MLA Harathalu Halappa Profile: ಶಾಸಕ ಹರತಾಳು ಹಾಲಪ್ಪ ಕಿರುಪರಿಚಯ
ಅವರ ವಯಸ್ಸು, ಜೀವನ ಚರಿತ್ರೆ, ಕುಟುಂಬ, ರಾಜಕೀಯ ವೃತ್ತಿ, ಶಿಕ್ಷಣ, ಆಸ್ತಿ, ಜಾತಿ, ನಿವ್ವಳ ಮೌಲ್ಯ ಮತ್ತು ಇತ್ತೀಚಿನ ಸುದ್ದಿಗಳ ವಿವರ ಇಲ್ಲಿದೆ.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ತವರು ಜಿಲ್ಲೆಯ ಶಾಸಕರಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರದ ಹರತಾಳು ಹಾಲಪ್ಪ ಕೂಡ ಒಬ್ಬರು. ಪಕ್ಷ ನಿಷ್ಠೆ ಮತ್ತು ವ್ಯಕ್ತಿ ನಿಷ್ಠೆಗೆ ಹೆಸರಾಗಿರುವ ಶಾಸಕ ಹಾಲಪ್ಪ ಅವರು ಮತ್ತೊಮ್ಮೆ ಚುನಾವಣಾ ಸಮರಕ್ಕೆ ಸಜ್ಜಾಗಿದ್ದಾರೆ.
ಸಾಗರ ಕ್ಷೇತ್ರದಲ್ಲಿ ಕಳೆದ ಬಾರಿ (2018) ಭಾರತೀಯ ಜನತಾ ಪಾರ್ಟಿಯ ಹರತಾಳು ಹಾಲಪ್ಪ ಗೆಲುವು ಸಾಧಿಸಿದ್ದರು. 8039 ಮತಗಳ ಅಂತರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕಾಗೋಡು ತಿಮ್ಮಪ್ಪ ಅವರನ್ನು ಸೋಲಿಸಿದ ಹಾಲಪ್ಪ ಅವರು ಸಾಗರ ಕ್ಷೇತ್ರದ ಜನತೆಗಾಗಿ ಅಪಾರ ಶ್ರಮಿಸಿದ್ದಾರೆ. ಜೊತೆಗೆ ಅವರು ಬಿ.ಎಸ್. ಯಡಿಯೂರಪ್ಪ ಅವರ ಸಚಿವಾಲಯದಲ್ಲಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾಗಿಯೂ ಜನ ಸೇವೆ ಮಾಡಿದ್ದಾರೆ. ಅಲ್ಲದೆ ಅವರು ಎಂಎಸ್ಐಎಲ್ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.

ಕ್ಷೇತ್ರದಲ್ಲಿ ಅನೇಕ ಜನರಪರವಾದ ಹಾಗೂ ಜನ ಹಿತ ಕಾಪಾಡುವಂತ ಕೆಲಸಗಳನ್ನು ಮಾಡಿದ್ದಾರೆ. ಶರಾವತಿ ಮುಳುಗಡೆ ಸಂತ್ರಸ್ತರಿಗೆ ಪುನರ್ವಸತಿ ಸೌಲಭ್ಯ, ರಸ್ತೆ ವಿಸ್ತರಣೆ, ಬೆಳೆ ನಷ್ಟ ಪರಿಹಾರ, ಹಳ್ಳಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ, ಆಸ್ಪತ್ರೆ, ಶಿಕ್ಷಣ, ಕಾರ್ಮಿಕರಿಗೆ ನೆರವು ಹೀಗೆ ಕ್ಷೇತ್ರದಲ್ಲಿ ಹಲವು ಅಭಿವೃದ್ಧಿಗಳನ್ನು ಮಾಡುವ ಮೂಲಕ ಜನಪ್ರಿಯತೆಯನ್ನು ಪಡೆದಿದ್ದಾರೆ.
