ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೆಟ್ರೋ ಟ್ರೈನ್ ಎಲ್ಲಿದೆ, ನಿಮ್ಮ ಮೊಬೈಲ್‌ನಲ್ಲೇ ಟ್ರ್ಯಾಕ್ ಮಾಡಿ

|
Google Oneindia Kannada News

ಬೆಂಗಳೂರು, ಜೂನ್ 23: ಓಡಾಡಲು ಮೆಟ್ರೋ ರೈಲುಗಳನ್ನು ಹೆಚ್ಚಾಗಿ ಬಳಸುವ ಬೆಂಗಳೂರಿಗರಿಗೆ ಖುಷಿಯ ಸುದ್ದಿ. ನಿಮ್ಮ ಮೊಬೈಲ್ ಫೋನ್‌ನಲ್ಲೇ ಮೆಟ್ರೋ ರೈಲಿನ ರಿಯಲ್ ಟೈಮ್ ಸಂಚಾರದ ಮಾಹಿತಿ ಪಡೆಯಬಹುದಾಗಿದೆ. ಒಲಾ, ಊಬರ್, ಸ್ವಿಗ್ಗಿ, ಜೊಮಾಟೊ ಇತ್ಯಾದಿ ಅಪ್ಲಿಕೇಶನ್‌ಗಳಲ್ಲಿ ನೀವು ರಿಯಲ್ ಟೈಮ್‌ನಲ್ಲಿ ವಾಹನಗಳನ್ನು ಟ್ರ್ಯಾಕ್ ಮಾಡುವ ರೀತಿಯಲ್ಲೇ ಮೆಟ್ರೋ ರೈಲುಗಳ ಓಡಾಟವನ್ನು ಮೊಬೈಲ್‌ನಲ್ಲಿ ನೋಡಬಹುದಾಗಿದೆ. ಗೂಗಲ್ ಮ್ಯಾಪ್ಸ್‌ನಲ್ಲಿ ಈ ಹೊಸ ಫೀಚರ್ ಲಭ್ಯವಿರಲಿದೆ.

ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ (ಬಿಎಂಆರ್‌ಸಿಎಲ್) ನಿನ್ನೆ ಬುಧವಾರ ಗೂಗಲ್ ಸಂಸ್ಥೆಯೊಂದಿಗೆ ಈ ಒಪ್ಪಂದಕ್ಕೆ ಸಹಿ ಹಾಕಿದೆ.

ಹೆಬ್ಬಾಳ- ಸರ್ಜಾಪುರ ಮಧ್ಯೆ ಮೆಟ್ರೋ ಮಾರ್ಗ: ಡಿಪಿಆರ್ ಸಲ್ಲಿಕೆಗೆ ಗಡುವು ಹೆಬ್ಬಾಳ- ಸರ್ಜಾಪುರ ಮಧ್ಯೆ ಮೆಟ್ರೋ ಮಾರ್ಗ: ಡಿಪಿಆರ್ ಸಲ್ಲಿಕೆಗೆ ಗಡುವು

"ಮೆಟ್ರೋ ನಿಲ್ದಾಣಗಳಲ್ಲಿ ರೈಲುಗಳ ಸಂಚಾರದ ಎಲ್ಲಾ ಮಾಹಿತಿಯನ್ನೂ ನಾವು ಗೂಗಲ್‌ಗೆ ಒದಗಿಸುತ್ತೇವೆ. ಇದನ್ನು ಬಳಸಿಕೊಂಡು ಗೂಗಲ್ ಮ್ಯಾಪ್ಸ್‌ನಲ್ಲಿ ರಿಯಲ್-ಟೈಮ್ ಮಾಹಿತಿಯನ್ನು ನೀಡಬಹುದು. ನಿರ್ದಿಷ್ಟ ಮೆಟ್ರೋ ನಿಲ್ದಾಣದಲ್ಲಿ ಯಾವ ಟ್ರೈನು ಯಾವ ಸಮಯಕ್ಕೆ ತಲುಪುತ್ತದೆ ಎಂಬುದನ್ನು ಜನರು ನೋಡಬಹುದು," ಎಂದು ಬಿಎಂಆರ್‌ಸಿಎಲ್ ನಿರ್ವಾಹಕ ನಿರ್ದೇಶಕ ಅಂಜುಮ್ ಪರ್ವೇಜ್ ಹೇಳುತ್ತಾರೆ.

ಹೊಸೂರು ತನಕ ಮೆಟ್ರೋ ವಿಸ್ತರಣೆ; ಜನ ಹೇಳುವುದೇನು?ಹೊಸೂರು ತನಕ ಮೆಟ್ರೋ ವಿಸ್ತರಣೆ; ಜನ ಹೇಳುವುದೇನು?

ಸೋಷಿಯಲ್ ಮೀಡಿಯಾದಲ್ಲಿ ಸ್ವಾಗತ

ಸೋಷಿಯಲ್ ಮೀಡಿಯಾದಲ್ಲಿ ಸ್ವಾಗತ

ಸೋಷಿಯಲ್ ಮೀಡಿಯಾದಲ್ಲಿ ಈ ಹೊಸ ಫೀಚರ್ ಅನ್ನು ಜನರು ಸ್ವಾಗತಿಸಿದ್ದಾರೆ. ಕೆಲವರು ಫೀಚರ್ ಉತ್ತಮಪಡಿಸಲು ಒಂದಷ್ಟು ಸಲಹೆಗಳನ್ನೂ ನೀಡಿದ್ದಾರೆ.

ಪ್ರತಿಯೊಂದು ರೈಲ್ವೆ ನಿಲ್ದಾಣದಲ್ಲೂ ಮುಂದಿನ ಒಂದು ಗಂಟೆಯ ಅವಧಿಯಲ್ಲಿ ಯಾವ್ಯಾವ ಟ್ರೈನುಗಳು ಹೊರಡುತ್ತವೆ ಎಂಬ ಮಾಹಿತಿ ಸೇರಿಸಿ ಎಂದು ಟ್ವಿಟ್ಟರ್‌ನಲ್ಲಿ ಒಬ್ಬರು ಸಲಹೆ ನೀಡಿದ್ದಾರೆ. ಗೂಗಲ್ ಮ್ಯಾಪ್ಸ್‌ನ ಅಧಿಕೃತ ಟ್ವಿಟ್ಟರ್ ಖಾತೆ ಈ ಟ್ವೀಟ್‌ಗೆ ಸ್ಪಂದಿಸಿ, ಆ ಸಲಹೆಯನ್ನು ಸ್ವೀಕರಿಸಿದೆ.

ಬಿಎಂಟಿಸಿ ಬಸ್ಸುಗಳಿಗೆ ಈ ವ್ಯವಸ್ಥೆ ಮಾಡಿ

ಬಿಎಂಟಿಸಿ ಬಸ್ಸುಗಳಿಗೆ ಈ ವ್ಯವಸ್ಥೆ ಮಾಡಿ

ಬೆಂಗಳೂರಿನಲ್ಲಿ ಮೆಟ್ರೋ ರೈಲುಗಳು ಐದು ನಿಮಿಷಕ್ಕೊಮ್ಮೆ ಬಂದು ಹೋಗುತ್ತವೆ. ಸ್ಟೇಷನ್‌ನಲ್ಲಿ ಯಾರೂ ಹೆಚ್ಚು ಹೊತ್ತು ಕಾಯಬೇಕಾಗುವುದಿಲ್ಲ. ಈ ರೈಲುಗಳ ಟೈಮಿಂಗ್ಸ್‌ನ ರಿಯಲ್ ಟೈಮ್ ಮಾಹಿತಿ ಹೆಚ್ಚು ಅವಶ್ಯಕತೆ ಇಲ್ಲ. ಬದಲಾಗಿ ಬಿಎಂಟಿಸಿ ಬಸ್ಸುಗಳ ರಿಯಲ್ ಟೈಮ್ ಡೇಟಾ ಒದಗಿಸಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಸಲಹೆಗಳು ವ್ಯಕ್ತವಾಗಿವೆ. ಬಿಎಂಟಿಸಿ ವೆಬ್‌ಸೈಟ್, ಆ್ಯಪ್‌ಗಳಲ್ಲಿ ಬಸ್ಸುಗಳ ಸಂಚಾರದ ಟೈಮಿಂಗ್ ಸಿಗುತ್ತದೆ. ಆದರೆ, ರಿಯಲ್ ಟೈಮ್ ಮಾಹಿತಿ ಲಭ್ಯ ಇಲ್ಲ.

ಬಿಎಂಟಿಸಿಗೂ ಗೂಗಲ್ ತಂತ್ರಜ್ಞಾನ ಸಹಾಯ

ಬಿಎಂಟಿಸಿಗೂ ಗೂಗಲ್ ತಂತ್ರಜ್ಞಾನ ಸಹಾಯ

ಬಿಎಂಟಿಸಿ ಸಂಸ್ಥೆಯೂ ಈ ಹಿಂದೆ ಗೂಗಲ್ ಜೊತೆ ಒಪ್ಪಂದ ಮಾಡಿಕೊಂಡಿದೆ. ಆದರೆ, ರಿಯಲ್ ಟೈಮ್ ಮಾಹಿತಿಗೆ ಸಂಬಂಧಿಸಿದ ಒಪ್ಪಂದವಲ್ಲ. ವಾಯು, ವಜ್ರ ಇತ್ಯಾದಿ ಬಿಎಂಟಿಸಿ ಬಸ್ಸುಗಳ ವೇಳಾಪಟ್ಟಿಯನ್ನು ಗೂಗಲ್‌ಗೆ ಒದಗಿಸಲಾಗುತ್ತದೆ. ಗೂಗಲ್ ಮ್ಯಾಪ್ಸ್‌ನಲ್ಲಿ ಈ ಡಾಟಾ ಆಧಾರವಾಗಿ ಯಾವ್ಯಾವ ಬಸ್ಸುಗಳು ನಿರ್ದಿಷ್ಟ ಮಾರ್ಗದಲ್ಲಿ ಸಂಚರಿಸುತ್ತವೆ ಎಂಬುದನ್ನು ನೋಡಬಹುದು.

ಬಸ್ ಮೇಲೆ ಅವಲಂಬನೆ

ಬಸ್ ಮೇಲೆ ಅವಲಂಬನೆ

ಬೆಂಗಳೂರಿನಲ್ಲಿ ಲಕ್ಷಾಂತರ ಜನರು ನಿತ್ಯವೂ ಬಿಎಂಟಿಸಿ ಬಸ್ಸುಗಳನ್ನು ಸಂಚಾರಕ್ಕಾಗಿ ಅವಲಂಬಿಸಿದ್ದಾರೆ. ನಿರ್ದಿಷ್ಟ ಮಾರ್ಗಗಳಲ್ಲಿ ನಿತ್ಯವೂ ಸಂಚರಿಸುವವರಿಗೆ ಟೈಮಿಂಗ್ ಗೊತ್ತಿರುತ್ತದೆ. ಆದರೂ ಬೇರೆ ಬೇರೆ ಕಾರಣಗಳಿಗೆ ಬಸ್ಸು ಬರದೇ ಹೋಗಬಹುದು. ಅಗ ರಿಯಲ್ ಟೈಮ್ ಮಾಹಿತಿ ಬಹಳ ಉಪಯೋಗಕ್ಕೆ ಬರುತ್ತದೆ. ಯಾವ್ಯಾವ ಬಸ್ಸು ಯಾವ ಕಡೆ ಹೋಗುತ್ತಿದೆ ಎಂಬುದನ್ನು ರಿಯಲ್ ಟೈಮ್‌ನಲ್ಲಿ ತಿಳಿದುಕೊಳ್ಳಬಹುದು.

(ಒನ್ಇಂಡಿಯಾ ಸುದ್ದಿ)

Recommended Video

HD Deve Gowda ರು Draupadi Murmu ಬಗ್ಗೆ ಹೇಳಿದ್ದೇನು ಗೊತ್ತೇ | *Karnataka | OneIndia Kannada

English summary
BMRCL has signed MoU with Google to provide real time data of metro trains in Bengaluru. Now one can view metro trains real time of their arrival to particular station.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X