ಕೋವಿಡ್‌ನ ಈ ರೂಪಾಂತರಗಳ ಬಗ್ಗೆ ನೀವು ತಿಳಿಯಲೇಬೇಕು..

ನವದೆಹಲಿ, ನವೆಂಬರ್‌ 26: ದಕ್ಷಿಣ ಆಫ್ರಿಕಾದಲ್ಲಿ ಕೊರೊನಾ ವೈರಸ್‌ನ ಹೊಸ ರೂಪಾಂತರ ಕಾಣಿಸಿಕೊಂಡಿದೆ. ಈ ಹೊಸ ಕೋವಿಡ್‌ ರೂಪಾಂತರವು ವಿಶ್ವದಲ್ಲಿ ಎಲ್ಲಾ ದೇಶಗಳು ಎಚ್ಚರಿಕೆ ಕ್ರಮ ಕೈಗೊಳ್ಳಲು ಕಾರಣವಾಗಿದೆ. ಈಗಾಗಲೇ ಕೊರೊನಾ ವೈರಸ್‌ ಸೋಂಕಿನ ಹೊಸ ರೂಪಾಂತರ B.1.1.529 ದಕ್ಷಿಣ ಆಫ್ರಿಕಾ, ಹಾಂಗ್‌ಕಾಂಗ್‌, ಬೋಟ್ಸ್ವಾನ, ಇಸ್ರೇಲ್‌ನಲ್ಲಿ ಕಾಣಿಸಿಕೊಂಡಿದೆ.

ಈ ಹೊಸ ರೂಪಾಂತರ B.1.1.529 ದಿಂದಾಗಿ ದಕ್ಷಿಣ ಆಫ್ರಿಕಾದಲ್ಲಿ ಕೋವಿಡ್‌ ಪ್ರಕರಣಗಳು ಅಧಿಕ ಆಗುತ್ತಿದೆ. ಅದೂ ಕೂಡಾ ಕ್ರಿಸ್‌ಮಸ್‌ ಹಾಗೂ ಹೊಸ ವರ್ಷ ಇನ್ನು ಒಂದು ತಿಂಗಳಿನಲ್ಲೇ ಬರಲಿದೆ. ಈ ನಡುವೆ ಈ ಹೊಸ ರೂಪಾಂತರವು ಕಾಣಿಸಿಕೊಂಡಿದೆ. ಅತೀ ಹೆಚ್ಚು ಕಾಳಜಿಯುಳ್ಳ ಕೋವಿಡ್‌ ರೂಪಾಂತರಗಳು ಎಂದು ಆಲ್ಫಾ, ಬೀಟಾ ಹಾಗೂ ಡೆಲ್ಟಾ ಆಗಿದೆ. ಈ ರೂಪಾಂತರಗಳು ಅಧಿಕವಾಗಿ ಹರಡುತ್ತದೆ, ಇದರಿಂದಾಗಿ ಅತೀ ಹೆಚ್ಚು ಗಂಭೀರವಾದ ಲಕ್ಷಣಗಳು ಕಾಣಲಿದೆ. ಅಷ್ಟು ಮಾತ್ರವಲ್ಲದೇ ಕೊರೊನಾ ಲಸಿಕೆಯ ಪರಿಣಾಮವನ್ನು ಕುಗ್ಗಿಸಲಿದೆ. ಕೊರೊನಾ ವೈರಸ್‌ ಸೋಂಕಿನ ಹಲವಾರು ರೂಪಾಂತರಗಳು ಕಾಣಿಸಿಕೊಂಡಿದೆ. ಕೊರೊನಾ ವೈರಸ್‌ ಸೋಂಕು ಹರಡಿದಂತೆ ರೂಪಾಂತರವೂ ಅಧಿಕ ಆಗುತ್ತದೆ. ಈ ಕೊರೊನಾ ವೈರಸ್‌ನ ರೂಪಾಂತರಗಳು ಹೆಚ್ಚು ಹರಡುವ ಅಥವಾ ಮಾರಕವಾಗಿರುವ ಸಾಧ್ಯತೆ ಹಿನ್ನೆಲೆ ತಜ್ಞರು ಅತೀ ಹೆಚ್ಚು ಜಾಗರೂಕರಾಗಿ ಇರುತ್ತಾರೆ. ಇನ್ನು ವೈರಸ್‌ ಅನ್ನು ನೋಡಿ ರೂಪಾಂತರವನ್ನು ಪತ್ತೆ ಹಚ್ಚಲು ಸಾಧ್ಯವಾಗುವುದಿಲ್ಲ.

ತಜ್ಞರು ರೋಗದ ಮಾದರಿಯನ್ನು ಆನುವಂಶಿಕ ಅನುಕ್ರಮಗಳಿಗೆ ಹೋಲಿಸಬೇಕು ಮತ್ತು ನಿಜವಾದ ಸಂಪರ್ಕವಿದೆಯೇ ಎಂದು ವಿಂಗಡಿಸಲು ಸಮಯ ತೆಗೆದುಕೊಳ್ಳಬಹುದು. ಕೋವಿಡ್‌ನ ಈ ಹೊಸ ರೂಪಾಂತರ B.1.1.529 ನಲ್ಲಿ ಪ್ರಮುಖವಾಗಿ ಒಟ್ಟು 10 ತಳಿಗಳು ಇದೆ. ಲಂಡನ್ ಮೂಲದ ಯುಸಿಎಲ್ ಜೆನೆಟಿಕ್ಸ್ ಸಂಸ್ಥೆಯ ನಿರ್ದೇಶಕ ಫ್ರಾಂಕೋಯಿಸ್ ಬಲೂಕ್ಸ್ ಪ್ರಕಾರ, "ಪ್ರತಿರೋಧಕ ಕಡಿಮೆ ಇರುವ ವ್ತಕ್ತಿಯಲ್ಲಿ ದೀರ್ಘ ಕಾಲ ಕೋವಿಡ್‌ ಸೋಂಕು ಇದ್ದ ಸಂದರ್ಭದಲ್ಲಿ ಈ ರೂಪಾಂತರ ಸೃಷ್ಟಿ ಆಗಿರಬಹುದು. ಹೆಚ್‌ಐವಿ/ಏಡ್ಸ್‌ ರೋಗಿಗಳಲ್ಲಿ ಈ ಹೊಸ ಕೋವಿಡ್‌ ರೂಪಾಂತರ ಹುಟ್ಟಿಕೊಂಡಿರಬಹುದು." ಇನ್ನು ಈ ಕೋವಿಡ್‌ನ ಎಷ್ಟು ರೂಪಾಂತರಗಳು ಈವರೆಗೆ ಪತ್ತೆಯಾಗಿದೆ, ಅವು ಯಾವುದು ಎಂಬ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ.

