• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇತಿಹಾಸದ ಪುಟಗಳಲ್ಲಿ ಲೀನವಾಗುತ್ತಿರುವ ಹಳ್ಳಿ ಆಟಗಳು!

By ಒನ್ ಇಂಡಿಯಾ ಡೆಸ್ಕ್
|
Google Oneindia Kannada News

ಆಗಸ್ಟ್ 29 ಭಾರತದ ಹಾಕಿ ಮಾಂತ್ರಿಕ ಮೇಜರ್ ಧ್ಯಾನ್ ಚಂದ್ ಜನ್ಮದಿನ. ಈ ದಿನನ್ನು ಭಾರತೀಯರಾದ ನಾವು ರಾಷ್ಟ್ರೀಯ ಕ್ರೀಡಾ ದಿನಾಚರಣೆಯಾಗಿ ಆಚರಿಸುತ್ತಿದ್ದೇವೆ. ಈ ಸಂದರ್ಭ ನಾವೆಲ್ಲರೂ ಆಡುತ್ತಾ ಬೆಳೆದ ಹಳ್ಳಿ ಆಟಗಳು ನೆನಪಾಗುತ್ತವೆ ಮತ್ತು ಅವು ನಗರ ನಾಗರಿಕತೆಯ ಹೊಡೆತಕ್ಕೆ ಸಿಲುಕಿ ಇತಿಹಾಸದ ಪುಟಗಳಲ್ಲಿ ಲೀನವಾಗುತ್ತಿರುವುದು ಬೇಸರ ತರಿಸುತ್ತಿದೆ.

ಕ್ರೀಡೆಗಳ ವಿಚಾರಕ್ಕೆ ಬಂದರೆ ಭಾರತ ಸಮೃದ್ಧವಾಗಿದೆ. ಇಲ್ಲಿ ಮಕ್ಕಳು ಅವರ ವಯಸ್ಸು, ಶಕ್ತಿ, ಸಾಮರ್ಥ್ಯಕ್ಕೆ ಮತ್ತು ಕಾಲಕ್ಕೆ ತಕ್ಕಂತೆ ಆಟಗಳನ್ನು ಆಡುತ್ತಾ ಬೆಳೆಯುತ್ತಾ ಬಂದಿದ್ದಾರೆ. ಕೆಲವು ದಶಕಗಳ ಹಿಂದೆಗೆ ಮಕ್ಕಳು ಆಡುತ್ತಿದ್ದ ಆಟಗಳನ್ನು ಲೆಕ್ಕ ಹಾಕುವುದೇ ಕಷ್ಟವಾಗುತ್ತಿತ್ತು. ಯಾವುದೋ ಒಂದು ಆಟವಾಡುತ್ತಾ ದೈಹಿಕ, ಮಾನಸಿಕ, ಬೌದ್ಧಿಕವಾಗಿ ಗಟ್ಟಿಯಾಗುತ್ತಾ ಹೋಗುತ್ತಿದ್ದರು. ಆದರೆ ಈಗ ಆ ವಾತಾವರಣ ಮಾಯವಾಗಿದೆ.

ಪಂಜ್‌ಶೀರ್‌ನಲ್ಲಿ ಅಫ್ಘಾನ್ ಉಪಾಧ್ಯಕ್ಷರ ವಾಲಿಬಾಲ್ ಆಟಪಂಜ್‌ಶೀರ್‌ನಲ್ಲಿ ಅಫ್ಘಾನ್ ಉಪಾಧ್ಯಕ್ಷರ ವಾಲಿಬಾಲ್ ಆಟ

ಈಗ ಮಕ್ಕಳು ಮೊಬೈಲ್‌ಗೆ ಮಾರು ಹೋಗಿದ್ದಾರೆ. ಈಗ ಏನಿದ್ದರೂ ಮೊಬೈಲ್‌ನಲ್ಲಿಯೇ ವೀಡಿಯೋ ಗೇಮ್, ಆನ್ ಲೈನ್ ಗೇಮ್ ಹೀಗೆ ಎಲ್ಲವನ್ನು ಅಲ್ಲಿಯೇ ಆಡಿ ಖುಷಿ ಪಡುತ್ತಿದ್ದಾರೆ. ಅದಷ್ಟೆ ಅವರ ಪ್ರಪಂಚವಾಗಿದೆ. ಅದರಾಚೆಗೆ ಒಂದಷ್ಟು ಮಂದಿಗೆ ಮೈದಾನಕ್ಕೆ ತೆರಳುತ್ತಾರೆ ಅವರು ಕ್ರಿಕೆಟ್, ವಾಲಿಬಾಲ್ ಆಡುತ್ತಾರೆ. ಉಳಿದಂತೆ ಮೊಬೈಲ್ ಹಿಡಿದು ತಮಗೇನು ಬೇಕೋ ಅದನ್ನೇ ಮಾಡುತ್ತಾರೆ.

