ಶಿವನ ಕುತ್ತಿಗೆಯ ಆಭರಣವೇ ನಾಗ ದೇವತೆ; ನಾಗರ ಪಂಚಮಿ ವಿಶೇಷತೆ ಏನು? ತಿಳಿಯಿರಿ
ಶ್ರಾವಣ ಮಾಸವು ಶಿವನಿಗೆ ಬಹಳ ಪ್ರಿಯವಾಗಿದೆ. ಈ ತಿಂಗಳಲ್ಲಿ ಮಂಗಳ ಗೌರಿಯ ಸೋಮವಾರದಂದು ಉಪವಾಸವನ್ನು ಆಚರಿಸಲಾಗುತ್ತದೆ. ಇದರೊಂದಿಗೆ ನಾಗರ ಪಂಚಮಿ ಮತ್ತು ರಕ್ಷಾಬಂಧನದಂತಹ ಪ್ರಮುಖ ಹಬ್ಬಗಳೂ ಶ್ರಾವಣ ಮಾಸದಲ್ಲಿ ಬರುತ್ತವೆ. ನಾಗರ ಪಂಚಮಿ ಹಬ್ಬವನ್ನು ಶ್ರಾವಣ ಮಾಸದ ಶುಕ್ಲ ಪಕ್ಷದ ಐದನೇ ದಿನದಂದು ಆಚರಿಸಲಾಗುತ್ತದೆ ಮತ್ತು ಈ ದಿನದಂದು ಭಕ್ತಿ ಪೂರ್ವಕವಾಗಿ ಪೂಜಿಸುವ ಮೂಲಕ ಶಿವನು ತನ್ನ ಭಕ್ತರಿಗೆ ತುಂಬಾ ಸಂತೋಷ ಪಡಿಸುತ್ತಾನೆ ಎಂದು ಹೇಳಲಾಗುತ್ತದೆ.
ಶ್ರಾವಣ ಶುಕ್ಲ ಪಕ್ಷ ಪಂಚಮಿ ತಿಥಿಯು ಮಂಗಳವಾರ ಮತ್ತು ಉತ್ತರ ಫಾಲ್ಗುಣಿ ನಕ್ಷತ್ರ ಮತ್ತು ಶಿವಯೋಗವನ್ನು ಪಡೆಯುತ್ತಿದೆ, ಇದು ತುಂಬಾ ಮಂಗಳಕರವಾಗಿದೆ. ನಾಗ ಪಂಚಮಿಯಂದು ಶಿವ ಮತ್ತು ನಾಗದೇವರ ಆರಾಧನೆಯು ವಿಶೇಷವಾಗಿ ಸಾಧನೆಗೆ ಕಾರಣವಾಗುತ್ತದೆ. ಈ ದಿನದಂದು ನಾಗದೇವತೆಯನ್ನು ಪೂಜಿಸುವ ವಿಶೇಷ ಮಹತ್ವವನ್ನು ಶಾಸ್ತ್ರಗಳಲ್ಲಿ ಹೇಳಲಾಗಿದೆ.
ಹಿಂದೂ ಧಾರ್ಮಿಕ ನಂಬಿಕೆಗಳ ಪ್ರಕಾರ, ನಾಗರ ಪಂಚಮಿಯ ದಿನದಂದು ನಾಗ ದೇವತೆಯನ್ನು ಪೂಜಿಸಲು ವಿಧಾನಗಳು ಇರುತ್ತವೆ. ಈ ಹಬ್ಬವನ್ನು ಪ್ರತಿ ವರ್ಷ ಶ್ರಾವಣ ಮಾಸದ ಶುಕ್ಲ ಪಕ್ಷದ ಐದನೇ ದಿನದಂದು ಆಚರಿಸಲಾಗುತ್ತದೆ. ಈ ವರ್ಷ ನಾಗರ ಪಂಚಮಿಯು ಮೊದಲನೇಯ ವಾರದ 2ನೇ ದಿನ ಆಗಸ್ಟ್‌ನಲ್ಲಿ ಹಬ್ಬವಾಗಿ ಆಚರಿಸಲಾಗುತ್ತದೆ.

