ಓಮಿಕ್ರಾನ್ ಡೆಲ್ಟಾಗಿಂತಲೂ ಡೇಂಜರ್: 70 ಪಟ್ಟು ಹೆಚ್ಚು ವೇಗದಲ್ಲಿ ಹರಡುತ್ತೆ ಹುಷಾರ್ !
ಬೆಂಗಳೂರು, ಜ. 03: ದೇಶದಲ್ಲಿ ಕೊರೊನಾ ಮೂರನೇ ಅಲೆ ಆತಂಕ ಶುರುವಾಗಿದೆ. ಕೊರೊನಾ ಕೇಸುಗಳ ನಡುವೆ ರೂಪಾಂತರಿ ಓಮಿಕ್ರಾನ್ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಇದರ ಬೆನ್ನಲ್ಲೇ ಓಮಿಕ್ರಾನ್ ಕುರಿತ ಅತಿ ಆಘಾತಕಾರಿ ಸಂಗತಿ ಹೊರ ಬಿದ್ದಿದೆ.
ಕೊರೊನಾ ರೂಪಾಂತರಿ ಡೆಲ್ಟಾಗೆ ಹೋಲಿಸಿದರೆ ಶೇ. 70 ಪಟ್ಟು ಹೆಚ್ಚು ಅತಿವೇಗವಾಗಿ ಓಮಿಕ್ರಾನ್ ಹರಡಲಿದೆ ಎಂಬ ಆಘಾತಕಾರಿ ಸಂಗತಿ ಆಧ್ಯಯನದಿಂದ ಹೊರಬಿದ್ದಿದೆ. ಆದರೆ, ಮೂಲ ಕೊರೊನಾ ಸೋಂಕು ಹಾಗೂ ರೂಪಾಂತರಿ ಡೆಲ್ಟಾಗೆ ಹೋಲಿಸಿದರೆ ಇದು ಶ್ವಾಸಕೋಶಕ್ಕೆ ತೊಂದರೆ ಕೊಡುವ ಅಪಾಯ ಕಡಿಮೆ ಎಂಬುದು ನಿಟ್ಟಿಸಿರುವ ಬಿಡುವ ಸಂಗತಿ. ಈ ಕುರಿತು ಬೆಂಗಳೂರಿನ ಖ್ಯಾತ ವೈದ್ಯ ಡಾ. ಯು.ಎಸ್. ವಿಶಾಲ್ ರಾವ್ ಒನ್ಇಂಡಿಯಾ ಕನ್ನಡಕ್ಕೆ ವಿವರಿಸಿದ್ದಾರೆ.
ಕೊರೊನಾ ಡೆಲ್ಟಾ ರೂಪಾಂತರಿ ಹಾಗೂ ಓಮಿಕ್ರಾನ್ ರೂಪಾಂತರಿ ಅಪಾಯದ ಬಗ್ಗೆ ಹಾಂಕಾಂಗ್‌ನ ವಿಶ್ವ ವಿದ್ಯಾಲಯ ಅಧ್ಯಯನ ನಡೆಸಿದೆ. ಓಮಿಕ್ರಾನ್ ಹರಡುವ ಹಾಗೂ ಮಾನವ ದೇಹದ ಮೇಲೆ ಪ್ರಭಾವ ಬೀರುವ ಕುರಿತು ಅಧ್ಯಯನ ನಡೆಸಿದ್ದು ಅತಿ ಶೀಘ್ರದಲ್ಲಿಯೇ ಈ ವರದಿ ಬಹಿರಂಗವಾಗಲಿದೆ. ಈ ಅಧ್ಯಯನದಲ್ಲಿ ಆಘಾತಕಾರಿ ಸಂಗತಿ ಹೊರ ಬಿದ್ದಿದೆ ಎಂದು ಡಾ. ಯು.ಎಸ್. ವಿಶಾಲ್ ರಾವ್ ಸ್ಪಷ್ಟನೆ ನೀಡಿದ್ದಾರೆ.

ಜನರ ಮಾರಣ ಹೋಮಕ್ಕೆ ನಾಂದಿ ಹಾಡಿದ್ದ ಡೆಲ್ಟಾ ರೂಪಾಂತರಿ ಕೊರೊನಾ ವೈರಸ್‌ಗೆ ಹೋಲಿಸಿದರೆ, ಓಮಿಕ್ರಾನ್ ರೂಪಾಂತರಿ ಹರಡುವ ಪರಿ ಶೇ. 70 ಪಟ್ಟು ಹೆಚ್ಚಾಗಿದೆ. ಒಂದು ಕೊಠಡಿಯಲ್ಲಿ 100 ಜನ ವಿದ್ದರೆ ಒಂದು ನಿಮಿಷದಲ್ಲಿ ಎಲ್ಲರಿಗೂ ಹರಡುವ ಶಕ್ತಿ ಹೊಂದಿದೆ. ಈ ಹಿಂದೆ ಕಾಣಿಸಿಕೊಂಡ ಕೊರೊನಾ ಮೂಲ ವೈರಸ್ ಹಾಗೂ ರೂಪಾಂತರಿ ಡೆಲ್ಟಾ ಸೇರಿದಂತೆ ಎಲ್ಲಾ ವೇರಿಯೆಂಟ್ ಗಿಂತಲೂ ಓಮಿಕ್ರಾನ್ ಹೆಚ್ಚು ಹರಡುವ ಶಕ್ತಿ ಹೊಂದಿದೆ. ಹೀಗಾಗಿ ಜನರು ಎಚ್ಚರಿಕೆ ವಹಿಸಬೇಕು. ಸರ್ಕಾರ ಕೂಡ ಮುಂಜಾಗ್ರತಾ ಕ್ರಮಗಳನ್ನು ಈ ಹಂತದಿಂದಲೇ ಕೈಗೊಳ್ಳಬೇಕು ಎಂದು ಅವರು ಸಲಹೆ ಮಾಡಿದ್ದಾರೆ.

ನಿಟ್ಟುಸಿರುವ ಬಿಡುವ ಸಂಗತಿ: ಓಮಿಕ್ರಾನ್ ಶೇ. 70 ಪಟ್ಟು ಹೆಚ್ಚು ಹರಡುವ ಶಕ್ತಿ ಹೊಂದಿದ್ದರೂ ಇದರಿಂದ ಲಂಗ್ಸ್ ಮೇಲೆ ಬೀರುವ ಅಪಾಯ ಬೇರೆ ರೂಪಾಂತರಿಗಳಿಗಿಂತಲೂ ಕಡಿಮೆಯಿದೆ. ಹೀಗಾಗಿ ಓಮಿಕ್ರಾನ್ ನಿಂದ ಸಾವು ನೋವಿನ ಪ್ರಮಾಣ ಕಡಿಮೆ ಇರಲಿದೆ ಎಂಬುದು ಸದ್ಯದ ಅಧ್ಯಯನದ ವರದಿ ಹೇಳುತ್ತದೆ. ಈ ಅಧ್ಯಯನ ವರದಿ ಪುನರ್ ಪರಿಶೀಲನೆಗೆ ಒಳಪಟ್ಟಿದ್ದು ಶೀಘ್ರದಲ್ಲಿಯೇ ಬಹಿರಂಗವಾಗಿದೆ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

ಜನ ಸಾಮಾನ್ಯರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಓಮಿಕ್ರಾನ್ ಮೂರನೇ ಅಲೆ ಹರಡದಂತೆ ಎಚ್ಚರಿಕೆ ವಹಿಸಬೇಕು. ಸ್ವಲ್ಪ ನಿರ್ಲಕ್ಷತೆ ವಹಿಸಿದರೂ ಅಪಾಯ ಕಟ್ಟಿಟ್ಟ ಬುತ್ತಿ. ಹೀಗಾಗ ಸಾರ್ವಜನಿಕರ ಕೋವಿಡ್ ಮಾರ್ಗಸೂಚಿಗಳನ್ನು ಸ್ವಯಂ ಪ್ರೇರಿತವಾಗಿ ಪಾಲನೆ ಮಾಡುವುದು ಒಳಿತು ಎಂದು ಅವರು ಮನವಿ ಮಾಡಿದ್ದಾರೆ.
ಓಮಿಕ್ರಾನ್ ಅಪಾಯಕಾರಿ ಕುರಿತು ಈಗಾಗಲೇ ವಿಶ್ವಸಂಸ್ಥೆ ಜಗತ್ತನ್ನು ಎಚ್ಚರಿತ್ತು. ಆಫ್ರಿಕಾದಲ್ಲಿ ಈ ಮೊದಲು ದಿನಕ್ಕೆ ಕೇವಲ 280 ಪ್ರಕರಣ ದಾಖಲಾಗುತ್ತಿತ್ತು. ಇದೀಗ ಏಕಾಏಕಿ ದಿನಕ್ಕೆ 16 ಸಾವಿರ ಕೊರೊನಾ ಸೋಂಕು ಪ್ರಕರಣ ವರದಿಯಾಗುತ್ತಿವೆ. ಇದು ಡೆಲ್ಟಾಗಿಂತಲೂ ಹೆಚ್ಚು ಹರಡುವ ಶಕ್ತಿ ಹೊಂದಿದೆ. ಈ ಬಗ್ಗೆ ಸಾರ್ವಜನಿಕರು ಮುಂಜಾಗ್ರತೆ ವಹಿಸಬೇಕು ಎಂದು ಅವರು ಸಲಹೆ ಮಾಡಿದ್ದನ್ನು ಸ್ಮರಿಸಬಹುದು.

ಮೂರನೇ ಅಲೆ ಭೀತಿ:
ಓಮಿಕ್ರಾನ್ ಹರಡುವ ಭೀತಿ ಹಿನ್ನೆಲೆಯಲ್ಲಿ ಬಹುತೇಕ ಖಾಸಗಿ ಸಂಸ್ಥೆಗಳು ಪುನಃ ವರ್ಕ್ ಫ್ರಮ್ ಹೋಮ್ ಮೊರೆ ಹೋಗಿವೆ. ಮೂರನೇ ಅಲೆ ಭೀತಿ ಹಿನ್ನೆಲೆಯಲ್ಲಿ ಅದಾಗಲೇ ಕೆಲವು ಐಟಿ ಕಂಪನಿಗಳು ಪುನಃ ವರ್ಕ್ ಫ್ರಮ್ ಹೋಮ್ ಘೋಷಣೆ ಮಾಡಿವೆ. ಓಮಿಕ್ರಾನ್ ಹರಡುವ ಭೀತಿ ಹಿನ್ನೆಲೆಯಲ್ಲಿ ಸರ್ಕಾರ ಕೂಡ ಅದಾಗಲೇ ರಾಜ್ಯಾದ್ಯಂತ ನೈಟ್ ಕರ್ಫ್ಯೂ ಜಾರಿಗೊಳಿಸಿದೆ. ಕೊರೊನಾ ಪ್ರಕರಣಗಳ ಸಂಖ್ಯೆ ರಾಜ್ಯದಲ್ಲಿ ಏರುಗತಿಯತ್ತ ಸಾಗಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿದರೆ, ಲಾಕ್ ಡೌನ್ ಘೋಷಣೆ ಮಾಡಿದರೂ ಅಚ್ಚರಿ ಪಡಬೇಕಿಲ್ಲ.












Click it and Unblock the Notifications