ಮುಂದಿನ ತಿಂಗಳು ಭಾರತದಲ್ಲಿ ಮಾರುತಿಯ ಹೊಸ ಕಾರ್‌ ಬಿಡುಗಡೆ?

ಭಾರತೀಯ ಫೋರ್‌ ವೀಲರ್‌ ಮಾರುಕಟ್ಟೆಯಲ್ಲಿ ಹವಾ ಸೃಷ್ಟಿಸಿರುವ ಮಾರುತಿ ಸ್ವಿಫ್ಟ್‌, ಗ್ರಾಹಕರನ್ನು ಸೆಳೆಯುತ್ತಿದೆ. ಈ ವಾಹನವನ್ನು ಗ್ರಾಹಕ ತುಂಬ ಇಷ್ಟ ಪಟ್ಟಿದ್ದಾರೆ. ಕಳೆದ ತಿಂಗಳೂ ಹೊಸ ಸ್ವಿಫ್ಟ್‌ ಕಾರ್ ಹೆಚ್ಚು ಮಾರಾಟವಾದ ದಾಖಲೆಯನ್ನು ಸಹ ಹೊಂದಿದೆ. ಈ ಯಶಸ್ಸಿನ ಅಲೆಯಲ್ಲಿ ತೇಲಾಡುತ್ತಿರುವ ಮಾರುತಿ, ಮತ್ತೊಂದು ಕಾರ್‌ನ್ನು ಮಾರುಕಟ್ಟೆಯಲ್ಲಿ ಲಾಂಚ್‌ ಮಾಡಲು ಪ್ಲ್ಯಾನ್ ಮಾಡಿಕೊಂಡಿದ್ದು, ಮುಂದಿನ ತಿಂಗಳು ಈ ಕಾರ್‌ ಗ್ರಾಹಕರಿಗೆ ಲಭ್ಯವಾಗುವ ಸಾಧ್ಯತೆ ಇದೆ.

ಹೊಸ ಕಾಂಪ್ಯಾಕ್ಟ್ ಸೆಡಾನ್ ಕಾರು ಡಿಜೈರ್ ಫೇಸ್‌ಲಿಫ್ಟ್ ಅನ್ನು ಮುಂದಿನ ತಿಂಗಳು ಲಾಂಚ್ ಮಾಡುವ ಸಾಧ್ಯತೆ ಇದೆ. ಈ ವಾಹನವನ್ನು ಟೆಸ್ಟ್‌ ಟೈಮ್‌ ವೇಳೆ ಹಲವು ಬಾರಿ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದೆ. ಈ ಕಾರಿನ ಫೀಚರ್ಸ್‌ ಹೇಗಿರಬಹುದು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

New Maruti Dzire Set to Launch in July Featuring Z-Series Engine

ಮಾರುತಿ ಸುಜುಕಿಯು ಹೊಸ Z-ಸೀರೀಸ್ 3 ಸಿಲಿಂಡರ್ ಎಂಜಿನ್ ಅನ್ನು ಫೇಸ್‌ಲಿಫ್ಟೆಡ್ ಡಿಜೈರ್‌ನಲ್ಲಿ ಸೇರಿಸುತ್ತದೆ. ಈ ಎಂಜಿನ್ ಹೊಸ ಕಾರ್‌ಗೆ ಶಕ್ತಿ ನೀಡುತ್ತದೆ. ಈ 1.2 ಲೀಟರ್ ಎಂಜಿನ್ 82 ಎಚ್‌ಪಿ ಪವರ್ ಮತ್ತು 112 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ 5 ಸ್ಪೀಡ್ ಮ್ಯಾನುವಲ್ ಮತ್ತು 5 ಸ್ಪೀಡ್ AMT ಗೇರ್ ಬಾಕ್ಸ್ ಹೊಂದಿದೆ. ಹೊಸ ಡಿಜೈರ್‌ನಲ್ಲಿ ಪವರ್ ಮತ್ತು ಟಾರ್ಕ್‌ನಲ್ಲಿ ಸಣ್ಣ ಬದಲಾವಣೆಗಳನ್ನು ಮಾಡಬಹುದು ಎಂದು ನಂಬಲಾಗಿದೆ. ಹೊಸ ಎಂಜಿನ್ ಶೇಕಡಾ 14ಕ್ಕಿಂತ ಹೆಚ್ಚು ಮೈಲೇಜ್ ನೀಡುತ್ತದೆ ಎಂದು ಮಾರುತಿ ಹೇಳಿದೆ.

ಮೂರು ಸಿಲಿಂಡರ್‌ನಿಂದ ಏನು ಲಾಭ?

ಹೊಸ ಡಿಜೈರ್ 3 ಸಿಲಿಂಡರ್ ಎಂಜಿನ್ ಹೊಂದಿರುವುದಿಂದ ಶಕ್ತಿಯುತವಾಗಿದ್ದು, ಹೆಚ್ಚಿನ ಮೈಲೇಜ್ ನೀಡುತ್ತದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ನಾಲ್ಕು ಸಿಲೆಂಡರ್‌ಗಳ ಬದಲು ಮೂರು ಸಿಲೆಂಡರ್‌ ಬಳಸುತ್ತಾರೆ. ಇದಕ್ಕೆ ಮುಖ್ಯ ಕಾರಣ ಸಿಲಿಂಡರ್‌ ಕಡಿಮೆ ಆದರೆ ಎಂಜಿನ್‌ ಗ್ರಾತ್‌ ಚಿಕ್ಕದಾಗಿ, ವೆಚ್ಚವೂ ಸಹ ಕಡಿತವಾಗುತ್ತದೆ. ಇಷ್ಟೇ ಅಲ್ಲ ಹೆಚ್ಚಿನ ಮೈಲೇಜ್‌ ನೀಡುತ್ತದೆ.

New Maruti Dzire Set to Launch in July Featuring Z-Series Engine

ಹೊಸ ಕಾರ್‌ನಲ್ಲಿ ಸಿಎನ್‌ಜಿ ಆಯ್ಕೆಯೂ ಲಭ್ಯವಿರುತ್ತದೆ. ಈ ಕಾರ್‌ ಪೆಟ್ರೋಲ್‌ ಇಂಜಿನ್‌ನಲ್ಲಿ 25 ಕಿಲೋ ಮೀಟರ್‌ ಮೈಲೇಜ್‌ ನೀಡುತ್ತದೆ ಎಂದು ಹೇಳಲಾಗುತ್ತದೆ. ಅಲ್ಲದೆ ಸಿಎನ್‌ಜಿ ಮೋಡ್‌ನಲ್ಲಿ ಕಾರ್‌ ಸುಮಾರು 31 ಕಿಲೋ ಮೀಟರ್‌ ನೀಡಬಹುದು. ಈ ಕಾರ್‌ ಎರಡು ಸಿಎನ್‌ಜಿ ಸಿಲಿಂಡರ್‌ಗಳನ್ನು ಕಾಣಬಹುದಾಗಿದೆ. ಅಲ್ಲದೆ ಈ ಕಾರ್‌ನಲ್ಲಿ ಸ್ಥಳಾವಕಾಶದ ಕೊರತೆ ಇಲ್ಲ. ಇನ್ನು ಈ ಕಾರ್‌ ಬಗ್ಗೆ ಕಂಪನಿಯಿಂದ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಈ ಕಾರ್‌ ಬೆಲೆ 7 ಲಕ್ಷ ರೂ.ಗಳಿಂದ ಆರಂಭವಾಗವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+