ಭೂತಾನ್ ಜತೆ ರಾಜತಾಂತ್ರಿಕ ಸಂಬಂಧ ಬಲವರ್ಧನೆ ಚೀನಾ ಪ್ರಯತ್ನ
ಚೀನಾ ಭೂತಾನ್ ನಡುವೆ ರಾಜತಾಂತ್ರಿಕ ಸಂಬಂಧಗಳನ್ನು ಸ್ಥಾಪಿಸುವ ಕುರಿತು ಮಾತನಾಡಿದೆ. ಚೀನಾ ಹಾಗೂ ಭೂತಾನ್ ದೇಶಗಳ ನಡುವೆ ಗಡಿ ವಿವಾದವನ್ನು ಬಗೆಹರಿಸಲು ಉಭಯ ದೇಶಗಳು ಮೂರು ಹಂತದ ಮಾರ್ಗಸೂಚಿಯನ್ನು ಸ್ಥಾಪಿಸಿವೆ.
ಅಕ್ಟೋಬರ್ 14 ರಂದು ಎರಡೂ ರಾಷ್ಟ್ರಗಳು ವಿಡಿಯೋ ಮೂಲಕ ಚೀನಾ-ಭೂತಾನ್ ಗಡಿ ಸಮಸ್ಯೆ ಬಗೆಹರಿಸುವ ಒಪ್ಪಂದಕ್ಕೆ ಸಹಿ ಹಾಕಿದ್ದವು.
ಈ ಒಪ್ಪಂದವು ಎರಡು ದೇಶಗಳ ನಡುವೆ ರಾಜತಾಂತ್ರಿಕ ಸಂಬಂಧಗಳನ್ನು ಸ್ಥಾಪಿಸುವ ಮೂಲಕ ಗಡಿರೇಖೆಯ ಮಾತುಕತೆಯನ್ನು ಉತ್ತೇಜಿಸಲಾಗುವುದು ಎಂದು ಚೀನಾ ವಿದೇಶಾಂಗ ಸಚಿವ ವು ಜಿಯಾಂಗಾವೋ ತಿಳಿಸಿದ್ದಾರೆ.

ಭೂತಾನ್ ಚೀನಾದೊಂದಿಗೆ 400 ಕಿ.ಮೀ ಉದ್ದದ ಗಡಿಯನ್ನು ಹಂಚಿಕೊಂಡಿದೆ ಹಾಗೂ ಗಡಿ ವಿವಾದವನ್ನು ಬಗೆಹರಿಸುವ ನಿಟ್ಟಿನಲ್ಲಿ ಉಭಯ ದೇಶಗಳು ಮಾತುಕತೆ ನಡೆಸಿವೆ.
ಚೀನಾ ಹಾಗೂ ಭೂತಾನ್ ಇಲ್ಲಿಯವರೆಗೆ ರಾಜತಾಂತ್ರಿಕ ಸಂಬಂಧವನ್ನು ಹೊಂದಿಲ್ಲ. ಚೀನಾ ಹಾಗೂ ಭೂತಾನ್ ಗಡಿ ಒಪ್ಪಂದವನ್ನು ಅಂತಿಮಗೊಳಿಸಿಲ್ಲ. ಆದರೆ ಇದು 12 ಇತರೆ ಗಡಿ ವಿವಾದಗಳನ್ನು ಬಗೆಹರಿಸಿದೆ.
ಭೂತಾನ್‌ನ ಸಕ್ತೆಂಗ್ ವನ್ಯಜೀವಿ ಅಭಯಾರಣ್ಯಕ್ಕೆ ಚೀನಾ ಈ ಹಿಂದೆ ಹಕ್ಕುಪತ್ರ ನೀಡಿತ್ತು. ಈ ಪ್ರದೇಶವು ವಿವಾದಿತವಾಗಿದೆ ಎಂದು ಹೇಳಿತ್ತು.
2017 ರಲ್ಲಿ ಡೊಕ್ಲಾಮ್ ಟ್ರೈ-ಜಂಕ್ಷನ್ ನಲ್ಲಿ ಚೀನಾದ ವಿಸ್ತರಣಾವಾದವನ್ನು ಭಾರತ ಹಿಮ್ಮೆಟ್ಟಿಸಿದ್ದು ಈಗ ಇತಿಹಾಸ. ಈ ಘಟನೆಯಲ್ಲಿ ಭಾರತ ಭೂತಾನ್ ಜೊತೆ ನಿಂತು ಅದರ ಭೌಗೋಳಿಕ ಹಕ್ಕು ಪ್ರತಿಪಾದನೆಗೆ ಧ್ವನಿಯಾಗಿತ್ತು. ಈ ಬಳಿಕ ಇಲ್ಲಿಗೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯೊಂದು ನಡೆದಿದೆ.
ಚೀನಾ-ಭೂತಾನ್ ದೀರ್ಘಾವಧಿಯಿಂದ ಬಾಕಿ ಇರುವ ಗಡಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಮಾತುಕತೆಯನ್ನು ತ್ವರಿತಗೊಳಿಸುವುದಕ್ಕೆ ಮೂರು ಹಂತಗಳ ಮಾರ್ಗಸೂಚಿ( ಮಾರ್ಗ ನಕ್ಷೆ)ಯನ್ನು ಅಂತಿಮಗೊಳಿಸಿದ್ದು ಈ ಸಂಬಂಧ ಎಂಒಯುಗೆ ಉಭಯ ರಾಷ್ಟ್ರಗಳೂ ಸಹಿ ಹಾಕಿವೆ.
ಈ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸಿದ್ದೇವೆ ಎಂದು ಭಾರತ ಪ್ರತಿಕ್ರಿಯೆ ನೀಡಿದೆ. ಗಡಿ ಹಂಚಿಕೊಂಡಿರುವ ಡೊಕ್ಲಾಮ್ ಭಾಗದಲ್ಲಿ 2017 ರಲ್ಲಿ ಚೀನಾ ರಸ್ತೆ ನಿರ್ಮಾಣವನ್ನು ವಿಸ್ತರಿಸಲು ಮುಂದಾಗಿತ್ತು. ಭಾರತ ಇದನ್ನು ವಿರೋಧಿಸಿದ್ದ ಪರಿಣಾಮ ಈ ಪ್ರದೇಶದಲ್ಲಿ 73 ದಿನಗಳ ಕಾಲ ಸಂಘರ್ಷದ ಪರಿಸ್ಥಿತಿ ಉಂಟಾಗಿತ್ತು.
ಭೂತಾನ್-ಚೀನಾದ ಇತ್ತೀಚಿನ ಬೆಳವಣಿಗೆ ಕುರಿತು ಪ್ರತಿಕ್ರಿಯೆ ನೀಡಿರುವ ಭಾರತ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಗಚಿ "ಭೂತಾನ್-ಚೀನಾ ಗಡಿಗೆ ಸಂಬಂಧಿಸಿದಂತೆ 1984 ರಿಂದಲೂ ಮಾತುಕತೆಯಲ್ಲಿ ತೊಡಗಿವೆ ಅಂತೆಯೇ ಚೀನಾ-ಭಾರತದ ನಡುವೆಯೂ ಗಡಿಗೆ ಸಂಬಂಧಿಸಿದ ಮಾತುಕತೆಗಳು ನಡೆಯುತ್ತಿವೆ ಎಂದು ಹೇಳಿದ್ದಾರೆ.
ಚೀನಾದೊಂದಿಗೆ ಮಾತುಕತೆ ನಡೆಸುವ ಬಗ್ಗೆ ಭೂತಾನ್ ಹೇಳಿಕೆ ಬಿಡುಗಡೆ ಮಾಡಿದ್ದು ತನ್ನ ವಿದೇಶಾಂಗ ಸಚಿವ ಲಿಯಾನ್ಪೋ ತಂದಿ ದೋರ್ಜಿ ಹಾಗೂ ಚೀನಾದ ಸಹಾಯಕ ವಿದೇಶಾಂಗ ಸಚಿವ ವೂ ಜಿಯಾಂಗ್‌ಹಾವೊ ಮೂರು ಹಂತಗಳ ಮಾರ್ಗಸೂಚಿಯಿರುವ ಭೂತಾನ್-ಚೀನಾ ಗಡಿ ಮಾತುಕತೆಯನ್ನು ತ್ವರಿತಗೊಳಿಸುವ ಸಂಬಂಧ ಎಂಒಯುಗೆ ಸಹಿ ಹಾಕಿದ್ದಾರೆ ಎಂದು ಹೇಳಿದೆ.
ಈ ವರೆಗೂ ಬಗೆಹರಿಯದೇ ಉಳಿದಿರುವ ಗಡಿ ವಿವಾದಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸಿಕೊಳ್ಳುವುದುಈ ಒಪ್ಪಂದದ ಉದ್ದೇಶವಾಗಿದೆ.
ಸಾತ್ಕೆಂಗ್ ವನ್ಯಜೀವಿ ಅಭಯಾರಣ್ಯ, ಭೂತಾನ್‍ನ ಪೂರ್ವ ಭಾಗದ ಗಡಿಯಲ್ಲಿದ್ದು, ಈ ಭಾಗ ಭಾರತದ ಅರುಣಾಚಲ ಪ್ರದೇಶಕ್ಕೆ ಹೊಂದಿಕೊಂಡಂತಿದೆ. ಅರುಣಾಚಲ ಪ್ರದೇಶದ ಮೇಲೆ ಚೀನಾ ತನ್ನ ಹಕ್ಕು ಸ್ಥಾಪಿಸಲು ಪ್ರಯತ್ನಿಸುತ್ತಿದ್ದು, ಅದನ್ನು ದಕ್ಷಿಣ ಟಿಬೆಟ್ ಎಂದು ಕರೆಯುತ್ತಿದೆ.
ಭೂತಾನ್ ಹಾಗೂ ಚೀನಾ ನಡುವೆ ಯಾವುದೇ ಅಧಿಕೃತ ರಾಜತಾಂತ್ರಿಕ ಸಂಬಂಧವಿಲ್ಲ. 1951ರಲ್ಲಿ ಟಿಬೆಟ್ ಆಕ್ರಮಣ ಬಳಿಕ, ಭೂತಾನ್ ಹಾಗೂ ಚೀನಾ ನೆರೆಹೊರೆ ದೇಶಗಳಾದವು. 1984ರಿಂದೀಚೆಗೆ, ಎರಡೂ ದೇಶಗಳು 24 ಸುತ್ತಿನ ಮಾತುಕತೆಯನ್ನು ಗಡಿ ವಿವಾದ ಬಗೆಹರಿಸಲು ನಡೆಸಿವೆ. ಆದರೆ ಅವು ಫಲಪ್ರದವಾಗಿಲ್ಲ.
ಆದರೆ ಭಾರತ ಹಾಗೂ ಭೂತಾನ್ ದೃಢ ರಾಜತಾಂತ್ರಿಕ ಸಂಬಂಧ ಹೊಂದಿವೆ. ಭಾರತ ಭೂತಾನ್‍ನ ಪ್ರಮುಖ ರಾಜತಾಂತ್ರಿಕ ಪಾಲುದಾರ ರಾಷ್ಟ್ರ. ಜೊತೆಗೆ ಭೂತಾನ್‍ಗೆ ಅತಿ ಹೆಚ್ಚಿನ ನೆರವು ನೀಡುತ್ತಿರುವ ದೇಶವೆಂದರೆ ಭಾರತ. ಜೊತೆಗೆ ಭೂತಾನ್ ಅತಿ ಹೆಚ್ಚಿನ ವ್ಯಾಪಾರ ವಹಿವಾಟು ಹೊಂದಿರುವುದು ಭಾರತದ ಜೊತೆಗೆ.
ಚೀನಾದ ಹೊಸ ಹೇಳಿಕೆಗಳು, ಹಾಗೂ ನಿರ್ಧಾರ ಅದು ಭಾರತದ ಜೊತೆಗೆ ಹಿಮಾಲಯನ್ ಗಡಿಯಲ್ಲಿ ಕದನಕ್ಕೆ ಇಳಿದ ಬಳಿಕ ಹೊರ ಬಂದಿವೆ. ಡೊಕ್ಲಾಮ್ ಭಾಗದಲ್ಲಿ 2017ರಲ್ಲಿ 73ದಿನಗಳ ಜಟಾಪಟಿ ಬಳಿಕ, ಇದೀಗ, ಚೀನಾದ ಕಣ್ಣು ಭೂತಾನ್‍ನ ಮೇಲೆ ಬಿದ್ದಿದೆ.
ಡೊಕ್ಲಾನ್ ಭಾರತ-ಭೂತಾನ್-ಚೀನಾ ಗಡಿ ಸಂಧಿಸುವ ಭಾಗ. ಈ ಭಾಗದಲ್ಲಿ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್‍ಎ) ಹೊಸ ರಸ್ತೆ ನಿರ್ಮಿಸಲು ಆರಂಭಿಸಿದ ಬಳಿಕ ಈ ಉದ್ವಿಗ್ನತೆ ಸೃಷ್ಟಿಯಾಗಿತ್ತು. ಈ ಸಂದರ್ಭದಲ್ಲಿ ಭೂತಾನ್ ಭಾರತದ ಬೆಂಬಲಕ್ಕೆ ದೃಢವಾಗಿ ನಿಂತಿತ್ತು. ಆ ಘಟನೆ ಬಳಿಕ ಭೂತಾನ್-ಚೀನಾ ನಡುವೆ ಯಾವುದೇ ಮಾತುಕತೆ ನಡೆದಿಲ್ಲ.
ತಜ್ಞರ ಪ್ರಕಾರ, ಚೀನಾದ ಇದೀಗ ಹೊಸ ಪ್ಯಾಕೇಜ್ ಘೋಷಿಸಿ, ಆ ಮೂಲಕ ಭೂತಾನ್ ಮೇಲೆ ಒತ್ತಡ ಹೇರಿ ಡೊಕ್ಲಾಮ್‍ನಲ್ಲಿ ರಸ್ತೆ ನಿರ್ಮಿಸಲು ಯತ್ನಿಸುತ್ತಿದೆ.
ನವದೆಹಲಿ ಜವಾಹರಲಾಲ್ ವಿಶ್ವ ವಿದ್ಯಾನಿಲಯದ ಅಂತಾರಾಷ್ಟ್ರೀಯ ಅಧ್ಯಯನ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ. ಎಸ್ ಡಿ ಮುನಿ ಮಾತನಾಡಿ, ಚೀನಾ ಈ ಪ್ಯಾಕೇಜ್ ಮೂಲಕ, ಕೇಂದ್ರ ಹಾಗೂ ಪೂರ್ವ ಭೂತಾನ್ ಮೇಲಿನ ತನ್ನ ಬೇಡಿಕೆಯನ್ನು ಹಿಂತೆಗೆದುಕೊಂಡು, ಡೊಕ್ಲಾಮ್‍ನಲ್ಲಿ ರಸ್ತೆ ನಿರ್ಮಿಸಲು ಭೂತಾನ್‍ಗೆ ಒತ್ತಡ ಹೇರುವ ಸಾಧ್ಯತೆ ಇದೆ.
ಆ ಮೂಲಕ ಡೊಕ್ಲಾಮ್ ಮೇಲೆ ತನ್ನ ಹಕ್ಕು ಸಾಧಿಸಲು ಚೀನಾ ಯತ್ನಿಸುತ್ತದೆ ಎನ್ನುತ್ತಾರೆ. ಚುಂಬಿ ಕಣಿವೆಯಲ್ಲಿ ಅತ್ಯಂತ ಮಹತ್ವದ್ದಾದ ಡೊಕ್ಲಾಮ್ ಭಾಗ ಭೂತಾನ್‍ನ ಪಶ್ಚಿಮದಲ್ಲಿದೆ. ಅದರ ಮೇಲೆ ಹಕ್ಕು ಸಾಧಿಸುವುದು ಚೀನಾದ ಗುರಿ," ಎನ್ನುತ್ತಾರೆ ಅವರು.












Click it and Unblock the Notifications