ಭಾರತದಲ್ಲಿ ಕಾಣಿಸಿಕೊಂಡ ಡೆಲ್ಟಾ: B.1.617.2

ಭಾರತದಲ್ಲಿ ಕಾಣಿಸಿಕೊಂಡ ಡೆಲ್ಟಾ: B.1.617.2

ವಿಶ್ವದಲ್ಲೇ ಆತಂಕ ಸೃಷ್ಟಿಸಿದ ಕೊರೊನಾ ವೈರಸ್‌ನ ರೂಪಾಂತರ ಡೆಲ್ಟಾ: B.1.617.2 ಮೊದಲ ಬಾರಿಗೆ ಭಾರತದಲ್ಲಿ ಕಾಣಿಸಿಕೊಂಡಿದೆ. ಬೇರೆ ಎಲ್ಲಾ ಕೊರೊನಾ ವೈರಸ್‌ ರೂಪಾಂತರಗಳಿಗಿಂತ ಈ ಡೆಲ್ಟಾ: B.1.617.2 ರೂಪಾಂತರ ಹೆಚ್ಚು ಸಾಂಕ್ರಾಮಿಕವಾಗಿ ಹರಡುತ್ತದೆ. ಈ ಡೆಲ್ಟಾ ರೂಪಾಂತರವು ಹೆಚ್ಚು ಗಂಭೀರವಾದ ರೋಗ ಲಕ್ಷಣಕ್ಕೆ ಕಾರಣವಾಗುತ್ತದೆ. ಕೊರೊನಾ ಲಸಿಕೆಯು ಈ ರೂಪಾಂತರಕ್ಕೆ ಹೆಚ್ಚು ಪರಿಣಾಮ ಬೀರಲ್ಲ ಎಂದು ನಂಬಲಾಗಿತ್ತು. ಆದರೆ ಹೆಚ್ಚಿನ ರೂಪಾಂತರಗಳನ್ನು ತಡೆಗಟ್ಟುವಲ್ಲಿ ಕೋವಿಡ್‌ ಲಸಿಕೆಗಳು ಪರಿಣಾಮಕಾರಿ ಆಗಿದೆ.

ಭಾರತದ ಹುಟ್ಟಿತು ಡೆಲ್ಟಾ ಪ್ಲಸ್‌: AY.4.2

ಭಾರತದ ಹುಟ್ಟಿತು ಡೆಲ್ಟಾ ಪ್ಲಸ್‌: AY.4.2

ಡೆಲ್ಟಾ: B.1.617.2 ನಂತೆ ಡೆಲ್ಟಾ ಪ್ಲಸ್‌: AY.4.2 ಕೂಡಾ ಭಾರತದಲ್ಲೇ ಮೊದಲ ಬಾರಿಗೆ ಕಾಣಿಸಿಕೊಂಡಿದೆ. ಈ ಕೊರೊನಾ ವೈರಸ್‌ ರೂಪಾಂತರ ಕಾಣಿಸಿಕೊಂಡ ಸೋಂಕಿತರಲ್ಲಿ ಗಂಭೀರವಾದ ಲಕ್ಷಣಗಳು ಕಾಣಿಸಿಕೊಂಡಿದೆ. ಈ ಸೋಂಕು ಪತ್ತೆಯಾದ ರೋಗಿಗಳು ಸಾವನ್ನಪ್ಪಿರುವುದು ಕೂಡಾ ವರದಿ ಆಗಿದೆ. ಬೇರೆ ಎಲ್ಲಾ ಕೊರೊನಾ ವೈರಸ್‌ ರೂಪಾಂತರಗಳಿಗಿಂತ ಈ ರೂಪಾಂತರವು ಅಧಿಕವಾಗಿ ಹರಡುತ್ತದೆ. ಪ್ರಸ್ತುತ ಲಭ್ಯವಿರುವ ಕೋವಿಡ್‌ ಲಸಿಕೆಯೂ ಈ ಕೊರೊನಾ ವೈರಸ್‌ ರೂಪಾಂತರಕ್ಕೆ ಪ್ರತಿರೋಧ ಒಡ್ಡುವುದಿಲ್ಲ ಎಂಬುವುದಕ್ಕೆ ಯಾವುದೇ ಪುರಾವೆಗಳು ಇಲ್ಲ. ಈವರೆಗೆ ಅತೀ ಹೆಚ್ಚು ಸಾಂಕ್ರಾಮಿಕವಾಗಿರುವ ಕೋವಿಡ್‌ ರೂಪಾಂತರವು ಡೆಲ್ಟಾ ಆಗಿದೆ. ಇದು ಸುಮಾರು 99 ಶೇಕಡದಷ್ಟು ಹರಡುತ್ತದೆ.

ಇಂಗ್ಲೆಂಡ್‌ನ ಆಲ್ಫಾ: B.1.1.7

ಇಂಗ್ಲೆಂಡ್‌ನ ಆಲ್ಫಾ: B.1.1.7

ಆಲ್ಫಾ: B.1.1.7 ಕೊರೊನಾ ವೈರಸ್‌ ರೂಪಾಂತರವು ಇಂಗ್ಲೆಂಡ್‌ನಲ್ಲಿ ಕಾಣಿಸಿಕೊಂಡಿದೆ. ಇದು ಶೇಕಡ 70 ಕ್ಕಿಂತ ಅಧಿಕ ಸಾಂಕ್ರಾಮಿಕವಾಗಿದೆ. ಹಾಗೆಯೇ ಬಹಳ ಸುಲಭವಾಗಿ ಹರಡುತ್ತದೆ. ಈ ಕೋವಿಡ್‌ ರೂಪಾಂತರ ಆಲ್ಫಾದಿಂದಾಗಿ ಸಾವು ಸಂಭವಿಸುವ ಸಾಧ್ಯತೆ ಅಧಿಕವಾಗಿದೆ. ಆಲ್ಫಾ ರೂಪಾಂತರದ ಒಂದೇ ಒಂದು ತಳಿಯು ಕೋವಿಡ್‌ ಲಸಿಕೆಯ ಪರಿಣಾಮವನ್ನು ತಗ್ಗಿಸುತ್ತದೆ ಎಂಬುವುದು ಹೆಚ್ಚು ಅಸಂಭವವಾಗಿದೆ.

ದಕ್ಷಿಣ ಆಫ್ರಿಕಾದ ಬೀಟಾ: B.1.351

ದಕ್ಷಿಣ ಆಫ್ರಿಕಾದ ಬೀಟಾ: B.1.351

ದಕ್ಷಿಣಾ ಆಫ್ರಿಕಾದಲ್ಲಿಯೇ ಬೀಟಾ: B.1.351 ಕೊರೊನಾ ವೈರಸ್‌ ರೂಪಾಂತರ ಕಾಣಿಸಿಕೊಂಡಿದೆ. ಈಗ ದಕ್ಷಿಣ ಆಫ್ರಿಕಾದಲ್ಲಿಯೇ B.1.1.529 ಕೊರೊನಾ ವೈರಸ್‌ ರೂಪಾಂತರವು ಕಾಣಿಸಿಕೊಂಡಿದೆ. ಮೂಲ ಕೊರೊನಾ ವೈರಸ್‌ಗಿಂತ ಬೀಟಾ: B.1.351 ಅಧಿಕ ಸುಲಭವಾಗಿ ಹರಡುತ್ತದೆ. ಯಾವುದೇ ಹೆಚ್ಚು ಗಂಭೀರವಾದ ಲಕ್ಷಣಗಳು ಇದರಲ್ಲಿ ಕಂಡು ಬಂದಿಲ್ಲ. ಹಾಗೆಯೇ ಎಲ್ಲಾ ಕೋವಿಡ್‌ ಲಸಿಕೆಗಳು ಬೀಟಾ: B.1.351 ವಿರುದ್ಧ ಪರಿಣಾಮಕಾರಿ ಆಗಿದೆ.

ಬ್ರೆಜಿಲ್‌ನ ಗಾಮಾ: P.1

ಬ್ರೆಜಿಲ್‌ನ ಗಾಮಾ: P.1

ಗಾಮಾ: P.1 ಕೊರೊನಾ ವೈರಸ್‌ ರೂಪಾಂತರವು ಮೊದಲ ಬಾರಿಗೆ ಬ್ರೆಜಿಲ್‌ನಲ್ಲಿ ಕಾಣಿಸಿಕೊಂಡಿದೆ. ಈ ರೂಪಾಂತರವು ಹೆಚ್ಚು ಸಾಂಕ್ರಾಮಿಕವಾಗಿದೆ. ಹಾಗೆಯೇ ಈಗಾಗಲೇ ಕೋವಿಡ್‌ ಹೊಂದಿರುವ ಜನರಿಗೆ ಈ ಸೋಂಕು ತಗುಲುತ್ತದೆ. ಗಾಮಾ : P.1 ವಿರುದ್ಧ ಎಲ್ಲಾ ಕೋವಿಡ್‌ ಲಸಿಕೆಗಳು ಪರಿಣಾಮಕಾರಿ ಆಗಿದೆ.

ದಕ್ಷಿಣ ಅಮೆರಿಕದಲ್ಲಿ ಕಾಣಿಸಿಕೊಂಡ ಲಾಮ್ಡಾ: C.37

ದಕ್ಷಿಣ ಅಮೆರಿಕದಲ್ಲಿ ಕಾಣಿಸಿಕೊಂಡ ಲಾಮ್ಡಾ: C.37

ಲಾಮ್ಡಾ: C.37 ಕೂಡ ಕೊರೊನಾ ವೈರಸ್‌ ಸೋಂಕಿನ ಒಂದು ರೂಪಾಂತರವಾಗಿದೆ. ಈ ರೂಪಾಂತರವು ಮೊದಲ ಬಾರಿಗೆ ದಕ್ಷಿಣ ಅಮೆರಿಕದಲ್ಲಿ ಕಾಣಿಸಿಕೊಂಡಿದೆ. ಹಾಗೆಯೇ ಈ ಲಾಮ್ಡಾ: C.37 ರೂಪಾಂತರವು ಹೆಚ್ಚು ಸಾಂಕ್ರಾಮಿಕ ಆಗಿದೆ. ಲಾಮ್ಡಾ: C.37 ವಿರುದ್ಧ ಎಲ್ಲಾ ಕೋವಿಡ್‌ ಲಸಿಕೆಗಳು ಪರಿಣಾಮಕಾರಿ ಆಗಿದೆ.

ಕೋವಿಡ್‌ನ ಹೊಸ ರೂಪಾಂತರ B.1.1.529

ಕೋವಿಡ್‌ನ ಹೊಸ ರೂಪಾಂತರ B.1.1.529

ಕೊರೊನಾ ವೈರಸ್‌ನ ಹೊಸ ರೂಪಾಂತರ B.1.1.529 ಆಗಿದೆ. ಈ ರೂಪಾಂತರವು ದಕ್ಷಿಣ ಆಫ್ರಿಕಾದಲ್ಲಿ ಕಾಣಿಸಿಕೊಂಡಿದ್ದು, ಪ್ರಸ್ತುತ ವಿಶ್ವದ ಎಲ್ಲಾ ದೇಶಗಳು ನಿರ್ಬಂಧವನ್ನು ಕಠಿಣಗೊಳಿಸಲು ಕಾರಣವಾಗಿದೆ. ಈ ರೂಪಾಂತರಕ್ಕೆ ಈವರೆಗೆ ಯಾವುದೇ ಹೆಸರನ್ನು ಇಟ್ಟಿಲ್ಲ. ಕೊರೊನಾ ವೈರಸ್‌ನ ಈ ಹೊಸ ರೂಪಾಂತರವು ಅಧಿಕವಾಗಿ ಹರಡುತ್ತದೆ ಹಾಗೂ ಹೆಚ್ಚು ತಳಿಗಳನ್ನು ಹೊಂದಿದೆ. ಕೋವಿಡ್‌ ಲಸಿಕೆಯು ಈ ಕೋವಿಡ್‌ ರೂಪಾಂತರಕ್ಕೆ ಯಾವುದೇ ಪರಿಣಾಮವನ್ನು ಬೀರಲಾರದು ಎಂದು ಈವರೆಗೆ ನಂಬಲಾಗಿದೆ. ಈ ಬಗ್ಗೆ ಅಧಿಕ ಸಂಶೋಧನೆ ನಡೆಯುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+