ವೈಯಕ್ತಿಕ ಜೀವನ
ಶಾಸಕ ಹರತಾಳು ಹಾಲಪ್ಪ ಅವರು ಹೊಸಕೊಪ್ಪದಲ್ಲಿ 7 ಮಾರ್ಚ್ 1961ರಲ್ಲಿ ಜನಿಸಿದರು. ಹಿರಿಯನಾಯ್ಕ ಅವರ ಪುತ್ರನಾದ ಹಾಲಪ್ಪ ಮೂಲತ: ಕೃಷಿಕ. ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿ. ಆದರೆ ಈಗಾಗಲೇ ರಾಜಕೀಯ ನಾಯಕರು ತಮ್ಮ ಕ್ಷೇತ್ರದ ಮತದಾರರ ಮನಸ್ಸು ಗೆಲ್ಲಲು ಬೇಕಾದ ಸಿದ್ಧತೆ ಆರಂಭಿಸಿದ್ದಾರೆ. ಹೀಗಿರುವಾಗ ತಮ್ಮ ಎದುರಾಳಿಗಳ ಬಗ್ಗೆ ಎಗ್ಗಿಲ್ಲದ ವಾಗ್ದಾಳಿಯೂ ಸರ್ವೇ ಸಾಮಾನ್ಯವಾಗಿದೆ.
ಇನ್ನು ಚುನಾವಣೆ ವಿಚಾರ ಬಂದಾಗ ಸದ್ದು ಮಾಡುವ ಜಿಲ್ಲೆಗಳಲ್ಲಿ ಶಿವಮೊಗ್ಗವೂ ಒಂದು. ಸಪ್ತ ವಿಧಾನಸಭಾ ಕ್ಷೇತ್ರಗಳನ್ನೊಳಗೊಂಡ ಶಿವಮೊಗ್ಗ ಇತ್ತೀಚೆಗೆ ಕೋಮು ಗಲಭೆ ವಿಚಾರವಾಗಿಯೇ ಹೆಚ್ಚು ಸದ್ದು ಮಾಡುತ್ತಿದೆ ಎಂಬುವುದು ಕಹಿ ಸತ್ಯ. ಹೀಗಿರುವಾಗ ಶಿವಮೊಗ್ಗದ ಕ್ಷೇತ್ರಗಳಲ್ಲೊಂದಾಗಿರುವ ಲಿಂಗನಮಕ್ಕಿ ಜಲಾಶಯವನ್ನು ತನ್ನ ಒಡಲಿಲ್ಲಿ ಇಟ್ಟುಕೊಂಡು ನಾಡಿಗೆ ಬೆಳಕು ನೀಡುತ್ತಿರುವ ಸಾಗರ.

ರಾಜ್ಯ ರಾಜಕಾರಣದಲ್ಲಿ ಛಾಪು ಮೂಡಿಸಿದ್ದ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರು ಇಲ್ಲಿ ಹೆಚ್ಚು ಪ್ರಾಬಲ್ಯ ಹೊಂದಿದ್ದಾರೆ. ಸದ್ಯ ಪುತ್ರ ಮಧು ಬಂಗಾರಪ್ಪ ನೇತೃತ್ವದಲ್ಲಿ ಜಿಲ್ಲಾದ್ಯಂತ ಜೆಡಿಎಸ್ ಪಕ್ಷ ಸಂಘಟನೆ ಚುರುಕುಗೊಂಡಿದೆ. ಜೆಡಿಎಸ್ ಶಕ್ತಿಕೇಂದ್ರ ಎನಿಸಿರುವ ಸೊರಬ ಪಕ್ಕದ ಸಾಗರ ಕ್ಷೇತ್ರದಲ್ಲಿ ಚುನಾವಣಾ ಅಖಾಡಕ್ಕೆ ಇಳಿಯಲಿರುವ ವ್ಯಕ್ತಿ ಯಾರೆಂದು ಇದುವರೆಗೂ ನಿಶ್ಚಯವಾಗಿಲ್ಲ.
ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷ ಗಳ ರಂಗ ತಾಲೀಮು ಬಿರುಸುಗೊಳ್ಳುತ್ತಿದೆ. ವಿವಿಧ ಪಕ್ಷ ಗಳ ಸ್ಪರ್ಧಾಕಾಂಕ್ಷಿಗಳು ಒಂದೆಡೆ ಮತದಾರರ ಓಲೈಕೆಗೆ ಹಳ್ಳಿಯತ್ತ ಮುಖ ಮಾಡಿರುವುದೂ ಅಲ್ಲದೇ ಟಿಕೆಟ್ ಖಾತರಿಗಾಗಿ ಪಕ್ಷ ದ ಉನ್ನತ ನಾಯಕರ ಕದ ತಟ್ಟುತ್ತಿದ್ದಾರೆ.
ಇತ್ತೀಚಿನ ಕಾರ್ಯಗಳು
ಸಾಗರದ ಶಾಸಕ ಹಾಲಪ್ಪ ಅವರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ರಾಜಕಾರಣಿಯಾಗಿದ್ದಾರೆ. ನಿತ್ಯ ಹಲವಾರು ಅಭಿವೃದ್ಧಿ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. ಇತ್ತೀಚೆಗೆ ನಡೆದ ಸಾಗರ ನಗರಸಭೆ ಆವರಣದಲ್ಲಿ "ನಗರಸಭೆ ಸ್ವಚ್ಛತಾ ವಾಹನಗಳಿಗೆ ಚಾಲನೆ ನೀಡಿ, ನಗರಸಭೆ ವ್ಯಾಪ್ತಿಯ ನೋಂದಾಯಿತ ಪ.ಜಾ ಮತ್ತು ಪ.ಪಂ ಸಂಘ ಸಂಸ್ಥೆಗಳಿಗೆ ಕಛೇರಿ ಉಪಯೋಗಕ್ಕೆ ಪೀಠೋಪಕರಣಗಳನ್ನು ವಿತರಿಸಿದರು.

ಅಭಿವೃದ್ಧಿ ಎಂದರೇ.. ಚರಿತ್ರೆಯ ಪುಟಗಳಲ್ಲಿ ಅವಿಸ್ಮರಣಿಯವಾಗಿ ಉಳಿಯಬೇಕು. ಟೀಕೆಗಳು ಸಾಯುತ್ತವೆ, ನಾವು ಮಾಡುವ ಅಭಿವೃದ್ಧಿ ಕೆಲಸಗಳು ಜನಮಾನಸದಲ್ಲಿ ಅಚ್ಚಳಿಯದೆ ಉಳಿಯುತ್ತವೇ. ಎಂದು ಶರಾವತಿ ಹಿನ್ನೀರ ಹಬ್ಬ-2023 ಅಂಗವಾಗಿ ಪಟಗುಪ್ಪ ಸೇತುವೆ ದಡದಲ್ಲಿ ನೆಡೆದ ಶರಾವತಿ ಆರತಿ, ಸಾಂಸ್ಕೃತಿಕ ಕಾರ್ಯಕ್ರಮ, ಆಹಾರ ಮೇಳಗಳ ಒಂದು ಅವಿಸ್ಮರಣೀಯ ಕ್ಷಣಗಳ ಬಗ್ಗೆ ಶಾಸಕ ಹಾಲಪ್ಪ ಅಭಿಪ್ರಾಯ ಹಂಚಿಕೊಂಡಿದ್ದರು.
ರಿಪ್ಪನಪೇಟೆ ಜನತೆಯ ಬಹು ನಿರೀಕ್ಷೆಯ, ವಿನಾಯಕ ವೃತ್ತದಿಂದ ಕೃಷಿ ಮಾರುಕಟ್ಟೆ ವರೆಗಿನ ರಸ್ತೆಯನ್ನು 550 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿ ಪಡಿಸುವ ಮತ್ತು ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದ್ದಾರೆ.
ಹಾಲಪ್ಪ ಶಾಸಕರಾದ ಹೊಸದರಲ್ಲಿ ಕಂಡ ಪಟಗುಪ್ಪ ಸೇತುವೆ ನಿರ್ಮಾಣದ ಕನಸು ಇತ್ತೀಚೆಗೆ ಈಡೇರಿದೆ. ಈ ಬಗ್ಗೆ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಮಡಿದ್ದರು. 'ಮೊದಲ ಬಾರಿ ಶಾಸಕನಾದಾಗ ನನ್ನ ರಾಜಕೀಯ ಜೀವನದ ಮೊದಲ ಶಾಶ್ವತ ಯೋಜನೆ ಪಟಗುಪ್ಪ ಸೇತುವೆ ನಿರ್ಮಾಣವಾಗಿತ್ತು. ಅಂದು ಯಡಿಯೂರಪ್ಪ ನವರು ಉಪಮುಖ್ಯಮಂತ್ರಿಗಳಾಗಿದ್ದರು, ಹೆಚ್.ಡಿ.ರೇವಣ್ಣ PWD ಸಚಿವರಾಗಿದ್ದರು. ಆಗ ಈ ಯೋಜನೆ ಮಂಜೂರು ಮಾಡಿಸಿ ಶಂಕುಸ್ಥಾಪನೆ ನೆರವೇರಿಸಿದ್ದೆವು. ರೇವಣ್ಣನವರನ್ನು ಈ ಸಂಧರ್ಭದಲ್ಲಿ ನೆನಪಿಸಿಕೊಳ್ಳಬೇಕು ಎಂದರು.

ಜೊತೆಗೆ 'ಭಗವಂತನ ಆಶೀರ್ವಾದ ಜನತೆಯ ಹಾರೈಕೆಯಿಂದ ಈ ಭಾಗಕ್ಕೆ ಶಾಸಕನಾಗಿ ಆಯ್ಕೆಯಾದೆ ದಶಕಗಳ ನಂತರ ನಾನೇ ಉದ್ಘಾಟನೆ ಮಾಡುವಂತಹ ಅವಕಾಶ ಸಿಕ್ಕಿದ್ದು ನನ್ನ ಜೀವನದ ಮರೆಯಲಾಗದ ದಿನ. ಈ ಎಲ್ಲಾ ಯಶಸ್ಸು ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ನವರಿಗೆ ಸಲ್ಲಬೇಕು. ಬಿ ವೈ ರಾಘವೇಂದ್ರ ಅವರು ನಮ್ಮ ಎಲ್ಲಾ ಕೆಲಸಗಳಿಗೂ ಪೂರಕವಾಗಿ ಬೆಂಬಲಿಸುತ್ತಿರುವುದು ಇಂತಹ ಹಲವಾರು ಯೋಜನೆಗಳು ಜಾರಿಗೆ ಬರಲು ಕಾರಣ' ಎಂದು ಸಂತಸ ವ್ಯಕ್ತಪಡಿಸಿದರು.
ಮಾರ್ಚ್ 18 ರಂದು ಸಾಗರದಲ್ಲಿ ನೆಡೆಯಲಿರುವ ವಿಜಯ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ.
ಇತ್ತೀಚಿನ ಸುದ್ದಿ
ಜಿಲ್ಲೆಯ ಸಾಗರ ತಾಲೂಕಿನಲ್ಲಿ ಪದೇಪದೇ ವಾಹನಗಳು ಶಾಲಾ ಕಾಲೇಜು ವಿದ್ಯಾರ್ಥಿಗಳನ್ನು ಬಲಿ ತೆಗೆದುಕೊಳ್ಳುತ್ತಿರುವ ಬೆನ್ನಲ್ಲೇ ಸಾಗರ ಶಾಸಕ ಹರತಾಳು ಹಾಲಪ್ಪ ರಸ್ತೆಯಲ್ಲಿ ಶಾಲಾ ಮಕ್ಕಳಿಗೆ ಹೆದ್ದಾರಿಯಲ್ಲಿ ರಸ್ತೆ ನಿಯಮಗಳ ಬಗ್ಗೆ ಪಾಠ ಮಾಡಿದ್ದಾರೆ. ಬದಲಾದ ನಿಯಮಗಳು ನಿಮಗೆ ಗೊತ್ತಿಲ್ಲವಾ, ಫುಟ್ ಪಾತ್ ಇಲ್ಲದ ಜಾಗದಲ್ಲಿ, ನಡೆದುಕೊಂಡು ಹೋಗುವಾಗ ಪಾದಾಚಾರಿಗಳು ಬಲಕ್ಕೆ ಚಲಿಸಬೇಕು ಎಂದು ಬುದ್ಧಿವಾದ ಹೇಳಿರುವ ವಿಡಿಯೋ ಸದ್ದು ಮಾಡುತ್ತಿದೆ.
ಆನಂದಪುರ ಗೌರಿ ಕೆರೆ ಏರಿಯ ಮೇಲೆ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಶಾಸಕ ಹಾಲಪ್ಪ ತೆರಳುತ್ತಿರುವಾಗ ಶಾಲಾ ಮಕ್ಕಳು ಎಡ ಭಾಗದಲ್ಲಿ ಗುಂಪು ಗುಂಪಾಗಿ ಅರ್ಧ ರಸ್ತೆಯನ್ನು ಆಕ್ರಮಿಸಿಕೊಂಡು ತೆರಳುತ್ತಿರುವುದು ಕಂಡುಬಂತು. ತಕ್ಷಣ ವಾಹನ ನಿಲ್ಲಿಸಿ ಮಕ್ಕಳಿಗೆ ಬುದ್ಧಿವಾದ ಹೇಳಿದರು.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications