Dasara Flower Show 2022: ಮೈಸೂರು ಅರಮನೆ ಆವರಣದಲ್ಲಿ ಅರಳಲಿದೆ ಪುಷ್ಪಲೋಕ
ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಅರಮನೆ ಪ್ರಮುಖ ಆಕರ್ಷಣೀಯ ಕೇಂದ್ರವಾಗಿದ್ದು, ದಸರಾ ಸಮಯದಲ್ಲಿ ಅರಮನೆ ಸೇರಿದಂತೆ ಸುತ್ತಮುತ್ತಮುತ್ತ ದಸರಾ ರಂಗು ಚೆಲ್ಲಿರುತ್ತದೆ. ಇದೀಗ ಅರಮನೆಯ ಸೊಬಗನ್ನು ಫಲಪುಷ್ಪಗಳಿಂದ ಅಲಂಕರಿಸಲಾಗುತ್ತಿದೆ. ಇದು ಅರಮನೆಗೆ ದಸರಾ ಚೆಲುವನ್ನು ತುಂಬಲಿದೆ.
ಪ್ರತಿ ವರ್ಷವೂ ದಸರಾ ಸಮಯದಲ್ಲಿ ಅರಮನೆ ಆವರಣದಲ್ಲಿ ಅರಮನೆ ಅಂಗಳದಲ್ಲಿ ಅರಮನೆ ಮಂಡಳಿಯಿಂದ ಫಲಪುಷ್ಪ ಪ್ರದರ್ಶನವನ್ನು ಏರ್ಪಡಿಸಲಾಗುತ್ತದೆ. ಅರಮನೆಗೆ ಬಂದವರು ಪುಷ್ಪಗಳ ಚೆಲುವನ್ನು ನೋಡಿ ಆನಂದಿಸುತ್ತಾರೆ. ಅತ್ತ ಕುಪ್ಪಣ್ಣ ಪಾರ್ಕ್ ನಲ್ಲಿ ದಸರಾ ಫಲಪುಷ್ಪ ಪ್ರದರ್ಶನ ನಡೆಯುತ್ತಿದ್ದರೆ, ಇತ್ತ ಅರಮನೆ ಆವರಣದಲ್ಲಿ ವಿಭಿನ್ನ ಮತ್ತು ವಿಶಿಷ್ಟವಾದ ಫಲಪುಷ್ಟ ನಡೆಯುತ್ತದೆ. ಇದು ಅರಮನೆಗೆ ಭೇಟಿ ನೀಡುವ ಪ್ರವಾಸಿಗರನ್ನು ಸೆಳೆಯುತ್ತದೆ.
ಎರಡು ವರ್ಷಗಳ ಬಳಿಕ ದಸರಾ ಅದ್ಧೂರಿಯಾಗಿ ನಡೆಯುತ್ತಿರುವುದರಿಂದ ಮತ್ತು ಕೊರೊನಾಗೆ ಹೆದರಿ ಮನೆಯಲ್ಲಿಯೇ ಕುಳಿತಿದ್ದ ಜನ ಇದೀಗ ಭಯ ಬದಿಗೆ ತಳ್ಳಿ ಮನೆಯಿಂದ ಹೊರ ಬರುತ್ತಿರುವ ಕಾರಣ ಈ ಬಾರಿ ಮೈಸೂರಿಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಲಿದೆ. ಅದರಲ್ಲೂ ಅರಮನೆಗೆ ಸಹಸ್ರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುವ ಸಾಧ್ಯತೆಯಿದೆ. ಹೀಗೆ ಬಂದ ಪ್ರವಾಸಿಗರು ಪುಷ್ಪ ಸುಂದರಿಯ ನಡುವೆ ಅಡ್ಡಾಡಿ ಕಣ್ಮನ ತಣಿಸಿಕೊಂಡು ಹಿಂತಿರುಗಲೆಂದೇ ಫಲಪುಷ್ಪ ಪ್ರದರ್ಶನವನ್ನು ಏರ್ಪಡಿಸಲಾಗುತ್ತಿದೆ.

32 ಜಾತಿಯ ಪುಷ್ಪ
ಈ ಪುಷ್ಪ ಪ್ರದರ್ಶನದಲ್ಲಿ ಮೇರಿಗೋಲ್ಡ್, ಸಾಲ್ವಿಯ, ಡೇಲಿಯ, ಪಿಟೋನಿಯ, ಸೇವಂತಿಗೆ, ಕೋಲಿಯಸ್, ಸಿಲೋಷಿಯಾ ಸೇರಿದಂತೆ 32 ಜಾತಿಯ ಪುಷ್ಪರಾಣಿಯರು ದರ್ಬಾರ್ ಮಾಡಲಿದ್ದಾರೆ. 15 ಸಾವಿರ ಅಲಂಕಾರಿಕ ಹೂವಿನ ಕುಂಡಗಳನ್ನು ಫಲಪುಷ್ಪ ಪ್ರದರ್ಶನಕ್ಕೆ ಬಳಸಿಕೊಳ್ಳಲಾಗುತ್ತಿದ್ದು, ಗುಲಾಬಿ, ಜರ್ಬೆರಾ, ಆರ್ಕಿಡ್ಸ್, ಬ್ಲೂ ಡೈಸಿ, ಕೈಸಾಂಧಿಯಮ್, ಡ್ರೆಸಿನಾ ಸೇರಿದಂತೆ 15ಕ್ಕೂ ಹೆಚ್ಚು ವಿವಿಧ ಜಾತಿಯ 4 ಲಕ್ಷ ಹೂವುಗಳನ್ನು ಫಲಪುಷ್ಪ ಪ್ರದರ್ಶನದಲ್ಲಿ ಬಳಕೆ ಮಾಡಲಾಗುತ್ತಿರುವುದು ವಿಶೇಷವಾಗಿದೆ.

ಅರಸರ ಜೊತೆ ಬಿಪಿನ್ ರಾವತ್, ಅಭಿನಂದನ್ ಪ್ರತಿಮೆ
ಅರಮನೆ ಆವರಣದಲ್ಲಿ ನಡೆಯುವ ಫಲಪುಷ್ಪ ಪ್ರದರ್ಶನದಲ್ಲಿ ಸಾಮಾನ್ಯವಾಗಿ ಮೈಸೂರು ಸಂಸ್ಥಾನವನ್ನಾಳಿದ ಮಹಾರಾಜರ ಪುಷ್ಟ ಪ್ರತಿಮೆಗಳು ಇದ್ದೇ ಇರಲಿವೆ. ಈ ಬಾರಿ ನಾಲ್ವಡಿ ಕೃಷ್ಣರಾಜ ಒಡೆಯರ್, ಜಯಚಾಮರಾಜ ಒಡೆಯರ್, ಕಿತ್ತೂರು ರಾಣಿ ಚೆನ್ನಮ್ಮ, ಬಿಪಿನ್ ರಾವತ್, ಮಿಗ್ 21 ವಿಮಾನದೊಂದಿಗೆ ವಿಂಗ್ ಕಮಾಂಡರ್ ಅಭಿನಂದನ್ ಹೂವಿನೊಂದಿಗೆ ಅವತರಿಸಲಿದ್ದಾರೆ. ಇದರ ಜತೆಗೆ ಜಂಬೂಸವಾರಿ ಮೆರವಣಿಗೆ, ಐಎನ್‌ಎಸ್ ವಿಕ್ರಾಂತ್ ಯುದ್ಧ ನೌಕೆ, ಕಾರ್ಗಿಲ್ ವಿಜಯೋತ್ಸವ ಗಮನಸೆಳೆಯಲಿದೆ. ಇದೆಲ್ಲದರ ನಡುವೆ ಪ್ರವೇಶ ದ್ವಾರದಲ್ಲಿಯೇ ನಿಂತು ಜನರನ್ನು ಹೂವಿನ ಆನೆಗಳು ಸ್ವಾಗತಿಸಲಿವೆ.

ತಲೆ ಎತ್ತಲಿದೆ 28 ಅಡಿ ಕೆಂಪುಕೋಟೆ
ಮೈಸೂರು ಅರಮನೆ ಬಳಿಯೇ 60 ಅಡಿ ಉದ್ದ, 10 ಅಡಿ ಅಗಲ, 28 ಅಡಿ ಎತ್ತರದ ಕೆಂಪುಕೋಟೆ ಎದ್ದು ನಿಲ್ಲಲಿದ್ದು, ಇಲ್ಲಿಂದ ನಿಂತು ರಾಜಪಥ ಕರ್ತವ್ಯಪಥವಾದುದನ್ನು ಲಂಗರು ಹಾಕಿದ ಐಎನ್‌ಎಸ್ ವಿಕ್ರಾಂತ ಯುದ್ಧ ನೌಕೆಯನ್ನು ನೋಡಬಹುದಾಗಿದೆ. ಜತೆಗೆ ಗುಜರಾತ್‌ನ ಸರ್ದಾರ್ ಸರೋವರದಲ್ಲಿನ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಏಕತಾ ಪ್ರತಿಮೆ ಹಾಗೂ ಸುಭಾಷ್ ಚಂದ್ರ ಬೋಸ್‌ರ ಪ್ರತಿಮೆಯೂ ಎದ್ದು ನಿಲ್ಲಲಿದೆ. ಈ ಹೂವಿನ ಪ್ರತಿಮೆಗಳ ನಿರ್ಮಾಣಕ್ಕಾಗಿ ಸುಮಾರು ನಾಲ್ಕು ಲಕ್ಷಕ್ಕೂ ಹೆಚ್ಚಿನ ಹೂಗಳನ್ನು ಬಳಸಿಕೊಳ್ಳಲಾಗುತ್ತಿದೆ.

ಭಾರತ, ಕರ್ನಾಟಕ ನಕ್ಷೆಗಳ ಸೆಲ್ಫಿ ಪಾಯಿಂಟ್
ಫಲಪುಷ್ಪ ಪ್ರದರ್ಶನಕ್ಕೆ ಮೆರಗು ನೀಡುವ ಸಲುವಾಗಿ ರಾಜವಂಶಸ್ಥರ ಅಪರೂಪದ ಚಿತ್ರಗಳು, ಅಂದು ಇಂದು ಒಡೆಯರ್ ರೋಲ್ ಸಾಕ್ಷ್ಯಚಿತ್ರಗಳು, ಆಯ್ದ 7 ಮಂದಿಯಿಂದ ಬೊಂಬೆಗಳ ಪ್ರದರ್ಶನವಿದ್ದು, ಸ್ವಾತಂತ್ರ್ಯ ಅಮೃತ ಮಹೋತ್ಸವ, ಶ್ರೀದೇವಿ ದಿವ್ಯದರ್ಶನ, ಮಾನವನ ಜೀವನ ಕ್ರಮ, ಅರಮನೆಯಲ್ಲಿ ದುರ್ಗಾ ಪೂಜೆ, ವಿಷ್ಣು ಲೀಲೆ, ಸಾಂಸ್ಕೃತಿಕ ದಸರಾ ಬೊಂಬೆ ಹಾಗೂ ಕೃಷ್ಣನ ಲೀಲೆಗಳು ಬೊಂಬೆ ಪ್ರದರ್ಶನದಲ್ಲಿ ಗಮನಸೆಳೆಯಲಿವೆ. ಇಷ್ಟೇ ಅಲ್ಲದೆ ವಿಶೇಷ ಛಾಯಾಚಿತ್ರ ಪ್ರದರ್ಶನ ಮತ್ತು ವಿಡಿಯೋ ಪ್ರದರ್ಶನವೂ ನಡೆಯಲಿವೆ.
ಫಲಪುಷ್ಪ ಪ್ರದರ್ಶನವನ್ನು ವೀಕ್ಷಿಸುವ ವೇಳೆ ಜಯಚಾಮರಾಜ ಒಡೆಯರ್‌ರ ಕರ್ನಾಟಕ ಸಂಗೀತ ಕೃತಿಗಳನ್ನು ಆಲಿಸುವ ಭಾಗ್ಯವೂ ಒದಗಿ ಬರಲಿದೆ. ಇಷ್ಟೆಲ್ಲ ಮಾಡಿದ ಬಳಿಕ ಸೆಲ್ಪಿ ಪ್ರಿಯರಿಗೆ ಸೆಲ್ಫಿ ಪಾಯಿಂಟ್ ಇಲ್ಲದಿದ್ದರೆ ಹೇಗೆ ಅದಕ್ಕಾಗಿಯೇ ಭಾರತ, ಕರ್ನಾಟಕ ನಕ್ಷೆಗಳ ಸೆಲ್ಫಿ ಪಾಯಿಂಟ್ ನಿರ್ಮಾಣ ಮಾಡಲಾಗುತ್ತಿದೆ.

ಬೆಳಗ್ಗೆ 10 ರಿಂದ ರಾತ್ರಿ 8.30ರವರೆಗೆ ಭೇಟಿಗೆ ಉಚಿತ ಪ್ರವೇಶ
ಅಂದಹಾಗೆ ಫಲಪುಷ್ಪ ಪ್ರದರ್ಶನವು ಸೆ.26ರಿಂದ ಆರಂಭವಾಗಿ ಅ.5ರವರೆಗೆ ಇರಲಿದೆ. ಬೆಳಗ್ಗೆ 10 ರಿಂದ ರಾತ್ರಿ 8.30ರವರೆಗೆ ಸಾರ್ವಜನಿಕರು ಭೇಟಿ ನೀಡಬಹುದಾಗಿದೆ. ಪ್ರವೇಶ ಉಚಿತವಾಗಿರುತ್ತದೆ. ಇನ್ನು ಸೆ.26ರಂದು ಉದ್ಘಾಟನೆ ನಡೆಯಲಿದ್ದು, ಅಂದು ಅಲೋವೆರಾ, ತುಳಸಿ, ಮಲ್ಲಿಗೆ, ವೀಳ್ಯೆದೆಲೆ ಹಾಗೂ ಇತರ ಔಷಧ ಗಿಡಗಳನ್ನು ಸಾಂಕೇತಿಕವಾಗಿ ನೀಡಲು ಅರಮನೆ ಮಂಡಳಿ ತೀರ್ಮಾನಿಸಿದೆ. ಈಗಾಗಲೇ ಫಲಪುಷ್ಪ ಪ್ರದರ್ಶನಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದ್ದು ವರಾಹದ್ವಾರಕ್ಕೆ ಹೊಂದಿಕೊಂಡಿರುವ ಪ್ರದೇಶದಲ್ಲಿ ಕಳೆ ತೆಗೆದು ಸ್ವಚ್ಛಗೊಳಿಸುವ ಕಾರ್ಯ ಆರಂಭವಾಗಿದೆ. ಮುಂದಿನ ದಿನಗಳಲ್ಲಿ ಫಲಪುಷ್ಪ ಪ್ರದರ್ಶನದ ಸಿದ್ಧತಾ ಕಾರ್ಯ ಭರದಿಂದ ಸಾಗಲಿದ್ದು ಸೆ.26ರ ವೇಳೆಗೆ ಸುಂದರ ಪುಷ್ಪಲೋಕವೊಂದು ಅರಮನೆ ಆವರಣದಲ್ಲಿ ಎದ್ದು ನಿಲ್ಲಲಿದೆ.
-
Weekly Horoscope March 16-22: ಈ ಯುಗಾದಿಗೆ ಯಾವ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ? ಇಲ್ಲಿದೆ ಈ ವಾರದ ನಿಮ್ಮ ರಾಶಿ ಫಲ -
Ragi Mudde: ಕರ್ನಾಟಕದ ರಾಗಿ ಮುದ್ದೆ ಸವಿಯಬೇಕು: ಮಂಡ್ಯದಲ್ಲಿ ಬಯಕೆ ಬಿಚ್ಚಿಟ್ಟ ಕೇಂದ್ರ ಸಚಿವ ಮನ್ಸುಖ್ ಮಾಂಡವೀಯ -
ರೈತರ ಹಿತಾಸಕ್ತಿಗೆ ಧಕ್ಕೆಯಿಲ್ಲ: 1 ರೂಪಾಯಿಗೆ ಲೀಟರ್ ಹಾಲು ವಿವಾದಕ್ಕೆ ಸ್ಪಷ್ಟನೆ ಕೊಟ್ಟ FlipKart -
Yash: ಯಶ್ ಡಿಪ್ರೆಶನ್ನಲ್ಲಿದ್ದಾರೆ, ಕೆಜಿಎಫ್ ರೀತಿಯ ಸಿನಿಮಾ ನೀಡಲು ಆಗ್ತಿಲ್ಲ: ಜ್ಯೋತಿಷಿ ವೇಣುಸ್ವಾಮಿ -
Gold Rate: ಬೆಂಗಳೂರಿನಲ್ಲಿ ಇಳಿಕೆಯಾಯ್ತು ಚಿನ್ನ-ಬೆಳ್ಳಿ ಬೆಲೆ; ಇಲ್ಲಿದೆ ದರ ಪಟ್ಟಿ -
ವೈಭವ್ ಸೂರ್ಯವಂಶಿ ಅದೃಷ್ಟದ ಮೇಲೆ ಸವಾರಿ ಮಾಡುತ್ತಿದ್ದಾರೆ: ಕೊಡಗಿನ ರಾಬಿನ್ ಉತ್ತಪ್ಪ ಎಚ್ಚರಿಕೆಯ ಸಲಹೆ -
Double-Decker Flyover: ಸಿಲ್ಕ್ ಬೋರ್ಡ್ ಟ್ರಾಫಿಕ್ಗೆ ಮುಕ್ತಿ: ಇದೇ ತಿಂಗಳಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ಸಂಚಾರಕ್ಕೆ ಮುಕ್ತ -
ಮಾರ್ಚ್ 15 ದಿನ ಭವಿಷ್ಯ: ಈ ರಾಶಿಯವರಿಗೆ ಒಲಿಯಲಿದೆ ಅದೃಷ್ಟ; ನಿಮ್ಮ ಜಾತಕ ಹೇಗಿದೆ ತಿಳಿಯಿರಿ -
Gold Rate: ಆಭರಣ ಪ್ರಿಯರ ಗಮನಕ್ಕೆ; ಮಾರುಕಟ್ಟೆಯಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ಮಾಹಿತಿ -
ಪುನೀತ್ ನಟನೆಯ "ಆಕಾಶ್" ರೀರಿಲೀಸ್: ಅಭಿಮಾನಿಗಳ ಜತೆ ಸಿನಿಮಾ ವೀಕ್ಷಿಸಿ ಕುಣಿದು ಕುಪ್ಪಳಿಸಿದ ನಟಿ ರಮ್ಯಾ -
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ -
Ajith Kumar: ನಟ ಅಜಿತ್ ಕುಮಾರ್ಗೆ ಮಹೀಂದ್ರಾದಿಂದ ರೇಸಿಂಗ್ ಕಾರ್ ಗಿಫ್ಟ್; ಇದರ ಫೀಚರ್ಸ್ ಕೇಳಿದ್ರೆ ಫಿದಾ ಆಗ್ತೀರಿ












Click it and Unblock the Notifications