Mother's Day 2024: ಈ ದಿನ ನಿಮ್ಮ 'ತಾಯಿ'ಗೆ ಉಡುಗೊರೆ ಕೊಡಬೇಕಾ? ಇಲ್ಲಿವೆ ಐಡಿಯಾಗಳು
ದೀರಾ?. ಹಾಗಾದರೆ ಈ ಲೇಖನ ನಿಮಗೆ ಹೆಚ್ಚು ಸಹಾಯಕ್ಕೆ ಬರಲಿದೆ. ಯಾವೆಲ್ಲ ಗಿಫ್ಟ್‌ಗಳನ್ನು ನೀವು ಕೊಟ್ಟ ತಾಯಿಯನ್ನು ಖುಷಿ ಪಡಿಸಬಹುದು?, ಎಷ್ಟೆಲ್ಲ ಆಯ್ಕೆಗಳಿಗೆ ಎಂಬ ಮಾಹಿತಿ ಇಲ್ಲಿದೆ.
ತಾಯಂದಿರ ದಿನ ಕೆಲವರು ತಾಯಿಯನ್ನು ಮನೆ ಕೆಲಸ ಬಿಡಿಸಿ ಹೊರಗೆ ಊಟಕ್ಕೆ, ಶಾಪಿಂಗ್‌ಗೆ, ಪ್ರವಾಸಕ್ಕೆ ಕರೆದುಕೊಂಡು ಹೋಗಿ ಆಕೆಗೆ ಆಶ್ಚರ್ಯ ಉಂಟು ಮಾಡುತ್ತಾರೆ. ಅವಳೊಟ್ಟಿಗೆ ಮನೆ ಮಂದಿಯಲ್ಲಾ ಕೂತು ಅಂದು ಬೇಕಾದ್ದನ್ನು ಮಾಡಿ ಬಡಿಸುತ್ತಾರೆ. ಹೆಚ್ಚು ಸಮಯ ಕಳೆಯುತ್ತಾರೆ. ಆರೋಗ್ಯ ಕ್ಷೇಮ ವಿಚಾರಿಸುವ ಜೊತೆಗೆ ಶುಭಾಷಯಗಳನ್ನು ತಿಳಿಸಿ ಉಡುಗೊರೆ ಕೊಟ್ಟು ಖುಷಿಯಾಗಿರುವಂತೆ ನೋಡಿಕೊಳ್ಳುತ್ತಾರೆ. ಇದು ಪ್ರತಿ ಮಕ್ಕಳ ಕರ್ತವ್ಯವು ಆಗಿದೆ.

ಹಾಗಾದರೆ ನೀವು ಇದೇ ಮೇ 12ರಂದು ನಿಮ್ಮ ತಾಯಿಗೆ ವಿಶಿಷ್ಟ ಗಿಪ್ಟ್ ನೀಡಲು ಯೋಚಿಸಿದ್ದರೆ ನಿಮಗಾಗಿ ಇಲ್ಲಿ ಒಂದಷ್ಟು ಉಡುಗೊರೆಗಳ ಕಲ್ಪನೆಗಳು ಇವೆ. ಇವುಗಳನ್ನು ನೀವು ಆಯ್ಕೆ ಮಾಡಿಕೊಳ್ಳಬಹುದು.
* ನೀವೇ ಕೈಯ್ಯಾರೆ ಕಾರ್ಡ್ ತಯಾರಿಸಿ
ತಾಯಂದಿರ ದಿನದಂದು ನೀವು ನಿಮ್ಮ ತಾಯಿಗಾಗಿ ನೀಡುವ ಗಿಫ್ಟ್‌ಗಳಲ್ಲಿ ಸ್ವತಃ ಕೈಯಿಂದ ಮಾಡಿದ ಕಾರ್ಡ್‌ಗಳು ಒಂದು. ಮಾರುಕಟ್ಟೆಯಲ್ಲಿ ಕಲರ್‌ಫುಲ್ ಕಾರ್ಡ್ ಪೇಪರ್ಸ್‌ಗಳು ಸಿಗುತ್ತವೆ. ಅವನ್ನು ತಂದು ನೀವೇ ಕೈಯಾರೆ ಶುಭಾಷಯಗಳ ಕಾರ್ಡ ಮಾಡಿ, ಅದು ಹೊಳೆಯಲು ಕ್ಯಾಲಿಗ್ರಫಿ ಅಥವಾ ದಪ್ಪಾ ಅಕ್ಷರಗಳಲ್ಲಿ ಶುಭಾಷಯ, ತಾಯಿಗೆ ಇಷ್ಟವಾಗುವ ಕವಿತೆ ಬರೆದು ನೀಡಬಹುದು.
* 'ಸುಗಂಧದ ಹೂವು'ಗಳನ್ನು ನೀಡಿ
ನಿಮ್ಮ ತಾಯಿಗೆ ಅತ್ಯಾಕರ್ಷವಾಗಿ ಕಾಣುವ ಬಗೆ ಬಗೆಯ ಚೆಂದದ ಹೂವುಗಳನ್ನು ನೀಡಬಹುದು. ಆಚರಣೆಗೂ ಮುನ್ನ ಹೂವುಗಳಿಗೆ ಬಣ್ಣಗಳು ಮತ್ತು ಸುಗಂಧಗಳನ್ನು ಸೇರಿಸಬಹುದು. ಇವುಗಳೊಂದಿಗೆ ಬೇರೆ ಉಡುಗೊರೆ ಇಲ್ಲವೇ ಕೈಯಿಂದ ತಯಾರಿಸಿದ ಕಾರ್ಡ್‌ಗಳನ್ನು ಕೊಟ್ಟು ಅವರ ಖುಷಿ ಹೆಚ್ಚಿಸಬಹುದು.

* ಹೊಸ ಉಡುಪು ಖರೀದಿಸಿ
ಮಹಿಳೆಯರು ಹೆಚ್ಚಾಗಿ ಬಟ್ಟೆಗಳನ್ನು ಇಷ್ಟಪಡುತ್ತಾರೆ. ನಿಮ್ಮ ತಾಯಿ ಡ್ರೆಸ್ಸಿಂಗ್ ಮಾಡಲು ಮತ್ತು ತನ್ನ ವಾರ್ಡ್ರೋಬ್ ಅನ್ನು ನವೀಕರಿಸಲು ಇಷ್ಟಪಡುತ್ತಿದ್ದರೆ, ಅವರಿಗೆ ಇಷ್ಟವಾಗುವಂತಹ ಸೀರೆಗಳು ಇನ್ನಿತರ ಬಟ್ಟೆಗಳನ್ನು ಖರೀದಿಸಿ ಈ ದಿನ ಗಿಫ್ಟ್ ರೂಪದಲ್ಲಿ ನೀಡಬಹದು. ಕಾರಣಾಂತರಗಳಿಂದ ತಾಯಿ ಕರೆದಾಗ ಶಾಪಿಂಗ್‌ಗೆ ಹೋಗಲು ಆಗದವರಿಗೆ ಈ ಗಿಫ್ಟ್ ಸಲಹೆ ಹಿಡಿಸಬಹುದು.
* ಸ್ಕಿನ್‌ಕೇರ್ ಉತ್ಪನ್ನಗಳ ಪ್ಯಾಕ್
ಚರ್ಮದ ಆರೈಕೆ ಉತ್ಪನಗಳು, ಸೀರಮ್ ಅಥವಾ ಸಾರಭೂತ ತೈಲ (Essential oil) ಬಳಕೆಗೆ ಯೋಚಿಸಿದ್ದ ನೀವದನ್ನು ನೀಡಲು ಈ ದಿನ ಅತ್ಯುತ್ತಮವಾದದ್ದು ಎನ್ನಬಹುದು. ನಿಮ್ಮ ತಾಯಿಗಾಗಿ ನೆಚ್ಚಿನ ಫೇಸ್ ಮಾಸ್ಕ್ ಅಥವಾ ಮಾಯಿಶ್ಚರೈಸರ್ ಪ್ಯಾಕ್ ಅನ್ನು ಸಹ ಉಡುಗೊರೆಯಾಗಿ ಕೊಡಬಹುದು.
* ಪ್ರೀತಿ ವ್ಯಕ್ತಪಡಿಸುವ ಸ್ವೆಟ್‌ಶರ್ಟ್
ಬಹುತೇಕ ತಾಯಂದಿರಿಗೆ ಮಕ್ಕಳನ್ನು ಬಿಟ್ಟಿರಲು ಇಷ್ಟವಿರುದಿಲ್ಲ. ವೃತ್ತಿ ಇನ್ನಿತರ ಅನಿವಾರ್ಯ ಕಾರಣಗಳಿಗೆ ದೂರು ಉಳಿದು ಬಿಟ್ಟರುತ್ತಾರೆ. ಇಂತಹವರು ಸ್ವೆಟ್‌ಶರ್ಟ್ ಮೇಲೆ ನಿಮ್ಮ ಪ್ರೀತಿಯ ಸಂದೇಶ, ಫೋಟೋ ಇಲ್ಲವೇ ಸಹಿ ಹಾಕಿ, ಇನ್ನಿತರ ಸಂದೇಶ ಮುದ್ರಿಸಿ ನೀಡಬಹುದು.
* ಪೆಂಡೆಂಟ್/ಚಿನ್ನಾಭರಣದ ಗಿಫ್ಟ್
ಇಲ್ಲವೇ ಪೆಂಡೆಂಟ್ ನಲ್ಲಿ ತಾಯಿಯ ಹೆಸರು ಮುದ್ರಿಸಿ ಗಿಫ್ಟ್ ನೀಡಬಹುದು. ಇದಕ್ಕಾಗಿ ನೀವು ನೆಕ್ಲೇಸ್ ಸಹ ಆಯ್ಕೆ ಮಾಡಬಹುದು. ತಾಯಿ ಚಿನ್ನಾಭರಣ ಖರೀದಿಸುವ ಇಂಗಿತವಿದ್ದಲ್ಲಿ ಅದನ್ನು ನೀವೇ ಅರಿತುಕೊಂಡು ಖರೀದಿಸಿ ಗಿಫ್ಟ್ ರೀತಿ ಕೊಡಲು ತಾಯಂದಿರ ದಿನ ಸೂಕ್ತವಾಗಿದೆ. ಅವರು ಅವುಗಳನ್ನು ಧರಿಸಿ ಸ್ನೇಹಿತರು, ಕುಟುಂಬಸ್ಥರ ಮುಂದೆ ತೋರಿಸಿ ಖುಷಿ ಪಡುವ ಸಾಧ್ಯತೆ ಹೆಚ್ಚಿರುತ್ತದೆ.
ಪೌಷ್ಠಿಕ ಆಹಾರ/ಚಾಕೋಲೇಟ್/ ಸಿಹಿ ತಿಂಡಿ
ಮನೆಯ ನಿತ್ಯ ಕೆಲಸದಲ್ಲಿ ಮುಳಗಿರುವ ತಾಯಂದಿರಿಗೆ ಆರೋಗ್ಯ ಕಡೆ ಗಮನ ಹರಿಸಲು ಆಗುವುದಿಲ್ಲ. ಕೆಲವರಂತೂ ಸರಿಯಾದ ಸಮಯಕ್ಕೆ ಊಟ ಮಾಡದೇ ಕೆಲಸದಲ್ಲಿ ಮಗ್ನವಾಗಿರುತ್ತಾರೆ. ಇಂತವರಿಗೆ ನೀವು ಪೌಷ್ಠಿಕ ಆಹಾರ ಪ್ಯಾಕೇಟ್‌ಗಳನ್ನು ನೀಡಬಹುದು.
ಆರೋಗ್ಯಕರ ಪಾನೀಯಗಳು, ಸಲಾಡ್ ಒಳಗೊಂಡ ಪರಿಪೂರ್ಣ ಆಹಾರ ಪ್ಯಾಕೇಟ್ ಅನ್ನು ನೀವೆ ಜೋಡಿಸಿ ಕೊಡಬಹುದು. ಇದರಲ್ಲಿ ಎಲ್ಲ ವಿಧದ ಆರೋಗ್ಯಕರ ಆಹಾರ ಇರುವಂತೆ ನೋಡಿಕೊಳ್ಳಬೇಕು. ಇದರೊಂದಿಗೆ ಅವರು ಇಷ್ಟಪಡುವ ಚಾಕೋಲೆಟ್, ಸಿಹಿ ತಿಂಡಿಗಳನ್ನು ಕೊಟ್ಟು ಆಶ್ಚರ್ಯಪಡಿಸಬಹುದು.
ತಾಯಂದಿರ ದಿನಾಚರಣೆಗೆ ಕೆಲವೇ ದಿನಗಳು ಬಾಕಿವೆ. ಆಚರಣೆಗೂ ಎರಡು ದಿನ ಮುನ್ನವೇ ನೀವು ಎಲ್ಲ ಸಿದ್ಧತೆ ಮಾಡಿಕೊಂಡರೆ ಒಳಿತು. ಕೊನೆ ಕ್ಷಣದಲ್ಲಿ ತಯಾರಿ ಆರಂಭಿಸಿದರೆ, ಗಲಿಬಿಲಿಗೊಳ್ಳಬಹುದು. ಇಷ್ಟದ ಗಿಫ್ಟ್ ತಯಾರಿಸಲು, ಇಲ್ಲವೇ ಖರೀದಿಸಲು ಆಗದಿರಬಹುದು. ಆದ್ದರಿಂದ ವರ್ಷಕ್ಕೊಮ್ಮೆ ಬರುವ ಈ ದಿನಕ್ಕಾಗಿ ಒಂದಷ್ಟು ಸಮಯ ಮೀಸಲಿಡಿ.
ಇಂದು ಭಾನುವಾರ ತಾಯಂದಿರ ದಿನ, ನೀವು ಹೆಚ್ಚು ಸಮಯ ಕಳೆಯುವ ಜೊತೆಗೆ ಇಷ್ಟ ಉಡುಗೊರೆ ಕೊಟ್ಟು ಈ ದಿನ ಖುಷಿಯನ್ನು ಹೆಚ್ಚಿಸಬಹುದು. ಬೆಂಗಳೂರು ಕರ್ನಾಟಕ, ಸೇರಿದಂತೆ ದೇಶದೆಲ್ಲಡೆ ಈ ಸಂಭ್ರಮಾಚರಣೆ ಆಚರಿಸಿಕೊಂಡು ಬರಲಾಗುತ್ತಿದೆ.
-
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
SWR: ಪ್ರಶಾಂತಿ ಎಕ್ಸ್ಪ್ರೆಸ್ ರೈಲಿಗೆ ಹೆಚ್ಚುವರಿ ಬೋಗಿ: ರೈಲುಗಳ ನಿಲುಗಡೆಯಲ್ಲಿ ಬದಲಾವಣೆ -
Hindi Language: ಹಿಂದಿ ಭಾಷೆ ರದ್ದು, ಎಸ್ಎಸ್ಎಲ್ಸಿ ಮಕ್ಕಳ ಬದುಕಿಗೆ ಕಲ್ಲು:ಆರ್ ಅಶೋಕ್ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
ಕೊಹ್ಲಿ ಭಾಯ್ಗೆ ಮೈದಾನದಲ್ಲಿ ಕೆಣಕ್ಬೇಡಿ, ತುಂಬಾ ಸಮಯ ನಿಲ್ಲಲು ಬಿಡಬೇಡಿ; ಎಸ್ಆರ್ಎಚ್ ಸಹ ಆಟಗಾರರಿಗೆ ಇಶಾನ್ ಎಚ್ಚರಿಕೆ ಸಂದೇಶ -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್












Click it and Unblock the Notifications