ಬಜೆಟ್‌; ಆಟಿಕೆ ಉದ್ಯಮಕ್ಕೆ ವಿಶೇಷ ನೀತಿ, ಕೊಪ್ಪಳಕ್ಕೆ ಕೊಡುಗೆ? ಬಜೆಟ್‌; ಆಟಿಕೆ ಉದ್ಯಮಕ್ಕೆ ವಿಶೇಷ ನೀತಿ, ಕೊಪ್ಪಳಕ್ಕೆ ಕೊಡುಗೆ?

ಆಟಗಳು ಅಂದರೆ ಅವು ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಸಹಕಾರ ನೀಡುವ ವ್ಯಾಯಾಮಗಳಾಗಿದೆ. ಆಟವಾಡುತ್ತಾ ದೈಹಿಕವಾಗಿಯೂ ಮಾನಸಿಕವಾಗಿಯೂ ಖುಷಿ, ಸಂತಸಪಡಲು ಅನುಕೂಲ ಮಾಡಿಕೊಡುವ ಮಾರ್ಗವೂ ಇದಾಗಿದೆ. ಆದರೆ ಎಲ್ಲೊ ಒಂದು ಕಡೆ ನಾವು ನಾಗರಿಕತೆಗೆ ಮುಖ ಮಾಡಿ ನಡೆಯುತ್ತಿದ್ದಂತೆಯೇ ನಮಗೆ ಅರಿವಿಲ್ಲದಂತೆ ನಮ್ಮೊಂದಿಗೆ ಅರ್ಥಾತ್ ಪೀಳಿಗೆಯಿಂದ ಪೀಳಿಗೆಗೆ ಬಂದ ಮತ್ತು ನಾವೆಲ್ಲರೂ ಆಡುತ್ತಾ ಖುಷಿಪಟ್ಟಿದ್ದ ಬಹಳಷ್ಟು ಹಳ್ಳಿ ಆಟಗಳು ಸದ್ದಿಲ್ಲದೆ ನೇಪಥ್ಯಕ್ಕೆ ಸರಿಯುತ್ತಿರುವುದು ಗೋಚರಿಸುತ್ತಿದೆ.

ಮೇಕ್ ಇನ್ ಇಂಡಿಯಾಕ್ಕೆ ಒತ್ತು, ಆಮದು ಆಟಿಕೆ ದುಬಾರಿ ಮೇಕ್ ಇನ್ ಇಂಡಿಯಾಕ್ಕೆ ಒತ್ತು, ಆಮದು ಆಟಿಕೆ ದುಬಾರಿ

ಆಟಗಳ ಹೆಸರೇ ಮರೆತು ಹೋಗಿವೆ

ಆಟಗಳ ಹೆಸರೇ ಮರೆತು ಹೋಗಿವೆ

ಬಹಳಷ್ಟು ಆಟಗಳ ಹೆಸರೇ ನಮಗೆ ಮರೆತು ಹೋಗಿದೆ. ಅವತ್ತಿನ ಕಾಲಕ್ಕೆ ಮಕ್ಕಳ ಮೈಮನವನ್ನು ಉಲ್ಲಾಸಗೊಳಿಸಿದ್ದ ಆಟಗಳು ಇವತ್ತು ಹೇಳಲು ಹೆಸರೇ ಇಲ್ಲದಂತೆ ಇತಿಹಾಸದ ಗರ್ಭ ಸೇರಿ ಹೋಗಿದೆ. ನಾವು ಇವತ್ತು ರಾಷ್ಟ್ರೀಯ ಕ್ರೀಡಾ ದಿನವನ್ನು ಆಚರಿಸುತ್ತಿದ್ದೇವೆ. ಈ ಸಂದರ್ಭ ನಮ್ಮ ದೇಶದ್ದೇ ಆದ ಹಿರಿಯರು ಆಡುತ್ತಾ ಬಂದಿದ್ದ ಒಂದಷ್ಟು ಆಟಗಳನ್ನು ಮೆಲುಕು ಹಾಕದೆ ಹೋದರೆ ಆ ಆಟಗಳಿಗೆ ನಾವು ಅವಮಾನ ಮಾಡಿದಂತಾಗುತ್ತದೆ. ಹಳ್ಳಿ ಆಟಗಳು ಅವುಗಳಲ್ಲಿ ಏನಿದೆ? ಎಂದು ಮೂಗು ಮುರಿಯುವವರು ಪ್ರತಿಯೊಂದು ಆಟದ ಹಿಂದೆ ಇರುವ ಶಿಸ್ತು, ಸೌಜನ್ಯ, ತಂತ್ರ, ಶೈಕ್ಷಣಿಕ ಮಾರ್ಗದರ್ಶನದ ಮಹತ್ವವಿದ್ದುದನ್ನು ತಿಳಿದರೆ ನಮ್ಮ ಹಿರಿಯರು ತಮ್ಮ ಮಕ್ಕಳಿಗೆ ಏಕೆ ಆ ಆಟಗಳನ್ನು ಆಡುವಂತೆ ಪ್ರೆರೇಪಿಸುತ್ತಿದ್ದರು ಎಂಬುದಕ್ಕೆ ಉತ್ತರವೂ ಸಿಗುತ್ತದೆ.

ಮನರಂಜನೆ ಜೊತೆಗೆ ಮಾರ್ಗದರ್ಶಿ

ಮನರಂಜನೆ ಜೊತೆಗೆ ಮಾರ್ಗದರ್ಶಿ

ಹಿಂದಿನ ಕಾಲದಲ್ಲಿ ಬೇಟೆಯಾಡುವುದೇ ಮುಖ್ಯವಾಗಿದ್ದುದರಿಂದ ಗುರಿಯಿಡಲು ಅನುಕೂಲವಾಗಲೆಂದು ಗೋಲಿ, ಚಿಣ್ಣಿದಾಂಡು, ಪಿಕ್ಕಿನಾಟವಾಡಿಸುತ್ತಿದ್ದರೆ, ಅಪಹರಣ ತರಬೇತು ನೀಡುವ ಸಲುವಾಗಿ ಕೋಲು ಹಾರಿಸುವ ಆಟ, ದೇಹದ ಜಡತ್ವ ಹೊಡೆದೋಡಿಸಿ ಉತ್ಸಾಹ ತುಂಬಿಸುವ ಮತ್ತು ಬೆನ್ನಟ್ಟಿ ಅಕ್ರಮಣ ಪಟುತ್ವದ ಖೋಖೋ ಆಟ, ವ್ಯೂಹ ರಚನೆ, ಸಮರ ಸನ್ನದ್ಧತೆಗೆ ರಾಜನೀತಿಗೆ ಅನುಕೂಲವಾಗುವ ಬೇಟೆಯ ಆಟ, ತಂತ್ರವನ್ನು ಕಲಿಸುವ ಚದುರಂಗ ಹೀಗೆ ಸೂಕ್ಷ್ಮವಾಗಿ ಕೆಲವೊಂದು ಆಟಗಳನ್ನು ಗಮನಿಸಿದರೆ ಅವು ನಮ್ಮ ಬದುಕಿನಲ್ಲಿ ಕೇವಲ ಮನರಂಜನೆ ಮಾತ್ರವಲ್ಲದೆ ಬದುಕಿಗೂ ಮಾರ್ಗದರ್ಶಿಯಾಗಿದ್ದವು ಎಂಬುದನ್ನು ಒಪ್ಪಿಕೊಳ್ಳಲೇ ಬೇಕಾಗುತ್ತದೆ.

ಕ್ರೀಡೆಗಾಗಿಯೇ ಬದುಕಿದ ಗ್ರೀಕರು!

ಕ್ರೀಡೆಗಾಗಿಯೇ ಬದುಕಿದ ಗ್ರೀಕರು!

ಪ್ರಾಚೀನ ಕಾಲದಲ್ಲಿ ಈಜಿಪ್ಟ್, ಚೀನಾ, ಗ್ರೀಸ್, ರೋಮ್, ಆಸ್ಟ್ರೇಲಿಯಾ, ಭಾರತ ಮೊದಲಾದ ದೇಶಗಳಲ್ಲಿ ಬೇಟೆ, ಮಲ್ಲಯುದ್ದ, ಬಿಲ್ಲು ಬಾಣಗಳ ಪ್ರದರ್ಶನ, ಭಾರ ಎತ್ತುವುದು, ಗೋಲಿ, ಚೆಂಡು, ಬುಗುರಿ ಆಟಗಳು ಪ್ರಚಲಿತದಲ್ಲಿದ್ದವು ಎಂದು ಹೇಳಲಾಗಿದೆ. ಗ್ರೀಕರು ತಮ್ಮ ಬದುಕಿನಲ್ಲಿ ಹೆಚ್ಚಿನ ಸಮಯವನ್ನು ಕ್ರೀಡೆಗಳಿಗಾಗಿಯೇ ಮೀಸಲಿಟ್ಟಿದ್ದರು. ಅಷ್ಟೇ ಅಲ್ಲದೆ ಅವರು, ಆಟ ಪಾಠಗಳಿಂದಲೇ ತಮ್ಮ ದೈಹಿಕ ಮತ್ತು ಬೌದ್ಧಿಕ ಬಲ ಬೆಳೆಸಿಕೊಂಡಿದ್ದರು. ಅವರ ಸಾಧನೆಯಿಂದಲೇ ಒಲಂಪಿಕ್ಸ್ ಕ್ರೀಡೆಗಳು ರೂಪುಗೊಂಡಿದ್ದು ಸಾಕ್ಷಿಯಾಗಿ ನಮ್ಮ ಮುಂದೆ ನಿಂತಿದೆ. ಇದೆಲ್ಲವನ್ನು ಗಮನಿಸಿದರೆ ಎಲ್ಲೊ ಒಂದು ಕಡೆ ನಾವು ಹಳ್ಳಿ ಆಟಗಳನ್ನು ಮರೆತಿದ್ದರಿಂದಲೇ ದೈಹಿಕ ಮತ್ತು ಮಾನಸಿಕ ಆರೋಗ್ಯ ಕೈ ಕೊಟ್ಟಿದೆ ಎಂಬುದನ್ನು ಒಪ್ಪಿಕೊಳ್ಳಲೇ ಬೇಕಾಗುತ್ತದೆ.

ಹಳ್ಳಿಗಳನ್ನು ಆಕ್ರಮಿಸಿದ ಕ್ರಿಕೆಟ್

ಹಳ್ಳಿಗಳನ್ನು ಆಕ್ರಮಿಸಿದ ಕ್ರಿಕೆಟ್

ಮೊದಲೆಲ್ಲ ಹಳ್ಳಿಗಳಲ್ಲಿ ಕ್ರೀಡಾಕೂಟಗಳನ್ನು ಏರ್ಪಡಿಸಲಾಗುತ್ತಿತ್ತು. ಆ ಕ್ರೀಡಾ ಕೂಟಗಳಲ್ಲಿ ಹಳ್ಳಿ ಆಟಗಳಿಗೆ ಮೊದಲ ಪ್ರಾಶಸ್ತ್ಯ ನೀಡಲಾಗುತ್ತಿತ್ತು. ಆದರೆ ಬದಲಾದ ಕಾಲದಲ್ಲಿ ಹಳ್ಳಿ ಆಟಗಳ ಜಾಗವನ್ನೆಲ್ಲ ಕ್ರಿಕೆಟ್ ಆಕ್ರಮಿಸಿಕೊಂಡಿದೆ. ಪರಿಣಾಮ ಎಲ್ಲಿ ನೋಡಿದರೂ ಬ್ಯಾಟ್ ಹಿಡಿದವರೇ ಕಾಣುತ್ತಿದ್ದಾರೆ. ಹಾಗೆಂದು ಕ್ರಿಕೆಟ್ ಆಡಲೇ ಬಾರದು ಎಂದು ಹೇಳುತ್ತಿಲ್ಲ. ಬದಲಿಗೆ ಇತರೆ ಆಟಗಳನ್ನೂ ಪ್ರೋತ್ಸಾಹಿಸಿ ಅವುಗಳ ಪರಿಚಯ ಮತ್ತು ಮಹತ್ವವನ್ನು ಸಾರುವ ಕೆಲಸ ಮಾಡಬೇಕಷ್ಟೆ. ಅದು ಸಾಧ್ಯವಾಗುತ್ತಾ ಎಂಬುದೇ ನಮ್ಮ ಮುಂದಿರುವ ಬಹುದೊಡ್ಡ ಪ್ರಶ‍್ನೆಯಾಗಿದೆ.

English summary
Gaming business developed in India. Due to mobile game various rural games now only remember to the people.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X