• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಟ್ರಂಪ್‌ಗೆ ಮತ ಹಾಕಿದವರಿಗೆ ಬುದ್ಧಿ ಇಲ್ವಾ..? ಮಾಜಿ ಅಧ್ಯಕ್ಷ ಒಬಾಮಾ ಪ್ರಶ್ನೆ..!

|

ಅಮೆರಿಕ ಅಧ್ಯಕ್ಷೀಯ ಚುನಾವಣೆ ಮುಕ್ತಾಯವಾಗಿ ಇನ್ನೇನು ತಿಂಗಳಾಗುತ್ತಾ ಬರುತ್ತಿದೆ. ನವೆಂಬರ್ 3ರಂದು ಅಂತಿಮ ಹಂತದ ಮತದಾನ ಮುಗಿಸಿ, ಟ್ರಂಪ್ ಎದುರು ಬೈಡನ್ ಗೆದ್ದು ಬೀಗಿದ್ದಾರೆ. ಆದರೆ ಈ ಹೊತ್ತಲ್ಲೇ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಮತದಾರರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಟ್ರಂಪ್ ಪರವಾಗಿದ್ದ ಮತದಾರರನ್ನು ಒಬಾಮಾ ಕೆಣಕಿದ್ದಾರೆ.

ಅಮೆರಿಕದಲ್ಲಿ ಜನಾಂಗೀಯ ದ್ವೇಷದ ಬೆಂಕಿ ಹೊತ್ತಿದ್ದಾಗ ಡೊನಾಲ್ಡ್ ಟ್ರಂಪ್ ಅದಕ್ಕೆ ತುಪ್ಪ ಸುರಿಯುವ ಕೆಲಸ ಮಾಡಿದ್ದರು. ಅಲ್ಲದೆ ಸ್ವತಃ ಟ್ರಂಪ್ ಜನಾಂಗೀಯ ದ್ವೇಷಿ ಎಂಬ ಆರೋಪವೂ ಇದೆ. ಆದರೂ ಕೂಡ ಆಫ್ರಿಕನ್-ಅಮೆರಿಕನ್ ಮತದಾರರು ಮತ್ತು ಲೈಂಗಿಕ ಅಲ್ಪಸಂಖ್ಯಾತರು ಟ್ರಂಪ್ ಪರವಾಗಿಯೇ ಹೆಚ್ಚು ಒಲವು ತೋರಿದ್ದರು.

ಹಾಗೆ ನೋಡಿದರೆ ಒಬಾಮಾಗೆ ರಾಹುಲ್ & ಭಾರತದ ಮನಸ್ಥಿತಿ ಮಾದರಿಯಾಗಬೇಕಿತ್ತು...

ಇದು ಬುಷ್ ನಂತರ ರಿಪಬ್ಲಿಕನ್ ಅಭ್ಯರ್ಥಿಯೊಬ್ಬರು ಪಡೆದಿರುವ ಅತಿಹೆಚ್ಚು ಮತವಾಗಿದೆ. ಈ ಬಗ್ಗೆ ಬರಾಕ್ ಒಬಾಮಾ ಆಕ್ರೋಶ ಹೊರಹಾಕಿದ್ದು ನಿಮಗೆ ಟ್ರಂಪ್ ನಿಲುವು ಗೊತ್ತಿಲ್ಲವೇ ಎಂದು ಮತದಾರರನ್ನು ಪ್ರಶ್ನಿಸಿದ್ದಾರೆ. ಟ್ರಂಪ್ ಹರಡುತ್ತಿದ್ದ ಜನಾಂಗೀಯ ದ್ವೇಷವನ್ನು ಮರೆತು ನೀವು ಮತದಾನ ಮಾಡಿದ್ದೀರಿ. ಆದರೆ ನಿಮಗೆ ಟ್ರಂಪ್ ನೀಡಿದ್ದ ಜನಾಂಗೀಯ ದ್ವೇಷದ ಹೇಳಿಕೆಗಳು ನೆನಪಾಗಲಿಲ್ವಾ ಎಂದು ಪ್ರಶ್ನಿಸಿದ್ದಾರೆ ಒಬಾಮಾ. ಒಬಾಮಾ ಹೇಳಿಕೆ ಅಮೆರಿಕದಲ್ಲಿ ಸಂಚಲನ ಸೃಷ್ಟಿಸಿದೆ.

