Motorola Edge 50 Fusion ಬಿಡುಗಡೆಗೆ ಮುಹೂರ್ತ ಫಿಕ್ಸ್: ಸ್ವಲ್ಪ ಕಾಯ್ದರೆ ಬೆಸ್ಟ್ ಫೋನ್ ಲಭ್ಯ
ಮೊಟೊರಾಲಾ ಎಡ್ಜ್ 50 ಸರಣಿಯ ತನ್ನ ನೂತನ ಫೋನ್ ಬಿಡುಗಡೆ ರೆಡಿ ಆಗಿದೆ. ಸದ್ಯ ಮಾರುಕಟ್ಟೆಗೆ ಲಗ್ಗೆ ಇಡಲು ಮೊಟೊರಾಲಾ ಎಡ್ಜ್ 50 ಫ್ಯೂಸನ್ ತಯಾರಿ ನಡೆಸಿದೆ. ಈ ಫೋನ್ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುವ ದಿನಾಂಕ ಸಹ ಈಗ ಬಹಿರಂವಾಗಿದೆ.
ಎಂದಿನಂತೆ ಕಂಪನಿಯ ಈ ಫೋನ್‌ನನ್ನು ವಿವಿಧ ರೂಪಾಂತರಗಳಲ್ಲಿ ಬಿಡುಗಡೆ ಮಾಡಲಿದೆ. ಮೊಟೊರಾಲಾ ಎಡ್ಜ್ 50, ಮೊಟೊರಾಲಾ ಎಡ್ಜ್ 50 ಫ್ಯೂಸನ್, ಮೊಟೊರಾಲಾ ಎಡ್ಜ್ 50 ಅಲ್ಟ್ರಾ ಮೂರು ರೂಪಾಂತರಗಳಲ್ಲಿ ಗ್ರಾಹರನ್ನು ಸೆಳೆಯಲು ಸಿದ್ಧವಾಗಿವೆ. ಮೊಟೊರಾಲಾ ಎಡ್ಜ್ 50 ಯನ್ನು ಭಾರತದಲ್ಲಿ ಮಾತ್ರ ಬಿಡುಗಡೆ ಮಾಡಲಿದ್ದು, ಉಳಿದ ಎಲ್ಲ ಸರಣಿಯ ಫೋನ್‌ಗಳು ವಿಶ್ವದ ಎಲ್ಲ ಕಡೆ ಬಿಡುಗಡೆ ಆಗಲಿವೆ.

ನೀವು ಏನಾದ್ರೂ ಹೊಸ ಫೋನ್ ತೆಗೆದುಕೊಳ್ಳುವ ಯೋಚನೆಯಲ್ಲಿದ್ದರೆ, ಕೊಂಚ ಕಾಯ್ದರೆ ಉತ್ತಮ. ಮೊಟೊರಾಲಾ ಎಡ್ಜ್ 50 ಫ್ಯೂಸನ್ ಭಾರತದ ಮಾರುಕಟ್ಟೆಯಲ್ಲಿ ಮೇ 16ರಿಂದ ಹಾವಳಿ ನಡೆಸಲಿದ್ದು, ಅಂದು ಮಧ್ಯಾಹ್ನ 12 ಗಂಟೆಗೆ ಮಾರಟಕ್ಕೆ ಲಭ್ಯ. ಈಗಾಗಲೆ ಈ ಫೋನ್ ಫ್ಲಿಪ್ ಕಾರ್ಟ್ ಪೇಜ್‌ನಲ್ಲಿ ಕಾಣಿಸಿಕೊಂಡಿದ್ದು, ಇದರ ಹಲವು ವೈಶಿಷ್ಠ್ಯಗಳನ್ನು ತಿಳಿಸಲಾಗಿದೆ. ಈ ಫೋನ್ ಮಾರ್ಷ್ಮ್ಯಾಲೋ ಬ್ಲೂ, ಫಾರೆಸ್ಟ್ ಬ್ಲೂ ಮತ್ತು ಹಾಟ್ ಪಿಂಕ್ ಕಲರ್‌ಗಳಲ್ಲಿ ಗ್ರಾಹಕರನ್ನು ಸೆಳೆಯಲಿದೆ.
ಮೊಬೈಲ್ ಬೆಲೆ ಎಷ್ಟು?
ಮೊಟೊರಾಲಾ ಎಡ್ಜ್ 50 ಫ್ಯೂಸನ್ ವಿಶ್ವದಲ್ಲೇ ಬಿಡುಗಡೆ ಆಗಲಿದ್ದು, ಇದರ ಬೆಲೆ ಬಹಿರಂಗಗೊಂಡಿದೆ. ಭಾರತದಲ್ಲಿ ಈ ಅತ್ಯಾಧುನಿಕ ಸ್ಮಾರ್ಟ್‌ಫೋನ್ ಬೆಲೆ 35,400 ರೂ. ಆಗಿರಲಿದೆ. ಇನ್ನೊಂದು ಖುಷಿಯ ವಿಚಾರವೆಂದರೆ ಮೊಟೊರಾಲಾ ಎಡ್ಜ್ 50 ಪ್ರೊ 31,999 ರೂ.ಗಳಿಗೆ ಗ್ರಾಹಕರ ಕೈಗೆಟಕಲಿವೆ.

ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ಹೇಗಿದೆ?
ಮೊಟೊರಾಲಾ ಎಡ್ಜ್ 50 ಫ್ಯೂಸನ್ ಸ್ಪೀಡ್ ಪರ್ಫಾಮೆನ್ಸ್ ಹೊಂದಿರುವ 12 12GB of RAM ಲಭ್ಯವಿದ್ದು, ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 7ಎಸ್ ಜನರೇಷನ್ 2 ಪ್ರೊಸೆಸರ್ ಹೊಂದಿರಲಿದೆ. ಇನ್ನು ತನ್ನ ಗ್ರಾಹಕರಿಗೆ ಉತ್ತಮ ಕ್ವಾಲಿಟಿಯ ಫೋಟೋಗಳನ್ನು ನೀಡುವ ಉದ್ದೇಶವನ್ನು ಮೊಟೊರಾಲಾ ಹೊಂದಿದೆ. ಇದರಂತೆ ಹಿಂಭಾಗದಲ್ಲಿ 50 ಮೆಗಾಪಿಕ್ಸಲ್ ಪ್ರೈಮರಿ ಕ್ಯಾಮೆರಾ, 13 ಮೆಗಾಪಿಕ್ಸಲ್ ಅಲ್ಟ್ರಾ ವೈಡ್ ಆಂಗಲ್ ಕ್ಯಾಮೆರಾವನ್ನು ಹೊಂದಿದೆ. ಅಲ್ಲದೆ ಮುಂಭಾಗದಲ್ಲಿ ಸೆಲ್ಫಿ ಹಾಗೂ ವಿಡಿಯೋ ರೆಕಾರ್ಡಿಂಗಾಗಿ 32 ಮೆಗಾ ಪಿಕ್ಸಲ್ ಕ್ಯಾಮೆರಾ ನೀಡಲಾಗಿದೆ.
ಮೊಟೊರಾಲಾದ ಎಡ್ಜ್ 50 ಫ್ಯೂಸನ್ ಫೋನ್ 6.7 ಇಂಚಿನ ಪಿ ಓಎಲ್‌ಇಡಿ ಡಿಸ್‌ಪ್ಲೇ ಹೊಂದಿದೆ. ಅಲ್ಲದೆ ಈ ಫೋನ್ 1080x2400 ಪಿಕ್ಸಲ್ ನಷ್ಟು ಹೊಳಪನ್ನು ಹೊಂದಿದೆ. ಈ ಫೋನ್ 144 Hz ರಿಫ್ರೆಶ್ ರೇಟ್ ಹೊಂದಿದೆ. ಬ್ರೈಟ್ ನೆಸ್ 1600 ನಿಟ್ಸ್ ಹೊಂದಿದೆ. ಸೂರ್ಯನ ಬೆಳಕಿನಲ್ಲೂ ಈ ಫೋನ್ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತದೆ.
ಬ್ಯಾಟರಿ ಕ್ಯಾಪಿಸಿಟಿ ಎಷ್ಟು?
ವಿನ್ಯಾಸದ ವಿಷಯದಲ್ಲಿ, ಎಡ್ಜ್ 50 ಫ್ಯೂಷನ್ 161.9mm x 73.1mm x 7.9mm ಆಯಾಮಗಳೊಂದಿಗೆ ನಯವಾದ ಮತ್ತು ಸೊಗಸಾದ ನೋಟವನ್ನು ಹೊಂದಿದೆ ಮತ್ತು 174.9 ಗ್ರಾಂ ತೂಕವನ್ನು ಹೊಂದಿದೆ. ಈ ಫೋನ್ 5000 mAh ಬ್ಯಾಟರಿಯನ್ನು ಹೊಂದಿರಲಿದ್ದು, 68W ಟರ್ಬೊ ಪವರ್ ಫಾಸ್ಟ್ ಚಾರ್ಜಿಂಗ್ ಹೊಂದಿರಲಿದೆ.
-
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ -
March 28 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Viral ಆಯ್ತು ಅಕೌಂಟ್ಸ್ ಪ್ರಶ್ನೆಪತ್ರಿಕೆ: ಪರೀಕ್ಷೆಯಲ್ಲೂ ಮಿಂಚಿದ 'ಧುರಂಧರ್: ದಿ ರಿವೆಂಜ್' ಸಿನಿಮಾದ ಪಾತ್ರಗಳು -
ಹಿಂದಿ ರಾಜ್ಯಗಳಲ್ಲಿ ಕನ್ನಡವನ್ನ ಕಡ್ಡಾಯ ಮಾಡಿ: ವಿಜಯೇಂದ್ರಗೆ ನೇರ ಸವಾಲು ಹಾಕಿದ ಕರವೇ ನಾರಾಯಣಗೌಡ












Click it and Unblock the Notifications