ಭೋಲೆನಾಥನ ಕುತ್ತಿಗೆಯ ಆಭರಣ
ಹಿಂದೂ ಧರ್ಮಗ್ರಂಥಗಳಲ್ಲಿ ಹಾವುಗಳ ಪೂಜೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ನಾಗ ದೇವತೆಯನ್ನು ಭೋಲೆನಾಥನ ಕುತ್ತಿಗೆಯ ಆಭರಣವೆಂದು ಪರಿಗಣಿಸಲಾಗಿದೆ. ಹಿಂದೂ ಕ್ಯಾಲೆಂಡರ್ ಪ್ರಕಾರ, 'ನಾಗರ ಪಂಚಮಿ'ಯನ್ನು ಪ್ರತಿ ವರ್ಷ ಶ್ರಾವಣ ಮಾಸದ ಶುಕ್ಲ ಪಕ್ಷದ ಐದನೇ ದಿನದಂದು ಆಚರಿಸಲಾಗುತ್ತದೆ. ಈ ದಿನದಂದು ನಾಗದೇವತೆಯನ್ನು ಪೂಜಿಸುವುದರಿಂದ ಬಯಸಿದ ಎಲ್ಲಾ ಫಲಿತಾಂಶಗಳನ್ನು ಸಾಧಿಸಲಾಗುತ್ತದೆ ಎಂದು ನಂಬಲಾಗಿದೆ. ಈ ವರ್ಷ, ನಾಗ ಪಂಚಮಿಯು ಮಂಗಳವಾರ, ಆಗಸ್ಟ್ 2, 2022ರಂದು ಬಂದಿದೆ ಹಾಗಾದರೆ ನಾಗ ಪಂಚಮಿಯ ದಿನದ ಶುಭ ಮುಹೂರ್ತ, ವಸ್ತುಗಳ ಪಟ್ಟಿ ಮತ್ತು ಪೂಜೆಯ ವಿಧಾನವನ್ನು ತಿಳಿಯೋಣ.

ಪೂಜಾ ಸಾಮಗ್ರಿ
ಹಿಂದೂ ಕ್ಯಾಲೆಂಡರ್ ಪ್ರಕಾರ, ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿ ತಿಥಿಯು ಆಗಸ್ಟ್ 2ರಂದು ಬೆಳಿಗ್ಗೆ 5:13ರಿಂದ ಪ್ರಾರಂಭವಾಗಿ ಆಗಸ್ಟ್ 3ರಂದು ಬೆಳಿಗ್ಗೆ 5:41ಕ್ಕೆ ಕೊನೆಗೊಳ್ಳುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ನಾಗ ಪಂಚಮಿಯು 2022ರ ಪೂಜೆಯ ಶುಭ ಸಮಯವು ಆಗಸ್ಟ್ 2ರಂದು(ನಾಳೆ) ಬೆಳಿಗ್ಗೆ 5:45ರಿಂದ 8:25ರವರೆಗೆ ಇರುತ್ತದೆ.
ಮಣ್ಣಿನ ಮೂರ್ತಿ ಅಥವಾ ನಾಗದೇವತೆಯ ಚಿತ್ರ, ಕುಂಕುಮ, ಸಿಂಧೂರ, ಅಕ್ಷತೆ, ಶ್ರೀಗಂಧ, ಮರದ ಪಟ್ಟಿ, ಮೊಸರು, ಹಾಲು, ಪಂಚಾಮೃತ, ಸಕ್ಕರೆ, ಜೇನುತುಪ್ಪ, ಬಿಲ್ವಪತ್ರೆ, ಹೂವಿನ ಮಾಲೆ, ವೀಳ್ಯದೆಲೆ, ಕುಶ, ಹರಿದ್ರಾ, ತುಪ್ಪ, ಖೀರ್, ಲಡ್ಡು, ಮಾಲ್ಪುವಾ, ಧೂಪ, ದೀಪ, ಭತ್ತ ಇತ್ಯಾದಿ.