ಟ್ರಂಪ್‌ಗೆ ಲೈಂಗಿಕ ಅಲ್ಪಸಂಖ್ಯಾತರ ಬೆಂಬಲ

ಟ್ರಂಪ್‌ಗೆ ಲೈಂಗಿಕ ಅಲ್ಪಸಂಖ್ಯಾತರ ಬೆಂಬಲ

ಈ ಬಾರಿಯ ಚುನಾವಣೆಯಲ್ಲಿ ಟ್ರಂಪ್ ಮಕಾಡೆ ಮಲಗುವುದು ಸಮೀಕ್ಷೆಗಳಲ್ಲೇ ಪಕ್ಕಾ ಆಗಿತ್ತು. ಆದರೂ ಟ್ರಂಪ್ ತೋರಿದ್ದ ಹೋರಾಟ ಎಲ್ಲರಿಗೂ ಆಶ್ಚರ್ಯ ತಂದಿತ್ತು. ಟ್ರಂಪ್ ಹೀನಾಯವಾಗಿ ಸೋಲಲಿದ್ದಾರೆ ಎಂಬ ನಿಲುವು ಫಲಿತಾಂಶದ ಆರಂಭದಲ್ಲಿ ಬದಲಾಗಿತ್ತು. ಅಮೆರಿಕ ಚುನಾವಣೆ ರಿಸಲ್ಟ್‌ನ ಆರಂಭದ ಪರಿಸ್ಥಿತಿ ಗಮನಿಸಿದ್ದರೆ ಈ ಬಾರಿ ಕೂಡ ಟ್ರಂಪ್ ಗೆಲ್ಲಬಹುದು ಎಂಬ ಅನುಮಾನ ಮೂಡಿತ್ತು. ಆದರೆ ಕಡೆಗೂ ಟ್ರಂಪ್ ಸೋತು, ಬೈಡನ್ ಎದ್ದುಬಿದ್ದು ಗೆದ್ದರು. ಹೀಗೆ ಜೋ ಬೈಡನ್‌ಗೆ ಟ್ರಂಪ್ ಟಫ್ ಫೈಟ್ ಕೊಡುವದರ ಹಿಂದೆ ಬಹುದೊಡ್ಡ ಕಹಾನಿಯೇ ಇದೆ. ಲೈಂಗಿಕ ಅಲ್ಪಸಂಖ್ಯಾತರು ಹಾಗೂ ಸಲಿಂಗಿಗಳ ವಿರುದ್ಧ ಟ್ರಂಪ್ ನಿಲುವು ಹೊಂದಿದ್ದರು ಕೂಡ, ಅಮೆರಿಕದ ಶೇಕಡ 32ರಷ್ಟು LGBT ಕಮ್ಯೂನಿಟಿ ಮತಗಳು ಟ್ರಂಪ್ ಪರವಾಗಿ ಚಲಾವಣೆಯಾಗಿವೆ. ಇದು ಒಬಾಮಾ ಪಿತ್ತ ನೆತ್ತಿಗೇರುವಂತೆ ಮಾಡಿದೆ.

ಸಲಿಂಗಿಗಳಿಗೆ ಬೆಂಬಲ ನೀಡಿದ್ದ ಒಬಾಮಾ

ಸಲಿಂಗಿಗಳಿಗೆ ಬೆಂಬಲ ನೀಡಿದ್ದ ಒಬಾಮಾ

2008ರಲ್ಲಿ ಒಬಾಮಾ ಸಲಿಂಗಿಗಳ ವಿಚಾರದಲ್ಲಿ ಭಿನ್ನ ನಿಲುವು ಹೊಂದಿದ್ದರು. ಆದರೆ 2012ರಲ್ಲಿ ಆ ನಿಲುವನ್ನು ಒಬಾಮಾ ಬದಲಿಸಿಕೊಂಡಿದ್ದರು. ಸಲಿಂಗಿಗಳ ವಿವಾಹ ಹಾಗೂ ಸಂಬಂಧವನ್ನು ಅಮೆರಿಕದಲ್ಲಿ ಕಾನೂನುಬದ್ಧ ಮಾಡಿದ್ದು ಇದೇ ಒಬಾಮಾ. 2ನೇ ಬಾರಿಗೆ 2012ರಲ್ಲಿ ಚುನಾಯಿತರಾದ ಒಬಾಮಾ ಮಾಡಿದ ಮೊದಲ ಕೆಲಸ ಇದು. ಇದಕ್ಕೆ ಅನೇಕರ ಪರ-ವಿರೋಧ ಇದ್ದರೂ ತಲೆಕೆಡಿಸಿಕೊಳ್ಳದೆ ತಮ್ಮ ಕಾರ್ಯ ಸಾಧಿಸಿದ್ದರು. ಆದರೂ ಟ್ರಂಪ್ ಪರವಾಗಿ ಸಲಿಂಗಿಗಳ ಮತ ಬಿದ್ದಿರುವುದು ಒಬಾಮಾಗೆ ಸಹಜವಾಗಿಯೇ ಕೋಪ ತರಿಸಿದೆ. ಈ ರೀತಿ ಒಬಾಮಾ ನೀಡಿರುವ ಹೇಳಿಕೆಗೆ ಟ್ರಂಪ್ ಇನ್ನೂ ಪ್ರತಿಕ್ರಿಯೆ ನೀಡಿಲ್ಲ.

ಸೆನೆಟರ್, ಉಪಾಧ್ಯಕ್ಷ, POTUS ಬೈಡನ್ ಜತೆ ಒಬಾಮಾ ಗೆಳೆತನ

ಒಬಾಮಾ ಕೇರ್ v/s ಡೊನಾಲ್ಡ್ ಟ್ರಂಪ್

ಒಬಾಮಾ ಕೇರ್ v/s ಡೊನಾಲ್ಡ್ ಟ್ರಂಪ್

ಅಮೆರಿಕದಲ್ಲಿ ಒಬಾಮಾ ಹಾಗೂ ಟ್ರಂಪ್ ನಡುವಿನ ವಾಗ್ದಾಳಿ ಇಂದು ನಿನ್ನೆಯದಲ್ಲ. ಅದಕ್ಕೆ ಬರೋಬ್ಬರಿ 4 ವರ್ಷಗಳ ಇತಿಹಾಸವಿದೆ. ಇಬ್ಬರ ನಡುವೆ ಬೆಂಕಿಯುಂಡೆಯಂತಹ ಪದಬಳಕೆಗೆ ಬಲವಾದ ಕಾರಣವಿದೆ. ಅಮೆರಿಕದ ಬಡವರಿಗೆ ಕೈಗೆಟುಕುವ ದರದಲ್ಲಿ ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ ಒಬಾಮಾ ತಮ್ಮ ಆಡಳಿತದಲ್ಲಿ ‘ಒಬಾಮಾ ಕೇರ್' ಎಂಬ ಮಹತ್ವಾಕಾಂಕ್ಷಿ ಯೋಜನೆ ಆರಂಭಿಸಿದ್ದರು. ಆದರೆ ಇದು ಟ್ರಂಪ್‌ಗೆ ಬಿಲ್‌ಕುಲ್ ಇಷ್ಟವಿರಲಿಲ್ಲ. ಹೀಗಾಗಿಯೇ ಟ್ರಂಪ್ ಅಧಿಕಾರಕ್ಕೆ ಬರುತ್ತಿದ್ದಂತೆ ‘ಒಬಾಮಾ ಕೇರ್' ಯೋಜನೆಗೆ ಬ್ರೇಕ್ ಹಾಕಿದ್ದರು. ಇದು ಟ್ರಂಪ್ ಮತ್ತು ಒಬಾಮಾ ಮಧ್ಯೆ ವಾಗ್ದಾಳಿಗೆ ದಾರಿಮಾಡಿಕೊಟ್ಟಿತ್ತು. ‘ಕೊರೊನಾ' ಸೋಂಕಿನಿಂದ ಅಮೆರಿಕದಲ್ಲಿ ಲಕ್ಷಾಂತರ ಜನರು ಮೃತಪಟ್ಟಿರುವುದು ಟ್ರಂಪ್ ಕೈಗೊಂಡ ಈ ನಿರ್ಧಾರದಿಂದ ಎಂಬ ಆರೋಪವಿದೆ. ‘ಒಬಾಮಾ ಕೇರ್'ಗೆ ಬ್ರೇಕ್ ಹಾಕಿದ್ದರಿಂದ ಬಡವರಿಗೆ ಚಿಕಿತ್ಸೆ ಸಿಗಲಿಲ್ಲ, ಹೀಗಾಗಿಯೇ ಅಮೆರಿಕದಲ್ಲಿ ಅತಿಹೆಚ್ಚು ಜನ ಕೊರೊನಾಗೆ ಬಲಿಯಾದರು ಎಂಬುದು ವಿಪಕ್ಷ ನಾಯಕರ ಆರೋಪ.

‘ಅಮೆರಿಕ ಹೆಸರು ಹಾಳುಮಾಡಿದ ಟ್ರಂಪ್’

‘ಅಮೆರಿಕ ಹೆಸರು ಹಾಳುಮಾಡಿದ ಟ್ರಂಪ್’

ಕೆಲದಿನಗಳ ಹಿಂದೆ ಖಾಸಗಿ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಒಬಾಮಾ, ಟ್ರಂಪ್ ವಿರುದ್ಧ ಒಂದು ಗಂಭೀರ ಆರೋಪ ಮಾಡಿದ್ದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಮೆರಿಕ ಹೆಸರು ಕೆಡಲು ಟ್ರಂಪ್ ಕಾರಣ ಎಂದಿದ್ದರು. ಅಲ್ಲದೆ ಇದುವರೆಗೂ ಜಗತ್ತಿಗೆ ತೊಂದರೆ ಆದರೆ ವಾಷಿಂಗ್ಟನ್ ಕಡೆಗೆ ಮುಖ ಮಾಡಿ ನಿಲ್ಲುತ್ತಿದ್ರು. ಅವರಿಗೆ ಮಾಸ್ಕೋ ಬೇಕಿರಲಿಲ್ಲ. ಆದರೆ ಟ್ರಂಪ್ ಎಲ್ಲವನ್ನು ಹಾಳು ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು.

ಟ್ರಂಪ್‌ಗೆ ಸಣ್ಣ ವಿಷಯವೂ ಅರ್ಥವಾಗಲ್ಲ, ಆದರೆ ಕೋಪ ಚೆನ್ನಾಗಿ ಬರುತ್ತೆ: ಒಬಾಮಾ

ಅಮೆರಿಕ ವಿರೋಧಿಗಳಿಗೆ ನಾವು ಸೋಲಬೇಕಿದೆ..!

ಅಮೆರಿಕ ವಿರೋಧಿಗಳಿಗೆ ನಾವು ಸೋಲಬೇಕಿದೆ..!

