ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಮುದ್ರದಲ್ಲಿ ನಿಗೂಢ ಜೀವಿ ಪತ್ತೆ: ಈ ಘೋಸ್ಟ್ ಫಿಶ್ ಹೇಗಿದೆ ನೋಡಿ

|
Google Oneindia Kannada News

ಸಮುದ್ರ ನಿಗೂಢ ಜೀವಿಗಳಿಂದ ತುಂಬಿದೆ. ಕೆಲವೇ ದಿನಗಳ ಹಿಂದೆ ಮೀನಿನ ಸಂಪೂರ್ಣ ದೇಹವೊಂದು ಬಿಟ್ಟು ತಲೆ ಪಾರದರ್ಶಕವಾಗಿರುವ ವಿಡಿಯೊ ವೈರಲ್ ಆಗಿತ್ತು. ಅನೇಕ ಜನರು ಅದನ್ನು ವಿದೇಶಿಯರು ಎಂದು ಕರೆದರು. ಇದೀಗ ಅಂಥದ್ದೇ ಇನ್ನೊಂದು ಜೀವಿಯ ವಿಡಿಯೋ ವೈರಲ್ ಆಗುತ್ತಿದ್ದು, ನೋಡಲು ತುಂಬಾ ವಿಚಿತ್ರವಾಗಿದೆ.

ನೀರಿನೊಳಗೆ ಏನೋ ತೇಲುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಆರಂಭದಲ್ಲಿ ಇದು ಪಾಲಿಥೀನ್‌ನಂತೆ ಕಂಡರೂ ನಂತರ ಅದು ಜೀವಂತ ಜೀವಿ ಎಂದು ತಿಳಿದುಬಂದಿದೆ. ಅದರ ಇಡೀ ದೇಹವು ಪಾರದರ್ಶಕವಾಗಿತ್ತು. ಮುಂಭಾಗದಲ್ಲಿ ಕೆಂಪು ವಸ್ತುವು ಗೋಚರಿಸುತ್ತದೆ. ಅದು ಬಹುಶಃ ಅದರ ಮೆದುಳು ಎನ್ನಲಾಗುತ್ತಿದೆ. ಇದನ್ನು ನೋಡಿದ ಅನೇಕರು ಇದು ಬೇರೆ ಗ್ರಹದ ಜೀವಿ ಎಂದು ಕರೆದಿದ್ದಾರೆ.

ಸಮುದ್ರಲ್ಲಿ ಕಂಡ ಈ ಅಪರೂಪದ ಜೀವಿ ನಿಜಕ್ಕೂ ನೋಡುಗರನ್ನು ಆಶ್ಚರ್ಯಗೊಳಿಸಿದೆ. ಈ ಜೀವಿಗೆ ಕಣ್ಣು, ಮೂಗು, ದೇಹದ ಅಂಗಾಂಗಗಳು ಎಲ್ಲಿವೆ ಎನ್ನುವುದು ತಿಳಿಯುವುದಿಲ್ಲ. ನೋಡಲು ಟ್ರಾನ್ಸ್‌ಪರೆಂಟ್ ಪೇಪರ್ ತರ ಕಾಣಿಸುತ್ತದೆ. ಆಕಾರದಲ್ಲಿಯೋ ಬದಲಾಗುತ್ತದೆ.

ಭೂತ ಮೀನು ಕಂಡಿದ್ದು ಎಲ್ಲಿ?

ಭೂತ ಮೀನು ಕಂಡಿದ್ದು ಎಲ್ಲಿ?

ಮಾಧ್ಯಮ ವರದಿಗಳ ಪ್ರಕಾರ, ಪ್ರತ್ಯಕ್ಷದರ್ಶಿಗಳು ಈ ಜೀವಿಯ ಬಗ್ಗೆ ವಿವರಣೆ ನೀಡಿದ್ದಾರೆ. ಖ್ಯಾತ ಡೈವರ್ ಆಂಡಿ ಕ್ರೆಚಿಯೊಲೊ ಅವರು ಕ್ಯಾಲಿಫೋರ್ನಿಯಾದ ಪಶ್ಚಿಮ ಲಾಸ್ ಏಂಜಲೀಸ್ ನ ಟೊಪಾಂಗಾ ಬೀಚ್‌ನಲ್ಲಿ ಈ ಜೀವಿಯನ್ನು ಕಂಡಿದ್ದಾರೆ. ಆಂಡಿ ಕ್ರೆಚಿಯೊಲೊ ಸಮುದ್ರ ನೀರಿನಲ್ಲಿ ಈಜುವಾಗ ಈ ಜೀವಿಯನ್ನು ಕಂಡು ದೃಶ್ಯಗಳನ್ನು ಸೆರೆ ಹಿಡಿದಿದ್ದಾರೆ.

ಅವರ ಪ್ರಕಾರ, 'ನಾನು ಟೊಪಾಂಗಾ ಬೀಚ್‌ (Topanga Beach)ನಲ್ಲಿ ಈಜುವಾಗ ಆಗ ಅಲ್ಲಿ ಒಂದು ನಿಗೂಢ ಜೀವಿ ಕಂಡಿತು. ನೋಡಲು ವಿಶಿಷ್ಟವಾಗಿತ್ತು. ಅದರ ದೇಹಕ್ಕೆ ಬಾಯಿ, ಬಾಲದಂತಹ ಭಾಗವಿದ್ದರೂ ಇಡೀ ದೇಹ ಖಾಲಿ ಇದ್ದಂತೆ ತೋರುತ್ತಿತ್ತು' ಎಂದಿದ್ದಾರೆ. ಜೊತೆಗೆ ಅವರು ಅದಕ್ಕೆ 'ಘೋಸ್ಟ್ ಫಿಶ್' ಎಂದು ಹೆಸರಿಸಿದ್ದಾರೆ.

ಥೀಟಿಸ್ ಮೀನು

ಥೀಟಿಸ್ ಮೀನು

ಸ್ಯಾನ್ ಡಿಯಾಗೋದಲ್ಲಿರುವ ಸ್ಕ್ರಿಪ್ಸ್ ಇನ್‌ಸ್ಟಿಟ್ಯೂಷನ್ ಆಫ್ ಓಷಿಯಾನೋಗ್ರಫಿಯ ಸಹಾಯಕ ಪ್ರಾಧ್ಯಾಪಕ ಮೊಯಿರಾ ಡೆಸಿಮಾ ಅವರ ಪ್ರಕಾರ, ಇದು ಅನ್ಯಗ್ರಹವಲ್ಲ. ಆದರೆ ಭೂಮಿಯ ಮೇಲಿನ ಜೀವಂತ ಜೀವಿ. ಅದನ್ನು ಥೀಟಿಸ್ ಎಂದು ಗುರುತಿಸಲಾಗಿದೆ. ಈ ಜೀವಿಗಳು ಮೂಲವು 1800 ರ ದಶಕದ ಆರಂಭದಲ್ಲಿಯೇ ಕಾಣಿಸಿಕೊಂಡಿವೆ ಎಂದಿದ್ದಾರೆ.

ಸಮುದ್ರವನ್ನು ಸ್ವಚ್ಛಗೊಳಿಸುವ 'ಘೋಸ್ಟ್ ಫಿಶ್'

ಪ್ರೊಫೆಸರ್ ಮೊಯಿರಾ ಪ್ರಕಾರ, ಈ ಜೀವಿಯನ್ನು ಸಾಗರಗಳ ವ್ಯಾಕ್ಯೂಮ್ ಕ್ಲೀನರ್ ಎಂದು ಕರೆಯಲಾಗುತ್ತದೆ. ಇದು ಮನುಷ್ಯರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದೆ. ಆದ್ದರಿಂದ ಇದು ಅವರಿಗೆ ಯಾವುದೇ ರೀತಿಯಲ್ಲಿ ಹಾನಿ ಮಾಡುವುದಿಲ್ಲ. ಇದು ಸಮುದ್ರದ ನೀರಿನಲ್ಲಿನ ಫೈಟೊಪ್ಲಾಂಕ್ಟನ್, ಮೈಕ್ರೋಝೂಪ್ಲಾಂಕ್ಟನ್ (ಬ್ಯಾಕ್ಟೀರಿಯಾ) ತಿನ್ನುತ್ತದೆ. ಇದರಿಂದ ಸಮುದ್ರದ ನೀರು ಸ್ವಚ್ಛವಾಗುತ್ತದೆ ಎಂದು ಹೇಳಿದರು.

ಬ್ಯಾರೆಲೆಯೆ ವಿಶೇಷತೆ ಏನು?

ಬ್ಯಾರೆಲೆಯೆ ವಿಶೇಷತೆ ಏನು?

ಇದಕ್ಕೂ ಮೊದಲು ಸಿಕ್ಕ ಮೀನಿನ ತಲೆ ಸಂಪೂರ್ಣ ಪಾರದರ್ಶಕವಾಗಿತ್ತು. ಅದನ್ನು ಬ್ಯಾರೆಲೆಯೆ ಎಂದು ಕರೆಯಲಾಗುತ್ತದೆ. ಇದಲ್ಲದೆ, ವಿಜ್ಞಾನಿಗಳು ಇದನ್ನು ಸ್ಪೂಕ್ ಫಿಶ್ ಎಂದೂ ಕರೆಯುತ್ತಾರೆ. ಇದು ಬಹಳ ಅಪರೂಪ ಮತ್ತು ಕೆಲವೇ ಜನರು ಇದನ್ನು ನೋಡುತ್ತಾರೆ. ಇದು ಸಾಮಾನ್ಯವಾಗಿ ಆಳವಾದ ನೀರಿನಲ್ಲಿ ವಾಸಿಸಲು ಇಷ್ಟಪಡುತ್ತದೆ. ನೀವು ಅದನ್ನು ನೋಡಿದಾಗ, ಅದರ ಹಸಿರು ಕಣ್ಣುಗಳು ನಿಮ್ಮ ಗಮನವನ್ನು ಸೆಳೆಯುತ್ತವೆ. ನೀರಿನ ಅಡಿಯಲ್ಲಿ ಕತ್ತಲೆಯಲ್ಲಿಯೂ ಅವು ಹೊಳೆಯುತ್ತಲೇ ಇರುತ್ತವೆ. ಸಣ್ಣ ಮೀನುಗಳು ಅವುಗಳ ಕಣ್ಣುಗಳ ಹೊಳಪಿನಿಂದ ಆಕರ್ಷಿತವಾಗುತ್ತವೆ. ಜೊತೆಗೆ ಅವುಗಳನ್ನು ಸುಲಭವಾಗಿ ಬೇಟೆಯಾಡುತ್ತವೆ.

English summary
A mysterious creature has been discovered in the seas of California, known as the Ghost Fish. Watch the video.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X