ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂದಿಗೂ ಮೋದಿಯೇ ಅತ್ಯುತ್ತಮ ಪ್ರಧಾನಿ: 'ಮೂಡ್ ಆಫ್ ದಿ ನೇಷನ್' ಸಮೀಕ್ಷೆ

|
Google Oneindia Kannada News

ನರೇಂದ್ರ ಮೋದಿ ಅವರೇ ಭಾರತದ ಅತ್ಯುತ್ತಮ ಪ್ರಧಾನಿ ಎಂದು ಕನಿಷ್ಠ ಶೇ 34ರಷ್ಟು ಮಂದಿ ಅಭಿಪ್ರಾಯಪಟ್ಟಿದ್ದಾರೆ. ಮೋದಿ ಅವರ ಬಳಿಕ ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿ ಸ್ಥಾನ ಪಡೆದಿದ್ದಾರೆ. ಅಟಲ್ ಬಿಹಾರಿ ವಾಜಪೇಯಿ ಮತ್ತು ಜವಹರಲಾಲ್ ನೆಹರೂ ನಂತರದ ಸ್ಥಾನಗಳಲ್ಲಿದ್ದಾರೆ.

ಇಂಡಿಯಾ ಟುಡೆ ಸಮೂಹ ಮತ್ತು ಕಾರ್ವಿ ಇನ್‌ಸೈಟ್ಸ್ ಲಿಮಿಟೆಡ್ ನಡೆಸಿದ 'ಮೂಡ್ ಆಫ್ ದಿ ನೇಷನ್' ಸಮೀಕ್ಷೆ (ಎಂಓಟಿಎನ್) ಈ ಮಾಹಿತಿ ನೀಡಿದೆ.

ಸಮೀಕ್ಷೆಯಲ್ಲಿ ಪಾಲ್ಗೊಂಡದ್ದವರಲ್ಲಿ ಶೇ ಎಂಟರಷ್ಟು ಜನರು ಜವಹರಲಾಲ್ ನೆಹರೂ ಅತ್ಯುತ್ತಮ ಪ್ರಧಾನಿ ಎಂದು ಆಯ್ಕೆ ಮಾಡಿದ್ದರೆ, ಶೇ 5ರಷ್ಟು ಮಂದಿ ರಾಜೀವ್ ಗಾಂಧಿ ಅವರೆಡೆಗೆ ಒಲವು ವ್ಯಕ್ತಪಡಿಸಿದ್ದಾರೆ. ಆದರೆ ಮೋದಿ ಅವರ ಜನಪ್ರಿಯತೆ ಕಳೆದ ಸಮೀಕ್ಷೆಗಳಿಗೆ ಹೋಲಿಸಿದರೆ ಇಳಿಕೆಯಾಗಿದೆ.

ಲೋಕಸಭೆ ಚುನಾವಣೆ ಇಂದು ನಡೆದಿದ್ದರೆ ಏನಾಗುತ್ತಿತ್ತು?: ಮೂಡ್ ಆಫ್ ದಿ ನೇಷನ್ ಸಮೀಕ್ಷೆಲೋಕಸಭೆ ಚುನಾವಣೆ ಇಂದು ನಡೆದಿದ್ದರೆ ಏನಾಗುತ್ತಿತ್ತು?: ಮೂಡ್ ಆಫ್ ದಿ ನೇಷನ್ ಸಮೀಕ್ಷೆ

ಪೌರತ್ವ ತಿದ್ದುಪಡಿ ಕಾಯ್ದೆ, ಎನ್‌ಆರ್‌ಸಿ, ಎನ್‌ಪಿಆರ್ ವಿರುದ್ಧ ನಡೆಯುತ್ತಿರುವ ವ್ಯಾಪಕ ಪ್ರತಿಭಟನೆಗಳು, ನಿರುದ್ಯೋಗದ ಸಮಸ್ಯೆ, ರೈತರ ಸಂಕಷ್ಟಗಳು, ಆರ್ಥಿಕ ಕುಸಿತ ಮುಂತಾದವುಗಳ ವಿರುದ್ಧ ಜನರು ಅಸಮಾಧಾನ ಹೊಂದಿದ್ದಾರೆ. ಈ ಕಾರಣಗಳಿಂದಾಗಿ ಮೋದಿ ಜನಪ್ರಿಯತೆ ತಗ್ಗಿದೆ ಎಂದು ಹೇಳಲಾಗಿದೆ.

ಮೋದಿ ಪರ ಶೇ 34 ಮತ

ಮೋದಿ ಪರ ಶೇ 34 ಮತ

ಸಮೀಕ್ಷೆಯಲ್ಲಿ ನರೇಂದ್ರ ಮೋದಿ ಅವರ ಪರ ಶೇ 34 ಮಂದಿ ಒಲವು ತೋರಿದ್ದು, ಇದರಂತೆ ಮೋದಿ ದೇಶದ ಅತ್ಯುತ್ತಮ ಪ್ರಧಾನಿ ಎನಿಸಿದ್ದಾರೆ. ಇಂದಿರಾ ಗಾಂಧಿ ಅವರು ದೇಶದ ಅತ್ಯುತ್ತಮ ಪ್ರಧಾನಿ ಎಂದು ಶೇ 16ರಷ್ಟು ಮಂದಿ ಹೇಳಿದ್ದಾರೆ. ಹಾಗೆಯೇ ಶೇ 13ರಷ್ಟು ಮಂದಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಅತ್ಯುತ್ತಮ ಪ್ರಧಾನಿ ಎಂದು ಹೆಸರಿಸಿದ್ದಾರೆ.

ಜನಪ್ರಿಯತೆಯಲ್ಲಿ ಕುಸಿತ

ಜನಪ್ರಿಯತೆಯಲ್ಲಿ ಕುಸಿತ

2019ರ ಆಗಸ್ಟ್‌ನಲ್ಲಿ ನಡೆದ ಎಂಓಟಿಎನ್ ಸಮೀಕ್ಷೆಯಲ್ಲಿ ಕೂಡ ನರೇಂದ್ರ ಮೋದಿ ಅತ್ಯುತ್ತಮ ಪ್ರಧಾನಿ ಎಂದು ಜನರು ಅಭಿಪ್ರಾಯಪಟ್ಟಿದ್ದರು. ಆದರೆ ಇತ್ತೀಚೆಗೆ ನಡೆದ ರಾಷ್ಟ್ರವ್ಯಾಪಿ ಸಮೀಕ್ಷೆಯಲ್ಲಿ ಕೂಡ ಮೋದಿ ಶೇ 34ರಷ್ಟು ಮತಗಳನ್ನು ಪಡೆದಿದ್ದರೂ, ಆರು ತಿಂಗಳ ನಂತರದ ಸಮೀಕ್ಷೆಯಲ್ಲಿ ಅವರ ಜನಪ್ರಿಯತೆ ಶೇ ಮೂರರಷ್ಟು ಕುಸಿದಿದೆ.

ಮೋದಿ 2.0 ಸರ್ಕಾರ ಹೆಚ್ಚು ಉದ್ಯೋಗ ಸೃಷ್ಟಿಸಬಹುದು: ಸಮೀಕ್ಷೆಮೋದಿ 2.0 ಸರ್ಕಾರ ಹೆಚ್ಚು ಉದ್ಯೋಗ ಸೃಷ್ಟಿಸಬಹುದು: ಸಮೀಕ್ಷೆ

ಇಂದಿರಾ ಜನಪ್ರಿಯತೆ ಏರಿಕೆ

ಇಂದಿರಾ ಜನಪ್ರಿಯತೆ ಏರಿಕೆ

2019ರ ಆಗಸ್ಟ್‌ನಲ್ಲಿ ನಡೆದ ಸಮೀಕ್ಷೆಯಲ್ಲಿ ಕನಿಷ್ಠ ಶೇ 14ರಷ್ಟು ಮಂದಿ ಇಂದಿರಾ ಗಾಂಧಿ ಅವರನ್ನು ಅತ್ಯುತ್ತಮ ಪ್ರಧಾನಿ ಎಂದು ಗುರುತಿಸಿದ್ದರು. ಈಚೆಗೆ ನಡೆದ ಸಮೀಕ್ಷೆಯಲ್ಲಿ ಮಾಜಿ ಪ್ರಧಾನಿಯ ಜನಪ್ರಿಯತೆಯಲ್ಲಿ ಶೇ 2ರಷ್ಟು ಏರಿಕೆಯಾಗಿದೆ.

ಎಂಟು ತಿಂಗಳಲ್ಲಿ ಹೆಚ್ಚಿದ್ದ ಜನಪ್ರಿಯತೆ

ಎಂಟು ತಿಂಗಳಲ್ಲಿ ಹೆಚ್ಚಿದ್ದ ಜನಪ್ರಿಯತೆ

2019ರ ಜನವರಿಯಲ್ಲಿ ಲೋಕಸಭೆ ಚುನಾವಣೆಗೂ ಮುನ್ನ ನಡೆದ ಸಮೀಕ್ಷೆಯಲ್ಲಿ ಶೇ 19ರಷ್ಟು ಮಂದಿ ಮಾತ್ರ ನರೇಂದ್ರ ಮೋದಿ ದೇಶದ ಅತ್ಯುತ್ತಮ ಪ್ರಧಾನಿ ಎಂದು ಹೇಳಿದ್ದರು. ನಂತರದ ಎಂಟು ತಿಂಗಳಲ್ಲಿ ಮೋದಿ ಅವರ ಜನಪ್ರಿಯತೆ ಶೇ 37ಕ್ಕೆ ಏರಿತ್ತು. ಈಗ ಆರು ತಿಂಗಳಲ್ಲಿ ಶೇ ಮೂರರಷ್ಟು ಇಳಿಕೆಯಾಗಿದೆ.

English summary
Mood Of The Nation Survey: Narendra Modi with 32 Per cent people's vote is in the top of the best PM list followed by Indira Gandhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X