ಅಮೆರಿಕ ವಿರೋಧಿಗಳು ಹೇಗೆ ಕಾರ್ಯನಿರ್ವಹಿಸುತ್ತಿದ್ದಾರೆ, ಅಮೆರಿಕದ ಹೆಸರು ಕೆಡಿಸಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಲಾಬಿ ಬಗ್ಗೆಯೂ ಇದೇ ಕಾರ್ಯಕ್ರಮದಲ್ಲಿ ಒಬಾಮಾ ಪ್ರಸ್ತಾಪಿಸಿದ್ದರು. ಅಮೆರಿಕ ಶಕ್ತಿ ಕುಗ್ಗಿಸಲು ಕುತಂತ್ರಗಳು ನಡೆಯುತ್ತಿವೆ, ಟ್ರಂಪ್ ಆಡಳಿತದಲ್ಲಿ ಇದಕ್ಕೆ ತಕ್ಕಂತಹ ಬೆಳವಣಿಗೆ ನಡೆದಿದೆ. ಇದು ಮುಂದುವರಿದರೆ ಭವಿಷ್ಯದಲ್ಲಿ ಅಮೆರಿಕ ದೊಡ್ಡ ಅಪಾಯ ಎದುರಿಸಲಿದೆ ಎಂದು ಒಬಾಮಾ ಎಚ್ಚರಿಕೆ ಸಂದೇಶ ರವಾನಿಸಿದ್ದರು. ಅಲ್ಲದೆ ಟ್ರಂಪ್ ಮಾಡಿಕೊಂಡಿರುವ ಎಡವಟ್ಟುಗಳನ್ನೂ ಒಬಾಮಾ ತಿಳಿಸಿದ್ದರು.

ಟ್ರಂಪ್ ನಾಲಾಯಕ್ ಅಧ್ಯಕ್ಷ..!

ಟ್ರಂಪ್ ನಾಲಾಯಕ್ ಅಧ್ಯಕ್ಷ..!

ಚುನಾವಣೆಗೆ ಮುನ್ನ ನಡೆದಿದ್ದ ಡೆಮಾಕ್ರಟಿಕ್ ರಾಷ್ಟ್ರೀಯ ಸಮಾವೇಶದಲ್ಲಿ ಮಾತನಾಡಿದ್ದ ಅಮೆರಿಕದ ಮಾಜಿ ಅಧ್ಯಕ್ಷ ಒಬಾಮಾ, ಟ್ರಂಪ್ ತಾವು ಕುಳಿತ ಕಚೇರಿಗೆ ಒಂದಿಷ್ಟೂ ಯೋಗ್ಯರಲ್ಲ ಎಂದಿದ್ದರು. ಅಲ್ಲದೆ ಅಧ್ಯಕ್ಷ ಸ್ಥಾನ ನಿಭಾಯಿಸಲು ಟ್ರಂಪ್ ಅದಕ್ಷ ಎಂದು ಯಾವುದೇ ಮುಲಾಜು ನೋಡದೆ ಟ್ರಂಪ್‌ ಆಡಳಿತ ವೈಖರಿ ಜರಿದಿದ್ದರು. ಟ್ರಂಪ್ ಕೆಲಸ ಮಾಡಲು ಆಸಕ್ತಿ ತೋರುತ್ತಿಲ್ಲ. ಟ್ರಂಪ್ ತಮಗೆ ಮತ್ತು ಅವರ ಸ್ನೇಹಿತರನ್ನ ಹೊರತುಪಡಿಸಿ ಯಾರಿಗಾದರೂ ಸಹಾಯ ಮಾಡಲು ಕಚೇರಿ ನೀಡಿರುವ ಅಧಿಕಾರ ಬಳಸಿಕೊಳ್ಳಲು ಆಸಕ್ತಿ ತೋರುತ್ತಿಲ್ಲ ಎಂದು ಆರೋಪಿಸಿದ್ದರು. ಚುನಾವಣೆಯಲ್ಲಿ ಬೈಡನ್ ಪರ ಮತಗಳಿಕೆಗೆ ಒಬಾಮಾ ವಾಗ್ದಾಳಿ ಸಹಾಯಕವಾಗಿತ್ತು. ಬೈಡನ್ ಅಧ್ಯಕ್ಷರಾಗಿ ಆಯ್ಕೆಯಾಗುವಲ್ಲ ಒಬಾಮಾ ಪಾತ್ರವೂ ದೊಡ್ಡದಿದೆ.

English summary
The former president of America, Mr. Barack Obama has taken a swipe at Hispanic voters who chose Trump. Accusing them of ignoring Trump’s racist comments.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X