ಶಿವ ಮೆಚ್ಚಿಸಲು ವಿಶೇಷ ಉಪವಾಸ
ನಾಗ ಪಂಚಮಿಯ ದಿನ ಬೆಳಗ್ಗೆ ಬೇಗ ಎದ್ದೇಳುಬೇಕು. ನಿಮ್ಮ ದೈನಂದಿನ ಚಟುವಟಿಕೆಗಳಿಂದ ಮುಗಿದ ನಂತರ ಸ್ನಾನ ಮಾಡಿ. ಇದರ ನಂತರ ಶುಭ್ರವಾದ ಬಟ್ಟೆಗಳನ್ನು ಧರಿಸಿ, ಸಂತೋಷಕ್ಕಾಗಿ ಖೀರ್ ಮತ್ತುಸಿಹಿ ತಿಂಡಿ ಮಾಡಿ. ದೇವಸ್ಥಾನವನ್ನು ಶುಚಿಗೊಳಿಸಿದ ನಂತರ ನಾಗ ದೇವತೆಗೆ ಬಕ್ತಿಯಿಂದ ಪೂಜೆ ಸಲ್ಲಿಸಿಬೇಕು.ಇದರ ನಂತರ, ನೀರನ್ನು ಅರ್ಪಿಸಿ ಮತ್ತು ಪಂಚಾಮೃತದಿಂದ ಸ್ನಾನ ಮಾಡಿ. ನಂತರ ಶ್ರೀಗಂಧ, ಅಕ್ಷತೆ, ಹೂವುಗಳು, ಹಣ್ಣುಗಳು ಇತ್ಯಾದಿ ಎಲ್ಲಾ ವಸ್ತುಗಳನ್ನು ಅರ್ಪಿಸಿ.
ಪೂಜಾ ಸಾಮಗ್ರಿಯನ್ನು ಅರ್ಪಿಸುವಾಗ, ||ಓಂ ನವಕುಲಾಯ ವಿಧ್ಮಹೇ ವಿಷದಂತಾಯ ಧೀಮಹಿ ತನ್ನೋ ಸರ್ಪಃ ಪ್ರಚೋದಯಾತ್|| ಎಂಬ ಮಂತ್ರವನ್ನು ಜಪಿಸಬೇಕು. ಇದರ ನಂತರ ಖೀರ್, ಲಡ್ಡುಗಳು ಮತ್ತು ಇತರ ಸಿಹಿ ತಿಂಡಿಗಳನ್ನು ಅರ್ಪಿಸಿ. ಇದರ ನಂತರ, ಧೂಪ-ದೀಪದೊಂದಿಗೆ ನಾಗ್ ದೇವತೆಯ ಆರತಿ ಮಾಡಿ. ಪೂಜೆಯ ನಂತರ, ಕೈಮುಗಿದು, ನಿಮ್ಮ ಜೀವನದ ಎಲ್ಲಾ ತೊಂದರೆಗಳನ್ನು ನಿವಾರಿಸಲಿ ಎಂದು ನಿಮ್ಮ ಮನಸ್ಸಿನಲ್ಲಿ ನಾಗ ದೇವತೆಯನ್ನು ಪ್ರಾರ್ಥಿಸಬೇಕು. ನಾಗ ಅಂದರೆ ನಾಗರ ಪಂಚಮಿಯ ದಿನದಂದು ಹಾವುಗಳನ್ನು ಪೂಜಿಸಲಾಗುತ್ತದೆ. ಶಿವನನ್ನು ಮೆಚ್ಚಿಸಲು ಅನೇಕ ಜನರು ಹಾಗೂ ಭಕ್ತರು ಈ ದಿನದಂದು ಉಪವಾಸವನ್ನು ಆಚರಿಸುತ್ತಾರೆ.

ಶಿವ-ಪಾರ್ವತಿಯ ವಿಶೇಷ ಪೂಜೆ
ನಾಗ ಪಂಚಮಿಯ ಮಂಗಳ ಗೌರಿ ವ್ರತವನ್ನು ಶ್ರಾವಣ ಮಾಸದ ಪ್ರತಿ ಮಂಗಳವಾರ ಆಚರಿಸಲಾಗುತ್ತದೆ. ಮಹಿಳೆಯರು ತಮ್ಮ ಪತಿಗಾಗಿ ಈ ಉಪವಾಸವನ್ನು ಇಟ್ಟುಕೊಳ್ಳುತ್ತಾರೆ. ಈ ವರ್ಷ ನಾಗಪಂಚಮಿಯ ದಿನದಂದು ನಾಗದೇವತೆಯೊಂದಿಗೆ ಶಿವ ಮತ್ತು ಪಾರ್ವತಿ ಮಾತೆಯನ್ನೂ ಪೂಜಿಸಲಾಗುವುದು. ಈ ದಿನದ ನಿಯಮಗಳ ಪ್ರಕಾರ, ನಾಗದೇವತೆ ಮತ್ತು ಶಿವ-ಪಾರ್ವತಿಯನ್ನು ಪೂಜಿಸುವುದರಿಂದ ಹೆಚ್ಚಿನ ಫಲಿತಾಂಶಗಳನ್ನು ನೀಡುತ್ತದೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications