗೆ ಅಳವಡಿಸಿರುವ ವಿವಿಪ್ಯಾಟ್ ಯಂತ್ರದ ಪರದೆಯಲ್ಲಿ ಮತದಾರನು ತಾನು ಮತ ಚಲಾಯಿಸಿರುವ ಚಿಹ್ನೆ ಮತ್ತು ಹೆಸರಿನ ವಿವರವುಳ್ಳ ಚೀಟಿಯನ್ನು 7 ಕ್ಷಣಗಳ ಕಾಲ ಡಿಸ್ಪ್ಲೇ ಸೆಕ್ಷನ್ ನಲ್ಲಿ ವೀಕ್ಷಿಸಬಹುದು. ತದನಂತರ ಆ ಚೀಟಿಯು ಡ್ರಾಪ್ ಬಾಕ್ಸ್ ಒಳಗೆ ತುಂಡಾಗಿ ಬೀಳುತ್ತದೆ (ಈ ಚೀಟಿಯನ್ನು ಮತದಾರ ಪಡೆಯುವಂತಿಲ್ಲ). ಈ ಮೂಲಕ ಮತದಾರ, ತಾನು ಆರಿಸಬೇಕೆಂದಿರುವ ವ್ಯಕ್ತಿ / ಪಕ್ಷಕ್ಕೆ ಮತ ಚಲಾವಣೆಯಾಗಿರುವುದನ್ನು ಖಾತ್ರಿಪಡಿಸಿಕೊಳ್ಳಬಹುದಾಗಿದೆ. ಮತದಾನ ಖಾತ್ರಿಗಾಗಿ Voter Verifiable Paper Audit Trail Machine (ವಿವಿಪ್ಯಾಟ್) ಬಳಸಲಾಗುತ್ತದೆ. ಇವಿಎಂ ನೈಜತೆ, ಬದ್ಧತೆ ಬಗ್ಗೆ ಪ್ರಶ್ನೆ ಬಂದಿದ್ದರಿಂದ ಡಬ್ಬಲ್ ಚೆಕ್ ಮಾಡಲು ವಿವಿಪ್ಯಾಟ್ ಬಳಕೆ ಜಾರಿಗೆ ತರಲಾಯಿತು.

ಇವಿಎಂ-ವಿವಿಪ್ಯಾಟ್ ವ್ಯತ್ಯಾಸ ಇವಿಎಂ (ಎಲೆಕ್ಟ್ರಾನಿಕ್ ವೋಟಿಂಗ್ ಮೆಷೀನ್)ನಲ್ಲಿ ಕೇವಲ ಕಂಟ್ರೋಲ್ ಯೂನಿಟ್ ಮತ್ತುಬ್ಯಾಲೆಟ್ ಯೂನಿಟ್ ಇರುತ್ತದೆ. ಬ್ಯಾಲೆಟ್ ಯೂನಿಟ್ ಅಂದರೆ ಮತ ಚಲಾಯಿಸುವ ಯಂತ್ರ. ಕಂಟ್ರೋಲ್ ಯೂನಿಟ್ ಅಂದರೆ ಈ ಮತಗಳು ಹೋಗಿ ಸಂಗ್ರಹವಾಗುವ ಯಂತ್ರ.
ವಿವಿಪ್ಯಾಟ್ ನಲ್ಲಿ, ಇವುಗಳ ಜತೆಗೆ ವಿವಿಪ್ಯಾಟ್ ಯಂತ್ರ ಇರುತ್ತದೆ. ಇದು ಬ್ಯಾಲೆಟ್ ಯೂನಿಟ್ ಪಕ್ಕದಲ್ಲಿ ಇರುತ್ತದೆ. ನೀವು ಮತ ಚಲಾಯಿಸಿದ ತಕ್ಷಣ ಇದರಲ್ಲಿ ನೋಡಿ ನಿಮ್ಮ ಮತ ಸರಿಯಾಗಿದೆಯೇ ಎಂದು ಖಚಿತಪಡಿಸಿಕೊಳ್ಳಬಹುದು. ವಿವಿ ಪ್ಯಾಟ್ ನ ಗ್ಲಾಸಿನಲ್ಲಿ ಈ ಚೀಟಿ 7 ಸೆಕೆಂಡ್ ಗಳ ಕಾಲ ಮತದಾರರಿಗೆ ಕಾಣಿಸಿಕೊಳ್ಳುತ್ತದೆ. ನಂತರ ಇದು ಬಾಕ್ಸಿನೊಳಗೆ ಬೀಳುತ್ತದೆ.

ಈ ಮೂಲಕ ಮತದಾರ, ತಾನು ಆರಿಸಬೇಕೆಂದಿರುವ ವ್ಯಕ್ತಿ / ಪಕ್ಷಕ್ಕೆ ಮತ ಚಲಾವಣೆಯಾಗಿರುವುದನ್ನು ಖಾತ್ರಿಪಡಿಸಿಕೊಳ್ಳಬಹುದಾಗಿದೆ.
ಬಿಇಎಲ್ ತಯಾರಿಸುವ ಸಾಧನಗಳು
* ಇವಿಎಂ ಹಾಗೂ ವಿವಿಪ್ಯಾಟ್ ಸಾಧನಗಳು ಹಾಗೂ ಸಂಬಂಧಿಸಿದ ತಂತ್ರಾಂಶವನ್ನು ಸರ್ಕಾರದ ಅಂಗಸಂಸ್ಥೆಯಾದ ಬಿಇಎಲ್ ಮತ್ತು ಇಸಿಐಇಲ್ ವತಿಯಿಂದ ಅಭಿವೃದ್ಧಿಪಡಿಸಲಾಗಿದೆ. 2013ರಿಂದ ಇದರ ಬಳಕೆ ಮಾಡಲಾಗುತ್ತಿದೆ.
ಬಿಇಎಲ್ ಮತ್ತು ಇಸಿಐಇಲ್ ಇವೆರಡೂ ಭಾರತ ಸರ್ಕಾರದ ಅಂಗ ಸಂಸ್ಥೆಗಳಾಗಿದ್ದು, BEL ರಕ್ಷಣಾ ಸಚಿವಾಲಯದ ಅಡಿಯಲ್ಲಿ ಮಿಲಿಟರಿ, ನಾಗರಿಕ ಉಪಕರಣಗಳನ್ನು ತಯಾರಿಸುವ ಸಂಸ್ಥೆಯಾಗಿದೆ.
ECIL ಆಟೋಮಿಕ್ ಎನರ್ಜಿ ಇಲಾಖೆಯ ಒಂದು ಉದ್ಯಮವಾಗಿದೆ. ಈ ಕಂಪನಿಗಳು ತಯಾರಿಸಿದ ಇವಿಎಂಗಳು ಮತ್ತು ವಿವಿಪ್ಯಾಟ್‌ಗಳ ಮೇಲೆ ಪ್ರಶ್ನೆಗಳನ್ನು ಎತ್ತಲಾಗಿದೆ.

ವಿವಿಪ್ಯಾಟ್ ಮೊದಲು ಎಲ್ಲಿ ಬಳಸಲಾಯಿತು?
ಇದನ್ನು ಮೊದಲು 2013ರಲ್ಲಿ ನಾಗಾಲ್ಯಾಂಡ್ ಚುನಾವಣೆಯಲ್ಲಿ ಬಳಸಲಾಗಿತ್ತು.ಇದಾದ ನಂತರ ವಿವಿಪ್ಯಾಟ್ ಯಂತ್ರಗಳನ್ನು ತಯಾರಿಸಿ ಅದಕ್ಕೆ ಹಣ ನೀಡುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಆದೇಶ ನೀಡಿತ್ತು. ಕರ್ನಾಟಕದಲ್ಲಿ ಮೊದಲಿಗೆ ನಂಜನಗೂಡು ಮತ್ತು ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಬಳಕೆ ಮಾಡಲಾಯಿತು.
2016 ರಲ್ಲಿ 33,500 VVPAT ಯಂತ್ರಗಳನ್ನು ಬಿಇಎಲ್ ತಯಾರಿಸಿತು. ಇದನ್ನು 2017 ರಲ್ಲಿ ಗೋವಾ ಚುನಾವಣೆಯಲ್ಲಿ ಬಳಸಲಾಯಿತು. EC 2017 ರಲ್ಲಿ ನಡೆದ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ 52,000 VVPAT ಗಳನ್ನು ಬಳಸಿದೆ. ಆದಾಗ್ಯೂ, 2019 ರ ಲೋಕಸಭಾ ಚುನಾವಣೆಯಲ್ಲಿ ಎಲ್ಲಾ ಮತಗಟ್ಟೆಗಳಲ್ಲಿ VVPAT ಗಳನ್ನು ಬಳಸಬೇಕೆಂದು ಚುನಾವಣಾ ಆಯೋಗವು ಜೂನ್ 2014 ರಲ್ಲಿ ನಿರ್ಧರಿಸಿತ್ತು.

ಎಷ್ಟು ಸುರಕ್ಷಿತ?
* ಇವಿಎಂ ಯಂತ್ರಗಳನ್ನು ಅಂತರ್ಜಾಲ ಅಥವಾ ಇನ್ಯಾವುದೇ ನೆಟ್‍ವರ್ಕ್ ಸಂಪರ್ಕದಿಂದ ನಿಯಂತ್ರಿಸಲು ಸಾಧ್ಯವಿಲ್ಲ.
* ಇವಿಎಂ ಹ್ಯಾಕ್ ಮಾಡಲು ಹ್ಯಾಕಥನ್ ನಡೆಸಲಾಗುತ್ತದೆ ಈ ಮೂಲಕ ಸೂಕ್ಷ್ಮಾತಿಸೂಕ್ಷ ಲೋಪ ದೋಷಗಳನ್ನು ಸರಪಡಿಸಿಕೊಳ್ಳಲಾಗುತ್ತದೆ.
* ಯಂತ್ರದಲ್ಲಿ ಯಾವುದೇ ಆಪರೇಟಿಂಗ್ ಸಿಸ್ಟಮ್ ಬಳಕೆ ಮಾಡದಿರುವುದರಿಂದ ವೈರಸ್ ದಾಳಿ ಉಂಟಾಗುವ ಭಯವೂ ಇಲ್ಲ.
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications