ಭಾರತದಲ್ಲಿ ಆಗಸ್ಟ್‌ 1ರಂದು ಲಾಂಚ್‌ ಆಗಲಿದೆ Motorola Edge 50

ಭಾರತದ ಮೊಬೈಲ್‌ ಮಾರುಕಟ್ಟೆಯಲ್ಲಿ ದಿನವೂ ಒಂದಿಲ್ಲ ಒಂದು ಹೊಸ ಮೊಬೈಲ್‌ಗಳು ಲಾಂಚ್‌ ಆಗುತ್ತಲೇ ಇರುತ್ತವೆ. ಇನ್ನೇನು ಕೆಲವೇ ದಿನಗಳಲ್ಲಿ ಭಾರತದಲ್ಲಿ ಬಹು ಜನಪ್ರೀಯ ಮೊಟೊರೊಲಾ ಕಂಪನಿಯ ಮೊಬೈಲ್‌ ಲಾಂಚ್‌ ಆಗಲಿದೆ. ಈ ಮೊಬೈಲ್‌ಗಾಗಿ ಗ್ರಾಹಕರು ಬಹುದಿನಗಳಿಂದ ಕಾಯುತ್ತಿದ್ದಾರೆ.

ತನ್ನ ವಿಶಿಷ್ಠ ಶೈಲಿಯ ವಿನ್ಯಾಸ ಹಾಗೂ ಭರ್ಜರಿ ತಂತ್ರಜ್ಞಾನದಿಂದಲೇ ಹೆಸರುವಾಸಿಯಾಗಿರುವ ಮೊಟೊರೊಲಾ, ಆಗಸ್ಟ್‌ 1 ರಂದು ತನ್ನ ಮತ್ತೊಂದು ಸ್ಮಾರ್ಟ್‌ಫೋನ್‌ ರಿಲೀಸ್‌ ಮಾಡಲಿದೆ. ಈ ಫೋನ್‌ ಸಕತ್‌ ಸ್ಟೈಲಿಶ್‌ ಆಗಿದ್ದು, ನವೀನ ಫೀಚರ್ಸ್‌ಗಳನ್ನು ಹೊಂದಿದೆ. ಮುಂದಿನ ತಿಂಗಳು ದೈತ್ಯ ಕಂಪನಿ Motorola Edge 50 ಅನ್ನು ಬಿಡುಗಡೆ ಮಾಡಲಿದೆ.

Motorola Edge 50 Set to Launch in India on August 1 with Advanced Features and Military-Grade Durability

ಭಾರತದಲ್ಲಿ ಈಗಾಗಲೇ ಬಹಳ ಖ್ಯಾತಿ ಪಡೆದಿರುವ ಎಡ್ಜ್‌ ಸರಣಿಯ ಫೋನ್‌ಗಳ ಸಾಲಿಗೆ ಈಗ ಮತ್ತೊಂದು ಸೇರಲಿದೆ. Motorola Edge 50 ಭರ್ಜರಿ ಲುಕ್‌ನಿಂದಲೇ ಗ್ರಾಹರಕ ಚಿತ್ತ ಕದ್ದಿದೆ. ಈ ಫೋನ್ ಸಖತ್ ಸ್ಲಿಮ್ ಆಗಿದೆ. ಬಿಡುಗಡೆಗೂ ಮುನ್ನ, ಇ-ಕಾಮರ್ಸ್ ವೆಬ್‌ಸೈಟ್ ಫ್ಲಿಪ್‌ಕಾರ್ಟ್‌ನಲ್ಲಿ ಇದಕ್ಕಾಗಿ ಮೈಕ್ರೋಸೈಟ್ ಅನ್ನು ಸಹ ಲೈವ್ ಮಾಡಲಾಗಿದೆ. ಅಲ್ಲದೆ ಕೆಲವು ಫೀಚರ್ಸ್‌ಗಳನ್ನು ಸಹ ಬಹಿರಂಗಗೊಂಡಿವೆ.

ಪ್ರೊಸೆಸರ್‌ ಯಾವುದು?

ಈ ಸ್ಮಾರ್ಟ್‌ಫೋನ್‌ನಲ್ಲಿ 6.67 ಇಂಚಿನ ಕರ್ವಡ್‌ ಡಿಸ್‌ಪ್ಲೇಯನ್ನು ಹೊಂದಿದ್ದು. ಇದರಲ್ಲಿ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 7 ಜನರೇಷನ್‌ 1 AE ಚಿಪ್ಸೆಟ್ ಅನ್ನು ಒದಗಿಸಲಾಗಿದೆ. ಈ ಸ್ಮಾರ್ಟ್‌ಫೋನ್‌ನ ದೊಡ್ಡ ವಿಶೇಷವೆಂದರೆ ಗ್ರಾಹಕರಿಗೆ ಇದರಲ್ಲಿ ಸ್ಮಾರ್ಟ್ ವಾಟರ್ ಟಚ್ ತಂತ್ರಜ್ಞಾನವನ್ನು ಲಭ್ಯ.

Motorola Edge 50 IP68 ರೇಟಿಂಗ್‌ನೊಂದಿಗೆ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲಿದೆ. ಈ ಫೋನ್‌ ಜಂಗಲ್ ಗ್ರೀನ್, ಪ್ಯಾಂಟೋನ್ ಪೀಚ್ ಫಜ್ ಮತ್ತು ಕೋಲಾ ಗ್ರೇ ಬಣ್ಣಗಳಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.

Motorola Edge 50 Set to Launch in India on August 1 with Advanced Features and Military-Grade Durability

ಫೋನಿನ ವಿಶೇಷತೆಗಳು

ಮೊಟೊರೊಲಾ ಎಡ್ಜ್ 50 ರಲ್ಲಿ, ಕಂಪನಿಯು 6.67 ಇಂಚಿನ ಕರ್ವ್ಡ್ ಪೋಲೆಡ್ ಡಿಸ್ಪ್ಲೇಯನ್ನು ನೀಡಲಿದೆ.ನೀವು ಒದ್ದೆಯಾದ ಕೈಗಳಿಂದಲೂ ಇದನ್ನು ಬಳಸಬಹುದು. ಈ ಫೋನ್‌ ಸ್ಮಾರ್ಟ್ ವಾಟರ್ ಟಚ್ ವೈಶಿಷ್ಟ್ಯ ಹೊಂದಿದೆ.

ಈ ಫೋನ್‌ನಿನಲ್ಲಿ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 7 Gen 1 AE ಪ್ರೊಸೆಸರ್ ಅನ್ನು ನೀಡಲಾಗಿದೆ.
ಈ ಸ್ಮಾರ್ಟ್‌ಫೋನಿನ ಹಿಂಭಾಗದಲ್ಲಿ ಮೂರು ಕ್ಯಾಮೆರಾ ಸೆಟ್‌ಅಪ್‌ ನೀಡಲಾಗಿದೆ. ಪ್ರೈಮರಿ ಕ್ಯಾಮೆರಾ 50 ಎಂಪಿ ಹೊಂದಿದ್ದು, ಸೆಕಂಡರಿ 13 ಮತ್ತು 10 ಎಂಪಿ ಕ್ಯಾಮೆರಾಗಳನ್ನು ಹೊಂದಿವೆ.
ಮುಂಭಾಗದಲ್ಲಿ ವಿಡಿಯೋ ಹಾಗೂ ಸೆಲ್ಫಿಗಾಗಿ 32-ಮೆಗಾಪಿಕ್ಸೆಲ್ ಕ್ಯಾಮೆರಾ ನೀಡಲಾಗಿದೆ.
ಈ ಮೊಬೈಲ್‌ 5000mAh ಬ್ಯಾಟರಿಯನ್ನು ಹೊಂದಿದ್ದು, 68W ವೇಗದ ಚಾರ್ಜಿಂಗ್ ಸೌಲಭ್ಯವನ್ನು ಹೊಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+